Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Horoscope Today 28 July: ಜೂನ್ 28 ಈ ದಿನ ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಜೂನ್ 28ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಆಷಾಢ
ಪಕ್ಷ: ಶುಕ್ಲಪಕ್ಷ
ತಿಥಿ: ದಶಮಿ
ನಕ್ಷತ್ರ:ಚಿತ್ರ , ಸಂಜೆ 04:01ರ ನಂತರ ಸ್ವಾತಿ
ರಾಹುಕಾಲ: ಮಧ್ಯಾಹ್ನ 12:23ರಿಂದ 01:59ರವರೆಗೆ
ಮೇಷ ರಾಶಿ
ಈ ದಿನ ಸಾಕಷ್ಟು ಬ್ಯುಸಿಯಾಗಿರುತ್ತೀರಿ ಆದರೆ ನಿಮ್ಮ ಸಂಗಾತಿಗೆ ಸಾಕಷ್ಟು ಸಮಯವನ್ನು ನೀಡಲು ನಿಮಗೆ ಸಾಧ್ಯವಾಗುವುದು. ಪ್ರೇಮಿಗಳಿಗೆ ಈ ದಿನ ಉತ್ತಮವಾಗಿರುತ್ತದೆ. . ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಬೆಳಿಗ್ಗೆ 6:50 ರಿಂದ 9:00 ರವರೆಗೆ

ವೃಷಭ ರಾಶಿ
ಕೆಲಸದ ದೃಷ್ಟಿಯಿಂದ ಈ ದಿನ ತುಂಬಾ ಮುಖ್ಯವಾಗಿರುತ್ತದೆ. ಈ ದಿನ ನಿಮಗೆ ಒಳ್ಳೆಯ ಅವಕಾಶ ಸಿಗಬಹುದು. ಕುಟುಂಬ ಜೀವನದಲ್ಲಿ ಖುಷಿ ಇರಲಿದೆ. ನೀವು ಅವಿವಾಹಿತರಾಗಿದ್ದು, ಪ್ರೇಮ ವಿವಾಹವನ್ನು ಆಗಲು ಬಯಸಿದರೆ ಕುಟುಂಬದವರ ಒಪ್ಪಂದ ದೊರೆಯಲಿದೆ. ಹಣದ ವಿಷಯದಲ್ಲಿ ಈ ದಿನ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ
ಮಿಥುನ ರಾಶಿ
ನಿಮ್ಮ ಮನಸ್ಸಿನಲ್ಲಿ ಈ ದಿನ ಗೊಂದಲದ ಸ್ಥಿತಿ ಇರುತ್ತದೆ, ಈ ದಿನ ನೀವು ನಿಮ್ಮ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೀವು ಅನೇಕ ತೊಂದರೆಗಳನ್ನು ಎದುರಿಸಬಹುದು. ವೈವಾಹಿಕ ಜೀವನದಲ್ಲಿ ಪರಿಸ್ಥಿತಿ ಚೆನ್ನಾಗಿರಲಿದೆ. ಪ್ರಣಯ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಮೂರನೆಯವರ ಹಸ್ತಕ್ಷೇಪದಿಂದಾಗಿ, ನಿಮ್ಮ ನಡುವೆ ಅಂತರವು ಹೆಚ್ಚಾಗಬಹುದು, ಆರೋಗ್ಯದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 32
ಅದೃಷ್ಟದ ಸಮಯ: ಸಂಜೆ 5:20 ರಿಂದ 8:15 ರವರೆಗೆ
ಕರ್ಕ ರಾಶಿ
ಆರ್ಥಿಕ ದೃಷ್ಟಿಯಿಂದ ಈ ದಿನ ನಿಮಗೆ ತುಂಬಾ ಒಳ್ಳೆಯ ದಿನವಾಗಿದೆ. ಹಳೆಯ ಸಾಲವನ್ನು ಮರುಪಾವತಿ ಮಾಡುವಲ್ಲಿಯೂ ನೀವು ಯಶಸ್ವಿಯಾಗುತ್ತೀರಿ. ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ. ಒಟ್ಟಿನಲ್ಲಿ ಈ ದಿನ ನಿಮಗೆ ಅನುಕೂಲಕರವಾಗಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಸಮಯ: ಬೆಳಿಗ್ಗೆ 7:25 ರಿಂದ 11 ರವರೆಗೆ
ಸಿಂಹ ರಾಶಿ
ಕೆಲಸದ ವಿಷಯದಲ್ಲಿ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ಈ ದಿನ ನಿಮ್ಮ ಬಗ್ಗೆಯೂ ಗಮನ ಹರಿಸಬೇಕು. ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯವಿದ್ದರೆ ಅದನ್ನು ಮಾತನಾಡುವ ಮೂಲಕ ಪರಿಹರಿಸಿ. ಪ್ರಣಯ ಜೀವನದಲ್ಲಿ ಪರಿಸ್ಥಿತಿ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ
ಕನ್ಯಾ ರಾಶಿ
