Latest Updates
-
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ
ಈ 5 ರಾಶಿಯವರು ಸರಳತೆಗೆ ಹೆಸರುವಾಸಿಯಾಗಿದ್ದಾರೆ!
ಅಂದ ಅನ್ನೋದು ದೇವರು ಕೊಟ್ಟ ಉಡುಗೊರೆ ಇದ್ದ ಹಾಗೆ. ಇದ್ರಲ್ಲಿ ಎರಡು ವಿಧಗಳಿದ್ದು ಒಂದು ಬಾಹ್ಯ ಸೌಂದರ್ಯ ಮತ್ತೊಂದು ಆಂತರಿಕ ಸೌಂದರ್ಯ. ಬಹುಶಃ ದುಡ್ಡಿದ್ರೆ ಬಾಹ್ಯ ಸೌಂದರ್ಯವನ್ನು ಸಂಪಾದಿಸೋದು ಸುಲಭ. ಇತ್ತೀಚಿನ ಕಾಲದಲ್ಲಿ ಜನ ಪಾಸ್ಟಿಕ್ ಸರ್ಜರಿಗಳಂತಹ ಪ್ರಯೋಗಾತ್ಮಕ ಚಿಕಿತ್ಸೆಗಳನ್ನು ಮಾಡಿಸಿಕೊಂಡು ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಆದರೆ ಆಂತರಿಕ ಸೌಂದರ್ಯ ಎಲ್ಲರಲ್ಲೂ ಇರೋದಿಲ್ಲ. ಅದ್ರಲ್ಲೂ ಕೆಲವು ಜನ ನೈಸರ್ಗಿಕವಾಗಿ ಸೌಂದರ್ಯಯುತವಾಗಿದ್ದರೂ ಕೂಡ ತುಂಬಾನೇ ಸರಳವಾಗಿರುತ್ತಾರೆ. ಅವರ ಆಂತರಿಕ ಮನಸ್ಸು ಸುಂದರವಾಗಿರುತ್ತಂತೆ. ಆ 5 ರಾಶಿಯವರಲ್ಲಿ ಅಂತಹ ಗುಣವಿದೆ. ಅಷ್ಟಕ್ಕು ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ವೃಷಭ ರಾಶಿ
ವೃಷಭ ರಾಶಿಯವರು ಹೃದಯವಂತಿಕೆಯನ್ನು ಹೊಂದಿದ್ದಾರಂತೆ. ಇವರಲ್ಲಿ ಮೌಲ್ಯಯುತ ಸಂಸ್ಕಾರವಿರುತ್ತಂತೆ. ಇವರು ಯಾರೊಂದಿಗೂ ಸುಖಾ ಸುಮ್ಮನೇ ಜಗಳವಾಡೋದಕ್ಕೆ ಹೋಗೋದಿಲ್ಲ. ಈ ರಾಶಿಯವರು ಶಾಂತಿಯಿಂದ ಜೀವನ ನಡೆಸೋದಕ್ಕೆ ಮೊದಲ ಆಧ್ಯತೆಯನ್ನು ನೀಡುತ್ತಾರೆ. ಮತ್ತೊಬ್ಬರ ಸಂತೋಷದಲ್ಲಿ ಇವರು ಸಂತೋಷವನ್ನು ಕಾಣುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಹಿಳೆಯರು ಸರಳ ಸ್ವಭಾವದವರು. ಇವರು ಮಾಡುವ ಕೆಲಸದಲ್ಲಿ ಸ್ಪಷ್ಟತೆಯನ್ನು ಹೊಂದಿರುತ್ತಾರೆ. ಮತ್ತು ಇವರಿಗೆ ತಮ್ಮ ಮೇಲೆ ನಿಯಂತ್ರಣವಿರುತ್ತದೆ. ಇನ್ನೂ ಸುಂದರವಾಗಿ ಕಾಣಬೇಕು ಅನ್ನೋ ಆ ಆಸೆಯೂ ಇವರಲ್ಲಿ ಇರೋದಿಲ್ಲ. ನೈಸರ್ಗಿಕವಾಗಿ ಇವರು ಸುಂದರವಾಗಿ ಕಾಣುತ್ತಾರೆ. ಸೌಂದರ್ಯವನ್ನು ವೈಭವೀಕರಿಸುವ ಗುಣ ಇವರಲ್ಲಿ ಇರೋದಿಲ್ಲ.
