Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಗೀಮಾ ಅವಾರ್ಡ್ಸ್ 2014 ರಲ್ಲಿ ಮೋಹಕಿ ಸೋನಾಕ್ಷಿ ಸಿನ್ಹಾ
ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಎಲ್ಲರ ನೋಟವೂ ಸೆಲೆಬ್ರಿಟಿಗಳ ಮೇಲೆಯೇ ಏಕೆಂದರೆ ಅವರು ಈ ಸಮಯದಲ್ಲಿ ಮಾಡುವ ಅಲಂಕಾರ ತೊಡುವ ಧಿರಿಸು ಅದ್ಭುತವಾಗಿರುತ್ತದೆ. ಜನಸಾಮಾನ್ಯರಿಗಿಂತಲೂ ಬೇರೆಯಾಗಿಯೇ ಕಂಡುಬರುವ ತಾರಾಮಣಿಗಳು ಅಪ್ಸರ ಕಿನ್ನರರೋ ಎಂಬಂತೆ ಕಣ್ಮನ ತಣಿಸುತ್ತಾರೆ.
ಇಂದು ನಾವಿಲ್ಲಿ ಮಾತನಾಡುತ್ತಿರುವ ಅವಾರ್ಡ್ ಫಂಕ್ಷನ್ ಗೀಮಾ ಅವಾರ್ಡ್ಸ್ ಆಗಿದೆ. ಈ ಸಮಾರಂಭಕ್ಕೆ ಹಲವಾರು ಸೆಲೆಬ್ರಿಟಿಗಳು, ನಟೀ ಮಣಿಯರು, ತಾರಾದಿಗ್ಗಜರು ವೈಭವೋಪೇತ ಧಿರಿಸುಗಳಲ್ಲಿ ಸೊಗಸಾದ ಅಲಂಕಾರಗಳಲ್ಲಿ ಮನಮೋಹಕವಾಗಿ ಕಂಡುಬಂದರು.

ಈ ಸಮಾರಂಭದಲ್ಲಿ ನಮ್ಮನ್ನು ಕಣ್ಣರಳಿ ಉಸಿರುಬಿಗಿಹಿಡಿದು ನೆಟ್ಟ ನೋಟದಿಂದ ನೋಡುವಂತೆ ಮಾಡಿದ್ದು ಅದ್ಭುತ ನಟಿ ಸೌಂದರ್ಯವತಿ ಸೋನಾಕ್ಷಿ ಸಿನ್ಹಾ. ಇವರು ಗೀಮಾ ಅವಾರ್ಡ್ಸ್‌ನಲ್ಲಿ ಕಂಗೊಳಿಸಿದ ರೀತಿ ಅತ್ಯಾನಂದಮಯವಾಗಿತ್ತು. ಕಾರ್ಯಕ್ರಮದಲ್ಲಿ ನೆರೆದಿದ್ದ ಹೃದಯವನ್ನೇ ಕದ್ದ ಸೋನಾಕ್ಷಿ ಸರಳ ಸುಂದರ ಉಡುಗೆಯಲ್ಲಿ ಅಪ್ಸರೆಯಾಗಿದ್ದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗೀಮಾ 2014: ಸೀರೆಯಲ್ಲಿ ಕಣ್ಸೆಳೆದ ಸನ್ನಿ ಲಿಯೋನ್
ರಾಜವೈಭವದ ನೇರಳೆ ಬಣ್ಣದ ಉದ್ದನೆಯ ನಿಲುವಂಗಿಯಲ್ಲಿ ಸೋನಾಕ್ಷಿ ರಾಜಕುಮಾರಿಯೇ ಆಗಿದ್ದರು. ಗೌರಿ ನೈನಿಕ ವಿನ್ಯಾಸದ ಈ ಗೌನ್ ಸೋನಾಕ್ಷಿಯ ನೀಳಕಾಯಕ್ಕೆ ಹೇಳಿ ಮಾಡಿಸಿದಂತಿದೆ. ಇಷ್ಟರವರೆಗೆ ಸೋನಾಕ್ಷಿ ಧರಿಸಿದ ಗೌನ್‌ಗಳಲ್ಲೆಲ್ಲಾ ಇದು ಅದ್ಭುತ ಮತ್ತು ಸುಂದರ ಗೌನ್ ಎಂಬುದು ಬೋಲ್ಡ್ ಸ್ಕೈ ಅಭಿಪ್ರಾಯವಾಗಿದೆ. ಏಕೆಂದರೆ ಸೋನಾಕ್ಷಿಯ ಸುಂದರ ಬಳ್ಳಿಯಂತಿರುವ ದೇಹಕ್ಕೆ ಸುಂದರವಾಗಿ ಕಂಗೊಳಿಸಿದೆ ಗೌರಿ ನೈನಿಕ ವಿನ್ಯಾಸದ ಗೌನ್.
ಗೌನ್‌ನ ಹಿಂಭಾಗದ ಆಳವಾದ 'ವಿ' ಕಟ್ ಸೋನಾಕ್ಷಿಯ ಹಾಲುಬಣ್ಣದ ತ್ವಚೆಯ ದರುಶನ ಮಾಡಿಸಿದೆ. ವಿನ್ಯಾಸಕಾರರ ಅದ್ಭುತ ಕೈ ಚಳಕದಲ್ಲಿ ಮೂಡಿ ಬಂದಿರುವ ಈ ಗೌನ್ ದೋಷಗಳಿಲ್ಲದ ಅದ್ಭುತ ಕಲಾಸಾಮರ್ಥ್ಯವಾಗಿದೆ. ಗೌನ್ ಕೆಳಭಾಗದಲ್ಲಿ ಹೊಂದಿರುವ ಫ್ರಿಲ್‌ಗಳು ಅದಕ್ಕೆ ಸುಂದರತೆಯನ್ನು ನೀಡಿದೆ. ಒಟ್ಟಾರೆ ಗೌನ್ ಸರಳ ಹಾಗೂ ಸುಂದರವಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗೀಮಾ ಅವಾರ್ಡ್ಸ್ 2014: ಕಣ್ಮನ ಸೆಳೆದ ಶ್ರೇಯಾ
ಈ ಧಿರಿಸಿಗೆ ಮನಮೋಹಕವಾಗಿರುವ ಆಭರಣಗಳನ್ನೇ ಸೋನಾಕ್ಷಿ ಧರಿಸಿದ್ದಾರೆ. ವಿನೇಜ್ ವಿಂಟೇಜ್ ಕಿವಿಯಾಭರಣಗಳು ಹಾಗೂ ಉಂಗುರ ಗೀಮಾ ಅವಾರ್ಡ್ಸ್‌ನಲ್ಲಿ ಪ್ರತಿಯೊಬ್ಬರ ಮಾತಿಗೆ ಕಾರಣವಾಗಿದೆ. ಸೋನಾಕ್ಷಿ ಇಷ್ಟು ಸುಂದರವಾಗಿ ಹೇಗೆ ಕಂಡುಬಂದಿದ್ದಾರೆ ಎಂಬುದೇ ಎಲ್ಲರ ಕುತೂಹಲವಾಗಿದೆ. ಅದೇ ರೀತಿ ಗೌನ್‌ಗೆ ಸರಿಹೊಂದುವ ಶಂತನಿ ನಿಕಿಲ್ ವಿನ್ಯಾಸದ ಪರ್ಸ್ ಅನ್ನು ಸೋನಾಕ್ಷಿ ಹಿಡಿದುಕೊಂಡಿದ್ದಾರೆ. ಇದು ಕೂಡ ಅದ್ಭುತವಾಗಿದೆ.
ಸೋನಾಕ್ಷಿಯ ಹಿಂದಿನ ಸಮಾರಂಭದ ಸ್ಟೈಲ್, ಲುಕ್‌ಗೆ ಹೋಲಿಸಿದಾಗ ಗೀಮಾ ಅವಾರ್ಡ್ಸ್ 2014 ರ ಸೋನಾಕ್ಷಿಯ ಝಲಕ್ ಅತ್ಯದ್ಭುತ. ಗೌರಿ ನೈನಿಕ ವಿನ್ಯಾಸದ ಗೌನ್ ಅನ್ನು ಬೋಲ್ಡ್ ಸ್ಕೈ ಅಪಾರವಾಗಿ ಮೆಚ್ಚಿಕೊಂಡಿದ್ದು ಸೋನಾಕ್ಷಿಯ ಸೌಂದರ್ಯವನ್ನು ಇನ್ನಷ್ಟು ಮಿಂಚುವಂತೆ ಮಾಡಿದೆ. ಸೋನಾಕ್ಷಿಯ ಸೌಂದರ್ಯದ ಪ್ರತೀಕದಂತಿರುವ ಆಕೆಯ ರೂಪದ ಬಗ್ಗೆ ನಿಮಗೇನನ್ನಿಸುತ್ತಿದೆ?



Click it and Unblock the Notifications
