Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಕ್ಯಾನ್ಸರ್ ಪೀಡಿತ ಶಿಕ್ಷಕನಿಗೆ 400 ವಿದ್ಯಾರ್ಥಿಗಳ ಹೃದಯಸ್ಪರ್ಶಿ ಕೃತಜ್ಞತೆ: ವೀಡಿಯೋ ವೈರಲ್
ಇಂಟರ್‌ನೆಟ್ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸುವ ವೀಡಿಯೋ ವೈರಲ್ ಆಗುತ್ತಿದೆ. ತಮ್ಮ ನೆಚ್ಚಿನ ಸಾವಿನ ದವಡೆಯಲ್ಲಿರುವ ಶಿಕ್ಷಕನಿಗೆ 400 ವಿದ್ಯಾರ್ಥಿಗಳು ಹಾಡಿನ ಮೂಲಕ ಕೃತಜ್ಞತೆ ಹೇಳಿರುವ ಹಾಡು ಇಂಟರ್‌ನೆಟ್‌ನಲ್ಲಿ ತುಂಬಾನೇ ಗಮನ ಸೆಳೆದಿದೆ.
ಕ್ಯಾನ್ಸರ್ ಎಂಬುವುದು ಮಹಾಮಾರಿ, ಇದರ ಕರಾಳ ಬಂಧನದಲ್ಲಿ ಸಿಲುಕಿದರೆ ಬದುಕಿಳಿಯುವವರು ಕೆಲವೇ ಕೆಲವು ಮಂದಿಯಷ್ಟೇ. ಈ ಶಿಕ್ಷಕನಿಗೆ ಅನ್ನನಾಳದ ಕ್ಯಾನ್ಸರ್ ಬಂದಿತ್ತು. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ತಮ್ಮ ಶಿಕ್ಷಕನಿಗೆ ಹಾಡು ಹೇಳುವ ಮೂಲಕ ತಮ್ಮ ಶಿಕ್ಷಕನಿಗೆ ಕೃತಜ್ಞತೆ ಸಲ್ಲಿಸಿದರು, ಇದನ್ನು ನೀಡಿ ಆ ಶಿಕ್ಷಕನಿಗೆ ಖಂಡಿತ ಬದುಕು ಸಾರ್ಥಕವಾಯಿತು ಎಂದು ಅನಿಸಿರಬಹುದು. ಇಂಥ ಹೃದಯಸ್ಪರ್ಶಿ ಕ್ಷಣದ ವೀಡಿಯೋ ಇದೀಘ ಎಲ್ಲಡೆ ವೈರಲ್ ಆಗುತ್ತಿದೆ.

ಬೆನ್ ಎಲಿಸ್ ಇವರು Christ Presbyterian ಅಕಾಡೆಮಿಯಲ್ಲಿ ಲ್ಯಾಟಿನ್ ಭಾಷೆ ಬೋಧಿಸುವ ಶಿಕ್ಷಕರಾಗಿದ್ದರು. ಅವರು ಅನ್ನನಾಳದ ಕ್ಯಾನ್ಸರ್ ಬಂದ ವಿಷಯ ಅವರ ವಿದ್ಯಾರ್ಥಿಗಳಿಗೆ ಗೊತ್ತಾಯ್ತು, 400 ವಿದ್ಯಾರ್ಥಿಗಳು ಅವರ ಮನೆಗೆ ಬಂದು ಎಲ್ಲರೂ ಹಾಡು ಹೇಳುತ್ತಾರೆ. ಆ ದೃಶ್ಯವನ್ನು ಎಲಿಸ್ ತಮ್ ಕಿಟಕಿಗಳ ಮೂಲಕ ವೀಕ್ಷಿಸುತ್ತಾರೆ. ಶಾಲೆಯ ಪ್ರಿನ್ಸಿಪಾಲ್ ಕೂಡ ಮಕ್ಕಳ ಜೊತೆಗೆ ಭಾಗವಹಿಸಿದ್ದರು.
