Latest Updates
-
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ!
ಚಾಣಕ್ಯ ಹೇಳಿರುವ ಈ 10 ಉಪದೇಶಗಳು ಪ್ರತಿಯೊಬ್ಬರ ಜೀವನದಲ್ಲಿ ನೂರಕ್ಕೆ ನೂರು ಸತ್ಯ ನೋಡಿ
"ಧನ ಕಾಯುತ್ತಿದ್ದ ಒರ್ವ ಸಾಮಾನ್ಯ ಹುಡುಗ ಮೌರ್ಯ ಸಾಮ್ರಾಜ್ಯವನ್ನೇ ಸ್ಥಾಪಿಸುತ್ತಾನೆ ಆವತ್ತು ಅವನ ಹಿಂದಿದ್ದ ಮಹಾಶಕ್ತಿ ಚಾಣಕ್ಯ. ಆವತ್ತು ಚಾಣಕ್ಯನ ಸೂತ್ರಗಳೇ ಚಂದ್ರಗುಪ್ತ ಮೌರ್ಯನಿಗೆ ನೆರವಾಗಿದ್ದವು ."
ಆವತ್ತು ಚಾಣಕ್ಯ ನೀಡಿದ ಸೂತ್ರಗಳನ್ನು ಇಂದಿಗೂ ಜನ ಪಾಲಿಸುತ್ತಾ ಬಂದಿದ್ದಾರೆ. ಜೀವನದಲ್ಲಿ ಕುಗ್ಗಿ ಹೋಗಿದ್ದೇವೆ, ಏನ್ನನಾದರೂ ಸಾಧಿಸಲೇಬೇಕು ಎನ್ನುವವರು ಮಾತ್ರ ಆಚಾರ್ಯ ಚಾಣಕ್ಯ ನೀಡಿದ ಈ 10 ಜೀವನ ಪಾಠಗಳನ್ನು ಪಾಲಿಸಿ.

1. ಹುಟ್ಟು ದಾರಿರ್ದ್ಯವಾದ್ರು ಸಾವು ಶ್ರೇಷ್ಠವಾಗಿರಲಿ
ಅನೇಕರಲ್ಲಿ ನನ್ನ ಹುಟ್ಟು ಚೆನ್ನಾಗಿಲ್ಲ, ನಾನಿಲ್ಲಿ ಹುಟ್ಟಬಾರದಿತ್ತೆಂಬ ಕೀಳು ಭಾವನೆಯಿದೆ. ಅಂತಹ ಆಲೋಚನೆಗಳು ಇದ್ದರೆ ಖಂಡಿತ ಬಿಟ್ಟುಬಿಡಿ. ಅಂತವರಿಗೆ ಆಚಾರ್ಯ ಚಾಣಕ್ಯರು ಏನು ಹೇಳುತ್ತಾರೆ ಅಂದರೆ ನೀವು ಎಲ್ಲಿ ಹುಟ್ಟುದ್ದೀಯಾ? ನಿನ್ನ ಬಳಿ ಎಷ್ಟು ಆಸ್ತಿ ಇದೆ? ಅನ್ನೋದು ಖಂಡಿತ ಮುಖ್ಯವಲ್ಲ. ಇಲ್ಲಿ ಮುಖ್ಯವಾಗೋದು ಯಶಸ್ಸು ಗಳಿಸಲು ನೀನು ಯಾವ ರೀತಿ ಕೆಲಸ ಮಾಡುತ್ತಿದ್ದೀಯಾ ಅನ್ನೋದು ಮಾತ್ರ. ಅನೇಕ ಜನರಲ್ಲಿ ಎಲ್ಲವೂ ಇದ್ದರೂ ಕೂಡ ತನ್ನದೇ ಆದ ಐಡೆಂಟಿ ಸೃಷ್ಠಿಸುವುದರಲ್ಲಿ ಅವರು ಸೋಲುತ್ತಾರೆ. ನೀವು ಹಾಗಾಗಬೇಡಿ. ಅನೇಕ ಜನ ಏನು ಇಲ್ಲದೇ ದಟ್ಟ ದಾರಿರ್ದ್ಯದಲ್ಲಿ ಬೆಳೆದಿದ್ದರೂ ಅವರ ಸಾಧನೆ, ಯಶಸ್ಸು ಇಂದು ಕೋಟ್ಯಾಂತರ ಜನರಿಗೆ ಪ್ರೇರಣೆ ನೀಡುವಂತಾಗಿದೆ. ಬದುಕೋದಾದರೆ ಆ ರೀತಿ ಬದುಕಿ ತೋರಿಸಬೇಕು.

