Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
Women's Day 2026 Wishes in Kannada : ಮಹಿಳೆಯರ ದಿನಕ್ಕೆ ಶುಭಕೋರಲು ಅತ್ಯಾದ್ಭುತ ಸಂದೇಶಗಳು ಇಲ್ಲಿದೆ ನೋಡಿ
ಪ್ರತಿವರ್ಷ ಮಾರ್ಚ್ 8 ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನವೆಂದು ಆಚರಿಸಲಾಗುವುದು.
ಮಹಿಳೆಯರನ್ನು ಎಲ್ಲಾ ಸ್ತರಗಳಲ್ಲೂ ಮೇಲಕ್ಕೆತ್ತಬೇಕು, ಆಕೆಗೆ ಪುರುಷರಷ್ಟೇ ಸಮಾನ ಅವಕಾಶಗಳನ್ನು ನೀಡಬೇಕು, ಆಕೆಯ ಸಾಧನೆಗಳನ್ನು ಗುರುತಿಸಬೇಕು ಎಂಬ ಉದ್ದೇಶದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುವುದು. ಈ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಲಾಗುತ್ತದೆ.

ಪ್ರತಿಯೊಬ್ಬರ ಬದುಕಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ದೊಡ್ಡದು. ಆಕೆಗಿರುವ ಸ್ಥೈರ್ಯ, ಧೈರ್ಯಕ್ಕೆ ಸರಿಸಾಟಿಯಿಲ್ಲ. ಒಬ್ಬ ಮಗಳಾಗಿ, ಮಡದಿಯಾಗಿ, ತಾಯಿಯಾಗಿ, ಮನೆಗೆ ಆಳಾಗಿ, ಹೊರಗಡೆ ದುಡಿಯುವ ಮಹಿಳೆಯಾಗಿ ಹೀಗೆ ಮಹಿಳೆ ಹತ್ತು ಹಲವು ಮಾತ್ರಗಳನ್ನು ಒಟ್ಟಿಗೆ ಮಾಡುತ್ತಾಳೆ. ಆಕೆಯ ಸಾಮಾರ್ಥ್ಯಕ್ಕೆ ಅಕೆನೇ ಸರಿಸಾಟಿ.
ನಿಮ್ಮ ಬದುಕಿನಲ್ಲಿ ಆಕೆಯ ಮಾತ್ರ ಮಹತ್ವವಾಗಿರುತ್ತದೆ. ಆಕೆ ಗೃಹಿಣಿಯಾಗಿರಬಹುದು ಅಥವಾ ಹೊರಗಡೆ ದುಡಿಯುವ ಮಹಿಳೆಯಾಗಿರಬಹುದು, ಇಬ್ಬರಲ್ಲಿ ಯಾರು ಮೇಲಲ್ಲ, ಯಾರೂ ಕೀಳಲ್ಲ... ಇಬ್ಬರ ಪಾತ್ರಗಳು ನಿಮ್ಮ ಸಂಸಾರ ತೂಗಿಸಲು ಬಹುಮುಖ್ಯ.
ಆಕೆ ನಿಮಗಾಗಿ ದುಡಿಯುತ್ತಾಳೆ, ಇಡೀ ಬದುಕನ್ನು ನಿಮಗಾಗಿ ಮೀಸಲಿಡುತ್ತಾಳೆ, ಆ ಹೆಣ್ಣಿಗೆ ಮಹಿಳಾ ದಿನಾಚರಣೆಯೆಂದು ಶುಭ ಕೋರಿದರೆ ಅವಳು ತುಂಬಾ ಖುಷಿಯಾಗುತ್ತಾಳೆ. ಇಲ್ಲಿ ನಾವು ಮಹಿಳಾ ದಿನಾಚರಣೆಗೆ ಶುಭ ಕೋರಲು ಕೆಲವೊಂದು ಸಂದೇಶಗಳನ್ನು ನೀಡಿದ್ದೇವೆ.

