Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಿಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗಬೇಕಾ? ಚಾಣಕ್ಯನ ಮಾತು ಕೇಳಿ
ಎಲ್ಲರೂ ತಮ್ಮ ಜೀವನದಲ್ಲಿ ಒಳ್ಳೆಯದಾಗಬೇಕು ಎಂದು ಬಯಸುತ್ತಾರೆ ಹೊರತು ಕೆಟ್ಟದಾಗಲಿ ಅಂತ ಯಾರು ಕೂಡ ಬಯಸುವುದಿಲ್ಲ. ಕೆಲವೊಂದು ಸಾರಿ ನಮ್ಮ ಅರಿವಿಗೆ ಬಾರದ ಹಾಗೇ ಅಚಾತುರ್ಯ ನಡೆದು ಹೋಗುತ್ತದೆ.

ಚಾಣಕ್ಯ ಕೆಲವೊಂದು ನೀತಿಗಳನ್ನು ರೂಪಿಸಿದ್ದಾರೆ. ಅದನ್ನು ಜನ ಇಂದಿಗೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ನಿಮ್ಮ ಜೀವದಿಂದ ಕೆಟ್ಟ ವಿಚಾರಗಳನ್ನು ದೂರ ಇಡಬೇಕು ಅಂತಿದ್ದರೆ ಖಂಡಿತ ಚಾಣಕ್ಯ ಹೇಳಿದ ಈ ನೀತಿಗಳನ್ನು ಪಾಲಿಸಿ.
ನಮಗೆಲ್ಲಾ ಗೊತ್ತಿರುವ ಹಾಗೇ ಆಚಾರ್ಯ ಚಾಣಕ್ಯ ಒರ್ವ ಅರ್ಥಶಾಸ್ತ್ರಜ್ಞ, ರಾಜಕಾರಣಿ. ಅನಾದಿ ಕಾಲದಿಂದಲೂ ಇಂದಿನವರೆಗೂ ಚಾಣಕ್ಯ ನೀತಿಗಳನ್ನು ಒಪ್ಪದವರು ಯಾರು ಇಲ್ಲ. ಇದೇ ಕಾರಣಕ್ಕೆ ಅವರನ್ನು ಕೌಟಿಲ್ಯ ಅಂತ ಕರೆಯಲಾಗುತ್ತಿತ್ತು. ಚಾಣಕ್ಯರು ತಮ್ಮ ಜ್ಞಾನ ಹಾಗೂ ಅನುಭವದಿಂದ ಜೀವನದಲ್ಲಿ ಬರುವ ಅಡೆತಡೆಗಳನ್ನು ಎದುರಿಸಿ ಯಾವ ರೀತಿ ಸಂತೋಷದಿಂದ ಇರಬಹುದು ಎಂಬುವುದನ್ನು ಅವರು ತಿಳಿಸಿಕೊಟ್ಟಿದ್ದಾರೆ. ಹಾಗೂ ಕೆಟ್ಟ ವಿಚಾರಗಳು ನಮ್ಮ ಬಳಿ ಸುಳಿಯದೇ ಇರೋ ಹಾಗೇ ಏನು ಮಾಡಬಹುದು ಎಂಬುವುದರ ಬಗ್ಗೆ ಕೂಡ ತಿಳಿಸಿಕೊಟ್ಟಿದ್ದಾರೆ.
1. ಜ್ಞಾನ ಮತ್ತು ಸಂಪತ್ತು
ನಿಮ್ಮಲ್ಲಿ ಅಗಾಧವಾದ ಜ್ಞಾನ ಹಾಗೂ ಸಂಪತ್ತು ಇದ್ದರೆ ಕೊಂಚ ಹುಷಾರಾಗಿರಿ. ಯಾಕೆಂದರೆ ಸಕ್ಕರೆ ಇದಲ್ಲಿ ಇರುವೆಗಳು ಸುತ್ತುವರೆಯುವುದು ಸಾಮಾನ್ಯ. ಅದೇ ರೀತಿ ಒರ್ವ ವ್ಯಕ್ತಿಯಲ್ಲಿ ಅಗಾಧ ಜ್ಞಾನ ಹಾಗೂ ಸಂಪತ್ತು ಇದ್ದರೆ ಸಂಬಂಧಿಕರು, ಸ್ನೇಹಿತರು ಹೀಗೆ ಪರಿಚಯ ಇಲ್ಲದ ವ್ಯಕ್ತಿಗಳು ಕೂಡ ಆತನನ್ನು ಮುತ್ತಿಕೊಳ್ಳುತ್ತಾರೆ. ನಿಮ್ಮಿಂದ ಒಬ್ಬರಿಗೆ ಲಾಭವಿದೆ ಅನ್ನೋವಾಗ ಮಾತ್ರ ಜನ ನಿಮ್ಮ ಬಳಿಗೆ ಬರುತ್ತಾರೆ. ಇಂತಹ ಸಮಯದಲ್ಲಿ ಮುಂಜಾಗೃಕತೆಯಿಂದ ಇರೋದು ತುಂಬಾನೇ ಒಳ್ಳೆಯದು. ಕೊಂಚ ಎಚ್ಚರ ತಪ್ಪಿದ್ರು ನಿಮಗೆ ಕೆಟ್ಟದಾಗುವ ಸಾಧ್ಯತೆ ಇದೆ.
