Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆದಿರುವ ರಾಜಕಾರಣಿಗಳಿವರು
ಓದಿ ಡಾಕ್ಟರ್ ಆಗಬೇಕು, ಎಂಜಿನಿಯರ್ ಆಗಬೇಕು ಎಂದು ಹೇಳುವ ಮಕ್ಕಳು ಓದಿ ಒಬ್ಬ ರಾಜಕಾರಣಿಯಾಗುತ್ತೇನೆ ಎಂದು ಹೇಳುವುದಿಲ್ಲ. ರಾಜಕಾರಣ ಎಂದರೆ ಅದು ನಮ್ಮಂಥವರಿಗೆ ಆಗಿ ಬರಲ್ಲ ಎಂಬ ಕಲ್ಪನೆ ಹಲವರಲ್ಲಿದೆ. ಆದರೆ ದೇಶ ಪ್ರಗತಿಯಾಗಬೇಕೆಂದರೆ ಒಳ್ಳೆಯ ಶಿಕ್ಷಣ ಪಡೆದ ಯುವ ಜನಾಂಗ ರಾಜಕೀಯಕ್ಕೆ ಬರಬೇಕಾಗಿದೆ.
ಯಾವುದೇ ಹುದ್ದೆಗೆ ಹೋಗಲು ಇಂತಿಷ್ಟು ಕ್ವಾಲಿಫಿಕೇಷನ್ ಅಂತ ಬೇಕಾಗುತ್ತದೆ, ಆದರೆ ರಾಜಕಾರಣ ಎಂಬುವುದು ಹಾಗಲ್ಲ, ಅನಕ್ಷರಸ್ಥರಾಗಿದ್ದರೂ ರಾಜಕಾರಣಿಯಾಗಬಹುದು. ಆದರೆ ನಮ್ಮ ಕರ್ನಾಟಕದ ರಾಜಕಾರಣಿಗಳನ್ನು ನೋಡಿದಾಗ ಸ್ವಲ್ಪ ಸಮಧಾನಕರ ಸಂಗತಿಯೆಂದರೆ ನಮ್ಮಲ್ಲಿನ ಬಹುತೇಕ ರಾಜಕಾರಣಿಗಳು ಒಳ್ಳೆಯ ಶಿಕ್ಷಣ ಪಡೆದಿದ್ದಾರೆ. ಲಾಯರ್, ಡಾಕ್ಟರ್ ಓದಿ ರಾಜಕೀಯಕ್ಕೆ ಬಂದಿದ್ದಾರೆ.

ಒಳ್ಳೆಯ ಶಿಕ್ಷಣ ಪಡೆದವರು ರಾಜಕಾರಣಿಯಾಗಬೇಕು
ನೀವು ಇತರ ಯಾವುದೇ ಕ್ಷೇತ್ರ ನೋಡಿದರೆ ಒಂದು ಹುದ್ದೆ ಪಡೆಯಲು ಇಂತಿಷ್ಟು ಶಿಕ್ಷಣ ಅಂತ ಬೇಕಿರುತ್ತದೆ, ಆದರೆ ರಾಜಕಾರಣಿಯಾಗಲು ಮಂತ್ರಿಯಾಗಿ ಜನರನ್ನು ಆಳಲು, ನಾಡಲು ಇಂತಿಷ್ಟೇ ಶಿಕ್ಷಣ ಬೇಕೆಂಬ ಯಾವ ನಿಯಮವೂ ಇಲ್ಲ. ಅದರೆ ಪ್ರಜಾಪ್ರಭುತ್ವ ನಾಡಿನಲ್ಲಿ ಮಂತ್ರಿಯಾಗಿ ಆಡಳಿತ ನಡೆಸುವಾಗ ಒಂದು ಒಳ್ಳೆಯ ಶಿಕ್ಷಣವಿಲ್ಲದಿದ್ದರೆ ಆತ ಹೇಗೆ ತಾನೆ ಒಂದು ಒಳ್ಳೆಯ ಆಡಳಿತ ನಡೆಸಲು ಸಾಧ್ಯ. ತನ್ನ ಕ್ಷೇತ್ರದ ಅಭಿವೃದ್ಧಿಗೆ ಯಾವ ಯೋಜನೆಗಳಿವೆ ಇವೆಲ್ಲಾ ಕೇಳಿ ತಿಳಿದುಕೊಳ್ಳುವುದಕ್ಕೂ ತಾವೇ ಓದಿ ಅರ್ಥ ಮಾಡಿಕೊಳ್ಳುವುದಕ್ಕೂ ತುಂಬಾನೇ ವ್ಯತ್ಯಾಸವಿದೆ. ಆದ್ದರಿಂದ ಒಳ್ಳೆಯ ರಾಜಕಾರಣಿಯಾಗಲು ಆತ ಒಳ್ಳೆಯ ಶಿಕ್ಷಣ ಪಡೆದಿದ್ದರೆ ಇನ್ನೂ ಒಳ್ಳೆಯದು.
