Latest Updates
-
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ?
ಕಬೀರ್ ದಾಸ್ ಜಯಂತಿ 2021: ದಿನಾಂಕ, ತಿಥಿ ಹಾಗೂ ಮಹತ್ವದ ಕುರಿತು ಮಾಹಿತಿ
ಇದೇ ಜೂನ್ 24ರಂದು ಕಬೀರ್‌ದಾಸ್ ಜಯಂತಿಯನ್ನು ಆಚರಿಸಲಾಗುವುದು. ಭಾರತದ ಪ್ರಸಿದ್ಧ ಕವಿ, ಸಂತ ಮತ್ತು ಸಾಮಾಜಿಕ ಸುಧಾರಕರಾದ ಸಂತ ಕಬೀರ್‌ದಾಸ್ ರ ಜನ್ಮ ದಿನವನ್ನು ಕಬೀರ್ ದಾಸ್ ಜಯಂತಿ ಎಂದು ಆಚರಣೆ ಮಾಡಲಾಗುವುದು. ಇಲ್ಲಿ ನಾವು ಜಯಂತಿಯ ತಿಥಿ ಮತ್ತು ಮಹತ್ವವನ್ನು ವಿವರಿಸಿದ್ದೇವೆ.

ಕಬೀರ್ ದಾಸ್ ಬಗ್ಗೆ :
ಕಬೀರ್ ಮುಸ್ಲಿಂ ಕುಟುಂಬದಲ್ಲಿ ಜನಿಸಿದರೂ ಅವನಿಗೆ ಹಿಂದೂ ಗುರು ಶಿಕ್ಷಣ ನೀಡಿದ್ದರು. ಆದರೆ, ಅವನಿಗೆ ಸರಿಯಾದ ಶಿಕ್ಷಣ ಇರಲಿಲ್ಲ ಎಂದು ಸಹ ಹೇಳಲಾಗುತ್ತದೆ. ಸಂತ ಕಬೀರ್, ತಮ್ಮ ಇಡೀ ಜೀವಿತಾವಧಿಯಲ್ಲಿ, ಬೂಟಾಟಿಕೆ, ಮೂಢನಂಬಿಕೆ ಮತ್ತು ವ್ಯಕ್ತಿ ಆರಾಧನೆಯನ್ನು ವಿರೋಧಿಸಿದರು, ಜನರಿಗೆ ಐಕ್ಯತೆಯ ಪಾಠವನ್ನು ಕಲಿಸಿದರು.

ಕಬೀರ್ ದಾಸ್ ಜಯಂತಿಯ ದಿನಾಂಕ ಮತ್ತು ಸಮಯ:
ದಿನಾಂಕ - 2021, ಜೂನ್ 24 ರ ಗುರುವಾರ
ಪೂರ್ಣಿಮಾ ತಿಥಿ - 2021 ಜೂನ್ 24 ರಂದು ಬೆಳಿಗ್ಗೆ 03:32ಕ್ಕೆ
ಪೂರ್ಣಿಮಾ ತಿಥಿ ಅಂತ್ಯ - ಜೂನ್ 21, 2021 ರಂದು ರಾತ್ರಿ 12.09 ನಿಮಿಷಕ್ಕೆ

ಕಬೀರ್ ದಾಸ್ ಜಯಂತಿಯ ಮಹತ್ವ:
ಹಿಂದೂ ಪಂಚಾಂಗದ ಪ್ರಕಾರ, ಸಂತ ಕಬೀರ್ ಅವರ ಜನ್ಮ ದಿನಾಚರಣೆಯನ್ನು ಜೇಷ್ಠ ಮಾಸದ ಪೂರ್ಣಿಮಾ ತಿಥಿಯಲ್ಲಿ ಆಚರಿಸಲಾಗುತ್ತದೆ. ಸಂತ ಕಬೀರ್‌ದಾಸ್ ಅವರ ಪ್ರಸಿದ್ಧ ಬರಹಗಳಲ್ಲಿ ಬಿಜಾಕ್, ಸಖಿ ಗ್ರಂಥ, ಕಬೀರ್ ಗ್ರಂಥಾವಳಿ ಮತ್ತು ಅನುರಾಗ ಸಾಗರ ಸೇರಿವೆ. ಈ ದಿನ, ಸಂತ ಕಬೀರ್ ದಾಸರ ಅನುಯಾಯಿಗಳು ಅವರ ಬೋಧನೆಗಳನ್ನು ಭೋದಿಸುತ್ತಾರೆ ಮತ್ತು ಅವರ ಕವಿತೆಗಳನ್ನು ಒಟ್ಟಿಗೆ ಪಠಿಸುತ್ತಾರೆ.

ಸತ್ಯವೇ ದೇವರು :
ಸಂತ ಕಬೀರ್‌ದಾಸ್ ಅವರ ಕೃತಿಯ ವಿಶಿಷ್ಟ ಲಕ್ಷಣವೆಂದರೆ, 'ಕಬೀರ್ ಕೆ ದೋಹಾ' ಅಂದರೆ ಎರಡು ಸಾಲಿನ ಪದ್ಯಗಳು. ಕಬೀರ್ ದಾಸ್ ಜೀವನದ ನಿಜವಾದ ಅರ್ಥವನ್ನು ಬರೆಯುವಲ್ಲಿ ಬಹಳ ಸರಳವಾದ ಭಾಷೆಯನ್ನು ಬಳಸಿದ್ದಾರೆ. ಪದ್ಯಗಳನ್ನು ಬರೆಯಲು ಹಿಂದಿ ಭಾಷೆಯನ್ನು ಬಳಸಲಾಗುತ್ತಿತ್ತು, ಆದರೆ ಅದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಅವರ ಕಾಲದ ಜನರು ಅವರ ಕಾವ್ಯವನ್ನು ಒಪ್ಪಿಕೊಂಡರು. ಜನರಲ್ಲಿ ಜಾಗೃತಿ ಮೂಡಿಸುವ ಸಾಧನವಾಗಿ ಅವರು ಈ ಎರಡು ಸಾಲಿನ ಪದ್ಯವನ್ನು ಬರೆಯಲು ಪ್ರಾರಂಭಿಸಿದರು. ಅವರ ಕವನಗಳು ಮತ್ತು ನುಡಿಗಟ್ಟುಗಳನ್ನು ಶಾಲಾ ಮಟ್ಟದ ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ.



Click it and Unblock the Notifications