2. ಗೌರವ
ಮನುಷ್ಯನಿಗೆ ಗೌರವ ತುಂಬಾನೇ ಮುಖ್ಯ ಅಂತಾರೆ ಚಾಣಕ್ಯ. ಪ್ರತಿ ಬಾರಿ ಒಬ್ಬರಿಂದ ಅನ್ನಿಸಿಕೊಂಡು, ಬೇರೆಯವರ ಮುಂದೆ ಅವಮಾನಿಸಿಕೊಂಡು ಬಾಳುವುದಕ್ಕಿಂತ ಸಾಯುವುದೇ ಒಳ್ಳೆಯದು. ಅಷ್ಟಕ್ಕು ಯಾರೋ ಒಬ್ಬರು ನಿಮಗೆ ಅವಮಾನ ಮಾಡುತ್ತಿದ್ದಾರೆ ಅಂದ್ರೆ ಅದಕ್ಕೆ ಕಾರಣ ನೀವೇ ಹೊರತು ಬೇರ್ಯಾರು ಅಲ್ಲ. ಜೀವನದಲ್ಲಿ ನಿಮಗೆ ಅವಮಾನವಾಗುವಂತಹ, ಅಗೌರವ ಸೂಚಿಸುವಂತಹ ಯಾವುದೇ ವಿಚಾರಕ್ಕೂ ನೀವು ಅವಕಾಶ ಕೊಡಲೇಬಾರದು.
3. ಒಳ್ಳೆಯ ಮಾತನಾಡಿ
ಚಾಣಕ್ಯನ ಪ್ರಕಾರ ನಮ್ಮ ಮಾತು ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಸುಖಾ ಸುಮ್ಮನೆ ಒಬ್ಬರ ಬಳಿ ಕಾಲು ಕೆರೆದು ಜಗಳ ಮಾಡೋದಕ್ಕೆ ಹೋಗಬಾರದು. ಇನ್ನೂ ಜಗಳವಾಡುವ ಸಮಯದಲ್ಲಿ ಕೆಟ್ಟ ಮಾತುಗಳನ್ನು ಆಡಬಾರದು. ಕೆಲವೊಂದು ಜನ ಇರ್ತಾರೆ ಅವರ ಮಾತು ನಮಗೆ ಕೇಳಬೇಕು ಅಂತ ಅನ್ನಿಸೋದೇ ಇಲ್ಲ. ಯಾಕೆಂದ್ರೆ ಅಂತವರ ಬಾಯಿಯಲ್ಲಿ ಒಳ್ಳೆಯ ವಿಚಾರಗಳು ಬರೋದೇ ಇಲ್ಲ. ಅಂಥಹ ಮನುಷ್ಯರಿಂದ ದೂರವಿರಿ ಅಂತಾರೆ ಚಾಣಕ್ಯ. ಕೆಟ್ಟವರ ಸಂಘ ಯಾವತ್ತಿಗೂ ಕೆಟ್ಟದ್ದನ್ನೇ ಮಾಡುತ್ತದೆ.
ನಮ್ಮ ಜೀವನದಲ್ಲಿ ಒಳ್ಳೆಯದಾಗಲಿ ಅಥವಾ ಕೆಟ್ಟದಾಗಲಿ ಅದಕ್ಕೆಲ್ಲಾ ನಾವೇ ಹೊರತು ಬೇರ್ಯಾರು ಹೊಣೆಯಲ್ಲ. ಹೀಗಾಗಿ ನಾವಿಡುವ ಒಂದೊಂದು ಹೆಜ್ಜೆಯೂ ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications



