Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಾವಿನಿಂದ ಪಾರಾಗಬೇಕಾ? ಇವುಗಳಿಂದ ದೂರವಿರಿ ಅಂತಾರೆ ಚಾಣಕ್ಯ
ಚಾಣಕ್ಯನ ನೀತಿ ಶಾಸ್ತ್ರದಲ್ಲಿ ಜೀವನದ ಪ್ರಮುಖ ಘಟ್ಟಗಳ ಬಗ್ಗೆ ಸವಿವರವಾಗಿ ವಿವರಿಸಿದ್ದಾರೆ. ಅವರ ಪ್ರಕಾರ ಪ್ರಮುಖ ಮನುಷ್ಯನಿಗೆ ಜೀವನದಲ್ಲಿ ಅನೇಕ ಕಷ್ಟಗಳು ಎದುರಾಗುತ್ತದೆ. ಕೆಲಸ ಮಾಡುವ ಜಾಗದಲ್ಲಿ ಮೇಲಿಂದ ಮೇಲೆ ಸವಾಲುಗಳು ಎದುರಾಗುತ್ತಲೇ ಇರುತ್ತದೆ. ಇದೆಲ್ಲಾ ಯಶಸ್ಸಿನ ಮುನ್ಸೂಚನೆ ಅಷ್ಟೇ ಅಂತಾರೆ.

ಚಾಣಕ್ಯನ ನೀತಿಗಳಲ್ಲಿ ಎಲ್ಲಾ ಸಮಸ್ಯೆಗಳಿಗೂ ಅವರು ಪರಿಹಾರಗಳನ್ನು ಸೂಚಿಸಿದ್ದಾರೆ. ಶತ್ರುಪಡೆಯನ್ನು ಸೋಲಿಸಲು ಒಬ್ಬರೆ ನಿಂತು ಹೋರಾಡುತ್ತೇನೆ ಅಂದರೆ ಆಗೋದಿಲ್ಲ. ಅದಕ್ಕಾಗಿ ಒಂದು ಸೈನ್ಯವನ್ನು ಸಜ್ಜುಗೊಳಿಸಬೇಕು. ಆಗ ಶತ್ರು ಪಡೆಯನ್ನು ಸುಲಭವಾಗಿ ಸೋಲಿಸಬಹುದು. ಜೀವನದ ಎಲ್ಲಾ ಪರೀಕ್ಷೇಗಳಿಗೂ ನಮ್ಮನ್ನು ನಾವು ಸಜ್ಜುಗೊಳಿಸಬೇಕು. ಹಾಗಾದ್ರೆ ನಮ್ಮ ಜೀವನದ ರಕ್ಷಣೆಯನ್ನು ಹೇಗೆ ಮಾಡಬೇಕು ಅನ್ನುವುದರ ಬಗ್ಗೆ ಕೆಲವೊಂದು ಸಂಗತಿಗಳನ್ನು ಚಾಣಕ್ಯ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕು ಆ ವಿಚಾರಗಳು ಯಾವುದು ಅನ್ನೋದನ್ನ ತಿಳ್ಕೊಳ್ಳೋಣ.
1. ಸಾಯುವ ನಿರ್ಧಾರ ಬೇಡ
ಜೀವನದಲ್ಲಿ ನೀವು ಸಂಪತ್ತು, ಸ್ನೇಹಿತರು, ಹೆಂಡತಿ, ಎಂತಹದ್ದೇ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡರು ವಾಪಾಸ್ಸು ಪಡೆದುಕೊಳ್ಳಬಹುದು. ಆದರೆ ಒಮ್ಮೆ ಹೋದ ಜೀವ ಎಂದಿಗೂ ತಿರುಗಿ ಬರೋದಿಲ್ಲ ಅಂತಾರೆ ಚಾಣಕ್ಯ. ಕೆಲವೊಬ್ಬರು ಆತುರಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದು ಮಹಾ ಪಾಪ. ನಮ್ಮನ್ನು ಈ ಭೂಮಿಗೆ ತಂದ ದೇವರಿಗೆ ಮಾತ್ರ ನಮ್ಮನ್ನು ವಾಪಾಸ್ಸು ಕರೆಸಿಕೊಳ್ಳುವ ಅಧಿಕಾರವಿರುವುದು. ಅದನ್ನು ಬಿಟ್ಟು ನಮ್ಮ ಪ್ರಾಣಕ್ಕೆ ನಾವೇ ಸಂಚಕಾರ ತಂದುಕೊಳ್ಳಬಾರದು.