2. ನಿಮ್ಮೊಳಗೆ ದೇವರನ್ನು ಹುಡುಕಿ
ಮೂರ್ತಿಯಲ್ಲಿ ನಾವು ದೇವರನ್ನು ಕಾಣುತ್ತೇವೆ. ಭವಗಂತನನ್ನು ಒಲಿಸಿಕೊಳ್ಳಲು ನಾವು ನಾನಾ ವಿಧದ ಪೂಜೆ, ಪುನಸ್ಕಾರ, ಹೋಮ-ಹವನಗಳನ್ನು ಮಾಡುತ್ತೇವೆ. ಆದರೆ ಚಾಣಕ್ಯನ ಕಿವಿ ಮಾತು ಏನೆಂದರೆ ದೇವಸ್ಥಾನದಲ್ಲಾಗಲಿ ಅಥವಾ ಮೂರ್ತಿಯೊಳಗಾಗಲಿ ದೇವರಿಲ್ಲ. ಬದಲಿಗೆ ನಾವು ನಮ್ಮೊಳಗೆ ದೇವರನ್ನು ಹುಡುಕಬೇಕು. ಯಾಕೆಂದರೆ ದೇವರು ನಮ್ಮೊಳಗೆ ಇದ್ದಾನೆ. ನಮ್ಮ ಭಾವನೆ, ಆತ್ಮವೇ ದೇವಾಲಯ. ದೇವರನ್ನು ಹುಡುಕುತ್ತಾ ದೇವಾಲಯ ಅಲೆಯೋದನ್ನ ಬಿಟ್ಟುಬಿಡಿ. ನಿಮ್ಮ ಆತ್ಮವೇ ದೇವಾಲಯ ಅದರೊಳಗಿನ ಭಾವನೆಗಳೇ ಪರಮಾತ್ಮ.

3. ಸಾಲ ಪಡೆದುಕೊಳ್ಳಲೇಬೇಡಿ
ಯಾವ ವ್ಯಕ್ತಿ ಸಾಮರ್ಥ್ಯ ಮೀರಿ ಸಾಲ ಪಡೆದುಕೊಳ್ಳುತ್ತಾನೋ ಅವನಿಗೆ ಖಂಡಿತ ನೆಮ್ಮದಿ ಇರೋದಿಲ್ಲ. ಒಂದಲ್ಲ ಒಂದು ದಿನ ಬೇರೆಯವರ ಮುಂದೆ ಅವಮಾನವನ್ನು ಅನುಭವಿಸಲೇಬೇಕು. ಆದ್ದರಿಂದ ನಿಮ್ಮ ಸಂಕಷ್ಟದ ಪರಿಸ್ಥಿತಿಯಲ್ಲಿ ನೀವೇನಾದರೂ ಸಾಲ ಪಡೆದುಕೊಂಡಿದ್ದರೆ ಪರವಾಗಿಲ್ಲ ಆದ್ರೆ ಆದಷ್ಟು ಬೇಗ ಆ ಸಾಲವನ್ನು ಹಿಂತಿರುಗಿಸಿ ನಿಮ್ಮ ಹೊರೆಯನ್ನು ಇಳಿಸಿಕೊಳ್ಳಿ.

