Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
191 ಹುಟ್ಟುಹಬ್ಬ ಆಚರಿಸಿದ ಆಮೆ: ಈ ಭೂಮಿಯಲ್ಲಿರುವ ಪ್ರಾಣಿಗಳಲ್ಲಿಯೇ ಅತ್ಯಂತ ವಯಸ್ಸಾದ ಪ್ರಾಣಿಯಿದು
ಮನುಷ್ಯನ ಸ್ವಾರ್ಥದಿಂದಾಗಿ ಎಷ್ಟೋ ಜೀವಿಗಳು ಅದರ ಆಯುಸ್ಸು ತುಂಬುವುದಕ್ಕೆ ಮೊದಲೇ ಸಾವನ್ನಪ್ಪುತ್ತದೆ, ಆದರೆ ಕೆಲವೊಂದು ಪ್ರಾಣಿಗಳು ತುಂಬಾ ಕಾಲ ಬದುಕುತ್ತವೆ, ಅದಕ್ಕೆ ಸಾಕ್ಷಿ ಜೋನಾಥಾನ್ ಎಂಬ ಆಮೆ. ಆ ಆಮೆಗೆ ಈ ತಿಂಗಳಿನಲ್ಲಿ 191ನೇ ವರ್ಷದ ಹುಟ್ಟುಹಬ್ಬ ಮಾಡಲಾಯಿತು.
ವಿಶ್ವದಲ್ಲಿಯೇ ಅತೀ ಹೆಚ್ಚು ಕಾಲ ಬದುಕಿರುವ ಪ್ರಾಣಿ
ಈ ಆಮೆ ವಿಶ್ವದಲ್ಲಿಯೇ ಅತೀ ಹೆಚ್ಚು ಕಾಲ ಬದುಕಿರುವ ಪ್ರಾಣಿ ಎಂದು ಗುರುತಿಸಿಕೊಂಡಿದೆ. ಜನರು ಈ ಆಮೆಯ ಹುಟ್ಟುಹಬ್ಬವನ್ನು ತುಂಬಾ ಸುಂದರವಾಗಿ ಆಚರಿಸಿದ್ದಾರೆ.

ವರದಿಗಳ ಪ್ರಕಾರ ಜೋನಾಥಾನ್ 1832ಕ್ಕೆ ಮುನ್ನ ಜನಿಸಿದೆ ಎಂದು ಹೇಳಲಾಗುತ್ತಿದೆ, 50 ವರ್ಷಗಳ ನಂತರ ಸೇಂಟ್ ಹೆಲೆನಾ ಸ್ಥಳಕ್ಕೆ ತರಲಾಯಿತು. 2022ರಲ್ಲಿ ಬ್ರಿಟನ್‌ನ ಗರ್ವನರ್ ನಿಗೆಲ್ ಫಿಲಿಪ್ಸ್ ಈ ಆಮೆಯು ಡಿಸೆಂಬರ್ 4, 1832ಕ್ಕೆ ಜನಿಸಿದೆ ಎಂದು ಅಧಿಕೃತವಾಗಿ ಹೇಳಿದರು, ಅಲ್ಲಿಂದ ಡಿಸೆಂಬರ್ 4ಕ್ಕೆ ಇದರ ಹುಟ್ಟುಹಬ್ಬವನ್ನು ಆಚರಿಸಲಾಗುವುದು. ಆ ಲೆಕ್ಕಚಾರದ ಪ್ರಕಾರ ಈ ಆಮೆಗೆ ಈಗ 191 ವರ್ಷ.
ಜನರಲ್ಲಿ ಅಚ್ಚರಿ ಮೂಡಿಸಿದ ಜೋನಾಥಾನ್ ವಯಸ್ಸು
ಈ ಆಮೆಯ ವಯಸ್ಸು ಕೇಳಿ ಜನರು ಅಚ್ಚರಿ ಪಡುತ್ತಿದ್ದಾರೆ. ಒಂದು ಆಮೆ ಇಷ್ಟೊಂದು ವರ್ಷ ಬದುಕಬಹುದೇ ಎಂಬ ಅಚ್ಚರಿ ಜನರಿಗಾಗಿದೆ. ಈ ಆಮೆ ಈ ಜಗತ್ತಿನಲ್ಲಿ ಆದ ಅನೇಕ ಬದಲಾವಣೆಗಳ ನಡುವೆ ಈ ಆಮೆ ಬದುಕಿದೆ, 191 ವರ್ಷ ಎಂಬುವುದು ಕಡಿಮೆ ಅಲ್ವೇ ಅಲ್ಲ.
ಜೋನಾಥಾನ್‌ನಲ್ಲಿ ವಯಸ್ಸಾದ ಲಕ್ಷಣಗಳು ಕಂಡು ಬಂದಿಲ್ಲ ಎನ್ನುತ್ತಾರೆ ಅದನ್ನು ತುಂಬಾ ವರ್ಷಗಳಿಂದ ನೋಡಿಕೊಳ್ಳುತ್ತಿರುವ ಪಶು ವೈದ್ಯೆ
ಈ ಆಮೆಯ ವಾಸನೆಯ ಸಾಮರ್ಥ್ಯ ಕಡಿಮೆಯಾಗಿದೆ, ಕಣ್ಣುಗಳು ಸ್ವಲ್ಪ ಕಾಣಿಸುತ್ತಿಲ್ಲ, ಅದು ಬಿಟ್ಟು ಮತ್ತೇನೂ ಸಮಸ್ಯೆಯಿಲ್ಲ, ಚೆನ್ನಾಗಿಯೇ ಆಹಾರ ಸೇವಿಸುತ್ತಿದೆ ಎಂದು ಹೇಳಿದ್ದಾರೆ. ಈ ಆಮೆಗೆ ಪೋಷಕಾಂಶಗಳ ಆಹಾರವನ್ನು ನಿಡಲಾಗುವುದು, ಇದರ ಆರೈಕೆ ಕಡೆಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ. ಈ ಆಮೆ 2 ಶತಕಗಳನ್ನು ನೋಡುವಂತಾಗಲಿ ಅಲ್ವೇ?



Click it and Unblock the Notifications
