Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಚಾಣಕ್ಯ ಹೇಳಿದ ಈ 3 ಸೂತ್ರ ಪಾಲಿಸಿದರೆ ಸಾಕು, ಬೇರೆಯವರ ಮುಂದೆ ತಲೆಬಾಗುವ ಪ್ರಸಂಗವೇ ಬರಲ್ಲ
ಚಾಣಕ್ಯನ ಮಾತುಗಳು ಜ್ಞಾನದ ಖಜಾನೆಯಿದ್ದಂತೆ. ಯಾಕೆಂದರೆ ಚಾಣಕ್ಯನ ನೀತಿಗಳು ನಮಗೆ ಅಗಾಧ ಜ್ಞಾನವನ್ನು ನೀಡುತ್ತದೆ. ಯಾರು ಜೀವನದಲ್ಲಿ ಚಾಣಕ್ಯನ ನೀತಿ ಶಾಸ್ತ್ರಗಳನ್ನು ಪಾಲಿಸುತ್ತಾರೋ ಅವರು ಜೀವನಪೂರ್ತಿ ಸುಖವಾಗಿರುತ್ತಾರೆ. ಚಾಣಕ್ಯನು ಮಕ್ಕಳು, ಯುವಕರು, ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲರಿಗೂ ನೀತಿಗಳನ್ನು ರೂಪಿಸಿದ್ದಾರೆ. ಇದನ್ನು ಪಾಲಿಸಿದವರು ಸೋತ ಉದಾಹರಣೆಗಳೇ ಇಲ್ಲ.
ಜೀವನ ನಮಗೆ ಎಲ್ಲವನ್ನೂ ಕಲಿಸುವ ಪಾಠ ಶಾಲೆಯಿದ್ದಂತೆ ಇಲ್ಲಿ ಸರಿ-ತಪ್ಪುಗಳು ಆಗೋದು ಸಾಮಾನ್ಯ. ಆದರೆ ಕೆಲವೊಂದು ಬಾರಿ ನಾವು ತಪ್ಪುಗಳನ್ನು ಮಾಡಿದಾಗ ತುಂಬಾನೇ ಕುಗ್ಗಿ ಹೋಗುತ್ತೇವೆ. ನಾನ್ಯಾಗೆ ಹಾಗೆ ಮಾಡಿದೆ? ನಾನು ಆ ರೀತಿ ಮಾಡಬಾರದಿತ್ತು ಎಂದು ಮಾಡಿದ ತಪ್ಪನ್ನೇ ನೆನೆದು ಕೊರಗುತ್ತಿರುತ್ತೇವೆ.
ಜೀವನದಲ್ಲಿ ತಪ್ಪನ್ನು ತಿದ್ದಿಕೊಂಡು, ಮುಂದೆ ಜೀವನದಲ್ಲಿ ಎಂದಿಗೂ ತಪ್ಪು ಮಾಡದೇ ಇರಲು ಕೆಲವೊಂದು ನೀತಿಗಳನ್ನು ಚಾಣಕ್ಯನು ನಮ್ಮ ಮುಂದಿಟ್ಟಿದ್ದಾರೆ ಅದ್ಯಾವುದು ಅನ್ನೋದನ್ನ ತಿಳಿಯೋಣ.

ಮಾಡಿದ ತಪ್ಪನ್ನು ಮತ್ತೆ ಮಾಡದಿರಿ
ಚಾಣಕ್ಯನ ಪ್ರಕಾರ ನೀವೇನಾದರೂ ಹಿಂದೆ ಮಾಡಿದ ತಪ್ಪಿಗೆ ಪ್ರತಿನಿತ್ಯ ಕಣ್ಣೀರಿಡುತ್ತಾ, ಕೊರಗುತ್ತಿದ್ದರೆ ಅದು ನಿರರ್ಥಕ. ಮನುಷ್ಯ ಮಾತ್ರ ತಪ್ಪು ಮಾಡಲು ಸಾಧ್ಯ. ಹಾಗೆಂದ ಮಾತ್ರ ಕೊರಗುವುದು ಸರಿಯಲ್ಲ. ಆದ್ರೆ ಹಳೆಯ ತಪ್ಪುಗಳಿಂದ ಪಾಠ ಕಲಿಯಬೇಕು ಹಾಗೂ ಮತ್ತೆಂದಿಗೂ ಅದು ರಿಪೀಟ್ ಆಗದಂತೆ ನೋಡಿಕೊಳ್ಳಬೇಕು. ಅಷ್ಟೇ ಅಲ್ಲ, ಹಳೆಯ ತಪ್ಪುಗಳನ್ನೇ ಬಂಡವಾಳವಾಗಿಟ್ಟುಕೊಂಡು ಭವಿಷ್ಯದ ತಂತ್ರಗಳನ್ನು ಹೆಣೆಯಬೇಕು.