ಮಹಿಳಾ ದಿನ
1. ಅಂತರರಾಷ್ಟ್ರೀಯ
ಮಹಿಳಾ ದಿನಾಚರಣೆ

ಶುಭಾಶಯಗಳು
2. ನಿನ್ನ ಬದುಕಿನಲ್ಲಿ ನೀನು ಬಯಸಿದ ಎಲ್ಲವೂ ಸಿಗುವಂತಾಗಲಿ, ಮಹಿಳಾ ದಿನಾಚರಣೆ ಶುಭಾಶಯಗಳು

ಶುಭಾಶಯಗಳು 3
3. ನನ್ನ ಬದುಕಿ ಸ್ಪೂರ್ತಿ, ಶಕ್ತಿ, ಖುಷಿ ಎಲ್ಲವು ನೀನೆ, ನೀನಿಲ್ಲದೆ ನಾನಿಲ್ಲ, ಮಹಿಳಾ ದಿನಾಚರಣೆಯ ಶುಭಾಶಯಗಳು.

ಶುಭಾಶಯಗಳು 4
4. ಈ ವಿಶೇಷ ದಿನದಂದು ನಾನು ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ, ಏಕೆಂದರೆ ನನ್ನ ಬದುಕಿಗೆ ದಿಟ್ಟೆ ಮಹಿಳೆಯನ್ನು ಕೊಟ್ಟಿದ್ದಕ್ಕೆ...ಮಹಿಳಾ ದಿನಾಚರಣೆ ಶುಭಾಶಯಗಳು ಡಿಯರ್...

ಶುಭಾಶಯಗಳು 5
5. ನನ್ನ ಬದುಕಿಗೆ ಹೊಸ ಅರ್ಥ ನೀಡಿದ ಸುಂದರವಾದ ಶಿಲ್ಪಿ ನೀನು, ಇಂದು ನಾನು ಏನು ಆಗಿದ್ದೇನೋ ಅದಕ್ಕೆಲ್ಲಾ ನೀನೇ ಕಾರಣ... ಮಹಿಳಾ ದಿನಾಚರಣೆಯ ಶುಭಾಶಯಗಳು

ಶುಭಾಶಯಗಳು 6
6. ನೀನೊಬ್ಬಳು ದಿಟ್ಟೆ, ನೋಡಲು ಅಷ್ಟೇ ಸುಂದರ, ಎಲ್ಲರಲ್ಲಿ ನೀನೋಬ್ಬಳು ಅಲ್ಲವೇ ಅಲ್ಲ, ನಿನ್ನ ಗಾಂಭೀರ್ಯವೇ ನಿನಗೆ ಆಭರಣ, ನೀನು ನನ್ನ ಬದುಕಿಗೆ ಬಂದಿರುವುದು ನನ್ನ ಪುಣ್ಯವೆಂದು ಭಾವಿಸುತ್ತೇನೆ... ನನ್ನ ಸ್ನೇಹಿತೆ, ಧರ್ಮಪತ್ನಿಯಾದ ನಿನಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.

ಶುಭಾಶಯಗಳು 7
7. ನಾನು ಬಯಸಿದ ಎಲ್ಲಾ ಗುಣಗಳಿರುವ ಹೆಣ್ಣು ನೀನು... ಹೇಗೋ ಇದ್ದ ನನ್ನ ಬದುಕಿಗೆ ಒಂದು ಸುಂದರವಾದ ಅರ್ಥ ಕಲ್ಪಿಸಿಕೊಟ್ಟೆ, ನನ್ನ ಪ್ರತೀ ಹೆಜ್ಜೆಗೂ ಸ್ಪೂರ್ತಿ ನೀನು.. ಜಗತ್ತು ಬೆಳಗುವ ಸೂರ್ಯನಂತೆ ನನ್ನ ಬಾಳು ಬೆಳಗುತ್ತಿರುವ ದೀಪ ನೀನು... ನನ್ನ ಮನದ ರಾಣಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.

