Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಹಾಕಾವ್ಯ ರಾಮಾಯಣ ಜನಸಾಮಾನ್ಯರಿಗೆ ಅರ್ಥವಾಗುವಂತೆ ಮಾಡಿದ ಈ ಸಂತನಿಗೆ ಅನಾಂತನಂತ ನಮನಗಳು
ಆಗಸ್ಟ್ 15ರಂದು ತುಳಸಿದಾಸ ಜಯಂತಿ. ಹಿಂದೂ ಧರ್ಮದ ಬಹುದೊಡ್ಡ ಸನ್ಯಾಸಿ ಲೇಖಕಕರಲ್ಲಿ ತುಳಸಿದಾಸರು ಒಬ್ಬರು. ಭಕ್ತಿ ಆಂದೋಲನದ ಮೂಲಕವಾಗಿ ಅವರು ಅಖಂಡ ಭಾರತದಲ್ಲಿ ತನ್ನದೇ ಆದ ಬೆಂಬಲಿಗರನ್ನು ಪಡೆದಿದ್ದ ತುಳಸಿದಾಸರು ರಾಮನ ಭಕ್ತನಾಗಿದ್ದರು. ಇಂತಹ ಮಹಾನ್ ವ್ಯಕ್ತಿಯ ಇವರ ಜಯಂತಿಯ ಇತಿಹಾಸ ಹಾಗೂ ಪ್ರಾಮುಖ್ಯತೆ ಏನೆಂಬುದನ್ನು ನೋಡೋಣ.

ತುಳಸಿದಾಸರ ಜಯಂತಿ 2021ರ ದಿನಾಂಕ:
ಹಿಂದೂ ಕ್ಯಾಲೆಂಡರ್ ಪ್ರಕಾರ, ತುಳಸಿದಾಸರು ಶ್ರಾವಣ ಮಾಸದ ಶುಕ್ಲ ಪಕ್ಷದ 'ಸಪ್ತಮಿ' (ಏಳನೇ ದಿನ) ದಂದು ಜನಿಸಿದರು. ಈ ವರ್ಷ, ಆಗಸ್ಟ್ 15 ಭಾನುವಾರದಂದು ತುಳಸಿದಾಸ ಜಯಂತಿಯನ್ನು ಆಚರಿಸಲಾಗುವುದು.

ತುಳಸಿದಾಸರ ಜಯಂತಿಯ ಇತಿಹಾಸ:
ಭಾರತದ ಮಹಾಕಾವ್ಯ ರಾಮಾಯಣವನ್ನು ಮೂಲತಃ ವಾಲ್ಮೀಕಿ ಸಂಸ್ಕೃತದಲ್ಲಿ ಬರೆದಿದ್ದಾರೆ. ಇದು ಕೇವಲ ವಿದ್ವಾಂಸರಿಗೆ ಮಾತ್ರ ಲಭ್ಯವಿತ್ತು. ಹಿಂದಿಯ ಉಪಭಾಷೆಯಾದ ಅವಧಿಯಲ್ಲಿ ರಾಮಾಯಣದ ಕಥೆಯನ್ನು ತುಳಸಿದಾಸರು ಪುನಃ ಬರೆದರು. ತುಳಸೀದಾಸರ ರಾಮಾಯಣದ ಆವೃತ್ತಿ ವ್ಯಾಪಕವಾಗಿ ಜನಪ್ರಿಯಗೊಂಡವು. ಜೊತೆಗೆ ತುಳಸೀದಾಸರು ಹನುಮಾನ್ ಚಾಲೀಸಾವನ್ನು ರಚಿಸಿದ್ದಾರೆ ಎಂದು ಹಲವರ ನಂಬಿಕೆ. ಆದ್ದರಿಂದ, ಈ ಮಹಾನ್ ಕವಿಗೆ ಗೌರವ ಸಮರ್ಪಿಸುವ ಉದ್ದೇಶದಿಂದ ತುಳಸೀದಾಸರ ಜಯಂತಿಯನ್ನು ದೇಶದಾದ್ಯಂತ ಆಚರಿಸುತ್ತಾರೆ.

ತುಳಸಿದಾಸರ ಜಯಂತಿ ಆಚರಣೆ :
ಪ್ರತಿ ವರ್ಷ, ತುಳಸೀದಾಸ ಜಯಂತಿಯಂದು ಜನರು ಹನುಮ ಮತ್ತು ರಾಮ ಮಂದಿರಗಳಲ್ಲಿ ಶ್ರೀ ರಾಮರ ಕಥೆಗಳನ್ನು ಪಠಿಸುತ್ತಾರೆ. ಇದರ ಹೊರತಾಗಿ, ತುಳಸೀದಾಸರ ಬೋಧನೆಗಳನ್ನು ವಿವಿಧ ಕಡೆಗಳಲ್ಲಿ ಹೇಳಲಾಗುತ್ತದೆ. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ಆಚರಣೆಯು ವಿಭಿನ್ನವಾಗಿರುತ್ತದೆ.

ತುಳಸಿದಾಸರ ಭೋಧನೆಗಳು:
"ದುಃಖದ ವಾಸಸ್ಥಾನವಾದ ಆಸೆಯನ್ನು ಬಿಟ್ಟುಕೊಡುವವರೆಗೂ ಯಾವ ಜೀವಿಗೂ ಸಂತೋಷವಿರುವುದಿಲ್ಲ ಅಥವಾ ಕನಸಿನಲ್ಲಿಯೂ ಅವರ ಮನಸ್ಸಿಗೆ ಯಾವುದೇ ಶಾಂತಿ ಸಿಗುವುದಿಲ್ಲ" -ತುಳಸಿದಾಸರು
"ಕಾಮ, ಕೋಪ ಮತ್ತು ದುರಾಸೆ ನರಕಕ್ಕೆ ಹೋಗುವ ದಾರಿಗಳು -ತುಳಸಿದಾಸರು



Click it and Unblock the Notifications