4. ಅತಿಯಾದ ಪ್ರಾಮಾಣಿಕತೆ ಖಂಡಿತ ಒಳ್ಳೆಯದಲ್ಲ
ಮನುಷ್ಯ ಯಾವತ್ತಿಗೂ ಚಾಣಾಕ್ಷನಾಗಿರಬೇಕು ಆಗ ಮಾತ್ರ ಬದುಕೋದಿಕ್ಕೆ ಸಾಧ್ಯ. ನಿಮಗೆ ಗೊತ್ತಿರಲಿ ನೇರವಾದ ಮರಗಳಿಗೆ ಮೊದಲು ಕೊಡಲಿ ಏಟು ಬೀಳೋದು. ಅದೇ ರೀತಿ ಪ್ರಮಾಣಿಕತೆಯನ್ನ ದುರುಪಯೋಗ ಪಡಿಸಿಕೊಳ್ಳುವವರೇ ಹೆಚ್ಚು. ಅತಿಯಾದ ಪ್ರಮಾಣಿಕತೆ ಒಂದಲ್ಲ ಒಂದು ದಿನ ನಿಮಗೆ ಅಪಾಯವನ್ನು ತಂದೊಡ್ಡಬಹುದು. ಆದ್ದರಿಂದ ಜಾಗರೂಕರಾಗಿರಿ.

5. ಸಮಯ ಬಂದಾಗ ಕಠಿಣವಾಗಿ ವರ್ತಿಸಿ
ಕೆಲವೊಂದು ಬಾರಿ ಹಾವುಗಳು ವಿಷವಿಲ್ಲದಿದ್ದರೂ ಕೂಡ ವಿಷಪೂರಿತ ಹಾವಿನಂತೆ ವರ್ತಿಸುತ್ತದೆ ಈ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ಚಾಣಕ್ಯನ ಪ್ರಕಾರ ಮನುಷ್ಯರು ಅದೇ ರೀತಿ ಇರಬೇಕು ಎಲ್ಲಾ ಸಂದರ್ಭದಲ್ಲಿ ಶಾಂತವಾಗಿದ್ದರೆ ಬದುಕೋದಕ್ಕೆ ಸಾಧ್ಯವೇ ಇಲ್ಲ. ಸಮಯ, ಸಂದರ್ಭ ನೋಡಿ ಕಠಿಣವಾಗಿ ವರ್ತಿಸಲೇಬೇಕು ಇಲ್ಲವಾದಲ್ಲಿ ಅವಮಾನ, ಮೋಸ, ವಂಚನೆಗೆ ಒಳಗಾಗಬೇಕಾಗುತ್ತದೆ. ಅಷ್ಟೇ ಅಲ್ಲ, ಸಿಗಬೇಕಾದ ಗೌರವದಿಂದ ನಾವು ವಂಚಿತರಾಗುವ ಸಾಧ್ಯತೆಗಳೇ ಹೆಚ್ಚು.

6. ನಿಮ್ಮ ಜುಟ್ಟು ಬೇರೆಯವರ ಕೈಗೆ ಕೊಡಬೇಡಿ
ಗುರುತ್ವಾಕರ್ಷಣ ಬಲ ನಮ್ಮನ್ನು ನೆಲದ ಮೇಲೆ ನಿಲ್ಲಲು ಸಹಾಯ ಮಾಡುತ್ತದೆ ಇದು ಸಾಧ್ಯವಾಗಿದ್ದು ನ್ಯೂಟನ್ ರೂಪಿಸಿದ ನಿಯಮದಿಂದಾಗಿ. ಅದೇ ರೀತಿ ಇಡೀ ಜಗತ್ತು ಬೇರೆ ಬೇರೆ ಕಾನೂನಿಂದ ನಡೆಯುತ್ತಿದೆ. ನಿಮ್ಮ ಜೀವನದಲ್ಲೂ ಕೆಲವೊದು ಕಾನೂನುಗಳನ್ನು ರೂಪಿಸಿಕೊಳ್ಳಿ. ಅದು ನಿಮ್ಮನ್ನ ನಿಯಂತ್ರಿಸುವಂತಹ ಕಾನೂನಾಗಿರಬೇಕು. ಚಾಣಕ್ಯನ ಪ್ರಕಾರ ನಮ್ಮ ಜುಟ್ಟನ್ನು ಎಂದಿಗೂ ಬೇರೆಯವರ ಕೈಗೆ ಕೊಡಬಾರದು. ನಮ್ಮ ಜಗತ್ತಿನಲ್ಲಿ ನಾವೇ ಹೀರೋಗಳಾಗಿರಬೇಕು. ಜನರನ್ನು ಯಾವ ರೀತಿ ನಿಭಾಯಿಸಬೇಕು ಎಂಬ ಪಾಠವನ್ನು ಖಂಡಿತ ಕಲಿತಿರಬೇಕು.

