Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಗರುಡ ಪುರಾಣ : ಮಹಿಳೆ ಈ ಕೆಲಸಗಳನ್ನು ಮಾಡುವಾಗ ಪುರುಷ ನೋಡಲೇಬಾರದು
ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಗರುಡ ಪುರಾಣದ ಹತ್ತೊಂಬತ್ತು ಪದ್ಯಗಳಲ್ಲಿ ಪಾಪ-ಕರ್ಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಗರುಡ ಪುರಾಣದ ಪ್ರಕಾರ ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಪುರುಷರು ನೋಡಲೇಬಾರದು. ಒಂದು ವೇಳೆ ನೋಡಿದರೆ ಅವರಿಗೆ ನರಕ ಪಾಪ್ತಿಯಾಗುತ್ತಂತೆ. ಹಾಗಾದ್ರೆ ಆ ಕೆಲಸಗಳು ಯಾವುದು ಅನ್ನೋದನ್ನ ಹೇಳ್ತೀವಿ.
ನಾವು ಹಿಂದಿನ ಜನ್ಮದಲ್ಲಿ ಮಾಡಿರೋ ಕೆಲಸಗಳಿಂದ ಮುಂದಿನ ಜನ್ಮದಲ್ಲಿ ನಮಗೆ ಕೆಟ್ಟದ್ದು ಆಗಬಹುದು ಅಥವಾ ಒಳ್ಳೆಯದ್ದು ಆಗಬಹುದು. ಒಳ್ಳೆಯ ಕೆಲಸ ಮಾಡಿದ್ರೆ ಒಳ್ಳೆಯದ್ದನ್ನೇ ಅನುಭವಿಸುತ್ತೇವೆ. ಇನ್ನೂ ಕೆಟ್ಟ ಕೆಲಸ ಮಾಡಿದ್ರೆ ಖಂಡಿತ ಕೆಟ್ಟದಾಗುತ್ತದೆ. ಹಾಗೂ ನರಕದಲ್ಲೂ ನಮಗೆ ಆತ್ಮ ತೃಪ್ತಿ ಅನ್ನೋದು ಇರೋದಿಲ್ಲ.

ವಿಷ್ಣುವು ಗರುಡ ಪುರಾಣವನ್ನು ಗರುಡನಿಗೆ ಹೇಳುತ್ತಿರಬೇಕಾದರೆ ಕೆಲವೊಂದು ವಿಚಾರಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ. ಅದ್ರಲ್ಲೂ ಮಹಿಳೆಯರ ಬಗ್ಗೆ ಕೆಲವೊಂದು ಕೌತುಕದ ಸಂಗತಿಗಳ ಬಗ್ಗೆಯೂ ತಿಳಿಸಲಾಗಿದೆ. ಮಹಿಳೆಯರು ಈ ಎರಡು ಕೆಲಸಗಳನ್ನು ಮಾಡುವಾಗ ಪುರುಷರು ಅಪ್ಪಿ ತಪ್ಪಿಯೂ ನೋಡಬಾರದಂತೆ. ಒಂದು ಸಾರಿ ತಪ್ಪಿ ನೋಡಿದ್ರು ಕೂಡ ಆತನಿಗೆ ನರಕ ಪ್ರಾಪ್ತಿಯಾಗುವುದನ್ನು ಯಾರಿಂದಲೂ ತಪ್ಪಿಸೋದಕ್ಕೆ ಆಗೋದಿಲ್ವಂತೆ.
1. ಮಗುವಿಗೆ ಹಾಲುಣಿಸುವಾಗ
ಗರುಡ ಪುರಾಣದ ಪ್ರಕಾರ ಮಹಿಳೆಯರು ಮಗುವಿಗೆ ಹಾಲುಣಿಸುವಾಗ ಪುರುಷರು ನೋಡಬಾರದಂತೆ. ಸಾಮಾನ್ಯವಾಗಿ ಮಗು ಹಾಲು ಕುಡಿಯುವಾಗ ಮುಗ್ಧತೆಯಿಂದಿರುತ್ತೆ ಹಾಗೂ ಹಾಲು ಕುಡಿಯುವುದರಲ್ಲೇ ತಲ್ಲೀನವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಯಾವುದಾದರೂ ಪುರುಷ ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ ಆತನಿಗೆ ಖಂಡಿತ ಪಾಪ ಪ್ರಾಪ್ತಿಯಾಗುತ್ತದೆ. ಇಂತಹ ನಾಚಿಕೆಯಿಲ್ಲದ ಮನುಷ್ಯನ ನರಕದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾನಂತೆ.
