Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಶನಿಜಯಂತಿ: ಸೂರ್ಯ ಪುತ್ರನ ಅನುಗ್ರಹ ಪಡೆಯಲು ಆತನನ್ನು ಯಾವ ರೀತಿ ಆರಾಧಿಸಬೇಕು?
ಇದೇ ಬರುವ ಜೂನ್ 10ರಂದು ಶನಿ ಜಯಂತಿ. ಇದು ಶನಿದೇವನು ಜನಿಸಿದ ಪುಣ್ಯ ದಿನವಾಗಿದ್ದು, ಶನಿ ಅಮಾವಾಸ್ಯೆ ಎಂದೂ ಈ ದಿನವನ್ನು ಕರೆಯಲಾಗುತ್ತದೆ. ಸೂರ್ಯದೇವ ಹಾಗೂ ಛಾಯಾದೇವಿಯ ಪುತ್ರನಾದ ಶನಿಯು ಶನಿಗ್ರಹವನ್ನು ಆಳುವ ದೇವತೆ. ಈ ನಿರ್ದಿಷ್ಟ ದಿನ, ವಿವಿಧ ಸ್ಥಳಗಳಲ್ಲಿ, ಮಹಿಳೆಯರು ಸಹ ವಟ ಸಾವಿತ್ರಿ ಉಪವಾಸವನ್ನು ಆಚರಿಸುತ್ತಾರೆ. ಶನಿ ಜಯಂತಿಯ ಆಚರಣೆ, ಈ ಆಚರಣೆ ಹಿಂದಿರುವ ಇತಿಹಾಸ ಹಾಗೂ ಮಹತ್ವವನ್ನು ಇಲ್ಲಿ ನೊಡೋಣ.

ಶನಿ ಜಯಂತಿಯ ಹಿಂದಿದೆ ಈ ಕಥೆಯಿದೆ:
ದಂತಕಥೆಯ ಪ್ರಕಾರ ಸೂರ್ಯನು ದಕ್ಷನ ಮಗಳಾದ ಸಂಧ್ಯಾಳನ್ನು ವರಿಸುತ್ತಾನೆ. ಇವರಿಗೆ ಜನಿಸಿದ ಮಕ್ಕಳೇ ಯಮ ಹಾಗೂ ಯಮಿ. ನಂತರ ಸಂಧ್ಯಾದೇವಿಯು ಸೂರ್ಯನ ಪ್ರಖರವಾದ ಕಿರಣಗಳ ತಾಪವನ್ನು ತಾಳಲಾರದೆ ಸೂರ್ಯನಿಗೆ ಸಮನಾದ ಶಕ್ತಿಯನ್ನು ಪಡೆಯಲು ಶಿವನ ಕುರಿತು ತಪಸ್ಸನ್ನಾಚರಿಸಲು ನಿರ್ಧರಿಸುತ್ತಾಳೆ. ತನ್ನದೇ ನೆರಳಾದ ಛಾಯಾಳನ್ನು ಸೃಷ್ಟಿಸಿ, ತಪಸ್ಸನ್ನಾಚರಿಸಿ ಬರುವವರೆಗೂ ಮಕ್ಕಳನ್ನು ನೋಡಿಕೊಳ್ಳಲು ಹೇಳಿ ಹೋಗುತ್ತಾಳೆ. ಇದು ಸೂರ್ಯನಿಗೆ ತಿಳಿದಿರುವುದಿಲ್ಲ. ಹೀಗಿರುವಾಗ ಸೂರ್ಯ ಹಾಗೂ ಛಾಯಾ ದೇವಿಗೆ ಶನಿಯು ಜನಿಸುತ್ತಾನೆ.
ತನಗೆ ಜನಿಸಿದ ಪುತ್ರ ಸಂತಾನವನ್ನು ನೋಡಲು ಸೂರ್ಯನು ಹತ್ತಿರ ಹೋದಾಗ, ಶನಿಯು ಸಂಪೂರ್ಣ ಕಪ್ಪು ವರ್ಣದವನಾಗಿ ಕಾಣುತ್ತಾನೆ. ಕೋಪಗೊಂಡ ಸೂರ್ಯನು ಇದು ನನ್ನ ಮಗನೇ ಅಲ್ಲವೆಂದು ಛಾಯಾಳ ಚಾರಿತ್ರ್ಯವನ್ನು ಅವಮಾನಿಸುತ್ತಾನೆ. ಶನಿಯು ತನ್ನ ತಾಯಿಯು ಕಾರಣವಿಲ್ಲದೇ ಅವಮಾನಿತಳಾದಾಗ ಅಲ್ಲಿದ್ದ ಸೂರ್ಯನನ್ನು ಕ್ರೂರ ದೃಷ್ಟಿಯಿಂದ ನೋಡುತ್ತಾನೆ. ಅದರಿಂದ ಸೂರ್ಯನ ಬಣ್ಣವನ್ನು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದನ್ನು ಅರ್ಥಮಾಡಿಕೊಳ್ಳದ ಸೂರ್ಯನು ಪರಶಿವನ ಸಹಾಯವನ್ನು ಕೋರುತ್ತಾನೆ. ಶಿವನು ಪರಿಸ್ಥಿತಿಯನ್ನು ವಿವರಿಸಿದ ನಂತರ ಸೂರ್ಯನು ಕ್ಷಮೆಯಾಚಿಸಿ ತನ್ನ ಮೂಲ ಬಣ್ಣವನ್ನು ಮರಳಿ ಪಡೆಯುತ್ತಾನೆ. ಅಂದಿನಿಂದ ಶನಿ ಹಾಗೂ ಸೂರ್ಯರು ಒಂದಾಗುತ್ತಾರೆ.