ಶಿಕ್ಷಣ ಕಡಿಮೆ ಇರುವವರು ಎಂಎಲ್‌ಎ, ಎಂಪಿ ಆದರೆ?
ಭಾರತದಲ್ಲಿ ರಾಜಕಾರಣಿಯಾಗಲು ಇಂತಿಷ್ಟು ಶಿಕ್ಷಣ ಪಡೆಯಲೇಬೇಕು ಎಂಬ ಯಾವ ಕಡ್ಡಾಯವೂ ಇಲ್ಲ, ನಮ್ಮನ್ನು ಆಳುವವರಿಗೆ ಶಿಕ್ಷಣವಿದ್ದರೆ ಇದರಿಂದ ದೇಶದ ಅಭಿವೃದ್ಧಿಗೆ, ಅವರು ಆಯ್ಕೆಯಾದ ಕ್ಷೇತ್ರದ ಅಭಿವೃದ್ದಿಗೆ ಸಹಾಯವಾಗುವುದು. ಹಾಗಂತ ಶಿಕ್ಷಣ ಪಡೆಯದೇ ಇರುವ ರಾಜಕಾರಣಿಗಳು ಉತ್ತಮ ಆಡಳಿತ ನೀಡಿಲ್ಲ ಎಂದು ಹೇಳುತ್ತಿಲ್ಲ, ಆದರೆ ಶಿಕ್ಷಣ ಪಡೆದಿದ್ದರೆ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬೇರೆಯೊಬ್ಬರ ಬಳಿ ಸಲಹೆ ಪಡೆಯುವ ಅವಶ್ಯಕತೆ ಇರುವಿದಿಲ್ಲ.
ಭಾರತದಲ್ಲಿ ರಾಜಕಾರಣಿಗಳ ಆಯ್ಕೆ ವಿಷಯದಲ್ಲಿ ಇದು ಆಗಬೇಕಾಗಿದೆ:
* ರಾಜಕಾರಣಕ್ಕೆ ಇಂತಿಷ್ಟು ಶಿಕ್ಷಣ ಇರಲೇಬೇಕು ಎಂಬ ನಿಯಮ ಬರಬೇಕಾಗಿದೆ. ಕನಿಷ್ಠ ಪದವಿಯನ್ನಾದರೂ ಪಡೆದಿರಬೇಕು.
* ನಾಯಕ ಒಳ್ಳೆಯ ಶಿಕ್ಷಣವಂತ, ವಿಚಾರವಂತನಾಗಿರಬೇಕು, ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಂತವನಾಗಿರಬೇಕು.
* ಜಾತಿ ಅಥವಾ ಧರ್ಮದ ಆಧಾರದ ಮೇಲೆ ಮತ ಪಡೆಯುವವರ ಸಂಖ್ಯೆ ಅಧಿಕವಿದೆ, ಅದರ ಬದಲಿಗೆ ಪ್ರಗತಿಯ ಕೆಲಸದ ಮೂಲಕ ಮತ ಪಡೆಯುವವರ ಸಂಖ್ಯೆ ಹೆಚ್ಚಾಗಬೇಕಾಗಿದೆ.
