Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ದೇಶಕ್ಕೆ ವಿಜಯದಶಮಿಯಿಂದ ಸಂಕ್ರಾಂತಿವರೆಗೆ ಕಂಟಕವಿದೆ ಎಂದ ಕೋಡಿಮಠ ಸ್ವಾಮೀಜಿ
ಕೋಡಿಮಠ ಸ್ವಾಮೀಜಿಯ ಭವಿಷ್ಯವಾಣಿ ಕುರಿತು ಜನರಲ್ಲಿ ಅಪಾರ ನಂಬಿಕೆ, ಕಾರಣ ಅವರು ಹೇಳಿರುವ ಎಷ್ಟೋ ಭವಿಷ್ಯಗಳು ನಿಜವಾಗಿದೆ. ಅವರು ಹೇಳಿದಂತೆ ನಡೆಯಲಿದೆ ಎಂಬುವುದನ್ನು ಜನ ಕೂಡ ನಂಬುತ್ತಾರೆ, ಹೀಗಾಗಿ ಅವರು ಏನಾದರೂ ಭವಿಷ್ಯ ನುಡಿದರೆ ಸಂಚಲನವೇ ಉಂಟಾಗಿ ಬಿಡುತ್ತದೆ. ಇದೀಗ ಅವರು ನುಡಿದಿರುವ ಭವಿಷ್ಯವಾಣಿ ತುಂಬಾನೇ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಅವರು ಹೇಳಿರುವ ಭವಿಷ್ಯವೇನು? ಎಂದು ನೋಡೋಣ ಬನ್ನಿ:

ದೇಶಕ್ಕೆ ಕಾದಿದೆಯೇ ಮಹಾನ್ ಕಂಟಕ
ಕೋಡಿಮಠ ಸ್ವಾಮೀಜಿಗಳಾದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ದೇಶದ ಮಹಾನ್ ವ್ಯಕ್ತಿಗಳಿಗೆ ಕಂಟಕ ವಿದೆ ಎಂಬ ಭವಿಷ್ಯ ಹೇಳಿದ್ದಾರೆ. 2024ರ ಯುಗಾದಿ ವೇಳೆಗೆ ದುರ್ಘಟನೆ ಸಂಭವಿಸಲಿದೆ. ಆಳುವವರು ಈ ಕುರಿತು ಎಚ್ಚರವಹಿಸಿದರೆ ಈ ಕಂಟಕ ತಪ್ಪಿಸಬಹುದಾಗಿದೆ ಎಂಬುವುದಾಗಿ ಹೇಳಿದ್ದಾರೆ.
ದೊಡ್ಡ ನಗರಗಳಿಗೂ ಆಪತ್ತಿದೆ
ಇವರು ದೊಡ್ಡ ಪಟ್ಟಣಗಳಿಗೆ ಅಪಾಯದ ಸೂಚನೆಯಿದೆ, ದೊಡ್ಡ ದೊಡ್ಡ ಕಟ್ಟಡಗಳು ಕುಸಿಯಬಹುದು, ಜಗತ್ತೇ ತಲ್ಲಣವಾಗಲಿದೆ ಎಂಬುವುದಾಗಿ ಹೇಳಿದ್ದಾರೆ. ವಿಜಯದಶಮಿಯಿಂದ ಸಂಕ್ರಾಂತಿಯವರೆಗೆ ದುರ್ಘಟನೆಗಳು ಸಂಭವಿಸಲಿದೆ ಎಂಬುವುದಾಗಿ ಭವಿಷ್ಯ ಹೇಳಿದ್ದಾರೆ.