ಶನಿ ಜಯಂತಿಯ ಮಹತ್ವ ಹೀಗಿದೆ:
ಆಕಾಶ ಚಲನೆಗಳ ಪ್ರಕಾರ ಶನಿಗ್ರಹವನ್ನು ನಿಧಾನವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ರಾಶಿಚಕ್ರದ ಮೇಲೆ ದುಷ್ಪರಿಣಾಮ ಬೀರುವ ಗ್ರಹವೆಂದು ಪ್ರಸಿದ್ಧಿಯಾಗಿದ್ದು, ಇದರಿಂದ ಜನರು ಭಯಭೀತರಾಗುತ್ತಾರೆ. ಆದರೆ ನಿಧಾನವಾಗಿ ಚಲಿಸುವ ಈ ಗ್ರಹವು ಕರ್ಮ ಫಲದ ಗ್ರಹವಾಗಿದೆ ಎಂಬುದು ಸತ್ಯ . ಇದು ಕಠಿಣ ಪರಿಶ್ರಮ, ಶಿಸ್ತು ಮತ್ತು ಪ್ರಾಮಾಣಿಕ ಪ್ರಯತ್ನಗಳ ಮೂಲಕ ಕೆಲಸ ಮಾಡಿದ ಜನರಿಗೆ ಮಾತ್ರ ಯಶಸ್ಸನ್ನು ನೀಡುತ್ತದೆ. ಒಬ್ಬ ವ್ಯಕ್ತಿಯು ಆಶೀರ್ವದಿಸಲ್ಪಡುತ್ತಾನೋ ಅಥವಾ ದುರಾದೃಷ್ಟಕ್ಕೆ ಒಳಗಾಗುತ್ತಾನೋ ಎಂಬುದು ಅವನು ಈ ಹಿಂದೆ ಮಾಡಿದ ಕಾರ್ಯಗಳಿಂದ ನಿರ್ಧಾರವಾಗುತ್ತದೆ. ಆದ್ದರಿಂದ ಶನಿ ನ್ಯಾಯಯುತವಾದ ಫಲಿತಾಂಶವನ್ನು ನೀಡುತ್ತಾನೆ ಎಂಬ ನಂಬಿಕೆಯಿದೆ.
ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಸಾಡೇಸತಿ ಶನಿಯ ಹಂತವನ್ನು ದಾಟಲೇಬೇಕು ಅಂದರೆ ಈ ಹಂತದಲ್ಲಿ ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಬೇಕಾಗುತ್ತದೆ. ಒಂದು ವೇಳೆ ನೀವು ಉತ್ತಮ ಕೆಲಸಗಳನ್ನು ಮಾಡಿದ್ದರೆ, ಈ ಕಾಲದಲ್ಲಿಯೂ ಉತ್ತಮ ಲಾಭಗಳನ್ನು ಶನಿಯಿಂದ ಪಡೆಯುಬಹುದು ಎಂಬ ಮಾತಿದೆ. ಆದ್ದರಿಂದ, ಹಿಂದೂಗಳು ಶನಿಯನ್ನು ಮೆಚ್ಚಿಸಲು ಮತ್ತು ಅದರ ದುಷ್ಪರಿಣಾಮಗಳನ್ನು ನಿವಾರಿಸಲು ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಹಂತವನ್ನು ಎದುರಿಸುತ್ತಿರುವ ಜನರು ದೇವರಿಗೆ ನಿಯಮಿತವಾಗಿ ಪ್ರಾರ್ಥನೆ ಸಲ್ಲಿಸಬೇಕು.