ಕರ್ನಾಟಕದಲ್ಲಿ ಪದವಿ ಹಾಗೂ ಉನ್ನತ ಶಿಕ್ಷಣ ಪಡೆದ ರಾಜಕಾರಣಿಗಳ ಪಟ್ಟಿ ಮಾಡುವುದಾದರೆ
ಸಿದ್ಧರಾಮಯ್ಯ, ಬಸವರಾಜಬೊಮ್ಮಾಯಿ ಸೇರಿ ಬಹುತೇಕ ರಾಜಕಾರಣಿಗಳು ಪದವಿ ಶಿಕ್ಷಣ ಪಡೆದಿದ್ದಾರೆ, ಕೆಲ ರಾಜಕಾರಣಿಗಳು ಡಬಲ್ ಗ್ರ್ಯಾಜುಯೇಟ್, ಡಾಕ್ಟರ್ ಎಲ್ಲಾ ಆಗಿದ್ದು ಜನರ ಸೇವೆಗಾಗಿ ಈ ಕ್ಷೇತ್ರಕ್ಕೆ ಬಂದಿದ್ದಾರೆ.
ಚಿಕ್ಕೋಡಿ ಸದಲಾಗದ ಗಣೇಶ್ ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್) ಬಿಬಿಎ ಪದವಿ ಪಡೆದಿದ್ದಾರೆ
ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ (ಕಾಂಗ್ರೆಸ್) ಸ್ನಾತಕೋತರ ಪದವಿ(ಎಂಎ), ಕಾನ್ಪುರದ ಡಾ. ಅಂಜಲಿ ಹೀರೇಮಠ ನಿಂಬಾಳ್ಕರ್ ಎಂಎಸ್ ಓದಿದ್ದಾರೆ.
ಕಿತ್ತೂರ್‌ನ ದೊಡ್ಡಗೌಡರ್ ಮಹಾಂತೇಶ್ ಬಿಎ, ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. (ಬಿಜೆಪಿ)
ಬೈಲಹೊಂಗಲದ ರಾಜಕಾರಣಿ ಕೌಜಲಗಿ ಮಹಾಂತೇಶ್. ಶಿವಾನಂದ್ ಬಿಕಾಂ, ಎಲ್‌ಎಲ್‌ಬಿ (ಕಾಂಗ್ರೆಸ್)
ಮುದ್ದೆಬಿಹಾಳದ ಅಮೀನಪ್ಪ ಗೌಡ ಎಸ್ ಪಾಟೇಲ್ ಎಂ ಎಸ್ಸಿ (ಬಿಜೆಪಿ)
ಜೇವರ್ಗಿಯ ಅಜಯ್ ಧರ್ಮ ಸಿಂಗ್ ಎಂಬಿಬಿಎಸ್
ಡಾ. ಉಮೇಶ್ ಜಿ ಜಾದವ್ ಎಂಎಸ ಬಸವನಗೌಡ ದದ್ದಲ್ ಬಿಎಸ್ಸಿ, ಎಂಎಸ್ಸಿ, ಎಂಎ
ಹನುಮಂತಗೌರ ಕೃಷ್ಣಗೌಡ ಪಾಟೇಲ್ ಬಿಎಸ್ಸಿ, ಎಲ್‌ಎಲ್‌ಬಿ
ನೆಹರು ಓಲೇಕರ್ ಎಂ, ಎ
ಇ ತುಕರಾಂ ಎಂಕಾಂ
ಎನ್ ವೈ ಗೋಪಾಲಕೃಷ್ಣ ಎಂಬಿ ಎ
ಕೆ ಪೂರ್ಣಿಮಾ ಎಂಎ
ಎನ್ ಲಿಂಗಣ್ಣ ಎಂ ಎ
