Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕನ್ನಡ ಬಿಗ್‌ಬಾಸ್ 10: ಈ ಸುಂದರಿ ಈ ಬಾರಿಯ ಪ್ರಮುಖ ಅಟ್ರಾಕ್ಷನ್
ಕನ್ನಡ ಬಿಗ್‌ಬಾಸ್ ಈ ಅಕ್ಟೋಬರ್ 8ರಿಂದ ಶುರುವಾಗಲಿದೆ. ಈ ಬಾರಿ ಕಂಟೆಸ್ಟೆಂಟ್ ಆಗಿ ಯಾರೆಲ್ಲಾ ಬರಲಿದ್ದಾರೆ ಎಂಬ ಬಗ್ಗೆ ಚರ್ಚೆ ಬಲು ಜೋರಾಗಿಯೇ ನಡೆಯುತ್ತಿದೆ.
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಶೋ ಬಿಗ್‌ಬಾಸ್. ಇತರ ಭಾಷೆಗಳಲ್ಲಿ ಕೂಡ ಈ ಶೋ ನಡೆಯುತ್ತದೆ, ಆದರೆ ಕನ್ನಡದಲ್ಲಿ ಈ ಶೋ ಪ್ರಮುಖ ಆಕರ್ಷಣೆಯೆಂದರೆ ಸುದೀಪ್ ನಿರೂಪಣೆ. ವೀಕೆಂಡ್‌ನಲ್ಲಿ ಸುದೀಪ್‌ರವರ ಮಾತು ಕೇಳಲೆಂದೇ ವೀಕ್ಷಕರು ಕಾಯುತ್ತಿರುತ್ತಾರೆ. ಅವರ ನಿರೂಪಣಿಯ ಶೈಲಿಯೇ ಸಾಕು ವೀಕ್ಷರಕರನ್ನು ಸೂಜಿಗಲ್ಲಿನಂತೆ ಸೆಳೆಯಲು.

ಅದರಲ್ಲೂ ಈ ಬಾರಿ ಸೀಸನ್ 10. ಸೀಸನ್ 10 ಇನ್ನಷ್ಟು ಆಕರ್ಷಕವಾಗಿರಬಹುದೇ? ಎಂಬ ಕುತೂಹಲ ವೀಕ್ಷಕರದಲ್ಲಿದೆ. ಈ ಸೀಸನ್ 10ರ ಕಂಟೆಸ್ಟೆಂಟ್ ಆಗಿ ಈ ಬಾರಿ ವಿಶೇಷ ಸ್ಪರ್ಧಿಯೊಬ್ಬರು ಇದ್ದಾರೆ, ಆ ಸ್ಪರ್ಧಿ ಬೇರೆ ಯಾರೂ ಅಲ್ಲ, ಚಾರ್ಲಿ. ಈ ಬಾರಿಯ ಸ್ಪರ್ಧಿಗಳಲ್ಲಿ ಚಾರ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗುವುದರಲ್ಲಿ ನೋ ಡೌಟ್. ಚಾರ್ಲಿ ಪ್ರಮುಖ ಸ್ಪರ್ಧಿಯಾಗಿ ಇರಲಿದೆ ಎಂಬುವುದನ್ನು ಕಲರ್ಸ್ ಕನ್ನಡ ವಾಹಿನಿಯವರೇ ದೃಢಪಡಿಸಿದ್ದಾರೆ. ಈ ಮೂಲಕ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
