Latest Updates
-
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ!
ಗುರು ಪೂರ್ಣಿಮಾ 2023 : ದಿನಾಂಕ, ಪೂಜೆಯ ಮುಹೂರ್ತ ಯಾವಾಗ?
ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನವನ್ನು ಆಷಾಢ ಪೂರ್ಣಿಮಾ, ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎಂತಲೂ ಕರೆಯಲಾಗುತ್ತದೆ. ಈ ದಿನದಿಂದ ಆಷಾಢ ಮಾಸವು ಕೊನೆಗೊಳ್ಳುತ್ತದೆ. ಮತ್ತು ಉತ್ತರ ಭಾರತದಲ್ಲಿ ಶ್ರಾವಣ ಮಾಸ ಶುರುವಾಗುತ್ತದೆ. ಅಂದಹಾಗೆ ಪ್ರತಿ ಹುಣ್ಣಿಮೆಯ ಪುಣ್ಯವು ಫಲಪ್ರದವಾಗಿದೆ.
ಆದರೆ ಗುರುವಿಗೆ ಸಮರ್ಪಿತವಾಗಿರುವ ಗುರು ಪೂರ್ಣಿಮದಂದು ಮಾಡುವ ಪೂಜೆ ಮತ್ತು ಉಪವಾಸವನ್ನು ಬಹಳ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಈ ದಿನ ಶಿಷ್ಯನು ಗುರುವನ್ನು ಪೂಜಿಸುತ್ತಾನೆ. ಮತ್ತು ಅವರಿಂದ ಆಶೀರ್ವಾದವನ್ನು ಪಡೆಯುತ್ತಾರೆ. ಗುರುವು ನಮ್ಮನ್ನು ಅಜ್ಞಾನದ ಕತ್ತಲೆಯಿಂದ ಹೊರತೆಗೆದು ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತಾನೆ.

ಧರ್ಮಗ್ರಂಥಗಳ ಪ್ರಕಾರ ಮಹರ್ಷಿ ವೇದವ್ಯಾಸರು ಈ ದಿನದಂದೇ ಜನಿಸಿದರಂತೆ. ವ್ಯಾಸರಿಗೆ ಮೊದಲ ಗುರು ಎಂಬ ಬಿರುದನ್ನು ಸಹ ನೀಡಲಾಗಿದೆ. ಏಕೆಂದರೆ ಮೊದಲ ಬಾರಿಗೆ ನಾಲ್ಕು ವೇದಗಳ ಜ್ಞಾನವನ್ನು ಮನುಕುಲಕ್ಕೆ ನೀಡಿದ ಗುರುಗಳು ವ್ಯಾಸರು. ಗುರು ತನ್ನ ಜ್ಞಾನದಿಂದ ಶಿಷ್ಯನನ್ನು ಸರಿದಾರಿಯಲ್ಲಿ ಕರೆದುಕೊಂಡು ಹೋಗಿ ದೇವರನ್ನು ಸಂದರ್ಶಿಸುವಂತೆ ಮಾಡುತ್ತಾನೆ. ಹೀಗಾಗಿ ಗುರುಗಳ ಗೌರವಾರ್ಥವಾಗಿ ಈ ಹಬ್ಬವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಅಷ್ಟಕ್ಕು ಗುರು ಪೂರ್ಣಿಮವನ್ನು ಯಾವಾಗ ಆಚರಣೆ ಮಾಡಲಾಗುತ್ತದೆ? ಶುಭ ಮುಹೂರ್ತ, ಪೂಜಾ ವಿಧಾನ ಹಾಗೂ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳೋಣ.
ಗುರು ಪೂರ್ಣಿಮಾ ದಿನಾಂಕ ಮತ್ತು ಶುಭ ಮುಹೂರ್ತ
ಗುರು ಪೂರ್ಣಿಮಾವನ್ನು ಜುಲೈ 2 ರ ರಾತ್ರಿ 8.21 ಕ್ಕೆ ಪ್ರಾರಂಭವಾಗುತ್ತದೆ. ಇದು ಜುಲೈ 3 ರಂದು ಸಂಜೆ 5.08 ಕ್ಕೆ ಕೊನೆಗೊಳ್ಳುತ್ತದೆ. ಸೂರ್ಯ ಉದಯತಿಥಿ ಪ್ರಕಾರ ಗುರು ಪೂರ್ಣಿಮೆಯನ್ನು ಜುಲೈ 3 ರಂದು ಆಚರಿಸಲಾಗುತ್ತದೆ.
