For Quick Alerts
ALLOW NOTIFICATIONS  
For Daily Alerts

  ಬಾಡಿಗೆ ಲೈಂಗಿಕ ಚಿಕಿತ್ಸೆ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್

  By Arshad
  |

  ವೇಶ್ಯಾವೃತ್ತಿ ತಪ್ಪು ಎಂದು ನಾವೆಲ್ಲಾ ಒಪ್ಪುತ್ತೇವಾದರೂ ವಾಸ್ತವವಾಗಿ ಬೇಡಿಕೆಯಿಲ್ಲದ ಯಾವುದೇ ಉದ್ಯಮ ನಡೆಯುವುದಿಲ್ಲ ಎಂಬ ಸರಳ ಸತ್ಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ವೇಶ್ಯೆಯರ ಬಳಿ ಪುರುಷರೇಕೆ ತೆರಳುತ್ತಾರೆ? ಇದಕ್ಕೆ ಸಾಮಾನ್ಯವಾಗಿ ಸಿಗುವ ಉತ್ತರವೆಂದರೆ ತಮ್ಮ ಕಾಮತೃಶೆಯನ್ನು ತಣಿಸಲು ಎಂಬುದೇ ಆಗಿದೆ.

  ಆದರೆ ವಾಸ್ತವದಲ್ಲಿ ಇದಕ್ಕೂ ಮಿಗಿಲಾದ ಹಲವಾರು ಕಾರಣಗಳಿವೆ. ಇಂದಿನ ಲೇಖನದಲ್ಲಿ ಬಾಡಿಗೆ ಬದಲಿ ಲೈಂಗಿಕ ಚಿಕಿತ್ಸೆ ಎಂಬ ವಿಧಾನದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಾಗಿದ್ದು ಇದನ್ನು ವಿವಾದಾತ್ಮಕ ರೂಪದಲ್ಲಿಯೇ ಕಾಣಲಾಗುತ್ತದೆ. ಬನ್ನಿ, ಸಾಮಾನ್ಯವಾಗಿ ಅಲಭ್ಯವಾದ ವಿಶೇಷ ಮಾಹಿತಿಗಳನ್ನು ಈಗ ನೋಡೋಣ:

  ಅಷ್ಟಕ್ಕೂ ಬಾಡಿಗೆ ಲೈಂಗಿಕ ಚಿಕಿತ್ಸೆ ಎಂದರೇನು?

  ಅಷ್ಟಕ್ಕೂ ಬಾಡಿಗೆ ಲೈಂಗಿಕ ಚಿಕಿತ್ಸೆ ಎಂದರೇನು?

  ಇದೊಂದು ಚಿಕಿತ್ಸಾ ವಿಧಾನವಾಗಿದ್ದು ತಮ್ಮ ಸಂಗಾತಿಯೊಂದಿಗೆ ಕೂಡಲು ವಿಫಲವಾಗಿರುವ ಅಥವಾ ನಿಮಿರುದೌರ್ಬಲ್ಯವನ್ನು ಅನುಭವಿಸುತ್ತಿರುವ ಪುರುಷರಿಗೆ ಅಗತ್ಯವಾದ ಸಲಹೆ ಹಾಗೂ ಚಿಕಿತ್ಸೆಯನ್ನು ಒದಗಿಸುವ ಪ್ರಯತ್ನವೇ ಈ ವಿಧಾನವಾಗಿದೆ.

  ಇವರು ವೇಶ್ಯಾವಾಟಿಕೆಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ

  ಇವರು ವೇಶ್ಯಾವಾಟಿಕೆಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ

  ಈ ಚಿಕಿತ್ಸೆಯನ್ನು ಒದಗಿಸುವವ ಬಾಡಿಗೆ ಲೈಂಗಿಕ ಕಾರ್ಯಕರ್ತೆಯರು ವೇಶ್ಯಾವಾಟಿಕೆಯಲ್ಲಿ ಕೆಲಸ ಮಾಡುವುದಿಲ್ಲ ಅಥವಾ ತಮ್ಮ ಸೇವೆಯ ಬಗ್ಗೆ ಜಾಹೀರಾತನ್ನೂ ನೀಡುವುದಿಲ್ಲ. ಇವರು ಮನೋಚಿಕಿತ್ಸಕರ ಸಲಹೆ ಮೇರೆಗೆ ತಮ್ಮಲ್ಲಿ ಕಳುಹಿಲ್ಪಟ್ಟ ರೋಗಿಗಳನ್ನು ವೈದ್ಯರ ಸಲಹೆ ಹಾಗೂ ಸೂಚನೆಗೆ ಅನುಸಾರವಾಗಿ ಅಗತ್ಯವಿರುವ ಭಾವನಾತ್ಮಕ ಕೊರತೆಗಳನ್ನು ನೀಗಿಸುವ ಕೆಲಸ ಮಾಡುವ ಹೊಣೆ ಹೊತ್ತಿರುತ್ತಾರೆ.

