Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹುಟ್ಟುಹಬ್ಬಕ್ಕೆ ಡಿಕೆಶಿ ಹೈಕಮಾಂಡ್‌ನಿಂದ ನಿರೀಕ್ಷಿಸುತ್ತಿದ್ದಾರೆ ಈ ಗಿಫ್ಟ್
ಕೆಪಿಸಿಎಸ್ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರಿಗೆ ಈ ಬಾರಿಯ ಜನ್ಮ ದಿನ ಸ್ಪೆಷಲ್ ಆಗಿದೆ. ಇನ್ನುಈ ಬರ್ತ್‌ಡೇ ಮತ್ತಷ್ಟು ಸ್ಪೆಷಲ್ ಆಗುವುದೇ ಎಂಬುವುದು ಇನ್ನಷ್ಟೇ ಕಾದು ನೋಡಬೇಕಾಗಿದೆ. ಡಿ. ಕೆ ಶಿವಕುಮಾರ್ ತಮ್ಮ ಹುಟ್ಟುಹಬ್ಬಕ್ಕೆ ಹೈ ಕಮಾಂಡ್ ಭರ್ಜರಿ ಉಡುಗೊರೆ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿಯೂ ಇದ್ದಾರೆ.
ಕರ್ನಾಟಕ ಚುನಾವಣೆ 2023ರಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಭರ್ಜರಿ ಬಹುಮತ ಗಳಿಸಿದರೂ ಕಾಂಗ್ರೆಸ್ ಪಕ್ಷದಿಂದ ಸಿ. ಎಂ ಗದ್ದುಗೆ ಯಾರು ಏರುತ್ತಾರೆ ಎಂಬುವುದೇ ಒಗಟಿನ ಪ್ರಶ್ನೆಯಾಗಿದೆ. ಏಕೆಂದರೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇದು ನನ್ನ ಕೊನೆಯ ಚುನಾವಣೆ ಸಿ, ಎಂ ಕುರ್ಚಿ ನನಗೆ ಕೊಡಿ ಎಂದು ಕೇಳಿದರೆ, ಡಿ. ಕೆ ಶಿವಕುಮಾರ್ ಅವರು ಇಲ್ಲಾ... ಇಲ್ಲಾ ಕಳೆದ ಸಾಲಿನಲ್ಲಿ ನಾನು ಪಕ್ಷಕ್ಕಾಗಿ ಬಿಟ್ಟುಕೊಟ್ಟೆ, ಪಕ್ಷದ ತೀರ್ಮಾನಕ್ಕೆ ತಲೆಬಾಗಿದೆ, ಆದರೆ ಈ ಬಾರಿ ಸಿ. ಎಂ ಕುರ್ಚಿ ನನಗೆ ಕೊಡಿ ಎಂದು ಕೇಳುತ್ತಿದ್ದಾರೆ.

ಅಡಿಕೆ ಕತ್ತರಿಯಲ್ಲಿ ಸಿಲುಕಿರುವ ಕಾಂಗ್ರೆಸ್ ಹೈ ಕಮಾಂಡ್
ಇತ್ತ ಡಿಕೆ ಶಿವ ಕುಮಾರ್‌ಗೆ ಸಿ ಎಂ ಪದವಿ ಕೊಡಲು ಸಾಧ್ಯವಾಗುತ್ತಿಲ್ಲ, ಇತ್ತ ಸಿದ್ಧರಾಮಯ್ಯ ಅವರಿಗೂ ಸಿ ಎಂ ಕುರ್ಚಿ ನೀಡಲು ಸಾಧ್ಯವಾಗುತ್ತಿಲ್ಲ, ಒಬ್ಬರಿಗೆ ನೀಡಿದರೆ ಮತ್ತೊಂದು ಬಣ ಬಂಡಾಯ ಏಳುವುದು ಗ್ಯಾರಂಟಿ, ಇದು ಮುಂದಿನ ಲೋಕಾಸಭೆ ಚುನಾವಣೆಯ ಮೇಲೆ ಖಂಡಿತ ಪ್ರಭಾವ ಬೀರಲಿದೆ. ಈ ಕಾರಣಕ್ಕೆ ಇಬ್ಬರನ್ನು ಖುಷಿ ಪಡಿಸುವುದು ಹೇಗೆ ಎಂದು ತಲೆಕೆಡಿಸಿಕೊಂಡಿದೆ.