777 ಚಾರ್ಲಿ ಚಿತ್ರ ನೋಡಿ ಚಾರ್ಲಿ ಅಭಿನಯಕ್ಕೆ ಮನ ಸೋಲದವರೇ ಇಲ್ಲ. ಅದರ ಬುದ್ಧಿವಂತಿಕೆ, ಸ್ನೇಹ, ಸಹಜ ನಟನೆ ಎಲ್ಲವೂ ತುಂಬಾನೇ ಗಮನ ಸೆಳೆದಿತ್ತು. ಈ ಚಾರ್ಲಿಗೆ ಫಿದಾ ಆಗಿ ತುಂಬಾ ಜನ ನಾಯಿ ಸಾಕಲಾರಂಭಿಸಿದರು, ಅಷ್ಟರ ಮಟ್ಟಿಗೆ ಮೋಡಿ ಮಾಡಿದ್ದಾಳೆ. ಚಾರ್ಲಿ ತನ್ನ ಅಭಿನಯದ ಮೂಲಕ ರಾಷ್ಟ್ರೀಯ ಸಿನಿ ಲೋಕದ ಗಮನವನ್ನೂ ಸೆಳೆದಳು. ಇದೀಗ ಬಿಗ್‌ಬಾಸ್ ಮನೆಯಲ್ಲಿ ಚಾರ್ಲಿ ಹೇಗಿರಲಿದ್ದಾಳೆ ಎಂಬುವುದೇ ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. ಸಿನಿಮಾವನ್ನು ದೊಡ್ಡ ಮಟ್ಟಕ್ಕೆ ಗೆಲ್ಲಿಸಿಕೊಟ್ಟ ಚಾರ್ಲಿ ಬಿಗ್‌ಬಾಸ್‌ನ ಟಿಆರ್‌ಪಿ ಹೆಚ್ಚಿಸಬಹುದು ಎಂಬ ನಿರೀಕ್ಷೆಯಲ್ಲಿ ವಾಹಿನಿಯವರು ಚಾರ್ಲಿಯನ್ನು ಕರೆಸಿದ್ದಾರೆ, ಬಿಗ್‌ಬಾಸ್ ಮನೆಯೊಳಗೆ ಚಾರ್ಲಿ ಹೇಗೆ ಮೋಡಿ ಮಾಡಲಿದ್ದಾಳೆ ಎಂಬುವುದನ್ನು ಕಾದು ನೋಡಬೇಕಷ್ಟೇ...
ಕನ್ನಡ ಬಿಗ್‌ಬಾಸ್ ಸೀಸನ್ 10 ಈ ಬಾರಿ 24 ಗಂಟೆ ಲೈವ್‌ಸ್ಟ್ರೀಮ್ ಆಗಲಿದೆ. ಇದನ್ನು ಜಿಯೋ ಸಿನಿಮಾದಲ್ಲಿ ನೋಡಬಹುದು. ಅದರ ಜೊತೆಗೆ ಅನ್‌ಸೀನ್ ಸ್ಟೋರಿ, ಬಿಗ್‌ನ್ಯೂಸ್, ಜಿಯೋ ಸಿನಿಮಾ ಫನ್ ಪ್ರೈಡೇ, ಡೀಪ್ ಆಗಿ ನೋಡಿ ಹೀಗೆ ಹಲವಾರು ರೂಪದಲ್ಲಿ ಪ್ರಸಾರವಾಗಲಿದೆ.
ಹಲವಾರು ಹೊಸತನಗಳೊಂದಿಗೆ ಈ ಬಾರಿ ಬಿಗ್ ಬಾಸ್ ಕಿರುತೆರೆಯ ವೀಕ್ಷಕರನ್ನು ರಂಜಿಸಲು ಬರುತ್ತಿದೆ. ಇದೇ ಮೊದಲ ಬಾರಿಗೆ ಹ್ಯಾಪಿ ಬಿಗ್‌ಬಾಸ್ ಎಂಬ ಥೀಮ್ ಕೂಡ ಹೊಂದಿದೆ.
ಬಿಗ್‌ಬಾಸ್ ಶಬ್ದ, ಆ ಮ್ಯೂಸಿಕ್, ಸುದೀಪ್ ಡ್ರೆಸ್ಸಿಂಗ್ ಸ್ಟೈಲ್ ಇವೆಲ್ಲಾ ವೀಕ್ಷಕರಿಗೆ ತುಂಬಾನೇ ಇಷ್ಟವಾಗಿದೆ. ಈ ಹೊಸ ಸೀಸನ್‌ನಲ್ಲಿ ಹಲವಾರು ಸ್ಪರ್ಧಿಗಳ ಹೆಸರು ಕೇಳಿ ಬರುತ್ತದೆ, ಈ ಬಾರಿ ಬಿಗ್‌ಬಾಸ್ ಹೇಗೆಲ್ಲಾ ನಮ್ಮನ್ನು ರಂಜಿಸಲಿದೆ ಕಾದು ನೋಡೋಣ....



Click it and Unblock the Notifications
