Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಏಪ್ರಿಲ್ 1ಕ್ಕೆ ಕಾಮದ ಏಕಾದಶಿ: ಈ ವ್ರತ ಆಚರಿಸಿದರೆ ಕೆಲಸ ಕಾರ್ಯಗಳಲ್ಲಿ ಸಿಗಲಿದೆ ಯಶಸ್ಸು
ಹಿಂದೂ ಪಂಚಾಂಗದ ಪ್ರಕಾರ ಏಪ್ರಿಲ್ 1ಕ್ಕೆ ಕಾಮದ ಏಕಾದಶಿ ಆಚರಿಸಲಾಗುವುದು. ಈ ಏಕಾದಶಿಯ ವಿಶೇಷತೆಯೆಂದರೆ ಕನ್ನಡ ಮಾಸದ ಅಥವಾ ಹಿಂದೂ ಮಾಸದ ಮೊದಲ ಏಕಾದಶಿಯಾಗಿದೆ.
ಚೈತ್ರಮಾಸದ ಶುಕ್ಲಪಕ್ಷದಲ್ಲಿ ಈ ಏಕಾದಶಿ ಆಚರಿಸಲಾಗುವುದು. ಏಕಾದಶಿಯೆಂದರೆ ಶ್ರೀವಿಷ್ಣುವಿನ ಆರಾಧನೆಗೆ ಮೀಸಲಾದ ದಿನ.

ಏಪ್ರಿಲ್ 1ರಂದು ಆಚರಿಸಲಾಗುವ ಕಾಮದ ಏಕಾದಶಿಯ ಮಹತ್ವವೇನು, ಪೂಜಾ ಸಮಯ ಹಾಗೂ ಪಾರಣ ಸಮಯ ಯಾವಾಗ, ಪೂಜೆಯ ನಿಯಮಗಳೇನು ಎಂಬೆಲ್ಲಾ ಮಾಹಿತಿ ನೋಡೋಣ:
ಕಾಮದ ಏಕಾದಶಿಯ ಮಹತ್ವವೇನು?
ಕಾಮದ ಏಕಾದಶಿ ಆಚರಿಸುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ವಿ ಗಳಿಸುವಿರಿ. ವೃತ್ತಿ ಜೀವನದಲ್ಲಿ ಸಮಸ್ಯೆ, ಉದ್ಯೋಗದಲ್ಲಿ ಅಸ್ಥಿರತೆ, ವ್ಯವಹಾರ ಚೆನ್ನಾಗಿ ನಡೆಯುತ್ತಿಲ್ಲ, ಉದ್ಯಮದಲ್ಲಿ ನಾನು ಬಯಸಿದ ಲಾಭ ಗಳಿಸುತ್ತಿಲ್ಲ ಎಂದಾದರೆ ಈ ಏಕಾದಶಿಯನ್ನು ಪಾಲಿಸಿದರೆ ನಿಮ್ಮ ಕೆಲಸದಲ್ಲಿ ಪ್ರಗತಿಯನ್ನು ಕಾಣುವಿರಿ.
ಕಾಮದ ಏಕಾದಶಿ ಪೂಜಾಗೆ ಶುಭ ಮುಹೂರ್ತ:
ಕಾಮದ ಏಕಾದಶಿ ಏಪ್ರಿಲ್ 1 ಶನಿವಾರ ಆಚರಿಸಲಾಗುವುದು.
ಏಕಾದಶಿ ತಿಥಿ ಪ್ರಾರಂಭ: ಮಾರ್ಚ್ 31 ಮಧ್ಯರಾತ್ರಿ 01:58ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಏಪ್ರಿಲ್ 2 ಮುಂಜಾನೆ 04:19ಕ್ಕೆ
ಮಪಾರಣ ಸಮಯ: ಏಪ್ರಿಲ್ 2 ಮಧ್ಯಾಹ್ನ 01:37ರಿಂದ 0:04ರವರೆಗೆ
ಏಕಾದಶಿಯನ್ನು ಹೇಗೆ ಆಚರಿಸಬೇಕು?
ಈ ದಿನ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ಉಪವಾಸವಿದ್ದು ಸಂಕಲ್ಪ ತೆಗೆದುಕೊಳ್ಳಬೇಕು. ಈ ದಿನ ಶ್ರೀ ವಿಷ್ಣುವಿನ ಸಹಸ್ರನಾಮ ಪಠಿಸಿ ಹಾಗೂ ಪೂಜೆಗೆ ಶ್ರೀ ವಿಷ್ಣುವಿಗೆ ಪ್ರಿಯವಾದ ಹಳದಿ ಹೂಗಳು ಹಾಗೂ ಹಳದಿ ಹಣ್ಣುಗಳನ್ನು ಅರ್ಪಿಸಿ. ಪೂಜೆಯಲ್ಲಿ ತುಳಸಿ ಇರಲಿ.
