Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಜುಲೈ ತಿಂಗಳು ಮಿಥುನ ರಾಶಿಯವರ ವೃತ್ತಿ, ಆರ್ಥಿಕ, ಪ್ರೇಮ-ವಿವಾಹ, ಕುಟುಂಬ ಭವಿಷ್ಯ
ವೈದಿಕ ಶಾಸ್ತ್ರದ ಪ್ರಕಾರ ಮಿಥುನ ರಾಶಿಯವರಿಗೆ ಜುಲೈ ತಿಂಗಳು ಹೇಗಿರಲಿದೆ? ನಿಮ್ಮ ವೃತ್ತಿ ಜೀವನ, ಕುಟುಂಬ ಜೀವನ, ಆರ್ಥಿಕ, ಆರೋಗ್ಯ ಭವಿಷ್ಯ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಗುರು ನಿಮ್ಮ 11ನೇ ಮನೆಯಲ್ಲಿ ಇರುವುದರಿಂದ ಹಣದ ಸ್ಥಿತಿ ಚೆನ್ನಾಗಿರಲಿದೆ. ಹನ್ನೊಂದನೇ ಮನೆಯಲ್ಲಿ ರಾಹು ಕೂಡ ಇರುತ್ತಾನೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ನೀವು ಹಠಾತ್ ಹಣದ ಲಾಭವನ್ನು ಪಡೆಯುವ ಸಾಧ್ಯತೆಯಿದೆ. 6 ನೇ ಮನೆಯ ಅಧಿಪತಿಯಾದ ಮಂಗಳನು ನಿಮ್ಮ 3 ನೇ ಮನೆಯಲ್ಲಿರುತ್ತಾನೆ, ಈ ತಿಂಗಳಿನಲ್ಲಿ ನೀವು ದೀರ್ಘ ಪ್ರಯಾಣ ಮಾಡುತ್ತೀರಿ.
ಜುಲೈ ತಿಂಗಳು ನಿಮಗೆ ಹೇಗಿರುತ್ತದೆ, ಈ ತಿಂಗಳು ಕುಟುಂಬ, ವೃತ್ತಿ, ಆರೋಗ್ಯ, ಪ್ರೀತಿ ಜೀವನದ ಮೇಲೆ ಗ್ರಹಗಳ ಸ್ಥಾನವೂ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ ಬನ್ನಿ:

ವೃತ್ತಿ ಜೀವನ
ಶನಿಯು ನಿಮ್ಮ ಒಂಬತ್ತನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿದೆ, ಆದರೂ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಆದರೆ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ.
ಗುರು ಹನ್ನೊಂದನೇ ಮನೆಯಲ್ಲಿ ಇರುವುದರಿಂದ ಮಿಥುನ ರಾಶಿಯವರು ಹೊಸ ಉದ್ಯೋಗಾವಕಾಶಗಳು ದೊರೆಯಲಿದೆ. ಅಲ್ಲದೆ ಕೆಲವರು ಬಡ್ತಿ ಪಡೆಯುತ್ತಾರೆ. ಈ ತಿಂಗಳಲ್ಲಿ ವಿದೇಶಕ್ಕೆ ಹೋಗಿ ಉದ್ಯೋಗ ಪಡೆಯುವ ಅವಕಾಶಗಳನ್ನು ಪಡೆಯಬಹುದು. ರಾಹು ಮತ್ತು ಗುರುಗಳ ಉಪಸ್ಥಿತಿಯಿಂದಾಗಿ, ನಿಮಗೆ ವೃತ್ತಿ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಸಿಗಲಿದೆ. ನಿಮ್ಮ ಕೌಶಲ್ಯಕ್ಕೆ ಅನುಗುಣವಾಗಿ ನಿಮಗೆ ಅವಕಾಶಗಳು ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಕಾರ್ಯಕ್ಷಮತೆ ತುಂಬಾ ಉತ್ತಮವಾಗಿರುತ್ತದೆ.
ವ್ಯಾಪಾರಸ್ಥರು ಈ ತಿಂಗಳಿನಲ್ಲಿ ಲಾಭ ಗಳಿಸುತ್ತಾರೆ, ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರೂ ಲಾಭವನ್ನು ಪಡೆಯಬಹುದು. ಈ ತಿಂಗಳಲ್ಲಿ ನಿಮ್ಮ ಕೌಶಲ್ಯದ ಬಲದಿಂದ ನಿಮ್ಮ ಸ್ಪರ್ಧಿಗಳನ್ನು ಗೆಲ್ಲಲು ನಿಮಗೆ ಸಾಧ್ಯವಾವುದು. ಹೊಸ ಕ್ಷೇತ್ರಗಳಲ್ಲಿ ವ್ಯಾಪಾರ ಮಾಡಲು ಅವಕಾಶಗಳಿವೆ, ಅದರಲ್ಲಿ ಲಾಭ ಕೂಡ ದೊರೆಯಲಿದೆ.
