Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಇಂಥವರ ಜೊತೆ ಶತ್ರುತ್ವ ಬೆಳೆಸಿದರೆ ನಮಗೆ ಖಂಡಿತ ಅಪಾಯ ತಪ್ಪಿದ್ದಲ್ಲ
ಶತ್ರುತ್ವ ಅನ್ನೋದು ತುಂಬಾನೇ ಕೆಟ್ಟದ್ದು ನಮಗೆ ಒಬ್ಬರ ಮೇಲೆ ಶತ್ರುತ್ವ ಹುಟ್ಟಿಕೊಂಡರೆ ಸಾಕು ಅವರನ್ನ ಮಣಿಸೋದು ಹೇಗೆ ಅನ್ನೋದ್ರ ಬಗ್ಗೆನೇ ಯೋಚಿಸುತ್ತಿರುತ್ತೇವೆ. ಇದೇ ಚಿಂತೆಯಲ್ಲಿ ನಮಗೆ ನಿದ್ದೆನೂ ಬರೋದಿಲ್ಲ.

ಚಾಣಕ್ಯನ ಪ್ರಕಾರ ನೀವು ಯಾರೊಂದಿಗಾದರೂ ಶತ್ರುತ್ವ ಇಟ್ಟುಕೊಳ್ಳಬಹುದು. ಆದ್ರೆ ಈ 7 ಜನರೊಂದಿಗೆ ಶತ್ರುತ್ವ ಇಟ್ಟುಕೊಳ್ಳಲೇಬಾರದು. ಹಾಗೊಂದು ವೇಳೆ ಈ 7 ಜನರ ವಿರುದ್ಧ ಹೋದರೆ ಖಂಡಿತ ನಿಮಗೆ ಕಂಠಕ ಎದುರಾಗಲಿದೆ. ಇದರಿಂದ ಸಾವು ಬೇಕಾದರೂ ಸಂಭವಿಸಬಹುದು. ಹಾಗಾದರೆ ಆ ಏಳು ಜನ ಯಾರು? ಅವರೊಂದಿಗೆ ಜಾಗರೂಕತೆಯಿಂದ ವ್ಯವಹರಿಸಲು ಚಾಣಕ್ಯ ಹೇಳಿದ ಸೂತ್ರಗಳು ಯಾವುದು ಅನ್ನೋದನ್ನ ತಿಳಿದುಕೊಳ್ಳೋಣ.

1. ರಾಜ
ಚಾಣಕ್ಯನ ಪ್ರಕಾರ ನಾವು ಶತ್ರುತ್ವ ಇಟ್ಟುಕೊಳ್ಳಲೇ ಬಾರದ ಮೊದಲನೇಯ ವ್ಯಕ್ತಿ ಎಂದರೆ ಅದು ರಾಜ. ನೀವೇನಾದರೂ ರಾಜನೊಂದಿಗೆ ಸೆಣಸಾಡಲು ಹೋದರೆ ಮೊದಲನೇಯದ್ದು ಸಾವಾಗಬಹುದು. ಎರಡನೇಯದ್ದು ಆತ ನಿಮ್ಮನ್ನು ಜೈಲಿಗಟ್ಟಬಹುದು. ಈಗಿನ ಕಾಲದಲ್ಲಿ ರಾಜ ಇಲ್ಲದೇ ಇರುವುದರಿಂದ ನಾವು ರಾಜಕಾರಣಿಗಳು, ಮಂತ್ರಿಗಳನ್ನು ರಾಜಸ್ಥಾನದಲ್ಲಿ ಪರಿಗಣಿಸಬಹುದು. ಯಾಕೆಂದ್ರೆ ಹಣ, ಅಧಿಕಾರ ಇದ್ದವರೊಂದು ಸಾಮಾನ್ಯ ಪ್ರಜೆಗಳು ಗುದ್ದಾಡೋದಿಕ್ಕೆ ಸಾಧ್ಯಾನಾ? ಖಂಡಿತ ಇಲ್ಲ.