ಪೂಜಾ ವಿಧಾನ
ಗುರು ಪೂರ್ಣಿಮೆಯ ದಿನದಂದು ಗುರುಗಳ ಆರಾಧನೆಗೆ ವಿಶೇಷ ಮಹತ್ವವಿದೆ. ಗುರು ಪೂರ್ಣಿಮೆಯಂದು ಬೆಳಿಗ್ಗೆ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿದ ನಂತರ ಮನೆಯ ಪೂಜಾ ಸ್ಥಳದಲ್ಲಿ ಪ್ರತಿಷ್ಠಾಪಿಸಲಾದ ಎಲ್ಲಾ ದೇವತೆಗಳಿಗೆ ಭಕ್ತಿಯಿಂದ ನಮಸ್ಕರಿಸಿ. ಒಂದು ವೇಳೆ ನೀವು ನಿಮ್ಮ ಗುರುವಿನ ಮೂರ್ತಿ ಮಾಡಿದ್ದರೆ, ನೀವು ಅದಕ್ಕೆ ಪೂಜಿಸಿ, ನಿಮ್ಮ ಗುರುಗಳ ಆಶೀರ್ವಾದವನ್ನು ಪಡೆಯಬೇಕು.
ಈ ದಿನ ಗುರುವಿನ ಜೊತೆಗೆ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನೂ ಪೂಜಿಸಲಾಗುತ್ತದೆ. ಅಷ್ಟೇ ಅಲ್ಲ, ಇದರ ಜೊತೆಗೆ ಈ ದಿನ ಗೋವನ್ನು ಪೂಜಿಸಿ ಸೇವೆ ಮಾಡುವುದರಿಂದ ಮತ್ತು ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತಂತೆ. ಮತ್ತು ನಮ್ಮ ಆರೋಗ್ಯ ಕೂಡ ವೃದ್ಧಿಯಾಗುತ್ತಂತೆ. ಇನ್ನೂ ಈ ದಿನ ವೇದಗಳ ಸೃಷ್ಟಿಕರ್ತ ವೇದವ್ಯಾಸರ ಪಾರಾಯಣವನ್ನು ಮಾಡಬೇಕು.
ಮಂತ್ರಗಳು :
ಗುರುರ್ ಬ್ರಹ್ಮ ಗುರುರ್ ವಿಷ್ಣು
ಗುರುರ್ ದೇವೋ ಮಹೇಶ್ವರ
ಗುರು ಸಾಕ್ಷಾತ್ ಪರ ಬ್ರಹ್ಮ
ತಸ್ಮೇ ಶ್ರೀ ಗುರವೇ ನಮಃ
ಗುರುವನ್ನು ಭಕ್ತಿಯಿಂದ ಪೂಜಿಸಿದ್ರೆ ನಿಮ್ಮ ಜೀವನದ ಕತ್ತಲೆ ದೂರವಾಗುತ್ತದೆ. ಸದ್ಗುರುವಿನಿಂದ ಭಗವಂತನ ಸಾಕ್ಷಾತ್ಕಾರ ಸಾಧ್ಯ. ಶಿಕ್ಷಕರನ್ನು ಅಷ್ಟೇ ಅಲ್ಲ, ಅದರ ಜೊತೆಗೆ ತನಗಿಂತ ಹಿರಿಯರಾದವರನ್ನು ಮತ್ತು ತಂದೆ-ತಾಯಿಯನ್ನು ಶಿಕ್ಷಕರೆಂದು ಪರಿಗಣಿಸಿ. ಯಾಕಂದ್ರೆ ಅವರಿಂದ ಕಲಿಯೋದು ಸಾಕಷ್ಟಿದೆ.



Click it and Unblock the Notifications
