Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಏಂಜಲೀನಾ, ಬ್ರಾಡ್ ಪಿಟ್ ಹೋಟ್ ಜೋಡಿ ರೆಡ್‌ಕಾರ್ಪೆಟ್‌ನಲ್ಲಿ!
ಹಾಟ್ ಜೋಡಿ ಏಂಜಲೀನಾ ಜೋಲಿ ಮತ್ತು ಬ್ರಾಡ್ ಪಿಟ್ ಆಸ್ಕರ್ 2014 ರೆಡ್ ಕಾರ್ಪೆಟ್‌ನಲ್ಲಿ ಸುಂದರವಾಗಿ ಅಲಂಕೃತರಾಗಿದ್ದರು. ಅವರು ಡ್ರೆಸ್ ಮಾಡಿಕೊಂಡ ರೀತಿ ನೆರೆದವರಲ್ಲಿ ವಾಹ್ ಎಂಬ ಉದ್ಗಾರವನ್ನು ಹೊರಡಿಸಿತ್ತು . ಪ್ರತಿಯೊಬ್ಬರೂ ದಂಗುಬಡಿದವರಂತೆ ಈ ಹಾಟ್‌ಜೋಡಿಯನ್ನು ತದೇಕಚಿತ್ತರಾಗಿ ಕಣ್ತುಂಬಿಕೊಳ್ಳುತ್ತಿದ್ದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: 2013ರ ಆಸ್ಕರ್ ಆವರಣದಲ್ಲಿರುವ ಸ್ಪರ್ಧಿಗಳ ಪಟ್ಟಿ
ಹಾಟ್‌ಜಾಡಿ ಪ್ರಸಿದ್ಧ ನಟರೂ ಆಗಿರುವ ಏಂಜಲೀನಾ ಮತ್ತು ಬ್ರಾಡ್ ಪಿಟ್ ಆಸ್ಕರ್‌ನಲ್ಲಿ ವಿಶೇಷವಾಗಿ ಅಲಂಕರಿಸಿಕೊಳ್ಳಲು ಪ್ರವೀಣರು. ಪ್ರತೀ ವರ್ಷದ ಆಸ್ಕರ್‌ನಲ್ಲಿ ಈ ತಾರಾ ಜೋಡಿಯನ್ನು ನೋಡಲು ಅನೇಕರು ಕಾಯುತ್ತಾರೆ. ಈ ಬಾರಿಯೂ ನೆರೆದವರನ್ನು ಅಭಿಮಾನಿಗಳನ್ನು ನಿರಾಸೆ ಪಡಿಸದೇ ಈ ಜೋಡಿ ಸುಂದರ ಔಟ್‌ಫಿಟ್‌ಗಳಲ್ಲಿ ಮಿಂಚಿದ್ದಾರೆ.

ಆರು ಮಕ್ಕಳ ತಾಯಿ ಏಂಜಲೀನಾ ಜೋಲಿ ಅತ್ಯದ್ಭುತ ಗೌನ್‌ನಲ್ಲಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದರು. ಗೌನ್‌ನಲ್ಲಿ ಸಂಮಿಶ್ರ ಬಣ್ಣಗಳನ್ನು ಮಿಕ್ಸ್ ಮಾಡಿಕೊಂಡು ಈ ಬಾರಿ ಏಂಜಲೀನಾ ಜೋಲಿ ಆಸ್ಕರ್ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಸ್ಕರ್ ಅವಾರ್ಡ್ಸ್ 2014: ಮಿಂಚಿದ ಜೂಲಿಯಾ ರಾಬರ್ಟ್ಸ್
ಹೊಳೆಯುವ ಜರಿಗಳಿರುವ ಗೋಲ್ಡನ್ ಗೌನ್‌ನಲ್ಲಿ ಮಿಂಚಿದ ಈ ಚೆಲುವೆ ಸರಳ ಮೇಕಪ್ ಮತ್ತು ಸಡಿಲವಾಗಿ ಇಳಿಬಿಟ್ಟ ಕೇಶಾಲಂಕಾರದಿಂದ ಕಣ್ಸೆಳೆದಿದ್ದಾರೆ. ತನ್ನ ಇನಿಯನ ಜೊತೆ ಇನ್ನಷ್ಟು ಅದ್ಭುತವಾಗಿ ಕಂಗೊಳಿಸುತ್ತಿದ್ದಾರೆ. ಕೆಂಪು ಬಣ್ಣದ ಸುಂದರ ಲಿಪ್‌ಸ್ಟಿಕ್ ಏಂಜಲೀನಾರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಬ್ರಾಡ್ ಪಿಟ್ ಕೂಡ ಕಪ್ಪು ಟಕ್ಸಿಡೋನಲ್ಲಿ ಎಲ್ಲರ ನೋಟ ತನ್ನತ್ತ ಸೆಳೆಯುವಂತೆ ಮಾಡಿದ್ದಾರೆ.
ಆಸ್ಕರ್ 2014 ರೆಡ್ ಕಾರ್ಪೆಟ್‌ನಲ್ಲಿ ಹೆಚ್ಚಿನ ಅಭಿಮಾನಿಗಳು ನೆರೆದವರು ಈ ಅಂದದ ಜೋಡಿಯನ್ನು ಕಣ್ತುಂಬಿಕೊಂಡರು. ರೆಡ್ ಕಾರ್ಪೆಟ್‌ನಲ್ಲಿ ಜೋಡಿಯಾಗಿ ಕಂಡುಬಂದಿದ್ದು ಈ ಬಾರಿಯ ಆಸ್ಕರ್ ವಿಶೇಷವಾಗಿದೆ. ಇಬ್ಬರೂ ಅದ್ಭುತವಾಗಿ ಡ್ರೆಸ್ ಮಾಡಿಕೊಂಡಿದ್ದು ಮೆಚ್ಚುಗೆಯನ್ನು ಗಳಿಸಿದ್ದಾರೆ. ನಿಮ್ಮ ಅಭಿಪ್ರಾಯವೂ ಇದೇ ಅಲ್ಲವೇ.



Click it and Unblock the Notifications