2. ಬಲಶಾಲಿ
ನಮಗಿಂತ ಬಲಶಾಲಿಗಳ ವಿರುದ್ಧ ನಾವು ಹೊಡೆದಾಡಬಾರದು ಅಂತ ಚಾಣಕ್ಯ ಹೇಳುತ್ತಾರೆ. ಆತ ದೈಹಿಕವಾಗಿ ಶಕ್ತಿಶಾಲಿಯಾಗಿದ್ದರೆ ಖಂಡಿತ ಆತನೊಂದಿಗೆ ಯುದ್ಧ ಬೇಡ. ಇನ್ನೂ ಹಣವಂತ ಅಥವಾ ಶಸ್ತ್ರಾಸ್ತ್ರಗಳನ್ನು ಹೊಂದಿರುವವನ ಜೊತೆಗೂ ಯುದ್ಧ ಬೇಡ. ಯಾಕೆಂದರೆ ಅಂತವರ ಜೊತೆ ಸೆಣಸಾಡಲು ಹೋದರೆ ಸಾವು ಕೂಡ ಸಂಭವಿಸಬಹುದು.

3. ಬ್ರಾಹ್ಮಣ
ಚಾಣಕ್ಯನ ಪ್ರಕಾರ ಬ್ರಾಹ್ಮಣರು ದೇವರ ಪೂಜಾ ಕೈಂಕರ್ಯಗಳನ್ನು ಮಾಡುವುದರಿಂದ ಅವರನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ. ನಮ್ಮಲ್ಲಿ ಒಂದು ಮಾತಿದೆ ಬ್ರಾಹ್ಮಣ ಶಾಪಕ್ಕೆ ತುತ್ತಾಗಬೇಡಿ ಅಂತ. ಆ ಮಾತನ್ನು ಯಾಕೆ ಹೇಳುತ್ತಾರೆ ಅಂದರೆ ನೀವೇನಾದರೂ ಬ್ರಾಹ್ಮಣನನ್ನು ನಿಂದಿಸಿ ಆತನ ಕೋಪಕ್ಕೆ ಗುರಿಯಾದರೆ ಅಥವಾ ನಿಮ್ಮಿಂದಾಗಿ ಆತ ಕಣ್ಣೀರು ಹಾಕುವಂತಾದರೆ ಆ ಶಾಪ ಖಂಡಿತ ನಿಮಗೆ ತಟ್ಟುತ್ತಂತೆ. ಹೀಗಾಗಿ ಬ್ರಾಹ್ಮಣರನ್ನು ನಿಂದಿಸಲು ಹೋಗಬೇಡಿ ಎಂದು ಚಾಣಕ್ಯ ಕಿವಿ ಮಾತು ಹೇಳಿದ್ದಾರೆ.

4. ಮೂರ್ಖ
ಚಾಣಕ್ಯನ ಪ್ರಕಾರ ಮೂರ್ಖನೊಂದಿಗೆ ಸ್ನೇಹ ಬೇಡ. ಏಕೆಂದರೆ ಅದು ಒಂದಲ್ಲ ಒಂದು ದಿನ ಖಂಡಿತ ನಿಮಗೆ ಮುಳುವಾಗಲಿದೆ. ಏಕೆಂದರೆ ಮೂರ್ಖ ಜನರು ಯಾವ ಕ್ಷಣದಲ್ಲಿ ಏನು ಮಾಡುತ್ತಾರೆ ಎಂದು ಹೇಳೋದಿಕ್ಕೆ ಆಗೋದಿಲ್ಲ. ಅವರ ಮಾತುಗಳು ನಿಮಗೆ ನೋವಾಗಬಹುದು. ನಿಮ್ಮೆಲ್ಲಾ ಸೀಕ್ರೆಟ್‌ಗಳನ್ನ ತಿಳಿದುಕೊಂಡು ಎಲ್ಲರ ಮುಂದೆ ನಿಮಗೆ ಅವಮಾನ ಮಾಡಬಹುದು. ಆದ್ದರಿಂದ ಅಂತವರಿಂದ ಆದಷ್ಟು ದೂರ ಇದ್ದರೆ ಒಳ್ಳೆಯದು.

