Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗೌರವ್ ಗುಪ್ತಾ ಸೀರೆಯಲ್ಲಿ ನಿರೀಕ್ಷೆಯನ್ನು ಹುಸಿಗೊಳಿಸಿದ ಮಾಧುರಿ
ಮಾಧುರಿ ದೀಕ್ಷಿತ್ ಎಂಬ ಹಾಲು ಬೆಳಕಿನ ಚೆಲುವೆಯನ್ನು ಸೀರೆಯಲ್ಲಿ ನೋಡುವುದೆಂದರೆ ಅವರ ಅಭಿಮಾನಿಗಳಲ್ಲಿ ಮಿಂಚಿನ ಸಂಚಾರವುಂಟಾಗುತ್ತದೆ. ಈ ಭಾರತೀಯ ಚೆಲುವೆಯನ್ನು ಯಾರು ತಾನೇ ಸೀರೆಯಲ್ಲಿ ನೋಡಲು ಇಷ್ಟಪಡುವುದಿಲ್ಲ ಹೇಳಿ? ಆದರೆ ಬಹು ದೀರ್ಘ ಸಮಯದ ನಂತರ ಸೀರೆಯಲ್ಲಿ ಕಂಡುಬಂದ ಚೆಲುವೆ ಮಾಧುರಿ ನಮಗೆಲ್ಲಾ ನಿರಾಸೆಯನ್ನುಂಟು ಮಾಡಿದ್ದಾರೆ.
ಗೌರವ್ ಗುಪ್ತಾ ಸೀರೆಯನ್ನು ಧರಿಸಿದ್ದ ಮಾಧುರಿ ಮುಂಬರುವ ಝಲಕ್ ದಿಕ್‌ಲಾಜಾ ಸೀಸನ್ 7 ನಲ್ಲಿ ಅಷ್ಟೊಂದು ಆಕರ್ಷಕವಾಗಿ ಕಂಡುಬಂದಿಲ್ಲ ಎಂಬುದು ಇಲ್ಲಿ ನಿರಾಸೆಯನ್ನುಂಟು ಮಾಡಿದೆ. ಮಾಧುರಿಯನ್ನು ಈ ಹಿಂದೆಯೂ ನಾವು ಗೌರವ್ ಗುಪ್ತಾ ಧಿರಿಸಿನಲ್ಲಿ ಕಂಡಿದ್ದೇವೆ. ಝಲಕ್ ದಿಕ್‌ಲಾಜಾ ಸೀಸಸ್ 7 ನಲ್ಲಿ ಗೋಲ್ಡ್ ಸೀರೆ ಸ್ಟೈಲ್ ಗೌನ್‌ನಲ್ಲಿ ನಾವು ಮಾಧುರಿಯನ್ನು ನೋಡಿದ್ದೇವೆ.

ಆದರೆ ಈ ಬಾರಿ ಮಾಧುರಿ ಉಟ್ಟಿದ ಗೌರವ್ ಗುಪ್ತಾ ವಿನ್ಯಾಸದ ಸೀರೆ ಮಾತ್ರ ತೀರಾ ಮಂಕಾದ ಬಣ್ಣಗಳಾದ ಗ್ರೇ ಮತ್ತು ಕಪ್ಪು ಬಣ್ಣ ಹೊಂದಿದ್ದು ಸೀಸಸ್‌ಗೆ ಹೇಳಿ ಮಾಡಿಸಿದ ಬಣ್ಣವಂತೂ ಇದಲ್ಲ. ಆದರೆ ಈ ಮಂಕಾದ ಬಣ್ಣಗಳು ಮಾಧುರಿಯಂತಹ ಗಾಢ ವರ್ಣದ ಸುಂದರಿಯ ಮೇಲೆ ಯಾವುದೇ ಪರಿಣಾಮವನ್ನು ಬೀರಿಲ್ಲ.
ಸಬ್ಯಸಾಚಿ ಔಟ್‌ಫಿಟ್‌ನಲ್ಲಿ ಸುಂದರಿ ಐಶ್ವರ್ಯಾ ರೈ
ಎರಡನೆಯದಾಗಿ, ಪಿನ್ ಮಾಡಿದ ಮತ್ತು ಮಡಚಿದ ಶೈಲಿಯಲ್ಲಿರುವ ಸೀರೆಯ ಸೊಗಸು ಸ್ವಲ್ಪ ದಪ್ಪಗಿರುವ ಮಾಧುರಿಯ ಮೇಲೆ ಅಷ್ಟೇನೂ ಮೋಡಿ ಮಾಡಿಲ್ಲ. ತೆಳ್ಳಗಿರುವ ಸುಂದರಿಯರಿಗೆ ಮಾತ್ರವೇ ಈ ರೀತಿಯ ಸೀರೆ ಉಡುವಿಕೆ ಮೋಡಿ ಮಾಡಬಹುದು.
ಆದರೆ ಸ್ವಲ್ಪ ದಪ್ಪಗಿರುವ ಮಾಧುರಿಗೆ ಈ ಸೀರೆ ಅಷ್ಟೇನೂ ಹೇಳಿ ಮಾಡಿಸಿರುವ ನೋಟವನ್ನು ನೀಡಿಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಇದು ಎರಡು ಬಣ್ಣಗಳಿಂದ ಬಂದಿರುವುದು ಅಷ್ಟೇನೂ ಸುಂದರತೆಯನ್ನು ಮಾಧುರಿಯ ಮೇಲೆ ಮಾಡಿಲ್ಲ ಎಂದೇ ಹೇಳಬಹುದು.
ಸೀರೆಗೆ ಮಾಧುರಿ ಧರಿಸಿರುವ ಆಭರಣಗಳು ಸರಿಯಾಗಿವೆ. ಜುಮುಕಿ, ಜರಾವೋ ಬಳೆಗಳು ಮತ್ತು ದೊಡ್ಡ ನೀಲಿ ಬಣ್ಣದ ಕಾಕ್‌ಟೈಲ್ ರಿಂಗ್ ಚೆನ್ನಾಗಿ ಹೊಂದಿಕೆಯಾಗಿವೆ. ಮಾಧುರಿ ತಮ್ಮ ಕೇಶಕ್ಕೆ ಮಾಡಿಕೊಂಡಿರುವ ಟ್ರೆಂಡಿ ಒಂದೇ ಬದಿಯ ಸೈಡ್ ಬ್ರೈಡ್ ನೋಟ ಮತ್ತು ಆಕೆಯ ಸುಂದರ ನಗು ಇನ್ನಷ್ಟು ಸೊಬಗನ್ನು ಉಂಟು ಮಾಡಿದೆ ಎಂದೇ ಹೇಳಬಹುದು. ಮುಂದಿನ ದಿನದಲ್ಲಿ ಮಾಧುರಿಯ ಸ್ಟೈಲ್ ಇನ್ನಷ್ಟು ಆಕರ್ಷಕವಾಗಿರಬಹುದು ಎಂದು ನಾವು ಆಶಿಸೋಣ.



Click it and Unblock the Notifications