7. "ಶಿಕ್ಷಣ"ಕ್ಕಿಂತ ಉತ್ತಮ ಸ್ನೇಹಿತನಿಲ್ಲ
ಚಾಣಕ್ಯನ ಪ್ರಕಾರ ಜೀವನದಲ್ಲಿ ನೀನು ಏನನ್ನೇ ಗಳಿಸಿದರೂ ಕೂಡ ಅದು ಕೊನೆವರೆಗೂ ನಿನ್ನ ಜೊತೆ ಇರುತ್ತೆ ಅನ್ನೋ ನಂಬಿಕೆಯಿಲ್ಲ. ಆದರೆ ಶಿಕ್ಷಣ ಎಂಬ ಒಂದೇ ಒಂದು ಅಸ್ತ್ರ ಮಾತ್ರ ಸಾವಿನವರೆಗೂ ನಿನ್ನ ಜೊತೆಯಲ್ಲಿ ಬರೋದು. ಇದೊಂದೆ ಮಹಾಅಸ್ತ್ರ ಜಗತ್ತನ್ನು ಗೆಲ್ಲಲು ನೆರವಾಗುತ್ತದೆ. ಕೊನೇಪಕ್ಷ ನಿನ್ನ ಜೊತೆ ಯಾರು ಇಲ್ಲದಾಗಲೂ ಶಿಕ್ಷಣ ಗುರಿ ಮುಟ್ಟುವ ಮಾರ್ಗವನ್ನ ತೋರಿಸುತ್ತದೆ. ಆಚಾರ್ಯರ ಪ್ರಕಾರ ಪ್ರಯೋಗಿಕ ಜ್ಞಾನ ಯಾವತ್ತಿದ್ದರೂ ಪುಸ್ತಕದಿಂದ ಬರುವುದಲ್ಲ. ನಮ್ಮ ಜೀವನದಲ್ಲಿ ಆಗುವ ಪ್ರಯೋಗಿಕ ಘಟನೆಗಳಿಂದ ನಾವು ಒಂದೊಂದೇ ಜೀವನ ಪಾಠಗಳನ್ನು ಕಲಿಯುತ್ತಾ ಸಾಗುತ್ತೇವೆ. ನಾವು ಯಾವತ್ತಿಗೂ ಪುಸ್ತದ ಬದನೆಕಾಯಿಗೆ ನಮ್ಮ ಜೀವನವನ್ನು ಸೀಮಿತಗೊಳಿಸಲೇಬಾರದು. ಮನುಷ್ಯನಾದವನು ಶಿಕ್ಷಣದಿಂದ ಅಗಾಧ ಜ್ಞಾನ ಸಂಪಾದಿಸಲು ಪ್ರಯತ್ನಿಸಬೇಕು.

8. ಜ್ಞಾನವೊಂದೆ ಮನುಷ್ಯನನ್ನು ಶಕ್ತಿಶಾಲಿಯನ್ನಾಗಿಸೋ ಅಸ್ತ್ರ
ನಾಯಕತ್ವದ ಮುಖ್ಯ ಅಂಶ ಏನೆಂದರೆ ಯಾರ ಬಳಿ ಸಾಮರ್ಥ್ಯವಿರುತ್ತದೆಯೋ ಅವರು ಮಾತ್ರ ಜೀವದಲ್ಲಿ ಮುಂದೆ ಬರೋದಕ್ಕೆ ಸಾಧ್ಯ. ಶಕ್ತಿಶಾಲಿಯಾಗಿದ್ದಾಗ ಮಾತ್ರ ನಾವು ಯಶಸ್ವಿ ವ್ಯಕ್ತಿಯಾಗಲು ಸಾಧ್ಯ. ಇದನ್ನು ಸಾಧಿಸಲು ನಮ್ಮ ಬಳಿ ಭೌದ್ದಿಕ ಶಕ್ತಿ ಇರಲೇಬೇಕು. ಯಾವ ವ್ಯಕ್ತಿಯ ಬಳಿ ಅತ್ಯಧಿಕ ಜ್ಞಾನವಿರುತ್ತದೆಯೋ ಆತ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಈ ಮೇಲಿ ಎಲ್ಲಾ ವಿಚಾರಗಳು ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡಿದೆ.

