Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆರ್ಥಿಕ ಸಂಕಷ್ಟ ದೂರಾಗಲು ಶುಕ್ರವಾರ ಲಕ್ಷ್ಮಿಗೆ ಈ ಪರಿಹಾರ ಮಾಡಿ
ಲಕ್ಷ್ಮಿಯ ಆರಾಧನೆಗೆ ಶುಕ್ರವಾರ ಶ್ರೇಷ್ಠ ದಿನ. ಈ ದಿನ ಭಕ್ತಿಯಿಂದ ಲಕ್ಷ್ಮಿಯನ್ನು ಆರಾಧನೆ ಮಾಡಿದರೆ ಲಕ್ಷ್ಮಿ ಕೃಪೆಯಿಂದ ದಾರಿದ್ರ್ಯ, ಆರ್ಥಿಕ ಸಂಕಷ್ಟ ದೂರಾಗುವುದು. ಅದರಲ್ಲೂ ಸರಿಯಾದ ಪೂಜಾ ವಿಧಿಗಳಿಂದ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು. ಶುಕ್ರವಾರ ಏನು ಮಾಡಬೇಕು, ಈ ದಿನ ಏನು ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಶುಕ್ರವಾರ ಮಹಾಲಕ್ಷ್ಮಿ ಪೂಜಾ ವಿಧಿ
ನೀವು ಲಕ್ಷ್ಮಿ ಪೂಜೆಗೆ ಎಲ್ಲಾ ಸಾಮಗ್ರಿ ಮೊದಲೇ ಜೋಡಿಸಿ. ಮನೆ ಸ್ವಚ್ಛವಾಗಿರುವ ಕಡೆ ಲಕ್ಷ್ಮಿ ನೆಲೆಸಿರುತ್ತಾಳೆ ಎಂದ ನಂಬಿಕೆಯಿದೆ, ಆದ್ದರಿಂದ ಮನೆಯ ದೂಳು ತೆಗೆದು ಮನೆಯನ್ನು ಸ್ವಚ್ಛವಾಗಿಡಿ. ಬೆಳಗ್ಗೆ ಎದ್ದು ಸ್ನಾನ ಮಾಡಿ ಮನೆಮುಂದೆ ಹಾಗೂ ದೇವರ ಕೋಣೆಯಲ್ಲಿ ರಂಗೋಲಿ ಹಾಕಿ.
* ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋವನ್ನು ಒಂದು ಹಲಗೆಯ ಮೇಲೆ ಕೆಂಪು ಬಟ್ಟೆ ಹಾಸಿ ಅದರ ಮೇಲೆ ಇಡಿ.
* ದೇವಿಗೆ ಆಭರಣಗಳನ್ನು ತೊಡಿಸಿ ಅಲಂಕರಿಸಿ.
* ದೇವಿಯ ಮುಂದೆ ನೀರು ತುಂಬಿದ ಕಳಸ ಇಡಿ. ಕಳದಲ್ಲಿ ನಾಣ್ಯಗಳನ್ನು ಹಾಕಿರಿ.
* ಪೂಜೆಯ ನಂತರ ಲಕ್ಷ್ಮಿ ದೇವಿಯ ಮಂತ್ರ ಹೇಳುತ್ತಾ ಪ್ರಸಾದವನ್ನು ಅರ್ಪಿಸಿ.
* ನಂತರ ಆರತಿ ಬೆಳಗಿ
* ನೆರೆದವರಿಗೆ ಪ್ರಸಾದವನ್ನು ಹಂಚಿ.
ಶುಕ್ರವಾರ ಈ ಮಂತ್ರಗಳನ್ನು ಪಠಿಸಿ
* ಈ ದಿನ ಶ್ರೀ ಲಕ್ಷ್ಮಿ ಸ್ತೋತ್ರ ಪಠಿಸಿ. ಶ್ರೀ ಸುಕ್ತ ಅಥವಾ ಕನಕಾಧಾರ ಸ್ತೋತ್ರ ಪಠಿಸಿ. ಇದರಿಂದ ಸಂಪತ್ತು ವೃದ್ಧಿಸುವುದು.
* ಕೆಂಪು ಹೂಗಳನ್ನು ಲಕ್ಷ್ಮಿಗೆ ಅರ್ಪಿಸಿ. ಈ ದಿನ ದೇವಿಗೆ ಕೆಂಪು ಗುಲಾಬಿ ಅಥವಾ ಇತರ ಹೂಗಳನ್ನು ಅರ್ಪಿಸಿ.
* ನೀವು 4 ಕರ್ಪೂರ ಹಾಗೂ ಆರತಿಗೆ 2 ಲವಂಗ ಹಾಕಿ ಆರತಿ ಬೆಳಗಿ
ಶ್ರೀ ಲಕ್ಷ್ಮಿ ಮಂತ್ರ ಪಠಿಸಿ
"ಓಂ ಶ್ರಿಂಗ್ ಶ್ರಿಯೆ ನಮಃ"
"ಓಂ ಶ್ರೀಂ ಮಹಾ ಲಕ್ಷ್ಮೀಯೇ ನಮಃ".
"ಓಂ ಹ್ರೀಂ ಶ್ರೀಂ ಕ್ಲೀಂ ಮಹಾ ಲಕ್ಷ್ಮಿ ನಮಃ".
ಈ ವಸ್ತುಗಳನ್ನು ದಾನ ಮಾಡಿ
* ಶುಕ್ರವಾರ ಬಿಳಿ ಸಿಹಿ ಪದಾರ್ಥಗಳನ್ನು ದಾನ ಮಾಡಿ
* ಚಿಕ್ಕ ಹುಡುಗಿಯರಿಗೆ ಉಡುಗೊರೆ, ಹಣ್ಣುಗಳನ್ನು ನೀಡಿ
ನೀವು ನಿಯಮಿತವಾಗಿ 21 ವಾರಗಳವರೆಗೆ ನೀವು ಶ್ರೀ ಲಕ್ಷ್ಮಿಯನ್ನು ಈ ರೀತಿ ಪೂಜೆ ಸಲ್ಲಿಸಿದರೆ ನೀವು ಬಯಸಿದ ಫಲ ಸಿಗುವುದು.



Click it and Unblock the Notifications