  ತಾಂತ್ರಿಕ ಸೆಕ್ಸ್ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್

  ಈ ಚಿಕಿತ್ಸೆಯಲ್ಲಿ ಏನೇನಿದೆ

  ಈ ಚಿಕಿತ್ಸೆಯಲ್ಲಿ ಏನೇನಿದೆ

  ಈ ಚಿಕಿತ್ಸೆಯಲ್ಲಿ ಮೊದಲು ಕಾರ್ಯಕರ್ತೆಯಲು ರೋಗಿಯೊಂದಿಗೆ ಬಹಳಷ್ಟು ಸಂವಾದ ನಡೆಸುತ್ತಾರೆ ಹಾಗೂ ಕೆಲವು ಸಂದರ್ಭಗಳಲ್ಲಿ ಅಗತ್ಯ ಪ್ರಮಾಣದಷ್ಟು ಮಾತ್ರವೇ ಸ್ಪರ್ಶಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ರೋಗಿಗಳಿಗೆ ಸ್ವತಃ ಹಸ್ತಮೈಥುನದಲ್ಲಿ ಒಳಗಾಗಲು ಸಲಹೆ ನೀಡಿ ಇವರು ಎಲ್ಲಿ ತಮ್ಮ ಲೆಕ್ಕಾಚಾರ ತಪ್ಪುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ, ಅತ್ಯಂತ ಅಗತ್ಯವಿದ್ದರೆ ಮಾತ್ರವೇ, ಈ ಕಾರ್ಯಕರ್ತೆಯರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ ಹಾಗೂ ಇದು ಚಿಕಿತ್ಸೆಯ ಅಂತಿಮ ಹಾಗೂ ಅನಿವಾರ್ಯ ಹಂತವಾಗಿದ್ದು ವೈದ್ಯರ ಅನುಮತಿ ಹಾಗೂ ಒಪ್ಪಿಗೆ ಇದ್ದರೆ ಮಾತ್ರವೇ ಮುಂದುವರೆಯುತ್ತದೆ.

  ಈ ಕೆಲಸದ ಬಗ್ಗೆ ವೇಶ್ಯೆಯೊಬ್ಬರ ಅಭಿಪ್ರಾಯ

  ಈ ಕೆಲಸದ ಬಗ್ಗೆ ವೇಶ್ಯೆಯೊಬ್ಬರ ಅಭಿಪ್ರಾಯ

  ಈ ಕೆಲಸವನ್ನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ಮಹಿಳೆಯೊಬ್ಬರ ಅನುಭವ ಹೀಗಿದೆ: "ನಾನೊಂದು ಹೋಟೆಲಿನ ಕೋಣೆಯಲ್ಲಿ ಕುಳಿತಿದ್ದೆ ಹಾಗೂ ಗ್ರಾಹಕನನ್ನು ಎದುರು ನೋಡುತ್ತಿದ್ದೆ. ದೀಪಗಳು ಆರಿಸಲ್ಪಟ್ಟಿದ್ದವು ಹಾಗೂ ಕೋಣೆ ಬೆಚ್ಚಗೆ, ಆಹ್ಲಾದಕರವಾಗಿದ್ದು ಗ್ರಾಹಕರ ಬರವಿಗೆ ಕಾಯುತ್ತಿದ್ದೆ. ಈಗ ಬರಲಿರುವ ವ್ಯಕ್ತಿಯನ್ನು ಭೇಟಿಯಾಗುವ ಮುನ ಇವರ ಬಗ್ಗೆ ನನಗೆ ಹೆಚ್ಚೇನೂ ತಿಳಿದಿರಲಿಲ್ಲ, ಆದರೆ ಈ ವ್ಯಕ್ತಿಯ ತನ್ನ ಪತ್ನಿಯೊಂದಿಗಿನ ಸಂಬಂಧ ಬಹಳಷ್ಟು ಅಹಿತಕರವಾಗಿತ್ತು ಎಂದು ಮಾತ್ರವೇ ಅರಿತಿದ್ದೆ. ಅಲ್ಲದೇ ಈತನಿಗೆ ನಿಮಿರು ದೌರ್ಬಲ್ಯದ ತೊಂದರೆ ಹಾಗೂ ಶೀಘ್ರಸ್ಖಲನದ ತೊಂದರೆಯೂ ಇದೆ ಎಂದು ನನಗೆ ತಿಳಿಸಲಾಗಿತ್ತು. ಲೈಂಗಿಕ ವೈಫಲ್ಯ ಈ ವ್ಯಕ್ತಿಯನ್ನು ಹತಾಶೆ ಹಾಗೂ ನಿರಾಶೆಯೆಡೆಗೆ ದೂಡುತ್ತಿದೆ ಎಂದು ಈ ಮೂಲಕ ತಿಳಿದುಕೊಂಡೆ. ವಾಸ್ತವವಾಗಿ, ಈ ಕೊರತೆಯ ಕಾರಣದಿಂದಾಗಿಯೇ ಈ ಕೋಣೆಯಲ್ಲಿ ಇಂದು ನಾನಿದ್ದೆ. ಬದಲಿ ಲೈಂಗಿಕ ವ್ಯಕ್ತಿಯಾಗಿ ಈ ನಿಟ್ಟಿನಲ್ಲಿ ನನ್ನ ವೃತ್ತಿಯ ಪರಿಣಿತಿಯನ್ನು ನಾನಿಲ್ಲಿ ಉಪಯೋಗಿಸಿ ಈ ವ್ಯಕ್ತಿಯ ತೊಂದರೆಗಳನ್ನು ನಿವಾರಿಸಬೇಕು. ಇದಕ್ಕಾಗಿ ನನ್ನ ಅನುಭವದ ಆತ್ಮೀಯ ಸ್ಪರ್ಶದಿಂದ ತೊಡಗಿ ಲೈಂಗಿಕ ಕ್ರಿಯೆಯವರೆಗೂ ಅಗತ್ಯವಿರುವ ಸೇವೆಯನ್ನು ವ್ಯಕ್ತಿಗೆ ನೀಡುವ ಮೂಲಕ ಇವರ ನಿಷ್ಪಲತೆಗೆ ಕಾರಣವನ್ನು ಕಂಡುಕೊಂಡು ಇವರನ್ನು ಲೈಂಗಿಕವಾಗಿ ಹಾಗೂ ಭಾವನಾತ್ಮಕವಾಗಿ ಸರಿಪಡಿಸುವುದು ನಮ್ಮ ಕರ್ತವ್ಯವಾಗಿದೆ"