ಜಲಪ್ರಳಯದ ಬಗ್ಗೆ ಮೊದಲೇ ಭವಿಷ್ಯ ನುಡಿದ್ದರು
ರಾಹ್ಯದಲ್ಲ ಭಾರಿ ಮಳೆ ಬಂದು ಜಲಪ್ರಳಯವಾಗಲಿದೆ ಎಂಬುವುದಾಗಿ ಹೇಳಿದ್ದರು. ಈ ವರ್ಷ ರಾಜ್ಯದಲ್ಲಿ ಮಳೆಯ ಪ್ರಮಾಣ ತುಂಬಾ ಕಡಿಮೆ ಇದೆ, ಆದರೆ ಇತ್ತೀಚೆಗೆ ಸುರಿದ ಮಳೆ ಹಲವು ಕಡೆ ಪ್ರಳಯ ಉಂಟು ಮಾಡಿ ಸಾಕಷ್ಟು ಸಂಕಷ್ಟಗಳನ್ನು ತಂದಿದೆ.
ಗೌರಿಶಂಕರ ಶಿಖರ, ಜೋಶಿಮಠಕ್ಕೆ ಕಂಟಕವಿದೆ ಎಂಬ ಭವಿಷ್ಯ
ಇತ್ತೀಚೆಗೆ ಹಿಮಾಲಯದ ಜೋಶಿಮಠ ಮುಳುಗುವ ಮುನ್ನವೇ ಅಲ್ಲಿ ಕಂಟಕವಿದೆ ಎಂಬುವುದಾಗಿ ಹೇಳಿದ್ದರು. ಇವರು ಈ ಕುರಿತು ಹೇಳುವಾಗ ಅವರು ಧ್ಯಾನದಲ್ಲಿದ್ದಾಗಾಗ ಅವರ ಹೊಟ್ಟೆ ಮೇಲೆ ಬೆಂಕಿ ಬಿತ್ತು, ಇದರಿಂದ ಜೋಶಿಮಠಕ್ಕೆ ಕಂಟಕವಿದೆ ಎಂಬುವುದು ಗೊತ್ತಾಯ್ತು ಎಂಬುವುದಾಗಿ ಹೇಳಿದ್ದಾರೆ. ಇವರು ಭವಿಷ್ಯವನ್ನು ಸುಮ್ಮನೆ ನುಡಿಯಲ್ಲ. ಇವರು ಧ್ಯಾನ ಮಾಡುವಾಗ ಪಂಚಾಗ್ನಿ, ಜಲಾಗ್ನಿ, ವಾಯಾಗ್ನಿ ಸೇರಿದಂತೆ ತಮ್ಮ ನಾಲ್ಕೂ ಸುತ್ತಲೂ ಅಗ್ನಿಯನ್ನು ಇಟ್ಟು, ತಲೆಯ ಮೇಲೆ ಬೆಂಕಿಕುಂಡವಿಟ್ಟು ಧ್ಯಾನ ಮಾಡುತ್ತಾರೆ, ಆವಾಗ ಅವರಿಗೆ ಮುಂಬರುವ ಅಪಾಯದ ಸೂಚನೆ ಸಿಗುವುದು, ಅದರಂತೆ ಭವಿಷ್ಯ ನುಡಿಯುತ್ತಾರೆ.
ಕರ್ನಾಟಕದ ಕುರಿತ ಇವರು ನುಡಿದ ಭವಿಷ್ಯ ನಿಜವಾಗಿದೆ
ಇವರು ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಬರಲ್ಲ, ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರಲಿದೆ ಎಂಬುವುದಾಗಿ ಹೇಳಿದ್ದರು, ಅದರಂತೆಯೇ ಆಗಿದೆ.
ಕರ್ನಾಟಕದ ಸರ್ಕಾರದ ಕುರಿತ ಭವಿಷ್ಯ
ರಾಜ್ಯ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ, ಆದರೆ ಬೇಗ ಹಣ ಮಾಡುವ ದುರಾಸೆಯಿಂದ ತೊಂದರೆ ತಂದುಕೊಳ್ಳುತ್ತಾರೆ ಎಂಬುವುದಾಗಿ ಹೇಳಿದ್ದಾರೆ. ಇದರಿಂದಾಗಿ ಅಲ್ಲೋಲ ಕಲ್ಲೋಲ ಸಂಭವಿಸಲಿದೆ ಎಂಬುವುದಾಗಿ ಹೇಳಿದ್ದಾರೆ.



Click it and Unblock the Notifications
