Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಕೂವಾಗಂ ಹಬ್ಬ: ಬಂದಿರುವ ಅಷ್ಟೂ ಮಂಗಳಮುಖಿಯರಿಗೆ ತಾಳಿ ಕಟ್ಟುವ ಪೂಜಾರಿ, ಈ ಹಬ್ಬದ ವಿಶೇಷತೆಯೇನು?
ಮೇ 18ಕ್ಕೆ ಮಂಗಳಮುಖಿಯರ ಪ್ರಮುಖ ಆಚರಣೆಯಾದ ಕೂವಾಗಂ ಹಬ್ಬವನ್ನು ಆಚರಿಸಲಾಗುವುದು. ಈ ದಿನದ ವಿಶೇಷತೆಯೆಂದರೆ ಈ ದಿನ ಮಂಗಳಮುಖಿಯರು ಇಲ್ಲಿಗೆ ಬಂದು ಮದುವೆಯಾಗುತ್ತಾರೆ. ಮದುಮಗಳಂತೆ ಅಲಂಕಾರ ಮಾಡಿಕೊಂಡು ತಮ್ಮ ದೇವರಾದ ಅರಾವಣವನ್ನು ಮದುವೆಯಾಗುವ ಪದ್ಧತಿಯಿದೆ.
ಕೂವಾಗಂ ಎಂಬುವುದು ಚಿಕ್ಕದಾದ ಗ್ರಾಮವಾಗಿದೆ. ತಮಿಳುನಾಡಿನ ವಿಲ್ಲೂಪುರಂ ಜಿಲ್ಲೆಯ 25 ಕಿ.ಮೀ ದೂರದಲ್ಲಿ ಈ ಗ್ರಾಮವಿದೆ. ಈ ಗ್ರಾಮವನ್ನು ನಿದ್ದೆಯ ಊರು ಎಂದು ಕರೆಯಲಾಗುವುದು. ಈ ಗ್ರಾಮಕ್ಕೆ ಜೀವಕಳೆ ಬರುವುದೇ ಮಂಗಳಮುಖಿಯರ 18 ದಿನಗಳ ಹಬ್ಬ ಶುರುವಾದಾಗ. ಈ ಹಬ್ಬ ತುಂಬಾನೇ ವಿಶಿಷ್ಠವಾಗಿದ್ದು ಈ ಹಬ್ಬದ ಕುರಿತ ಆಸಕ್ತಿದಾಯಕ ವಿಷಯಗಳ ಬಗ್ಗೆ ನೋಡುವುದಾದರೆ:

ಮಂಗಳಮುಖಿಯರ ಆಚರಣೆ ಅವರು ಪಾಲಿಸಿಕೊಂಡು ಬರುವ ಪದ್ಧತಿಗಳು ಭಿನ್ನವಾಗಿರುತ್ತದೆ
ಈ ಕೋವಾಗಂ ಹಬ್ಬದಲ್ಲಿ ತಮ್ಮ ದೇವರಾದ ಅವರಾವಣನನ್ನು ಮದುವೆಯಾಗುತ್ತಾರೆ.
ಈ ಹಬ್ಬದ ಸಮಯದಲ್ಲಿ ದೇಶದ ವಿವಿಧ ಮೂಲೆಗಳಿಂದ ಮಂಗಳಮುಖಿಯರು ಈ ಗ್ರಾಮಕ್ಕೆ ಬರುತ್ತಾರೆ. ಈ ಗ್ರಾಮ ಪೂರ್ತಿ ಇವರಿಂದಲೇ ತುಂಬಿ ತುಳುಕುತ್ತಿರುತ್ತದೆ. ಇವರು ಭಗವಾನ್ ಅವಾರಣನನ್ನು ಪೂಜಿಸಿ ಅಲ್ಲಿರುವ ಪೂಜಾರಿ ಕೈಯಿಂದ ತಾಳಿ ಕಟ್ಟಿಸಿಕೊಳ್ಳುತ್ತಾರೆ. ಈ ಹಬ್ಬದ 17ನೇ ದಿನವೇ ಎಲ್ಲಾ ಮಂಗಳಮುಖಿಯರು ಮದುಮಗಳಂತೆ ಅಲಂಕಾರ ಮಾಡಿಕೊಳ್ಳುತ್ತಾರೆ. ಕೂತವಂದಾರ್ ದೇವಾಲಯದ ಪೂಜಾರಿ ಎಲ್ಲಾ ಮಂಗಳಮುಖಿಯರಿಗೆ ತಾಳಿ ಕಟ್ಟುತ್ತಾನೆ. ಮಂಗಳಮುಖಿಯರು ಅರಾವಣನ ಹೆಸರಿನಲ್ಲಿ ತಾಳಿ ಕಟ್ಟಿಕೊಂಡು ವಿವಾಹವನ್ನು ಸಂಭ್ರಮಿಸುತ್ತಾರೆ.
