Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಾಣಕ್ಯ ಪ್ರಕಾರ ಈ ಗುಣಗಳಿರುವ ವ್ಯಕ್ತಿ ಸಮಾಜದಲ್ಲಿ ತುಂಬಾ ದೊಡ್ಡ ಸ್ಥಾನದಲ್ಲಿರುತ್ತಾರೆ
ಪ್ರತಿಯೊಬ್ಬರಿಗೂ ಸಮಾಜದಲ್ಲಿ ಉನ್ನತ ಅಥವಾ ಗೌರವಯುವ ಸ್ಥಾನಕ್ಕೆ ತಲುಪಬೇಕೆಂದು ಖಂಡಿತ ಆಸೆ ಇರುತ್ತದೆ. ಆದ್ರೆ ಎಲ್ಲರಿಂದಲೂ ಇದು ಸಾಧ್ಯವಾಗುವುದಿಲ್ಲ. ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಅದೃಷ್ಟಶಾಲಿಗಳಾಗಿರ್ತಾರೆ ಅಂತವರಿಗೆ ಮಾತ್ರ ಗೌರವಯುತ ಸ್ಥಾನ ಒಲಿಯುತ್ತದೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ.

ಆದ್ರೆ ಇದು ನಿಜವಲ್ಲ. ಒರ್ವ ಸಾಮಾನ್ಯ ವ್ಯಕ್ತಿಯು ಕೂಡ ಸಮಾಜದಲ್ಲಿ ಉನ್ನತ ಸ್ಥಾನ ತಲುಪಬಹುದು. ಆಚಾರ್ಯ ಚಾಣಕ್ಯರು ಇದಕ್ಕಾಗಿ ಕೆಲವೊಂದು ಸೂತ್ರಗಳನ್ನು ಹೇಳಿದ್ದಾರೆ. ಇದನ್ನು ಪಾಲಿಸಿದ್ರೆ ನೀವು ಕೂಡ ಸಮಾಜದಲ್ಲಿ ಗೌರವಯುತ ಸ್ಥಾನ ತಲುಪೋದು ನಿಶ್ಚಿತ.

ಗಾಂಭೀರ್ಯತೆ
ಚಾಣಕ್ಯನ ಪ್ರಕಾರ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಗಾಂಭೀರ್ಯತೆಯನ್ನ ಅಳವಡಿಸಿಕೊಂಡಿರಬೇಕು. ಯಾವುದೇ ಸಣ್ಣ-ಪುಟ್ಟ ವಿಚಾರಗಳಾದ್ರು ಪರವಾಗಿಲ್ಲ ಅದನ್ನ ಅಸಡ್ಡೆಯಿಂದ ಕಾಣಬೇಡಿ. ಮತ್ತೊಂದು ವಿಚಾರ ಅಂದ್ರೆ ಸಮಾಜದಲ್ಲಿ ಯಾರ ಮುಂದೆಯೂ ಕಾಮಿಡಿ ಪೀಸ್ ಆಗಲೂ ಹೋಗಬೇಡಿ. ಆಗ ನಿಮ್ಮನ್ನೂ ಯಾರು ಗಂಭೀರವಾಗಿ ಪರಿಗಣಿಸೋದಿಲ್ಲ. ಹೀಗಾಗಿ ಎಲ್ಲಾ ಸಮಯದಲ್ಲೂ ಯಾವುದೇ ವಿಚಾರವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಎಲ್ಲೇ ಹೋದರೂ ಗಾಂಭೀರ್ಯತೆ ಬಿಟ್ಟುಕೊಡಬೇಡಿ.

ಪ್ರಾಮಾಣಿಕತೆ
ಚಾಣಕ್ಯನ ಪ್ರಕಾರ ಪ್ರಮಾಣಿಕತೆ ಅನ್ನೋದು ಜೀವನದಲ್ಲಿ ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ಜೀವನದಲ್ಲಿ ಎಂತಹದ್ದೇ ಸಂಕಷ್ಟದ ಪರಿಸ್ಥಿತಿ ಬಂದರೂ ಕೂಡ ಪ್ರಮಾಣಿಕತೆಯನ್ನು ಬಿಟ್ಟು ಕೊಡಬಾರದು. ನೀವು ಎಷ್ಟೇ ಶ್ರೀಮಂತರಾಗಿರಬಹುದು, ಅಥವಾ ನಿಮ್ಮ ಬಳಿ ಸಿಕ್ಕಾಪಟ್ಟೆ ದುಡ್ಡಿರಬಹುದು ಆದ್ರೆ ಅದ್ಯಾವುದು ಪ್ರಯೋಜನಕ್ಕೆ ಬರೋದಿಲ್ಲ. ನೀವು ಆ ದುಡ್ಡನ್ನು ಎಷ್ಟು ಪ್ರಮಾಣಿಕತೆಯಿಂದ ಗಳಿಸಿದ್ದೀರಾ ಎಂಬುದೇ ಇಲ್ಲಿ ಮುಖ್ಯವಾಗುತ್ತದೆ. ಹಾಗಾದಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ತಲುಪೋದಕ್ಕೆ ಸಾಧ್ಯ.

ಜವಾಬ್ದಾರಿಯುತ ನಡವಳಿಕೆ
ಮನುಷ್ಯನಿಗೆ ಜವಾಬ್ದಾರಿ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಅದು ಕುಟುಂಬದ ವಿಚಾರವಾಗಲಿ ಅಥವಾ ಬೇರೆ ಯಾವುದೇ ನಿರ್ವಹಣೆ ಇರಲಿ ಜವಬ್ದಾರಿ ಇಲ್ಲದೇ ಹೋದರೆ ಯಾವುದೇ ಕೆಲಸವಾದ್ರೂ ಕೂಡ ಸರಿಯಾಗಿ ನಡೆಯೋದಕ್ಕೆ ಸಾಧ್ಯವಿಲ್ಲ.ಒಬ್ಬ ವ್ಯಕ್ತಿಯಲ್ಲಿ ಯಾವಾಗ ಸಮರ್ಥ ನಾಯಕತ್ವದ ಗುಣ ಇರುತ್ತದೆಯೋ ಆಗ ಮಾತ್ರ ಆತ ಒಂದಿಡೀ ಸಂಸ್ಥೆಯನ್ನ ಜವಾಬ್ದಾರಿಯಿಂದ ಮುನ್ನಡೆಸೋದಕ್ಕೆ ಸಾಧ್ಯವಾಗುತ್ತದೆ.
ಹುಟ್ಟಿದ ಪ್ರತಿಯೊಬ್ಬರು ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯೋದಕ್ಕೆ ಸಾಧ್ಯವಾಗೋದಿಲ್ಲ. ನಮ್ಮಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಆ ಸ್ಥಾನಕ್ಕೆ ಏರುತ್ತಾರೆ. ಚಾಣಕ್ಯನ ಮಾತಿನಂತೆ ಉನ್ನತ ಸ್ಥಾನಕ್ಕೇರಲು ಇಂದಿನಿಂದಾನೇ ನಿಮ್ಮ ಪ್ರಯತ್ನ ಆರಂಭವಾಗಲಿ.



Click it and Unblock the Notifications