ಕೆ ರಘುಪತಿ ಭಟ್ ಎಂಎ
ಎಂ. ಪಿ ಕುಮಾರಸ್ವಾಮಿ (ಬಿಜೆಪಿ) ಎಂ ಎ
ಸಿಟಿ ರವಿ ಎಂಎ
ಜೆಎಸ್ ಮಧುಸ್ವಾಮಿ ಬಿಎಸ್ಸಿ, ಎಂ ಎ, ಎಲ್‌ಎಲ್‌ಬಿ
ಕೆ ಎಸ್ ಪ್ರಕಾಶ್ ಬಿಇ, ಎಲ್ಎಲ್‌ಬಿ
ಡಿ. ಕೃಷ್ಣ ಕುಮಾರ್ ಬಿಎಸ್ಸಿ, ಎಲ್‌ಎಲ್‌ಬಿ
ಡಾ. ಜಿ ಪರಮೇಶ್ವರ್ Phd, Msc, Bsc
ಬಿ ಸತ್ಯನಾರಾಯಣ ಬಿಎ, ಎಲ್‌ಎಲ್‌ಬಿ
ಎಂ ವಿ ವೀರ ಭದ್ರಯ್ಯ ಎಂಎ
ಡಾ. ಕೆ ಸುಧಾಕರ್ ಎಂಬಿಬಿಎಸ್
ಕೃಷ್ಣ ಬೈರೇಗೌಡ, ಬಿಬಿಎಂ, ಎಂಎ
ಡಾ. ಅಶ್ವಥ್ ನಾರಾಯಣ ಸಿ. ಎನ್ ಎಂಬಿಬಿಎಸ್
ಆರ್ ರೋಷನ್ ಬೇಗ್ ಬಿಕಾಂ ಎಲ್‌ಎಲ್‌ಬಿ
ಎಸ್ ಸುರೇಶ್ ಕುಮಾರ್ ಬಿಎಸ್ಸಿ, ಎಲ್‌ಎಲ್‌ಬಿ
ರವಿಸುಬ್ರಮಣ್ಯ ಎಲ್ ಎ (BA. MBA)
ಬಿ ಶಿವಣ್ಣ ಎಂಎಸ್ಸಿ
ಡಾ. ಕೆ ಶ್ರೀನಿವಾಸಮೂರ್ತಿ ಎಂಬಿಬಿಎಸ್
ಡಿಕೆ ಶಿವಕುಮಾರ್ ಎಂ
ಡಾ. ಕೆ ಅನ್ನದಾನಿ MA,Phd
ಡಿ. ಸಿ. ತಮ್ಮಣ್ಣ B.Sc., BE
ಹೆಚ್ ಕೆ ಕುಮಾರಸ್ವಾಮಿ ಬಿಎಸ್ಸಿ, ಬಿಎಡ್
ಹರೀಶ್ ಪೂಂಜಾ ಎಂಎ , ಎಲ್‌ಎಲ್‌ಬಿ
ಯು.ಟಿ. ಖಾದರ್ ಬಿಎಸ್ಸಿ, ಬಿಎಡ್
ಕೆಜಿ ಬೋಪಯ್ಯ ಬಿಎಸ್ಸಿ, ಎಲ್‌ಎಲ್‌ಬಿ
ಯತೀಂದ್ರ ಎಸ್ ಎಂಬಿಬಿಎಸ್, ಎಂಡಿ
ಆರ್ ರಾಜೇಂದ್ರ ಎಂಎ, ಎಲ್ಎಲ್‌ಬಿ
ಎನ್ ಮಹೇಶ್ ಎಂಎ
ಡಾ. ಶಿವರಾಜ್ ಪಾಟೇಲ್ ಎಂಬಿಬಿಎಸ್, ಎಂ.ಡಿ
ಅರವಿಂದ್ ಬೆಲ್ಲದ್ ಎಂಎ, ಬಿಎಡ್, ಎಲ್‌ಎಲ್‌ಬಿ
ರೂಪಕಲ ಎಂ ಎಂಎ
ಡಾ. ಮಂತೇರ್ ಗೌಡ ಎಂಬಿಬಿಎಸ್
ಪ್ರತಾಪ್ ಸಿಂಹ (ಸ್ನಾತಕೋತ್ತರ)



Click it and Unblock the Notifications