Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ದುಷ್ಟನ ಮನಸ್ಸು ಪರಿಶುದ್ಧವಾಗಿರಲು ಸಾಧ್ಯವೇ ಇಲ್ಲ ಎಂದು ಚಾಣಕ್ಯ ಹೇಳಿದ ಮಾತು ನೀವು ಒಪ್ಪುತ್ತೀರಾ?
ಆಚಾರ್ಯ ಚಾಣಕ್ಯ ಒರ್ವ ಕೌಶಲ್ಯಪೂರಿತ ರಾಜಕಾರಣಿ ಹಾಗೂ ಅರ್ಥಶಾಸ್ತ್ರಜ್ಞ. ಇಂದಿಗೂ ಅವರು ರೂಪಿಸಿದ ನೀತಿಗಳು ಜನಸಾಮಾನ್ಯರ ಜೀವನಕ್ಕೆ ಅನ್ವಯಿಸುತ್ತದೆ. ನೀವೆನಾದರೂ ಸಾಧನೆ ಮಾಡಲು ಬಯಸಿದ್ದೇ ಆದರೆ ನೀವು ನಿಮ್ಮ ಗುರಿಯೆಡೆಗೆ ಕೆಲಸ ಮಾಡಲು ನಿರಂತರವಾಗಿ ಪ್ರಯತ್ನಿಸಿ. ಅದನ್ನು ದುಷ್ಟರ ಜೊತೆ ಸೇರಿ ಕೆಟ್ಟ ಕೆಲಸಗಳನ್ನು ಮಾಡಿದ್ದೇ ಆದರೆ ಅದು ನಿಮಗೆ ಶೋಭೆ ತರುವುದಿಲ್ಲ.

ಒಂದು ಬಾರಿ ನೀವು ಮಾಡಿದ ಕೆಟ್ಟ ಕೆಲಸಗಳು ಯಮನ ಪಾಪಗಳ ಪಟ್ಟಿಯಲ್ಲಿ ದಾಖಲಾಯ್ತು ಅಂದ್ರೆ ನೀವೆಷ್ಟು ಪುಣ್ಯಸ್ನಾನಗಳನ್ನು ಮಾಡಿದ್ರು ಅದು ವ್ಯರ್ಥವೇ ಸರಿ. ಇಷ್ಟು ದಿನ ಕೆಟ್ಟ ಕೆಲಸ ಮಾಡಿದ್ದು ಸಾಕು. ಇನ್ನು ಮುಂದಾದರೂ ಒಳ್ಳೆಯ ಕೆಲಸವನ್ನು ಮಾಡಿ ಒಳ್ಳೆಯ ವ್ಯಕ್ತಿ ಅನ್ನಿಸಿಕೊಳ್ಳಬೇಕಾದರೆ ಚಾಣಕ್ಯ ಈ ನೀತಿಗಳನ್ನು ಪಾಲಿಸಿ.
ದುಷ್ಟನ ಮನಸ್ಸು ಪರಿಶುದ್ಧವಾಗಿರಲು ಸಾಧ್ಯವೇ ಇಲ್ಲ
ಚಾಣಕ್ಯನ ಪ್ರಕಾರ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ಇಟ್ಟುಕೊಂಡು ಒಳ್ಳೆಯವರಂತೆ ನಟಿಸಿದವರ ಮನಸ್ಸು ಪರಿಶುದ್ಧವಾಗಿ ಇರುವುದಿಲ್ಲ. ಬೇವಿನ ಮರದ ಪ್ರತಿಯೊಂದು ಭಾಗವು ಹೇಗೆ ಕಹಿಯಾಗಿರುತ್ತದೋ ಅದೇ ರೀತಿ ದುಷ್ಟ ಮನಸ್ಸು. ಭೂಮಿಯಲ್ಲಿ ಬದುಕಿರುವ ನಾಲ್ಕು ದಿನದಲ್ಲಿ ಒಳ್ಳೆಯ ಕೆಲಗಳನ್ನು ಮಾಡಿ ಒಳ್ಳೆಯವರೆನಿಸಿಕೊಳ್ಳಿ. ಬೆಳಗ್ಗೆ ಎದ್ದ ತಕ್ಷಣ ನಾನು ಇವತ್ತು ಯಾವ ಕೆಲಸ ಮಾಡೋದಕ್ಕೆ ಹೊರಟಿದ್ದೇನೆ ಎಂಬುವುದನ್ನು ಮನಸ್ಸಿನಲ್ಲೇ ಆಲೋಚಿಸಿ. ಹಾಗೂ ನಿಮ್ಮ ತಾಯಿಯ ಬಗ್ಗೆ ಒಂದು ಸಲ ಯೋಚಿಸಿ ಆಕೆ ನಿಮಗಾಗಿ ಎಷ್ಟು ಕಷ್ಟ ಪಟ್ಟಿದ್ದಾಳೆ ಅನ್ನೋದನ್ನ. ಆಗ ನಿಮ್ಮ ಮನಸ್ಸಿನ ಆ ಕೆಟ್ಟ ಆಲೋಚನೆಗಳೆಲ್ಲಾ ಮಂಜಿನಂತೆ ಕರಗಿ ಹೋಗುತ್ತದೆ.
