Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಪೊರಕೆ ಬಳಸುವಾಗ ಈ ತಪ್ಪುಗಳನ್ನು ಮಾಡಿದ್ರೆ ಲಕ್ಷ್ಮೀ ಮನೆಯಿಂದ ಹೊರಹೋಗುತ್ತಾಳೆ!
ಹಿಂದೂ ಧರ್ಮದಲ್ಲಿ ಪೊರಕೆ ಹಾಗೂ ಲಕ್ಷ್ಮೀ ದೇವಿಗೆ ಒಂದು ರೀತಿಯ ಸಂಬಂಧವಿದೆ. ಯಾವ ಮನೆ ಸ್ವಚ್ಛವಾಗಿ ಇರುತ್ತದೆಯೋ ಆ ಮನೆಯಲ್ಲಿ ಮಾತ್ರ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ. ಲಕ್ಷ್ಮೀ ದೇವಿಯು ಸ್ವಚ್ಛತೆಗೆ ಮಹತ್ವ ನೀಡೋದ್ರಿಂದ ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿರುವ ಸ್ಥಳಗಳಲ್ಲಿ ಮಾತ್ರ ಆಕೆ ವಾಸಿಸುತ್ತಾಳೆ ಎಂದು ನಂಬಲಾಗಿದೆ.

ಎಲ್ಲಿ ಕೊಳಕು, ಅಭದ್ರತೆ, ಸಾಲ, ಕೋಪವನ್ನು ತರುವ ಮತ್ತು ಆರ್ಥಿಕ ನಷ್ಟವನ್ನು ಉಂಟುಮಾಡುವ ಸ್ಥಳಗಳಲ್ಲಿ ಲಕ್ಷ್ಮೀ ದೇವಿಯ ಸಹೋದರಿಯಾದ ಅಲಕ್ಷ್ಮೀಯನ್ನು ಆಹ್ವಾನಿಸುತ್ತಂತೆ. ಸಾಮಾನ್ಯವಾಗಿ ಪೊರಕೆಯನ್ನು ಅಹಂಕಾರ, ದುರಾಸೆ ಮತ್ತು ಕೋಪವನ್ನು ತೊಡೆದುಹಾಕಲು ಬಳಸಲಾಗುತ್ತದೆ. ಅಹಂಕಾರ, ದುರಾಸೆ, ಕ್ರೋಧ ಇವುಗಳನ್ನು ದೂರವಿಟ್ಟಾಗ ಮನುಷ್ಯ ಏಳಿಗೆ ಹೊಂದುತ್ತಾನೆ ಎಂದು ನಂಬಲಾಗಿದೆ.
ಅಷ್ಟಕ್ಕೂ ಪೊರಕೆಯನ್ನು ಬಳಸುವಾಗ ಏನು ಮಾಡಬೇಕು? ಹಾಗೂ ಯಾವ ತಪ್ಪುಗಳನ್ನು ಮಾಡಬಾರದು ಅನ್ನೋದನ್ನು ತಿಳಿಯೋಣ.
ಪೊರಕೆ ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕುತ್ತೆ!
ನಂಬಿಕೆಗಳ ಪ್ರಕಾರ ಪೊರಕೆಯನ್ನು ಎಲ್ಲೆಂದರಲ್ಲಿ ಇಡುವ ಹಾಗಿಲ್ಲ. ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಇಡಬೇಕು. ಅದನ್ನು ಎಲ್ಲರ ಕಣ್ಣಿಗೆ ಕಾಣುವಂತೆ ಇಡಬಾರದು. ಇನ್ನೂ ಸ್ವಚ್ಛಗೊಳಿಸುವ ಸಮಯದಲ್ಲಿ ಮಾತ್ರ ಪೊರಕೆಯನ್ನು ತೆಗೆದರೆ ಸಾಕು.
ಪೊರಕೆ ಮನೆಯಲ್ಲಿರುವ ಕೊಳಕನ್ನು ಹೊರ ಹಾಕುತ್ತದೆ. ಅಂದರೆ ಇದ ನಮಗೆ ಬಡತನವನ್ನು ತರುವ ಅಲಕ್ಷ್ಮೀಯ ಮನೆಯಾಗಿದೆ. ಮನೆಯಲ್ಲಿರುವ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಶಕ್ತಿ ಈ ಪೊರಕೆಗೆ ಇದೆ.