ಈ ದಿನ ಉಪವಾಸವಿದ್ದು ವಿಷ್ಣುವಿನ ಧ್ಯಾನ ಮಾಡಬೇಕು. ಈ ದಿನ ಸತ್ಯ ನಾರಾಯಣ ಕತೆ ಓದುವುದು, ಕೇಳುವುದು ಒಳ್ಳೆಯದು.
ಏಕಾದಶಿಯ ಆಚರಿಸುವುದರಿಂದ ದೊರೆಯುವ ಪ್ರಯೋಜನ
ಯಾರು ಶ್ರದ್ಧಾ ಭಕ್ತಿಯಿಂದ ಏಕಾದಶಿಯನ್ನು ಆಚರಿಸುತ್ತಾರೋ ಅವರಿಗೆ ಮೋಕ್ಷ ಸಿಗಲಿದೆ. ಎಲ್ಲಾ ಕಷ್ಟಗಳಿಂದ ಮುಕ್ತಿ ಸಿಗಲಿದೆ. ಕಾಮದ ಏಕಾದಶಿ ಆಚರಿಸುವುದರಿಂದ ಕೆಲಸ ಕಾರ್ಯಗಳಲ್ಲಿ ಪ್ರಯೋಜನ ಪಡೆಯುವಿರಿ.
ಕಾಮದ ಏಕಾದಶಿ ಪೌರಾಣಿಕ ಹಿನ್ನೆಲೆ
ರತ್ನಪುರಾ ಎಂಬ ರಾಜ್ಯದಲ್ಲಿ ಲಲಿತ್ ಹಾಗೂ ಲಲಿತಾ ಎಂಬ ದಂಪತಿ ಇರುತ್ತಾರೆ. ಅವರಿದ್ದ ರಾಜ್ಯವನ್ನು ಪುಂಡರಿಕ ಎಂಬ ರಾಜ ಆಳುತ್ತಿದ್ದ. ಲಲಿತ್ ಆಸ್ಥಾನದಲ್ಲಿ ಸಂಗೀತಗಾರನಾಗಿದ್ದರೆ ಲಿಲಿತಾ ಆ ಸಂಗೀತಕ್ಕೆ ನೃತ್ಯ ಮಾಡುತ್ತಿದ್ದಳು. ಒಂದು ದಿನ ಲಲಿತ್ ಸಂಗೀತ ನುಡಿಸುವಾಗ ಆತನ ಹೆಂಡತಿಯನ್ನು ಗಮನಿಸುತ್ತಾನೆ, ಏಕೋ ಅವಳು ಬೇಸರದಿಂದ ಇರುವಂತೆ ಕಾಣುತ್ತಾಳೆ, ಅವಳ ನೃತ್ಯ ತಪ್ಪುತ್ತದೆ. ಆಗ ಸಂಗೀತ ನುಡಿಸುವುದು ನಿಲ್ಲಿಸಿ ಹೆಂಡತಿ ಬಳಿ ಏನಾಯಿತು ಎಂದು ಕೇಳುತ್ತಾನೆ.
ಆಗ ಅಲ್ಲಿದ್ದ ಕಾರ್ಲೋಟಕ ಸರ್ಪ ರಾಜನಿಗೆ ಲಲಿತ್ ಬಗ್ಗೆ ದೂರು ನೀಡುತ್ತಾನೆ. ನನಗಿಂತ ಹೆಂಡತಿಗೆ ಪ್ರಾಮುಖ್ಯತೆ ನೀಡಿದ್ದಕ್ಕೆ ರಾಜನು ನೀನೊಬ್ಬ ನರ ಭಕ್ಷಕನು ಆಗು ಎಂದು ಶಾಪ ನೀಡುತ್ತಾನೆ. ಲಲಿತಾ ಪತಿಯನ್ನು ಹುಡುಕು ಕಾಡಿನಲ್ಲಿ ಅಲಿಯುತ್ತಾ ಇರುವಾಗ ಆಕೆಗೆ ಶ್ರಿಂಘಿ ಋಷಿ ಸಿಗುತ್ತಾರೆ. ಅವರು ಆಕೆಗೆ ಕಾಮದ ಏಕಾದಶಿಯ ಮಹತ್ವ ಹೇಳಿ ಅದನ್ನು ಆಚರಿಸಲು ತಿಳಿಸುತ್ತಾರೆ. ಆಕೆ ಮಹಾವಿಷ್ಣುವನ್ನು ಭಕ್ತಿಯಿಂದ ಆರಾಧಿಸಿ ಪತಿಯನ್ನು ಪಾಪದಿಂದ ವಿಮೋಚನೆ ಮಾಡುತ್ತಾಳೆ.



Click it and Unblock the Notifications