ಪುಣ್ಯಸ್ನಾನ ಮಾಡಿದರೂ ಪಾಪ ತೊಲಗುವುದಿಲ್ಲ
ಚಾಣಕ್ಯನ ಪ್ರಕಾರ ದುಡ್ಡು ಅನ್ನೋದು ಮನುಷ್ಯನನ್ನು ಎಂತಹ ನೀಚ ಕೆಲಸಕ್ಕಾದರೂ ಇಳಿಸಿ ಬಿಡುತ್ತದೆ. ಹೀಗೆ ನೀಚ ಕೆಲಸಗಳನ್ನೇ ಮಾಡಿ ಎಷ್ಟು ಸಂಪಾದನೆ ಮಾಡಿದರೂ ಅದು ವ್ಯರ್ಥವೇ ಸರಿ. ಕೆಲವು ಜನ ಮಾಡಿದ ಪಾಪ ಕೆಳೆಯುವುದಕ್ಕೆ ಪುಣ್ಯಸ್ನಾನ ಮಾಡುತ್ತಾರೆ. ಒಂದಲ್ಲ, ಎರಡಲ್ಲ ನೂರು ಬಾರಿ ಪುಣ್ಯ ಸ್ನಾನ ಮಾಡಿದರೂ ಮೈ ಕೊಳೆ ಹೋಗುವುದಷ್ಟೇ ಅಲ್ಲದೇ, ನಾವು ಮಾಡಿದ ಪಾಪ ಕರ್ಮಗಳು ಕಳೆಯುವುದಿಲ್ಲ. ಹೀಗಾಗಿ ಕೆಟ್ಟ ಕೆಲಸಗಳನ್ನು ಮಾಡುವ ಮೊದಲು ಕೊಂಚ ಆಲೋಚಿಸಿ.
ದಾನ ಮಾಡಿ
ಚಾಣಕ್ಯನ ಪ್ರಕಾರ ನಿಮ್ಮ ಜೀವನ ಸಾಗಿಸಲು ಬೇಕಾಗುವಷ್ಟು ದುಡ್ಡಿದರೆ ಸಾಕು. ನಿಮ್ಮಲ್ಲಿ ಬೇಕಾದಷ್ಟು ಆಸ್ತಿ-ಪಾಸ್ತಿ ಇದ್ದರೆ ಅದರಲ್ಲಿ ಸ್ವಲ್ಪ ಭಾಗವನ್ನು ದಾನಕ್ಕೆ ವಿನಿಯೋಗಿಸಿ. ಬಡಬಗ್ಗರಿಗೆ ದಾನ ಮಾಡಿ, ನಿರ್ಗತಿಕರಿಗೆ ಅನ್ನ ಹಾಕಿ. ಖಂಡಿತ ನಿಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಅದನ್ನು ಬಿಟ್ಟು ನಿಮ್ಮ ಸ್ವಾರ್ಥವೇ ಹೆಚ್ಚಾದರೆ ಆದಷ್ಟು ಬೇಗ ನಿಮ್ಮ ಪಾಪದ ಕೊಡ ತುಂಬಿ ಹೋಗುತ್ತದೆ.
ಇರುವ ನಾಲ್ಕು ದಿನದ ಬದುಕಿನಲ್ಲಿ ನಾವು ಮಾಡಿದ ಒಳ್ಳೆಯ ಕೆಲಸಗಳನ್ನಷ್ಟೇ ಜನ ನೆನಪಿಟ್ಟುಕೊಳ್ಳುತ್ತಾರೆ. ಕೈಲಾದಷ್ಟು ಇತರರಿಗೆ ಸಹಾಯ ಮಾಡಿ. ಪಾಪ-ಕರ್ಮಗಳೇ ಹೆಚ್ಚಾದರೆ ಸತ್ತ ಮೇಲೂ ನಮಗೆ ಮುಕ್ತಿ ಸಿಗೋದಿಲ್ಲ.



Click it and Unblock the Notifications