ಪೊರಕೆ ಬಳಸುವಾಗ ಏನು ಮಾಡಬೇಕು? ಮಾಡಬಾರದು?
* ಪೊರಕೆ ಮೇಲೆ ಯಾವುದೇ ರೀತಿ ಮುದ್ರೆ ಹಾಕಬಾರದು.
* ಪೊರಕೆಯನ್ನು ಅಡುಗೆಮನೆಯಲ್ಲಿ ಇಡಬಾರದು. ಇದರಿಂದ ಮನೆಯಲ್ಲಿರುವ ಅದೃಷ್ಟ ಮತ್ತು ಸಮೃದ್ಧಿ ಅಂತ್ಯವಾಗುತ್ತದೆ
* ಸೂರ್ಯಾಸ್ತದ ನಂತರ ಮನೆ ಗುಡಿಸಬಾರದು. ಇದರಿಂದ ಅಲಕ್ಷ್ಮಿ ಮನೆ ಪ್ರವೇಶಿಸಲು ಮತ್ತು ಬಡತನವನ್ನು ತರಲು ಸಹಾಯ ಮಾಡಿದಂತಾಗುತ್ತದೆ
* ಪೊರಕೆಯನ್ನು ನೇರವಾಗಿ ಇಡಬಾರದು. ಹೀಗೆ ಮಾಡೋದ್ರಿಂದ ಮನೆಗಳಲ್ಲಿ ಅನಿರೀಕ್ಷಿತ ಸಾವು ಸಂಭವಿಸುತ್ತದೆ ಎಂದು ನಂಬಲಾಗಿದೆ
* ಒಬ್ಬ ವ್ಯಕ್ತಿಯು ಶುಭಕಾರ್ಯಕ್ಕೆ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಗುಡಿಸಬಾರದು
* ಪೊರಕೆಯಿಂದ ಯಾವುದೇ ಪ್ರಾಣಿಯನ್ನು ಹೊಡೆಯಬಾರದು
* ದೇವಸ್ಥಾನ ಅಥವಾ ಪವಿತ್ರ ಸ್ಥಳಗಳಲ್ಲಿ 43 ದಿನಗಳ ಕಾಲ ನಿರಂತರವಾಗಿ ಸ್ವಚ್ಛಗೊಳಿಸುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಲು ಸಹಾಯ ಮಾಡುತ್ತದೆ.
* ಮುಂಜಾನೆಯ ಸಮಯದಲ್ಲಿ ಮನೆಯನ್ನು ಗುಡಿಸುವುದರಿಂದ ಲಕ್ಷ್ಮಿ ಮನೆಗೆ ಬರುತ್ತಾಳೆ
* ಪೊರಕೆಯನ್ನು ಯಾವಾಗಲೂ ಸ್ಟೋರ್ ರೂಂನಲ್ಲಿ ಅಥವಾ ಅದು ಗೋಚರಿಸದ ಸ್ಥಳದಲ್ಲಿ ಇಡಬೇಕು
* ಹೊಸದಾಗಿ ನಿರ್ಮಿಸಿದ ಮನೆಗೆ ಹೊಸ ಪೊರಕೆ ತೆಗೆದುಕೊಂಡು ಹೋಗುವುದು ಪುಣ್ಯ ಮತ್ತು ಮಂಗಳಕರವೆಂದು ಪರಿಗಣಿಸಲಾಗುತ್ತದೆ
* ಶುಕ್ರವಾರದಂದು ದೇವಸ್ಥಾನ ಅಥವಾ ಪವಿತ್ರ ಸ್ಥಳಕ್ಕೆ ಮೂರು ಪೊರಕೆಗಳನ್ನು ದಾನ ಮಾಡುವುದು ಪುಣ್ಯವೆಂದು ಪರಿಗಣಿಸಲಾಗುತ್ತದೆ
ಹೆಚ್ಚಿನವರಿಗೆ ಈ ಎಲ್ಲಾ ವಿಚಾರಗಳು ಗೊತ್ತಿರೋದಿಲ್ಲ. ಇದರಿಂದ ನೀವು ನೇರವಾಗಿ ಮನೆಗೆ ಅಲಕ್ಷ್ಮೀಯನ್ನು ಅಹ್ವಾನ ಮಾಡಿದಂತಾಗುತ್ತದೆ. ಹೀಗಾಗಿ ಜಾಗರೂಕತೆಯಿಂದಿರಿ.



Click it and Unblock the Notifications