ಮದುಮಗಳಂತೆ ತಾಳಿ ಕಟ್ಟಿಸಿಕೊಂಡು ವಿಧವೆಯರಂತೆ ಹಿಂತಿರುಗುತ್ತಾರೆ
ಸಂಜೆ ತಾಳಿಯನ್ನು ಕಿತ್ತು, ಕುಂಕುಮ ಅಳಿಸಿ, ಬಳೆಗಳನ್ನು ಒಡೆದು. ಅಳುತ್ತಾ ವಿಧವೆಯ ವೇಷದಲ್ಲಿರುತ್ತಾರೆ. ಪತಿ ಅರಾವಣ ಸತ್ತು ಹೋಗುತ್ತಾನೆ, ಹೀಗಾಗಿ ಈ ರೀತಿ ವಿಧವೆಯರಾಗುತ್ತಾರೆ ಎಂದು ನಂಬಿಕೆ.
ಇವರ ಈ ಆಚಾರಣೆಯ ಪೌರಾಣಿಕ ಹಿನ್ನೆಲೆ ನೋಡುವುದಾದರೆ
ಅರಾವಣ ಅರ್ಜುನನ ಮಗ, ಕುರುಕ್ಷೇತ್ರ ಯುದ್ಧದಲ್ಲಿ ಯುದ್ಧವನ್ನು ಗೆಲ್ಲಲು ತಾಯಿ ಕಾಳಿಗೆ ತನ್ನ ಪ್ರಾಣತ್ಯಾಗ ಮಾಡಲು ಮುಂದಾಗುತ್ತಾನೆ ಅರಾವಣ, ಆದರೆ ತಾನು ಸಾಯುವ ಮೊದಲು ವೈವಾಹಿಕ ಜೀವನ ನಡೆಸಲು ಆಸೆಪಡುತ್ತಾನೆ. ತೃತೀಯ ಲಿಂಗಿಗಳು ಅರಾವಣನನ್ನು ತಮ್ಮ ಸಂಗಾತಿಯನ್ನಾಗಿ ಭಾವಿಸುತ್ತಾರೆ. ಹೀಗಾಗಿ ಈ ಆಚರಣೆ ಬಂದಿದೆ.
ಈ ಹಬ್ಬದಲ್ಲಿ ಇತರ ಆಸಕ್ತಿದಾಯಕ ಕಾರ್ಯಕ್ರಮಗಳು ಇರುತ್ತದೆ
ಮಂಗಳಮುಖಿಯರ ಸೌಂದರ್ಯ ಸ್ಪರ್ಧೆ ಕೂಡ ಇಡಲಾಗುವುದು
ಈ ಹಬ್ಬದಲ್ಲಿ ಅನೇಕ ಕಾರ್ಯಕ್ರಮಗಳನ್ನು ಇಡಲಾಗುವುದು, ಸೌಂದರ್ಯ ಸ್ಪರ್ಧೆ ಕೂಡ ನಡೆಸಲಾಗುವುದು. ಇದರ ಜೊತೆಗೆ ಅನೇಕ ಮನರಂಜನೆಯ ಕಾರ್ಯಕ್ರಮ ಆಯೋಜಿಸಲಾಗುವುದು. ಈ 18 ದಿನ ಮಂಗಳಮುಖಿಯರು ಸಂಭ್ರಮದಿಂದ ಭಾಗಿಯಾಗಿ ನಂತರ ತಮ್ಮ-ತಮ್ಮ ಊರುಗಳಿಗೆ ಮರಳುತ್ತಾರೆ.