ಮಕರ ರಾಶಿ
ಮಕರ ರಾಶಿಯ ಮಹಿಳೆಯರು ದಕ್ಷತೆ ಮತ್ತು ಸಮಯ ನಿರ್ವಹಣೆಯನ್ನು ಗೌರವಿಸುತ್ತಾರೆ. ಇವರು ಕನಿಷ್ಠ ಜೀವನಶೈಲಿಗೂ ಸಂಪೂರ್ಣವಾಗಿ ಹೊಂದಿಕೊಳ್ಳುವ ಗುಣ ಹೊಂದಿದ್ದಾರೆ. ಇವರು ಮನೆ ಕೆಲಸದಿಂದ ಹಿಡಿದು ವೃತ್ತಿ ಜೀವನದಲ್ಲೂ ಕೂಡ ಪ್ರತಿಯೊಂದು ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿ ಮುಗಿಸುತ್ತಾರೆ. ತಮ್ಮ ಗುರಿಗಳ ಕಡೆಗೆ ಹೆಚ್ಚು ಶ್ರಮ ಪಟ್ಟು ಕೆಲಸ ಮಾಡುವ ವ್ಯಕ್ತಿತ್ವ ಹೊಂದಿದ್ದಾರೆ.
ಕುಂಭ ರಾಶಿ
ಕುಂಭ ರಾಶಿಯ ಮಹಿಳೆಯರು ಸ್ವತಂತ್ರ ಮತ್ತು ಮುಕ್ತ ಮನೋಭಾವವನ್ನು ಹೊಂದಿರುತ್ತಾರೆ. ಈ ರಾಶಿಯ ಮಹಿಳೆಯರು ಸ್ವಯಂ ಅಭಿವ್ಯಕ್ತಿಗೆ ಒಂದು ಸಾಧನವಾಗಿ ಸರಳತೆಯನ್ನು ಸ್ವೀಕರಿಸುತ್ತಾರೆ. ಕುಂಭ ರಾಶಿಯ ಮಹಿಳೆಯರು ಸಾಮಾನ್ಯವಾಗಿ ಸಣ್ಣ ಮನೆಗಳು ಮತ್ತು ದೊಡ್ಡ ಮನೆಗಳೆಂದು ಬೇಧ-ಭಾವ ಮಾಡೋದಿಲ್ಲ. ಯಾವುದಕ್ಕಾದರೂ ಹೊಂದಿಕೊಂಡು ಹೋಗುವ ಗುಣ ಹೊಂದಿದ್ದಾರೆ.
ಮೀನ ರಾಶಿ
ಮೀನ ರಾಶಿಯವರು ತಮ್ಮ ಭಾವನೆಗಳ ಜೊತೆಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ. ಮತ್ತು ತಮ್ಮ ಜೀವನದಲ್ಲಿ ಇವರು ಪ್ರಶಾಂತತೆಯನ್ನು ಬಯಸುತ್ತಾರೆ. ಇವರು ಶಾಂತಿಯುತವಾಗಿರುವ ಗುಣವನ್ನು ಹೊಂದಿದ್ದಾರೆ. ಮತ್ತು ಸರಳ ವ್ಯಕ್ತಿತ್ವದ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಈ ರಾಶಿಯವರು ಸ್ವ ಆರೈಕೆಯ ಒಂದು ರೂಪವಾಗಿ ಸರಳತೆಯನ್ನು ಸ್ವೀಕರಿಸುತ್ತಾರೆ.



Click it and Unblock the Notifications