ಶನಿ ಜಯಂತಿಯ ಆಚರಣೆ ಹೀಗೆ ಮಾಡಿ:
ಶನಿ ಜಯಂತಿಯಂದು ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಆಚರಣೆಗಳನ್ನು ನಡೆಸಲಾಗುತ್ತದೆ. ಶನಿ ಜಯಂತಿಯಂದು ಶನಿಯ ವಿಗ್ರಹಕ್ಕೆ ಗಂಗಾಜಲ, ಪಂಚಾಮೃತ, ಎಣ್ಣೆ ಹಾಗೂ ಜಲದಿಂದ ಅಭಿಷೇಕ ಮಾಡಿ, ನಂತರ ನವರತ್ನದ ಹಾರದಿಂದ ಅಲಂಕರಿಸಲಾಗುವುದು. ಮಾಟ ಮಂತ್ರ, ದುಷ್ಟಶಕ್ತಿಗಳಿಂದ ಕಾಪಾಡುವ ಸಲುವಾಗಿ ಶನಿಶಾಂತಿ ಪೂಜೆ, ತೈಲಾಭಿಷೇಕ ಮಾಡಬಹುದು. ವಾಮಾಚಾರದ ಪ್ರಭಾವವನ್ನು ತಗ್ಗಿಸಲು ಹೋಮ, ಯಜ್ಞಗಳನ್ನು ಮಾಡಲಾಗುತ್ತದೆ. ಶನಿ ಜಯಂತಿಯಂದು ಇರುವೆಗಳಿಗೆ ಗೋಧಿ, ಬೆಲ್ಲವನ್ನು ಹಾಕಿದರೆ ತುಂಬಾ ಒಳ್ಳೆಯದು. ಶನೈಶ್ಚರನ ಶುಭಾಶೀರ್ವಾದ ಪಡೆಯಲು ಶನಿ ಸ್ತೋತ್ರ ಹಾಗೂ ''ಓಂ ಶಂ ಶನೈಶ್ಚರಾಯ ನಮಃ'' ಮಂತ್ರವನ್ನು ಜಪಿಸಿ.
ಶನಿ ಜಯಂತಿಯಂದು ಶನಿ ಪೂಜೆಯನ್ನು ಮಾಡುವ ಮೂಲಕ ಜೀವನದಲ್ಲಿ ಬರುವ ಎಲ್ಲಾ ಕೆಟ್ಟಶಕುನಗಳು ಮತ್ತು ಕೆಟ್ಟದ್ದನ್ನು ನಿವಾರಿಸಬಹುದು. ಶನಿಯ ಕೆಟ್ಟದೃಷ್ಟಿಯಿಂದ ಮುಕ್ತಿ ಪಡೆಯಲು ಈ ದಿನ ಕಟ್ಟುನಿಟ್ಟಾದ ಉಪವಾಸ, ವ್ರತ, ಪೂಜೆ, ಹವನಗಳನ್ನು ಮಾಡಲಾಗುತ್ತದೆ. ನೀವು ಯಾರೇ ಆಗಿರಲಿ ಬಡವ, ಶ್ರೀಮಂತ, ಆರೋಗ್ಯವಂತ ಅಥವಾ ರೋಗಗ್ರಸ್ಥ, ವಿದ್ಯಾವಂತ ಅಥವಾ ಅನಕ್ಷರಸ್ಥ ಹೀಗೆ ಯಾರೇ ಆಗಿರಲಿ ಮಾಡಿದಂತಹ ಪಾಪಗಳಿಗೆ ಪ್ರಾಯಶ್ಚಿತವಾಗುವಂತೆ ಶನಿ ನೋಡಿಕೊಳ್ಳುತ್ತಾನೆ. ಶನಿಯು ಬರೀ ಕೆಟ್ಟದ್ದನ್ನೇ ನೀಡಲು, ಕಷ್ಟಪಟ್ಟು ದುಡಿಯುವವರಿಗೆ ಸದಾ ಆಶೀರ್ವಾದ ಮಾಡುತ್ತಾನೆ. ಹಾಗೂ ನಿರಂತರ ಪ್ರಯತ್ನವನ್ನು ಮಾಡುವವರಿಗೆ ಯಶಸ್ಸನ್ನೂ ದಯಪಾಲಿಸುತ್ತಾನೆ.

ಶನಿ ದೇವ ಶ್ಲೋಕ ಮತ್ತು ಮಂತ್ರಗಳು:
ಶನಿ ಬೀಜ ಮಂತ್ರ:
" ಓಂ ಪ್ರಮ್ ಪ್ರಿಮ್ ಪ್ರಾಮ್ ಸಾಹ್ ಶನಿಯೇ ನಮಃ"
ಶನಿ ಗಾಯತ್ರಿ ಮಂತ್ರ:
" ಓಂ ಶನೈಶ್ವರಾಯ ವಿದ್ಮಹೇ ಸೂರ್ಯಪುತ್ರಾಯ ಧೀಮಾಹಿ, ತನ್ನೊ ಮಂದ ಪ್ರಚೋದಿಯಾತ್"



Click it and Unblock the Notifications