ಶಾಲೆಯ ಪ್ರಿನ್ಸಿಪಾಲ್ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು, ಪೋಷಕರು ಕೂಡ ಇದಕ್ಕೆ ಅನುಮತಿ ನೀಡಿದ್ದರು. ವಿದ್ಯಾರ್ಥಿಗಳು ಪೋಷಕರ ಈ ಸಪೋರ್ಟ್‌ಗೆ ಎಲ್ಸ್ ತಂದೆ ಕೃತಜ್ಞತೆ ಸಲ್ಲಿಸಿದ್ದಾರೆ.
400 students gather outside the home of their cancer-stricken teacher to sing for him. He passed away 10 days later pic.twitter.com/raYmpK1196
— Historic Vids (@historyinmemes) January 18, 2024
ಯಾವಾಗ ಸಾಯುತ್ತೇವೆ ಎಂದು ಯಾರಿಗೂ ಗೊತ್ತಿರುವುದಿಲ್ಲ, ಆದರೆ ಕ್ಯಾನ್ಸರ್ ಎಂಬ ಮಹಾಮಾರಿ ಬಂದರೆ ಸಾವಿನ ನೆರಳು ಹಿಂಬಾಲಿಸುತ್ತಲೇ ಇರುತ್ತದೆ, ಈ ಅನುಭವವೇ ಭಯಾನಕ, ಈ ಸಮಯದಲ್ಲಿ ಆ ರೋಗಿಗಳಿಗೆ ಬರೀ ಚಿಕಿತ್ಸೆ ನೀಡಿದರೆ ಅವರಿಗೆ ಮಾನಸಿಕ ಬೆಂಬಲ ನೀಡಬೇಕಾಗುತ್ತದೆ, ಅವರ ಸುತ್ತ ಇರುವವರು ಅವರನ್ನು ಖುಷಿಯಾಗಿ ಇಟ್ಟುಕೊಳ್ಳಲು ನೋಡಬೇಕು. ಈ ವಿದ್ಯಾರ್ಥಿಗಳು ತಮ್ಮ ಶಿಕ್ಷಕನ ಖುಷಿಗಾಗಿ ಮಾಡಿದ ಈ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಮತ್ತೊಂದು ಹೃದಯಸ್ಪರ್ಶಿ ವೀಡಿಯೋ
ಆ ವೀಡಿಯೋ ಕೂಡ ಮನಸ್ಸಿಗೆ ತುಂಬಾನೇ ನೋವಾಗುತ್ತೆ, ಆದರೆ ಆ ಬಾರ್ಬರ್‌ನ ಕಾರ್ಯ ನೋಡಿ ಹೆಮ್ಮೆ ಅನಿಸುತ್ತೆ. ಕ್ಯಾನ್ಸರ್ ರೋಗಿಯೊಬ್ಬರು ಅವರ ಬಳಿ ತಲೆಯನ್ನು ಬೋಳು ಮಾಡಿಸಲು ಬರುತ್ತಾರೆ. ಆ ರೋಗಿ ಕೂದಲನ್ನು ತೆಗೆಯುವಾಗ ತುಂಬಾನೇ ಅಳುತ್ತಿರುತ್ತಾರೆ, ಇವರಿಗೂ ಅದು ಬೇಸರವಾಗುತ್ತದೆ, ಅವರನ್ನು ಸಮಧಾನಿಸುತ್ತಾರೆ, ನಂತರ ಅವರನ್ನು ಒಂದು ಕೈಯಲ್ಲಿ ಅಪ್ಪಿಕೊಂಡು ಮತ್ತೊಂದು ಕೈಯಲ್ಲಿ ತಮ್ಮ ಕೂದಲಿನ ಮೇಲೆ ಟ್ರಿಮ್ಮರ್ ಇಡುತ್ತಾರೆ, ರೋಗಿ ಸಮಧಾನ ಪಡಿಸಲು ತಮ್ಮ ಕೂದಲನ್ನು ತೆಗೆಯುತ್ತಾರೆ. '
ಕ್ಯಾನ್ಸರ್ ರೋಗಿಗಳಿಗೆ ಬೇಕಾಗಿರುವುದು ಕನಿಕರವಲ್ಲ ಬೆಂಬಲ.



Click it and Unblock the Notifications