2. ಶತ್ರುಗಳ ತಂಟೆಗೆ ಹೋಗಲೇಬೇಡಿ
ಯುದ್ಧವಾಗಿರಲಿ ಅಥವಾ ಜೀವನದ ಯಾವುದೇ ಪರೀಕ್ಷೇಗಳೇ ಆಗಿರಲಿ ಅದನ್ನು ದೈರ್ಯದಿಂದ ಎದುರಿಸಬೇಕು. ತಯಾರಿ ಇಲ್ಲದೇ ಯಾವುದೇ ಕೆಲಸಕ್ಕೂ ಮುನ್ನುಗ್ಗುವುದು ತಪ್ಪು. ಪೂರ್ವ ಸಿದ್ಧತೆಯೊಂದಿಗೆ ಯಾವುದೇ ಸಂಕಷ್ಟಗಳನ್ನು ಎದುರಿಸಬೇಕು ಅಂತಾರೆ ಚಾಣಕ್ಯ. ಒಂದು ವೇಳೆ ಸಿದ್ಧತೆ ಇರದೇ ಹೋದರೆ ನಿಮ್ಮ ಪ್ರಯತ್ನ ವ್ಯರ್ಥವಾಗುತ್ತದೆ.
3. ಈ ವಿಚಾರಗಳಿಂದ ದೂರವಿದ್ರೆ ಉತ್ತಮ
ಚಾಣಕ್ಯನ ಪ್ರಕಾರ ಬೆಂಕಿ, ನೀರು, ಮೂರ್ಖ, ಹಾವು ಜೊತೆಗೆ ಶ್ರೀಮಂತ ಕುಟುಂಬದವರಿಂದ ದೂರವಿರಿ ಅಂತಾರೆ ಚಾಣಕ್ಯ. ಇವುಗಳಿಂದ ನಿಮಗೆ ಸಾವು ಸಂಭವಿಸುವ ಸಾಧ್ಯತೆ ಇದೆ. ಒಂದು ವಿಚಾರದಿಂದ ನಮ್ಮ ಜೀವಕ್ಕೆ ಆಪತ್ತು ಇದೆ ಅಂತಾದ್ರೆ ಅದರಿಂದ ದೂರವಿರೋದು ಉತ್ತಮ. ಗೊತ್ತಿದ್ದು ಗೊತ್ತಿದ್ದು ನಮ್ಮ ಪ್ರಾಣಕ್ಕೆ ನಾವೇ ಸಂಚಕಾರ ತಂದುಕೊಳ್ಳಬಾರದು.
4. ಕೆಲವೊಂದು ವಿಚಾರಗಳನ್ನು ಮುಚ್ಚಿಡಿ
ಚಾಣಕ್ಯನ ಪ್ರಕಾರ ನಾವು ಕೆಲವೊಂದು ವಿಚಾರಗಳನ್ನು ಮುಚ್ಚಿಡಿವುದು ತುಂಬಾನೇ ಮುಖ್ಯ. ರಹಸ್ಯಗಳನ್ನು ಸಿಕ್ಕ ಸಿಕ್ಕವರಲ್ಲಿ ಹಂಚಿಕೊಳ್ಳಬಾರದು ಅಂತಾರೆ. ಮುಖ್ಯವಾಗಿ ನಿಮಗಿರುವ ರೋಗ, ನೀವು ಉಪಯೋಗಿಸುತ್ತಿರುವ ಔಷಧಿಯ ಬಗ್ಗೆ, ನಾವು ಮಾಡಿದ ದಾನ, ಮನೆಯಲ್ಲಿ ನಡೆದ ಜಗಳದ ಬಗ್ಗೆ, ನಿಮ್ಮ ಹೆಂಡತಿಯ ರಹಸ್ಯ ವಿಚಾರಗಳು, ನೀವು ಇಷ್ಟಪಡದಿರುವ ಸರಿಯಾಗಿ ಬೇಯದಿರುವ ಆಹಾರ. ಇಷ್ಟು ವಿಚಾರಗಳ ಬಗ್ಗೆ ಬೇರೆಯವರೊಂದಿಗೆ ಹಂಚಿಕೊಳ್ಳಲೇಬೇಡಿ. ಒಂದಲ್ಲ ಒಂದು ಈ ವಿಚಾರಗಳೇ ನಿಮ್ಮ ಜೀವಕ್ಕೆ ಆಪತ್ತು ತರಬಹುದು.
ಜೀವನ ಅಂದರೇನೆ ಹಾಗೆ ಇಲ್ಲಿ ಕಷ್ಟ-ಸುಖ ಸಾಮಾನ್ಯ. ಇದಕ್ಕೆಲ್ಲಾ ಸಾವು ಪರಿಹಾರವಲ್ಲ. ಕೆಲವೊಂದು ಬಾರಿ ಬೇರೆ ವ್ಯಕ್ತಿಗಳು ನಮ್ಮ ಜೀವಕ್ಕೆ ಆಪತ್ತು ತರಲು ಪ್ರಯತ್ನಿಸುತ್ತಾರೆ. ಇಂತಹ ಸಂದರ್ಭದಲ್ಲಿ ಜಾಗರೂಕತೆಯಿಂದ ಹೆಜ್ಜೆ ಇಟ್ಟರೆ ಉತ್ತಮ.



Click it and Unblock the Notifications



