Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಆತ್ಮೀಯ ಗೆಳೆಯನಿಗೆ ವಿಶ್ ಮಾಡಲು ಅರ್ಥಭರಿತ ಸಂದೇಶಗಳು
ಈ ಜಗತ್ತಲ್ಲಿ ಇರೋ ಸುಂದರ ಭಾವನೆಗಳಲ್ಲಿ ಸ್ನೇಹ ಕೂಡ ಒಂದು. ಸ್ನೇಹಿತರಿಲ್ಲದೇ ಇರುವವರು ಈ ಭೂಮಿ ಮೇಲೆ ಸಿಗೋದು ಬಹಳ ವಿರಳ. ಯಾಕಂದ್ರೆ ಪ್ರತಿಯೊಬ್ಬರಿಗೂ ಜೀವನದ ಒಂದಲ್ಲ ಒಂದು ಹಂತದಲ್ಲಿ ಗೆಳೆತನದ ಅವಶ್ಯಕತೆ ಇರುವುದು. ಅತ್ತಾಗ ಹೆಗಲು ನೀಡೋಕೆ, ಖುಷಿಯಾದಾಗ ಜೊತೆ ಸೇರಿ ನಗೋಕೆ, ಎಲ್ಲವನ್ನ ಹಂಚಿಕೊಳ್ಳೋಕೆ ಫ್ರೆಂಡ್ ಇರಬೇಕು.
ಇಂದು ರಾಷ್ಟ್ರೀಯ ಬೆಸ್ಟ್ ಫ್ರೆಂಡ್ ಡೇ. ಪ್ರತಿಯೊಬ್ಬರ ಜೀವನದಲ್ಲಿ ತುಂಬಾ ಕ್ಲೋಸ್ ಇರುವ ಸ್ನೇಹಿತನನ್ನು ನೆನಪಿಸಿಕೊಳ್ಳುವ ದಿನ. ನೀವು ನಿಮ್ಮ ಬೆಸ್ಟ್ ಫ್ರೆಂಡ್ ಗೆ ವಿಶ್ ಮಾಡೋದಿಕ್ಕೆ ಕೋಟ್ಸ್ ಗಳನ್ನು ಹುಡುಕುತ್ತಿದ್ದೀರಾ? ಇಲ್ಲಿದೆ ನೋಡಿ.
ಜೀವದ ಗೆಳೆಯನಿಗೆ ವಿಶ್ ಮಾಡಲು ಉತ್ತಮವಾದ ಕೋಟ್ಸ್ ಗಳನ್ನು ಈ ಕೆಳಗೆ ನೀಡಲಾಗಿದೆ:

ಸಾವಿರ ಸ್ನೇಹಿತರನ್ನು ಮಾಡಿಕೊಳ್ಳುವುದು ಸ್ನೇಹ ಅಲ್ಲ,
ನಂಬಿಕೆ ಇಟ್ಟ ಒಬ್ಬ ಸ್ನೇಹಿತನ ಗೆಳೆತನ ಸಾಯೋವರೆಗೂ ಕಾಪಾಡಿಕೊಳ್ಳುವುದು ನಿಜವಾದ ಸ್ನೇಹ
ರಾಷ್ಟ್ರೀಯ ಬೆಸ್ಟ್ ಫ್ರೆಂಡ್ ದಿನಾಚರಣೆಯ ಶುಭಾಷಯಗಳು
ಬದುಕಿನಲ್ಲಿ ಗೆಳೆಯರು ಕನ್ನಡಿ ಮತ್ತು ನೆರಳಿನಂತಿರಬೇಕು
ಕನ್ನಡಿ ಯಾವತ್ತೂ ಸುಳ್ಳಾಡುವುದಿಲ್ಲ,
ನೆರಳು ಯಾವತ್ತೂ ನಮ್ಮ ಬಿಟ್ಟು ಹೋಗುವುದಿಲ್ಲ
ಹ್ಯಾಪಿ ನ್ಯಾಷನಲ್ ಫ್ರೆಂಡ್ ಶಿಪ್ ಡೇ ಮೈ ಡಿಯರ್ ಫ್ರೆಂಡ್..
ಕನಿಕರ ಇಲ್ಲದ ನೂರು ಜನ ಸ್ನೇಹಿತರಿಗಿಂತ,
ಕರುಣೆ ಇರುವ ಒಬ್ಬ ಸ್ನೇಹಿತ ಇದ್ದರೆ ಸಾಕು, ಲೈಫ್ ಇಸ್ ಬ್ಯೂಟಿಫುಲ್
ಬೆಸ್ಟ್ ಫ್ರೆಂಡ್ ದಿನಾಚರಣೆಯ ಶುಭಾಷಯಗಳು ಗೆಳೆಯ
ಕೈಕುಲುಕಿ ಹೋಗುವ ಸಾವಿರ ಗೆಳೆಯರಿಗಿಂತ,
ಕಷ್ಟದ ಸಮಯದಲ್ಲಿ ಅಪ್ಪುಗೆ ನೀಡಿ, ಸಮಾಧಾನ ಆಡುವ ಒಬ್ಬ ಗೆಳೆಯನಿದ್ದರೆ ಸಾಕು
ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹಕ್ಕಿಂತ,
ವ್ಯಕ್ತಿತ್ವ ನೋಡಿ ಮಾಡುವ ಸ್ನೇಹ ಶಾಶ್ವತ
ಹ್ಯಾಪಿ ಬೆಸ್ಟ್ ಫ್ರೆಡ್ ಡೇ ಮೈ ಡಿಯರ್ ಫ್ರೆಂಡ್..
ಮನಸೆಂಬ ಮಂದಿರದಲ್ಲಿ
ಕನಸೆಂಬ ಸಾಗರದಲ್ಲಿ
ನೆನಪೆಂಬ ಅಲೆಗಳಲ್ಲಿ
ಚಿರಕಾಲ ಮಿನುಗುತ್ತಿರಲಿ
ನಮ್ಮ ಈ ಅಮರ ಸ್ನೇಹ
ಹ್ಯಾಪಿ ಬೆಸ್ಟ್ ಫ್ರೆಡ್ ಡೇ..
ಎಷ್ಟು ವರ್ಷದಿಂದ ಪರಿಚಯ ಇದ್ದಾರೆ
ಅನ್ನೋದು ಗೆಳೆತನ ಅಲ್ಲಾ,
ಎಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದಾರೆ
ಅನ್ನೋದು ನಿಜವಾದ ಗೆಳೆತನ



Click it and Unblock the Notifications