5. ವೈದ್ಯರು
ವೈದ್ಯರನ್ನು ನಾವು ಕಣ್ಣಿಗೆ ಕಾಣುವ ದೇವರು ಅಂತ ಹೇಳತ್ತೀವಿ. ಯಾಕೆಂದರೆ ಆರೋಗ್ಯದಲ್ಲಿ ಏರುಪೇರಾಗಿ ಇನ್ನೇನು ಸಾಯುತ್ತೇವೆ ಅನ್ನುವ ಹಂತಕ್ಕೆ ಹೋದಾಗಲು ನಮ್ಮನ್ನು ಬದುಕಿಸುವ ಶಕ್ತಿ ಅವರಲ್ಲಿರುತ್ತದೆ. ನೀವು ಒಂದು ವೇಳೆ ಅವರೊಂದಿಗೆ ಶತ್ರುತ್ವ ಇಟ್ಟುಕೊಂಡರೆ ಮುಂದೊಂದು ದಿನ ನಿಮ್ಮ ಪ್ರಾಣಕ್ಕೆ ಅಪಾಯ ಎದುರಾಗಬಹುದು.

6. ಬಾಣಸಿಗ
ಚಾಣಕ್ಯನ ಪ್ರಕಾರ ಬಾಣಸಿಗ ಅಥವಾ ಅಡುಗೆಯವನ ಜೊತೆಗೆ ಶತ್ರುತ್ವ ಇಟ್ಟುಕೊಳ್ಳಲೇಬಾರದು. ಯಾಕೆಂದರೆ ನಮ್ಮ ಪ್ರಾಣ ಆತನ ಕೈಯಲ್ಲಿರುತ್ತದೆ. ನಾವು ತಿನ್ನುವ ಅನ್ನಕ್ಕೆ ವಿಷ ಪದಾರ್ಥ ಹಾಕಿಕೊಟ್ಟರೆ ನಮ್ಮ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಹೀಗಾಗಿ ಬಾಣಸಿಗ ನಿಮ್ಮ ಮನೆಯಲ್ಲಿ ಕೆಲಸಕ್ಕೆ ಇರುವವನೇ ಆಗಿರಬಹುದು ಆದರೆ ಆತನಿಗೂ ಗೌರವ ನೀಡಿ.

7. ಸ್ನೇಹಿತರು
ನಮ್ಮ ಮನೆಯವರನ್ನು ಬಿಟ್ಟರೆ ನಾವು ನಮ್ಮವರು ಅಂತ ಅಂದುಕೊಳ್ಳುವುದು ನಮ್ಮ ಪ್ರಾಣ ಸ್ನೇಹಿತರನ್ನು ಮಾತ್ರ. ಸ್ನೇಹಿತ ನಮ್ಮ ಕಷ್ಟ-ಸುಖ ಎಲ್ಲದರಲ್ಲೂ ಪಾಲುದಾರನಾಗಿರುತ್ತಾನೆ. ಸಂಕಷ್ಟ ಬಂದಾಗ ಸಹಾಯ ಕೂಡ ಮಾಡುತ್ತದೆ. ಆತನಿಗೆ ನಮ್ಮ ಎಲ್ಲಾ ಸೀಕ್ರೇಟ್‌ಗಳು ಗೊತ್ತಿರುತ್ತವೆ. ಇಂತಹ ಸ್ನೇಹಿತನಲ್ಲಿ ಶತ್ರುತ್ವ ಬೇಡವೇ ಬೇಡ. ನಮ್ಮ ಜುಟ್ಟು-ಜನಿವಾರ ಯಾರ ಕೈಯಲ್ಲಿ ಇರುತ್ತದೋ ಅವರ ಜೊತೆಗೆ ಆದಷ್ಟು ಶಾಂತಿಯಿಂದ ಇದ್ದರೆ ಉತ್ತಮ.
ಮನುಷ್ಯ ಅಂದ ಮೇಲೆ ಆತನಿಗೆ ಒಬ್ಬರ ಮೇಲೆ ದ್ವೇಷ, ಕಿಚ್ಚು, ಶತ್ರುತ್ವ ಇರುವುದು ಸಾಮಾನ್ಯ. ಹಾಗೆಂದ ಮಾತ್ರ ಆತುರಕ್ಕೆ ಬಿದ್ದು ಅವಾಂತರ ಮಾಡಿಕೊಳ್ಳಬೇಡಿ ಅದು ಮುಂದೊಂದಿಗೆ ನಿಮ್ಮ ಜೀವನವನ್ನೇ ಸಂಕಷ್ಟಕ್ಕೆ ತಳ್ಳಿ ಬಿಡಬಹುದು.



Click it and Unblock the Notifications