ಶುಭಾಶಯಗಳು 8
8. ನೀನೊಂದು ಅದ್ಭುತವಾದ ವ್ಯಕ್ತಿ, ನಿನ್ನ ವ್ಯಕ್ತಿತ್ವವೇ ನಿನಗೆ ಆಭರಣ. ನಿನ್ನಂಥ ಗುಣದ ಹೆಣ್ಣು ಬದುಕಿನಲ್ಲಿ ಸಿಕ್ಕ ಪ್ರತಿಯೊಬ್ಬರು ಖುಷಿಯಾಗಿರುತ್ತಾರೆ, ನನಗೆ ನೀನು ಸಿಕ್ಕಿರುವುದು ನನ್ನ ಅದೃಷ್ಟ, ನನ್ನ ಜೀವನದ ಜೀವಕ್ಕೆ ಮಹಿಳಾ ದಿನಾಚರಣೆಯ ಶುಭಾಶಯಗಳು.

ಶುಭಾಶಯಗಳು 9
9. ನನ್ನ ಪ್ರಪಂಚ ತುಂಬಾ ಸುಂದರವಾಗಿದೆ, ಅದಕ್ಕೆ ಕಾರಣ ನೀನು, ನನ್ನ ಕಷ್ಟ ಸುಖದಲ್ಲಿ ಭಾಗಿಯಾಗುವ ನೀನು ನನ್ನ ಬದುಕಿನ ಸ್ಪೂರ್ತಿ. ನನ್ನ ಹೆಣ್ಣಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.

ಶುಭಾಶಯಗಳು 10
10. ನನಗೆ ಮಡದಿಯಾಗಿ, ನನ್ನ ಮಕ್ಕಳಿಗೆ ತಾಯಿಯಾಗಿ, ನನ್ನ ಪೋಷಕರಿಗೆ ಮಗಳಾಗಿ ಎಲ್ಲರಲ್ಲಿ ಅಕ್ಕರೆ ತುಂಬಿ ಮನೆಯಲ್ಲೂ, ಹೊರಗೂ ದುಡಿಯುವ ನಿನ್ನ ನೋಡುವಾಗ ಎಷ್ಟೊಂದು ಶಕ್ತಿ ಈಕೆಗೆ ಎಲ್ಲಿ ಸಿಗುತ್ತದೆ ಎಂದೇ ಅಚ್ಚರಿಯಾಗುತ್ತದೆ. ಬಹುಶಃ ಅಂಥ ಅದ್ಭುತ ಶಕ್ತಿ ದೇವರು ನಿನ್ನಂಥ ಹೆಣ್ಣಿಗೆ ಮಾತ್ರ ನೀಡಿರಬೇಕು. ನೀನು ನಮ್ಮ ಮನೆಯ ಹಾಗೂ ನನ್ನ ಬದುಕಿನ ಆಧಾರ ಸ್ತಂಭ. ನನ್ನ ಬದುಕಿನ ಎಲ್ಲಾ ಆಗಿರುವ ನಿನಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.

ಅಂತರರಾಷ್ಟ್ರೀಯ ಮಹಿಳಾ ದಿನ
ನಿಮಗೆ ಬೇಕಾದ ದಾರಿ ತೋಚದೆ ಹೋದಾಗ ಕೆಲವೊಮ್ಮೆ ನೀವೇ ನಿಮಗಾಗಿ ದಾರಿ ಮಾಡಿಕೊಳ್ಳಬೇಕಾಗುತ್ತದೆ
ನಿಮಗೆ ಅಸಾಧ್ಯ ಎಂಬುವುದು ಯಾವುದೂ ಇಲ್ಲ ನೆನಪಿರಲಿ
ಅಂತರರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು

ಅಂತರರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು
ಮಹಿಳೆಯರಿಗೆ ಯಶಸ್ವಿಗೆ ಸರಿಯಾದ ಮಾರ್ಗ ತೋರಿಸಿದರೆ ಅವರು ಅತ್ಯಾದ್ಭುತವಾಗಿ ಸಾಧನೆ ಮಾಡುವುದಲ್ಲದೆ ತಮ್ಮ ಜೊತೆ ಇರುವವರನ್ನು ಬೆಳೆಸುತ್ತಾರೆ
ಅದುವೇ ಸ್ತ್ರೀ ಶಕ್ತಿ



Click it and Unblock the Notifications