50:50 ಡೀಲ್‌ಗೆ ಡಿಕೆಶಿ ನಾಟ್ ಒಕೆ
ಎರಡೂವರೆ ವರ್ಷ ಸಿದ್ಧರಾಮಯ್ಯ, ಎರಡೂವರೆ ವರ್ಷ ಡಿ. ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂಬ ಸಲಹೆಯನ್ನು ನೀಡಲಾಗಿತ್ತು, ಅದಕ್ಕೆ ಡಿ. ಕೆ ಶಿವಕುಮಾರ್ ಅವರು ಒಪ್ಪುತ್ತಿಲ್ಲ. ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಸಂಕಷ್ಟದಲ್ಲಿದ್ದಾಗ ಕಷ್ಟಾಪಟ್ಟು ಹಗಲು-ಇರಳು ದುಡಿದ್ದೇನೆ, ಈ ಬಾರಿ ನನಗೆ ಮುಖ್ಯಮಂತ್ರಿ ಪದವಿ ನೀಡಲೇಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಹೀಗಾಗಿ ಸಿ ಎಂ ಕುರ್ಚಿ ಸಿಗುವವರೆಗೆ ಗೆದ್ದ ಖುಷಿಯನ್ನು ಸಂಪೂರ್ಣವಾಗಿ ಆನಂದಿಸಲು ಡಿಕೆ ಶಿವಕುಮಾರ್ ಅವರಿಗೆ ಸಾಧ್ಯವಾಗುತ್ತಿಲ್ಲ.
ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದ್ದಾಗ ಪಕ್ಷ ಕಾಪಾಡಲು ಹೆಗಲು ಕೊಟ್ಟಿದ್ದೇ ಡಿಕೆಶಿ
ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ದುರ್ಬಲವಾದಾಗ ಅನೇಕರಿ ಕರ್ನಾಟಕದಲ್ಲಿ ಇನ್ನು ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವುದು ಕಷ್ಟ ಎಂದು ಭಾವಿಸಿದ್ದರು. ಸ್ವತಃ ಕಾಂಗ್ರೆಸ್ ಪಕ್ಷದಲ್ಲಿಯೇ ಅನೇಕ ನಾಯಕರುಗಳು ಭರವಸೆ ಕಳೆದುಕೊಂಡು ಬೇರೆ ಪಕ್ಷಕ್ಕೆ ವಲಸೆ ಹೋಗಿದ್ದು ಇದೆ. ಅಂಥ ಪಕ್ಷವನ್ನು ಭರ್ಜರಿ ಬಹುಮತಗಳೊಂದಿಗೆ ಗೆಲ್ಲುವಂತೆ ಮಾಡುವಲ್ಲಿ ಡಿಕೆಶಿ ಪಾಲು ತುಂಬಾನೇ ಇದೆ ಎಂಬುವುದನ್ನು ಯಾರೂ ತಳ್ಳಿ ಹಾಕುವಂತಿಲ್ಲ. ಪಕ್ಷಕ್ಕಾಗಿ ಹಗಲಿರಳು ಶ್ರಮಿಸಿದ್ದಾರೆ. ಜಾತಿವಾರು ಲೆಕ್ಕಾಚಾರದಲ್ಲೂ ಡಿಕೆಶಿ ಸೈ ಅನಿಸಿಕೊಂಡಿದ್ದಾರೆ. ಜೆಡಿಎಸ್ನ ಒಕ್ಕಲಿಗ ಮತಗಳನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಈ ಬಾರಿ ನನಗೆ ಸಿ ಎಂ ಪಟ್ಟ ನೀಡಿ ಎಂದು ಕೇಳುತ್ತಿದ್ದಾರೆ ಡಿಕೆಶಿ.
ಈ ಹುಟ್ಟುಹಬ್ಬದಂದು ದೊರೆಯುವುದೇ ಭರ್ಜರಿ ಗಿಫ್ಟ್?
ಡಿಕೆಶಿ ಹುಟ್ಟುಹಬ್ಬವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂತೋಷದಿಂದ ಆಚರಿಸುತ್ತಿದ್ದಾರೆ. ಆದರೆ ಸಿ. ಎಂ ಪದವಿ ಸಿಕ್ಕರೆ ಮಾತ್ರ ಡಿಕೆಶಿ ಫುಲ್ ಖುಷಿಯಾಗುತ್ತಾರೆ. ... ಈ ಹುಟ್ಟುಹಬ್ಬಕ್ಕೆ ಹೈಕಮಾಂಡ್‌ನಿಂದ ಸಿಎಂ ಕುರ್ಚಿ ಉಡುಗೊರೆಯಾಗಿ ಸಿಗುವ ನಿರೀಕ್ಷೆಯಲ್ಲಿದ್ದಾರೆ, ಈ ಉಡುಗೊರೆ ಸಿಗುವುದೇ? ಒಂದೆರಡು ದಿನದಲ್ಲಿ ತಿಳಿಯುತ್ತದೆ, ರಾಜ್ಯದ ಜನತೆ ಕೂಡ ಯಾರಾಗುತ್ತಾರೆ ಸಿ ಎಂ ಎಂದು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ನಿಮಗೆ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇವರಲ್ಲಿ ಯಾರಾಗಬೇಕು ಮುಂದಿನ ಸಿ ಎಂ? ಕಮೆಂಟ್ ಮಾಡಿ



Click it and Unblock the Notifications