  ಈ ಚಿಕಿತ್ಸೆ ಇಂದಿಗೂ ಕಾನೂನುಬಾಹಿರವಾಗಿದೆ

  ಈ ಚಿಕಿತ್ಸೆ ಇಂದಿಗೂ ಕಾನೂನುಬಾಹಿರವಾಗಿದೆ

  ಈ ಚಿಕಿತ್ಸೆ ಹಲವಾರು ದೇಶಗಳಲ್ಲಿ ಇದೆಯಾದರೂ ಕೇವಲ ಇಸ್ರೇಲ್ ಮೊದಲಾದ ರಾಷ್ಟ್ರಗಳಲ್ಲಿ ಕಾನೂನುಬದ್ದವಾಗಿದೆ. ಆಸ್ಟ್ರೇಲಿಯಾ ಮೊದಲಾದ ಮುಂದುವರೆದ ರಾಷ್ಟ್ರಗಳಲ್ಲಿ ಇದು ಗುಪ್ತವಾಗಿ ನಡೆಯುತ್ತದೆ. ಬಾಡಿಗೆ ಲೈಂಗಿಕ ಚಿಕಿತ್ಸೆಗೆ ಇಂದೂ ಹೆಚ್ಚಿನ ರಾಷ್ಟ್ರಗಳಲ್ಲಿ ಕಾನೂನಿನ ಮಾನ್ಯತೆ ಇಲ್ಲ!

  ಮಹಿಳೆಯರಿಗೂ ಲಭ್ಯವಿರುವ ಚಿಕಿತ್ಸೆ

  ಮಹಿಳೆಯರಿಗೂ ಲಭ್ಯವಿರುವ ಚಿಕಿತ್ಸೆ

  ಈ ಚಿಕಿತ್ಸೆ ಕೇವಲ ಪುರುಷರಿಗೆ ಮಾತ್ರವೇ ಎಂದು ಮಹಿಳೆಯರು ನಿರಾಶರಾಗಬೇಕಾಗಿಲ್ಲ. ಭಾವನಾತ್ಮಕ ಹಾಗೂ ಲೈಂಗಿಕ ಸುಖವಂಚಿತ ಮಹಿಳೆಯರಿಗೂ ಈ ಚಿಕಿತ್ಸೆ ಲಭ್ಯವಿದ್ದು ಈ ವೃತ್ತಿಯಲ್ಲಿ ಪರಿಣಿತರಾದ ಪುರುಷರು ಅಗತ್ಯವಾದ ವೈದ್ಯಕೀಯ ನೆರವನ್ನು ನೀಡುತ್ತಾರೆ. ಈ ಸೇವೆ ಭಾರತಕ್ಕೂ ಬರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸುವಿರಲ್ಲ!

  English summary

  Have You Heard About The Sex Surrogate Therapy?

  Have you ever wondered or even thought about the reason on why people visit prostitutes? The only thing that strikes our mind is that these men are often horny and frustrated, but there can be other reasons as well. In this article, we are about to discuss about the sex surrogates which is often seen as a controversial form of sex therapy. Here are some of the details of this unique therapy that most people are not aware of. Check them out.
  Story first published: Sunday, April 8, 2018, 7:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more