Latest Updates
-
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು?
ಕಷ್ಟ-ಕಾರ್ಪಣ್ಯಗಳ ದೂರಮಾಡೋ ಅಪರಾ ಏಕಾದಶಿ ಯಾವಾಗ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಅಪರಾ ಅಥವಾ ಅಚಲ ಏಕಾದಶಿ ಎನ್ನುವರು. ಈ ಏಕಾದಶಿಯಂದು ಶ್ರೀವಿಷ್ಣುವಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ಬಾರಿ ಅಪರಾ ಏಕಾದಶಿಯನ್ನು ಇದೇ ಜೂನ್ 6, ಬಾನುವಾರದಂದು ಆಚರಿಸಲಾಗುತ್ತಿದೆ. ಈ ದಿನದಂದು ಉಪವಾಸವನ್ನು ಆಚರಿಸಿದರೆ ನಮ್ಮ ದುಃಖ, ಕಷ್ಟ, ಕಾರ್ಪಣ್ಯಗಳೆಲ್ಲವೂ ದೂರಾಗುತ್ತದೆ ಎಂಬ ನಂಬಿಕೆಯಿದೆ. ಈ ಅಪರಾ ಏಕಾದಶಿಯನ್ನು ಸಾಮಾನ್ಯವಾಗಿ ಜಲಕ್ರಿದ ಏಕಾದಶಿ, ಅಚಲ ಏಕಾದಶಿ ಮತ್ತು ಭದ್ರಕಾಳಿ ಏಕಾದಶಿ ಎಂದೂ ಕೂಡ ಕರೆಯಲಾಗುತ್ತದೆ.
ಅಪರಾ ಏಕಾದಶಿಯ ಶುಭ ಮುಹೂರ್ತ, ಉಪವಾಸದ ಸಮಯ, ಮಹತ್ವ ಸಂಪೂರ್ಣ ಮಾಹಿತಿ:

ಶುಭ ಮುಹೂರ್ತ:
ಈ ಬಾರಿ ಏಕಾದಶಿಯು 2021 ರ ಜೂನ್ 05 ರ ಶನಿವಾರ ಬೆಳಿಗ್ಗೆ 04:07 ರಿಂದ ಪ್ರಾರಂಭವಾಗಲಿದ್ದು, 2021 ರ ಜೂನ್ 06 ರ ಭಾನುವಾರ ಬೆಳಿಗ್ಗೆ 06.19 ಕ್ಕೆ ಕೊನೆಗೊಳ್ಳುತ್ತದೆ.

ಉಪವಾಸದ ಸಮಯ:
ಅಪರಾ ಏಕಾದಶಿ ಉಪವಾಸದ ಶುಭ ಸಮಯವು 2021 ಜೂನ್ 07 ರ ಸೋಮವಾರ ಬೆಳಿಗ್ಗೆ 06 ರಿಂದ ಪ್ರಾರಂಭವಾಗಿ ರಾತ್ರಿ 08.39 ಕ್ಕೆ ಕೊನೆಗೊಳ್ಳುತ್ತದೆ.

ಅಪರಾ ಏಕಾದಶಿಯನ್ನು ಏಕೆ ಆಚರಿಸಬೇಕು?:
ಪೌರಾಣಿಕ ನಂಬಿಕೆಗಳ ಪ್ರಕಾರ, ಅಪರಾ ಏಕಾದಶಿ ಎಂದರೆ ಅಪಾರ ಸದ್ಗುಣ. ವಿಷ್ಣುವನ್ನು ಪೂಜಿಸಿ, ಈ ದಿನದಂದು ಉಪವಾಸವನ್ನು ಆಚರಿಸುವ ಮೂಲಕ ಒಬ್ಬನು ಅಪಾರವಾದ ಸದ್ಗುಣವನ್ನು ಪಡೆಯುತ್ತಾನೆ. ಆದ್ದರಿಂದ ಇದನ್ನು ಅಪರಾ ಏಕಾದಶಿ ಎಂದು ಕರೆಯಲಾಗುತ್ತದೆ. ಅಪರಾ ಏಕಾದಶಿ ದಿನದಂದು ಪೂಜೆ ಮಾಡುವುದರಿಂದ ಮನುಷ್ಯನ ಎಲ್ಲಾ ಆಸೆಗಳನ್ನು ಈಡೇರುತ್ತದೆ ಮತ್ತು ಜೀವನದಲ್ಲಿ ಗೌರವ, ಸಂಪತ್ತು, ವೈಭವ ಮತ್ತು ಆರೋಗ್ಯ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಅಪರಾ ಏಕಾದಶಿಯ ಮಹತ್ವ:
ಮಹಾಭಾರತ ಯುದ್ಧದಲ್ಲಿ ವಿಜಯದತ್ತ ಸಾಗಿದ ಭಗವಾನ್ ಶ್ರೀ ಕೃಷ್ಣನ ಆಜ್ಞೆಯ ಮೇರೆಗೆ ಪಾಂಡವರು ಅಪರಾ ಏಕಾದಶಿಯಂದು ಉಪವಾಸ ಮಾಡಿದರು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅಪರಾ ಏಕಾದಶಿ ಉಪವಾಸವನ್ನು ಆಚರಿಸುವ ಮೂಲಕ, ಭಕ್ತನ ಎಲ್ಲಾ ದುಃಖಗಳು ದೂರವಾಗುತ್ತದೆ ಮತ್ತು ಅವನ ಎಲ್ಲಾ ಪಾಪಗಳು ಕೊನೆಗೊಳ್ಳುತ್ತವೆ ಎಂದು ನಂಬಲಾಗಿದೆ.



Click it and Unblock the Notifications