ಈ ದಿನ ನೀವು ಚಿಕ್ಕ ನಿರ್ಧಾರಗಳನ್ನು ತುಂಬಾ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ವೈವಾಹಿಕ ಜೀವನದಲ್ಲಿ ದೊಡ್ಡ ಸಮಸ್ಯೆ ಇರಲ್ಲ, ನೀವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನುಸಬೇಕು. ಆರೋಗ್ಯದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಬೆಳಿಗ್ಗೆ 5:15 ರಿಂದ 10:10 ರವರೆಗೆ
ತುಲಾ ರಾಶಿ
ನಿಮ್ಮ ಸಂಗಾತಿಗೆ ಸರ್ಪ್ರೈಸ್ ನೀಡಲು ನೀವು ಬಹಳ ಸಮಯದಿಂದ ಯೋಜಿಸುತ್ತಿದ್ದರೆ, ಇಂದು ಉತ್ತಮ ದಿನವಾಗಿದೆ. ಪ್ರೇಮಿಗಳಿಗೆ ಈ ದಿನ ರೊಮ್ಯಾಂಟಿಕ್ ಆಗಿರುತ್ತದೆ. ಹಣಕ್ಕೆ ಸಂಬಂಧಿಸಿದ ಚಿಂತೆ ದೂರಾಗಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಬೂದು
ಅದೃಷ್ಟದ ಸಂಖ್ಯೆ: 35
ಅದೃಷ್ಟದ ಸಮಯ: ಮಧ್ಯಾಹ್ನ 1:45 ರಿಂದ ಸಂಜೆ 4 ರವರೆಗೆ
ವೃಶ್ಚಿಕ ರಾಶಿ
ಕೆಲಸದಲ್ಲಿ ಇಂದು ಕೆಲವು ಅಡೆತಡೆಗಳು ಉಂಟಾಗಬಹುದು. ಆತಂಕ ಮತ್ತು ಒತ್ತಡದಿಂದಾಗಿ, ನಿಮ್ಮ ವೈಯಕ್ತಿಕ ಜೀವನದ ಮೇಲೆ ಸರಿಯಾಗಿ ಗಮನಹರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಆರೋಗ್ಯದ ವಿಷಯದಲ್ಲಿ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 22
ಅದೃಷ್ಟದ ಸಮಯ: ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ
ಧನು ರಾಶಿ
ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ನೀವು ಹಣದ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಇಂದು ಹಣಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡಲು ಹೋಗಬೇಡಿ. ಸಂಗಾತಿಯ ಆರೋಗ್ಯ ದುರ್ಬಲವಾಗಿರುತ್ತದೆ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ 11:20 ರವರೆಗೆ
ಮಕರ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ ನೀವು ಯಾವುದೇ ಅಪಾಯಕಾರಿ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗಬಹುದು, ಈ ಬಗ್ಗೆ ಜಾಗ್ರತೆವಹಿಸಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 8 ರವರೆಗೆ
ಕುಂಭ ರಾಶಿ
ಇಂದು ಯಾರ ಜೊತೆಯೂ ಅನಗ್ಯತ ಚರ್ಚೆ ಮಾಡಲು ಹೋಗಬೇಡಿ. ಕೆಲಸದ ಕಡೆಗೆ ಗಮನಹರಿಸಿ. ಈ ದಿನ ನೀವು ತಾಳ್ಮೆಯಿಂದ ವರ್ತಿಸಲು ಸಲಹೆ ನೀಡಲಾಗಿದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 17
ಅದೃಷ್ಟದ ಸಮಯ: ಬೆಳಿಗ್ಗೆ 4 ರಿಂದ 8:45 ರವರೆಗೆ
ಮೀನ ರಾಶಿ
ಮನೆಯ ವಾತಾವರಣದಲ್ಲಿ ಸುಧಾರಣೆ ಕಂಡುಬರಲಿದೆ. ಸಂಬಂಧಗಳಲ್ಲಿ ಹೊಂದಾಣಿಕೆ ಹೆಚ್ಚಿರುತ್ತದೆ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಲು ಯೋಜಿಸುತ್ತಿದ್ದರೆ, ನಿಮ್ಮ ನಿರ್ಧಾರವನ್ನು ನೀವು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ನಿಮ್ಮ ಸಂಗಾತಿಯನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ನಿಮ್ಮ ಪ್ರೀತಿಪಾತ್ರರ ಭಾವನೆಗಳನ್ನು ನೀವು ಗೌರವಿಸಬೇಕು.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 25
ಅದೃಷ್ಟದ ಸಮಯ: ಸಂಜೆ 6 ರಿಂದ 9:05 ರವರೆಗೆ



Click it and Unblock the Notifications