9. ಪ್ರತಿನಿತ್ಯ ಹೊಸತನ್ನೇನಾದರೂ ಕಲಿಯಿರಿ
ಜೀವನವೇ ನಮಗೆ ಪಾಠ ಶಾಲೆಯಿದ್ದಂತೆ ದಿನನಿತ್ಯ ಒಂದಲ್ಲ ಒಂದು ಹೊಸ ವಿಚಾರವನ್ನು ನಾವು ಕಲಿಯುತ್ತಲೇ ಇರುತ್ತೇವೆ. ಆಶ್ಚರ್ಯಕರ ವಿಚಾರ ಏನಂದ್ರೆ ಸಮಯ ಬದಲಾಗಬಹುದು, ವ್ಯಕ್ತಿಗಳು ಬದಲಾಗಬಹುದು, ಸನ್ನಿವೇಶಗಳು ನಿಮಗೆ ಅನಕೂಲಕರವಾಗಿರಬಹುದು ಅಥವಾ ಆಗದೇನೂ ಇರಬಹುದು ಆದರೆ ಯಾವತ್ತಿಗೂ ನೀವು ಕಲಿತಿರೋ ಜೀವನ ಪಾಠಗಳು ನಿಮ್ಮನ್ನು ಬಿಟ್ಟು ಹೋಗೋದಿಲ್ಲ.

10. ಕುಟುಂಬದೊಂದಿಗೆ ಅತಿಯಾದ ಅಟ್ಯಾಚ್‌ಮೆಂಟ್ ಬೇಡ
ಆಚಾರ್ಯ ಚಾಣಕ್ಯರು ಹೇಳೋ ಪ್ರಕಾರ ಯಾವ ವ್ಯಕ್ತಿ ಕುಟುಂಬದೊಂದಿಗೆ ಅತಿಯಾದ ಅಟ್ಯಾಚ್‌ಮೆಂಟ್ ಹೊಂದಿರುತ್ತಾನೋ ಆತ ಖಂಡಿತ ದುಃಖ ಹಾಗೂ ಭಯವನ್ನು ಅನುಭವಿಸಿಯೇ ಇರುತ್ತಾನೆ. ಯಾಕಂದರೆ ದುಃಖ ಹಾಗೂ ಭಯ ಅಟ್ಯಾಚ್‌ಮೆಂಟ್‌ನ ಮೂಲ ಬೇರುಗಳು. ಯಾರು ಇದರಿಂದ ದೂರವಿರುತ್ತಾರೆ ಅವರು ತುಂಬಾನೆ ಖುಷಿಯಾಗಿ ಇರುತ್ತಾರೆ. ಈ ಮಾತು ಭಗವದ್ಗೀತೆ ಯಲ್ಲಿಯೂ ಇದೇ ಉಲ್ಲೇಖವಾಗಿದೆ.
"ಜೀವನವೇ ನಶ್ವರ" ಭೂಮಿಗೆ ಬಂದ ಪ್ರತಿಯೊಬ್ಬ ವ್ಯಕ್ತಿ ಸಾರ್ಥಕ ಜೀವನ ನಡೆಸಬೇಕು. ಆಗ ಮಾತ್ರ ಆತ ಉತ್ತಮ ಎನಿಸಿಕೊಳ್ಳುತ್ತಾನೆ. ಇರೋ ನಾಲ್ಕು ದಿನವನ್ನ ಚಾಣಕ್ಯನ ಮಾತಿನಂತೆ ಅರ್ಥಪೂರ್ಣವಾಗಿ ಬದುಕಿ.



Click it and Unblock the Notifications