ಸ್ನೇಹಿತನ ಆಯ್ಕೆ ಉತ್ತಮವಾಗಿರಲಿ
ಚಾಣಕ್ಯನ ಪ್ರಕಾರ ನಿಮ್ಮ ಮುಂದೆ ಚೆನ್ನಾಗಿ ಮಾತಾಡಿ ನಿಮ್ಮ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ವ್ಯಕ್ತಿ ನಿಮ್ಮ ಸ್ನೇಹಕ್ಕೆ ಆರ್ಹನಲ್ಲ. ನಿಜವಾದ ಸ್ನೇಹಿತನಾದವನೂ ಎಂತಹ ಪರಿಸ್ಥಿತಿಯಲ್ಲೂ, ಯಾರ ಮುಂದೆಯೂ ನಿಮ್ಮನ್ನು ಬಿಟ್ಟುಕೊಡುವುದಿಲ್ಲ. ಕೆಲವು ಜನ ನಿಮ್ಮಲ್ಲಿ ಏನೂ ಇಲ್ಲದಾಗ, ನೀವು ಸಂಕಷ್ಟದ ಪರಿಸ್ಥಿತಿಗೆ ಸಿಕ್ಕಾಗ ನಿಮ್ಮನ್ನು ಬಿಟ್ಟು ತೆರಳುತ್ತಾರೆ. ಆದರೆ ಯಾರು ನಿಮ್ಮ ತಪ್ಪುಗಳ ಬಗ್ಗೆ ಪದೇ ಪದೇ ಎಚ್ಚರಿಸುತ್ತಿರುತ್ತಾನೋ ಅವನೇ ನಿಮ್ಮ ನಿಜವಾದ ಸ್ನೇಹಿತ. ಚಾಣಕ್ಯರ ಪ್ರಕಾರ ಅಂಥವರನ್ನು ಎಂದಿಗೂ ನೀವೂ ಕಡೆಗಣಿಸಲೇಬಾರದು.

ಶತ್ರುಗಳ ವಿರುದ್ಧ ಹೋರಾಡುವಾಗ ಎಚ್ಚರ
ಚಾಣಕ್ಯನ ಪ್ರಕಾರ ನಿಮ್ಮ ಶತ್ರುಗಳನ್ನು ಎಂದಿಗೂ ದುರ್ಬಲರು ಅಂತ ಭಾವಿಸಬೇಡಿ. ನಿಮ್ಮ ಬಳಿ ಸೂಕ್ತ ಯೋಜನೆ ಮತ್ತು ಸಾಮರ್ಥ್ಯವಿದ್ದಾಗ ಮಾತ್ರ ಶತ್ರುವಿನ ವಿರುದ್ಧ ನಿಲ್ಲುವ ನಿರ್ಧಾರ ಮಾಡಿ. ಆಗ ಮಾತ್ರ ನಿಮಗೆ ಗೆಲುವು ದಕ್ಕೋದಕ್ಕೆ ಸಾಧ್ಯ. ಒಮ್ಮಿಂದೊಮ್ಮೆಲೇ ಶತ್ರುವಿನ ವಿರುದ್ಧ ಸೆಣಸಾಡಲು ಹೋದರೆ ಅದರ ಪರಿಣಾಮನ್ನು ಎದುರಿಸಲು ಸಿದ್ಧರಾಗಿರಿ. ಒಂದು ವೇಳೆ ಶತ್ರುವನ್ನ ಗೆಲ್ಲಬೇಕಾದರೆ ಒಟ್ಟಾಗಿ ಕೆಲಸ ಮಾಡಿ. ನಮ್ಮ ಶತ್ರು ದುರ್ಬಲವಾಗಿದ್ದಾನೆ ಎಂದು ತಿಳಿದಾಗ ಆತನ ಮೇಲೆ ಯುದ್ಧಕ್ಕೆ ಸಿದ್ಧರಾಗಿ.
ಈ ಮೂರು ಸೂತ್ರಗಳನ್ನು ಯಾರು ತಲೆಯಲ್ಲಿ ಇಟ್ಟುಕೊಳ್ಳುತ್ತಾರೆ ಅವರು ಎಂದಿಗೂ ಬೇರೆಯವರ ಮುಂದೆ ತಲೆಬಾಗಿ ಕ್ಷಮೆ ಕೇಳಬೇಕಾದ ಪರಿಸ್ಥಿತಿ ಎದುರಾಗೋದಿಲ್ಲ.



Click it and Unblock the Notifications