ಆರ್ಥಿಕ ಸ್ಥಿತಿ
ಆರ್ಥಿಕ ಸ್ಥಿತಿಯ ಬಗ್ಗೆ ಹೇಳುವುದಾದರೆ ಗುರುವಿನ ಸ್ಥಾನದಿಂದಾಗಿ ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಈ ತಿಂಗಳು ಗುರುವಿನ ಅನುಕೂಲಕರ ಸ್ಥಾನದಿಂದಾಗಿ, ನೀವು ಬಹಳಷ್ಟು ಹಣವನ್ನು ಗಳಿಸಲು ಸಾಧ್ಯವಾಗುವುದು, ಈ ಅವಧಿಯಲ್ಲಿ ಉಲಿತಾಯ ಮಾಡಲು ಸಾಧ್ಯವಾಗುವುದು. ಹನ್ನೊಂದನೇ ಮನೆಯಲ್ಲಿ ರಾಹುವಿನ ಉಪಸ್ಥಿತಿಯಿಂದಾಗಿ ಅನಿರೀಕ್ಷಿತ ಹಣದ ಲಾಭ ಉಂಟಾಗಲಿದೆ. ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡವರಿಗೆ ಈ ತಿಂಗಳು ಲಾಭದಾಯಕವಾಗಿದೆ. ರಾಹುವಿನ ಅನುಕೂಲಕರ ಸ್ಥಾನದಿಂದ ಹಣವನ್ನು ಉಳಿಸಲು ಸಾಧ್ಯವಾಗುವುದು. ವ್ಯಾಪಾರ ಕ್ಷೇತ್ರದಲ್ಲಿ ಇರುವವರಿಗೆ ಈ ತಿಂಗಳು ಫಲಪ್ರದವಾಗಲಿದೆ. ಹನ್ನೊಂದನೇ ಮನೆಯಲ್ಲಿ ಗುರು ಮತ್ತು ರಾಹುಗಳ ಸಂಯೋಜನೆಯಿಂದಾಗಿ ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು.
ಆರೋಗ್ಯ
ಮಿಥುನ ರಾಶಿಯವರ ಜುಲೈ ತಿಂಗಳ ಆರೋಗ್ಯ ಭವಿಷ್ಯ ನೋಡುವುದಾರೆ ನಿಮ್ಮ ಆರೋಗ್ಯವು ಈ ತಿಂಗಳು ತುಂಬಾ ಉತ್ತಮವಾಗಿರುತ್ತದೆ. ಐದನೇ ಮನೆಯಲ್ಲಿ ಕೇತು ಇರುವುದರಿಂದ, ಸ್ಥಳೀಯರ ಮನಸ್ಸಿನಲ್ಲಿ ಅಭದ್ರತೆಯ ಭಾವನೆ ಉಂಟಾಗುತ್ತದೆ.ಮತ್ತೊಂದೆಡೆ, ಹನ್ನೊಂದನೇ ಮನೆಯಲ್ಲಿ ರಾಹು ಸ್ಥಾನವು ಕೂಡ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ.
ಪ್ರೀತಿ ಮತ್ತು ಮದುವೆ
ಜುಲೈ ಮಾಸಿಕ ಜಾತಕ 2023 ರ ಪ್ರಕಾರ, ಗುರು ಮತ್ತು ರಾಹು ಹನ್ನೊಂದನೇ ಮನೆಯಲ್ಲಿ ಒಟ್ಟಿಗೆ ಇದ್ದಾರೆ ಇದರ ಪರಿಣಾಮವಾಗಿ ಪ್ರೇಮಿಗಳಿಗೆ, ವಿವಾಹಿತರಿಗೆ ಈ ಅವಧಿ ಅನುಕೂಕರವಾಗಿದೆ. ಗ್ರಹಗಳ ಈ ಸ್ಥಾನದಿಂದಾಗಿ ಕುಟುಂಬದಲ್ಲಿ ಪ್ರೀತಿ, ಸಂತೋಷ ಇರಲಿದೆ. ಕುಟುಂಬ ಸದಸ್ಯರಲ್ಲಿ ಉತ್ತಮ ಸಾಮರಸ್ಯ ಇರಲಿದೆ.
ಪರಿಹಾರ
"ಓಂ ನಮೋ ಭಗವತೇ ವಾಸುದೇವಾಯ" ಎಂಬ ಮಂತ್ರವನ್ನು ಪ್ರತಿದಿನ 41 ಬಾರಿ ಜಪಿಸಿ.
ಪ್ರತಿದಿನ 11 ಬಾರಿ "ಓಂ ಬುಧಾಯ ನಮಃ" ಜಪಿಸಿ.
ಶನಿದೇವನನ್ನು ಮೆಚ್ಚಿಸಲು, ಶನಿವಾರ ಹವನ ಮಾಡಿ.



Click it and Unblock the Notifications