ಮಂಗಳಮುಖಿಯರು ನಮ್ಮಂತೆಯೇ ಮನುಷ್ಯರೇ, ಆದರೆ ಅವರಿಗೆ ಈ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ, ಈ ಸಮಾಜದ ಜೊತೆ ಬೆರೆಯಲು ಅವಕಾಶ ದೊರೆಯುತ್ತಿಲ್ಲ. ಮನೆಯಲ್ಲಿ ಮಗನಾಗಿ ಅಥವಾ ಮಗಳಾಗಿ ಜನಿಸುವ ಇವರು ಒಂದು ಪ್ರಾಯದಲ್ಲಿ ನನ್ನ ಲಿಂಗಕ್ಕೂ, ನನ್ನಲ್ಲಿರುವ ಭಾವನೆಗಳಿಗೂ ಸಂಬಂಧವಿಲ್ಲ ಎಂದರಿತಾಗ ಮನೆಯಲ್ಲಿ, ಸಮಾಜದಲ್ಲಿ ಇವರ ಭಾವನೆಗಳಿಗೆ ಸೂಕ್ತ ಮನ್ನಣೆ ಸಿಗದೇ ಇರುವ ಕಾರಣಕ್ಕೆ ತಮ್ಮದೇ ಗುಂಪು ಸೇರಿಕೊಳ್ಳುತ್ತಾರೆ. ಎಷ್ಟೋ ಕುಟುಂಬಗಳು ಇವರನ್ನು ತಮ್ಮ ಮಕ್ಕಳಾಗಿ ಒಪ್ಪಿಕೊಳ್ಳುವುದೇ ಇಲ್ಲ, ಹೀಗೆ ತಮ್ಮದೇ ಸಮುದಾಯಕ್ಕೆ ಸೇರಿಕೊಳ್ಳುವ ಇವರು ಅಲ್ಲಿ ತಮ್ಮದೇ ಆದ ಆಚಾರ-ವಿಚಾರ, ಪದ್ಧತಿಗಳನ್ನು ಪಾಲಿಸಿಕೊಂಡು ಬರಬೇಕಾಗುತ್ತದೆ, ಅಲ್ಲದೆ ಅವರ ಪದ್ಧತಿಗಳನ್ನು ತಿರಸ್ಕರಿಸುವಂತಿರಲ್ಲ. ಇಂಥವರು ಸಮಾಜದಲ್ಲಿ ತೃತೀಯ ಲಿಂಗಿಗಳು, ಮಂಗಳಮುಖಿಯರು, ಕೋಜಾಗಳು ಹೀಗೆ ಮುಂತಾದ ಹೆಸರಿನಿಂದ ಕರೆಯಲ್ಪಡುತ್ತಾರೆ.
ಸಾಮಾನ್ಯವಾಗಿ ಇಂಥವರಿಗೆ ಮದುವೆ, ಮಕ್ಕಳು ಅಂತ ಆಗುವುದಿಲ್ಲ, ಮದುವೆಯ ಹೆಸರಿನಲ್ಲಿ ಮೋಸ ಮಾಡುವವರೇ ಅಧಿಕ. ಭಿಕ್ಷೆಬೇಡಿ ಅಥವಾ ಲೈಂಗಿಕಕಾರ್ಯಕರ್ತೆಯರಾಗುವ ಮೂಲಕ ತಮ್ಮ ಜೀವನ ನಡೆಸಬೇಕಾಗುತ್ತದೆ. ಈಗೀಗ ಸಮಾಜದಲ್ಲಿ ಉತ್ತಮ ಬದಲಾವಣೆ ಕಂಡು ಬರುತ್ತಿದೆ, ತಮ್ಮ ಮಗ/ಮಗಳು ಲಿಂಗ ಬದಲಾಯಿಸಿದಾಗ ಆ ಮಗ/ಮಗಳನ್ನು ಹೊರಹಾಕದೆ ಅವರ ಆಸೆಗೆ ಒತ್ತಾಸೆಯಾಗಿ ನಿಲ್ಲುವ ಪೋಷಕರ ಸಂಖ್ಯೆ ಹೆಚ್ಚಾಗುತ್ತಿದೆ, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಈ ರೀತಿ ತಮ್ಮ ಮಕ್ಕಳಿಗೆ ಬೆಂಬಲ ನೀಡಿದರೆ ಮಂಗಳಮುಖಿಯರಾಗಿ ಭಿಕ್ಷೆ ಬೇಡುವುದು, ಲೈಂಗಿಕಕಾರ್ಯಕರ್ತೆಯರಾಗಿ ಜೀವನ ನಡೆಸಬೇಕಾದ ಅನಿವಾರ್ಯತೆ ತಪ್ಪುತ್ತೆ. ಅವರು ಕೂಡ ಸಮಾಜದಲ್ಲಿ ಗೌರವದಿಂದ ಬಾಳಲು ಸಾಧ್ಯವಾಗುವುದು.



Click it and Unblock the Notifications