2. ಮಹಿಳೆ ಸ್ನಾನ ಮಾಡುವಾಗ
ಗರುಡ ಪುರಾಣದ ಪ್ರಕಾರ ಮಹಿಳೆ ಸ್ನಾನ ಮಾಡುವಾಗ ಪರ ಪುರುಷ ಕೆಟ್ಟ ದೃಷ್ಟಿಯಿಂದ ನೋಡುವುದು ಮಹಾ ಪಾಪ. ಇಂತಹ ಕೆಟ್ಟ ಮನಸ್ಥಿತಿ ಇರುವ ಪುರುಷ ಸತ್ತ ನಂತರ ನೇರವಾಗಿ ನರಕಕ್ಕೆ ಹೋಗುತ್ತಾನಂತೆ. ಇಲ್ಲಿ ಆತನಿಗೆ ಚಿತ್ರ ಹಿಂಸೆಯನ್ನು ನೀಡಲಾಗುತ್ತಂತೆ. ಹೀಗಾಗಿ ಮಹಿಳೆಯರ ಮೇಲೆ ಪುರುಷರು ಗೌರವವನ್ನು ಕಾಪಾಡುವುದು ತುಂಬಾನೇ ಮುಖ್ಯ.
ಪಾಪ-ಕರ್ಮಗಳ ಲೆಕ್ಕ ಚುಕ್ತಾ ಮಾಡೋದ್ಹೇಗೆ?
ಗರುಡ ಪುರಾಣದ ಪ್ರಕಾರ ಯಾರು ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೋ ? ಅವರಿಗೆ ಪಾಪ ಪ್ರಾಪ್ತಿಯಾಗುತ್ತಂತೆ. ಹಾಗೂ ಅಂತವರು ದೀರ್ಘಕಾಲದವರೆಗೂ ನರಕದಲ್ಲೇ ಕಳೆಯಬೇಕಾಗುತ್ತದೆ. ಪಾಪಗಳ ಪಟ್ಟಿ ಅಧಿಕವಾಗಿದ್ರೆ ಸತ್ತ ಮೇಲೂ ಅಂತವರು ನಿರಂತರವಾಗಿ ದು:ಖ, ನೋವನ್ನೇ ಅನುಭವಿಸಬೇಕಾಗುತ್ತದೆ. ಇನ್ನೂ ನರಕದಲ್ಲಿ ಯಮಧೂತರು ಚಿತ್ರಹಿಂಸೆ ನೀಡುತ್ತಾರೆ. ಗರುಡ ಪುರಾಣ ಪ್ರಕಾರ ಸಾವಿನ ನಂತರ ಯಮಧೂತರು ಆತ್ಮವನ್ನು ಚಿತ್ರ ಗುಪ್ತನಿದ್ದಲ್ಲಿಗೆ ತೆಗೆದುಕೊಂಡು ಹೋಗುತ್ತಾರೆ. ನೀವು ಮಾಡಿದ ಒಳ್ಳೆಯ ಹಾಗೂ ಕೆಟ್ಟ ಕೆಲಸಕ್ಕೆ ಅನುಗುಣವಾಗಿ ನಿಮಗೆ ಸ್ವರ್ಗ ಹಾಗೂ ನರಕ ಪ್ರಾಪ್ತಿಯಾಗುತ್ತಾ ಅನ್ನೋದನ್ನ ನಿರ್ಧರಿಸಲಾಗುತ್ತದೆ. ಒಂದು ವೇಳೆ ನರಕ ಪ್ರಾಪ್ತಿಯಾದರೆ ಅಲ್ಲಿ ನಿಮ್ಮನ್ನು ಉರಿಯುತ್ತಿರುವ ಬೆಂಕಿಯ ಹತ್ತಿರ ದೈತ್ಯ ಶಾಲ್ಮಲಿ ಮರಕ್ಕೆ ಕಟ್ಟಲಾಗುತ್ತದೆ. ನಂತರ ಯಮಧೂತರು ಹಿಂಸೆ ನೀಡಲು ಶುರು ಮಾಡುತ್ತಾರೆ ಅನ್ನೋ ನಂಬಿಕೆಯಿದೆ.
ಮಹಿಳೆಯರಿಗೆ ಗೌರವ ಸಲ್ಲಿಸೋದು ಪುರುಷನಾದ ಕರ್ತವ್ಯ. ಅದೇ ರೀತಿ ಆಕೆಯ ಮರ್ಯಾದಿ ಕಾಪಾಡುವುದು ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications



