Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದಿನ ಭವಿಷ್ಯ: ಜುಲೈ 5 ಕರ್ಕ ರಾಶಿಯವರಿಗೆ ಶುಭವಾಗಿದೆ, ಉಳಿದ ರಾಶಿಫಲ ಹೇಗಿದೆ?
ಶುಭೋದಯ.... ಈ ದಿನ ನಿಮ್ಮೆಲ್ಲಾ ಕಾರ್ಯಗಳು ಸುಗಮವಾಗಿ ನೆರವೇರಲಿ ಎಂದು ಹೇಳುತ್ತಾ ಗ್ರಹಗತಿಗಳ ಆಧಾರದ ಮೇಲೆ ದ್ವಾದಶ ರಾಶಿಗಳಿಗೆ ಈ ದಿನ ಹೇಗಿರಲಿದೆ ನೋಡೋಣ....
ಮೇಷ ರಾಶಿ
ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳ ಸಹಾಯ ದೊರೆಯಲಿದೆ. ಈ ದಿನ ನಿಮ್ಮ ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲಿದೆ. ಸಂಗಾತಿಯ ಮನಸ್ಥಿತಿ ಅಷ್ಟು ಚೆನ್ನಾಗಿರಲ್ಲ, ನೀವು ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಅನಗ್ಯತವಾಗಿ ಚರ್ಚೆ ಮಾಡಲು ಹೋಗಬೇಡಿ, ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಈ ದಿನ ಹಣದ ಖರ್ಚು ಕೂಡ ಅಧಿಕವಿರಲ್ಲ. ಆರೋಗ್ಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯ ಬೇಡ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಬೆಳಿಗ್ಗೆ 7:55 ರಿಂದ 11:20 ರವರೆಗೆ

ವೃಷಭ ರಾಶಿ
ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಇಂದು ಹಣದ ಸ್ಥಿತಿ ಚೆನ್ನಾಗಿರಲಿದೆ, ವೈವಾಹಿಕ ಜೀವನದಲ್ಲಿ ಸಂತೋಷವಿರಲಿದೆ. ಈ ದಿನ ರೊಮ್ಯಾಂಟಿಕ್ ಆಗಿ ಸಮಯ ಕಳೆಯುತ್ತೀರಿ. ಈ ದಿನ ಹಳೆಯ ಸ್ನೇಹಿತರ ಭೇಟಿಯಾಗಬಹುದು. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ
ಮಿಥುನ ರಾಶಿ
ನೀವು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರೆ ಈ ದಿನ ಮನೆಯಲ್ಲಿ ಕೆಲ ಭಿನ್ನಾಭಿಪ್ರಾಯವಿರಬಹುದು, ಅಂತಹ ಪರಿಸ್ಥಿತಿಯಲ್ಲಿ, ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕು. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಆದಾಯಕ್ಕಿಂತ ಹೆಚ್ಚಿನ ಖರ್ಚು ಇರಬಹುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಣ್ಣ ಸಮಸ್ಯೆ ಕಂಡುಬಂದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 25
ಅದೃಷ್ಟದ ಸಮಯ: ಬೆಳಿಗ್ಗೆ 4 ರಿಂದ ರಾತ್ರಿ 9 ರವರೆಗೆ
ಕರ್ಕ ರಾಶಿ
ಕೆಲಸದ ಬಗ್ಗೆ ನೋಡುವುದಾದರೆ ಈ ದಿನ ನಿಮಗೆ ಶುಭವಾಗಿದೆ. ಈ ದಿನ ನಿಮ್ಮ ವೃತ್ತಿ ಜೀವನಕ್ಕೆ ಅನುಕೂಲಕರವಾಗಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ, ಹಣದ ಸ್ಥಿತಿ ಉತ್ತಮವಾಗಿರುತ್ತದೆ. ವೈವಾಹಿಕ, ಪ್ರೀತಿ ಜೀವನ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಸಮಯ: ಸಂಜೆ 5:15 ರಿಂದ 7:20 ರವರೆಗೆ
ಸಿಂಹ ರಾಶಿ
ಇಂದು ನೀವು ತುಂಬಾ ಆಯಾಸ ಅನುಭವಿಸಬಹುದು, ಈ ದಿನ ನಿಮ್ಮ ದೊಡ್ಡ ಚಿಂತೆ ದೂರಾಗಲಿದೆ. ಈ ದಿನ ಕೆಲವೊಂದು ವಿಷಯಗಳಲ್ಲಿ ತಾಳ್ಮೆಯಿಂದ ವರ್ತಿಸಿ. ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ನೀವು ಅವಿವಾಹಿತರಾಗಿದ್ದರೆ ಮತ್ತು ನಿಮ್ಮ ಅಪೇಕ್ಷಿತ ಜೀವನ ಸಂಗಾತಿಯನ್ನು ನೀವು ಹುಡುಕುತ್ತಿದ್ದರೆ, ಶೀಘ್ರದಲ್ಲೇ ನಿಮ್ಮ ಬಾಳಿಗೆ ವ್ಯಕ್ತಿಯೊಬ್ಬರ ಆಗಮನವಾಗಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ
ಕನ್ಯಾ ರಾಶಿ
ವ್ಯಾಪಾರಸ್ಥರಿಗೆ ಇಂದು ತುಂಬಾ ಪ್ರಯೋಜನಕಾರಿಯಾಗಲಿದೆ. ನೀವು ಬಯಸಿದ ಫಲಿತಾಂಶವನ್ನು ಪಡೆಯುತ್ತೀರಿ., ಉದ್ಯೋಗಿಗಳು ಕೆಲವು ದೊಡ್ಡ ಸವಾಲನ್ನು ಎದುರಿಸಬೇಕಾಗಬಹುದು. ಆದರೆ ನೀವು ಬುದ್ಧಿವಂತಿಕೆಯಿಂದ ಆ ಸಮಸ್ಯೆಯಿಂದ ಹೊರಬರಬಹುದು. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಬೆಳಿಗ್ಗೆ 5:05 ರಿಂದ 10 ರವರೆಗೆ
ತುಲಾ ರಾಶಿ
ಹಣದ ವಿಷಯದಲ್ಲಿ ಈ ದಿನ ಅನುಕೂಲಕರವಾಗಿರಲಿದೆ, ಹಾಗಂತ ಈ ದಿನ ಹಣವನ್ನು ಯಾರಿಗೂ ಸಾಲ ನೀಡಲು ಹೋಗಬೇಡಿ. ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಪ್ರೇಮ ಜೀವನದಲ್ಲಿ ಸಮಸ್ಯೆಗಳಿರಬಹುದು, ನಿಮ್ಮಿಬ್ಬರ ನಡುವೆ ನಂಬಿಕೆಯ ಕೊರತೆ ಕಂಡು ಬರುವುದು.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 18
ಅದೃಷ್ಟದ ಸಮಯ: ಮಧ್ಯಾಹ್ನ 2:30 ರಿಂದ ಸಂಜೆ 5 ರವರೆಗೆ
ವೃಶ್ಚಿಕ ರಾಶಿ
ಈ ದಿನ ಒತ್ತಡದಿಂದ ಕೂಡಿರಲಿದೆ. ಉದ್ಯೋಗ ಅಥವಾ ವ್ಯಾಪಾರದ ಕೆಲಸದ ಹೊರೆ ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ವಿಷಯಗಳಲ್ಲಿ ಜಗಳವಾಡಬೇಡಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಇಂದು ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಮಾಡದಿದ್ದರೆ ಅದು ಉತ್ತಮವಾಗಿರುತ್ತದೆ. ಪ್ರೇಮಿಗಳಿಗೆ ಈ ದಿನ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 35
ಅದೃಷ್ಟದ ಸಮಯ: ಸಂಜೆ 4:30 ರಿಂದ ರಾತ್ರಿ 8:30 ರವರೆಗೆ
ಧನು ರಾಶಿ
ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಚಿಂತೆ ದೂರವಾಗಲಿದೆ. ನೀವು ಉದ್ಯಮಿಯಾಗಿದ್ದರೆ ಮತ್ತು ನಿಮ್ಮ ವ್ಯವಹಾರವನ್ನು ಮುಂದುವರಿಸಲು ಸಾಲವನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ಅತಿಯಾದ ಸಾಲವನ್ನು ತೆಗೆದುಕೊಳ್ಳಬೇಡಿ. ಸಂಗಾತಿಯ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬರುವುದು.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಬೆಳಗ್ಗೆ 6:20 ರಿಂದ 11:20 ರವರೆಗೆ
ಮಕರ ರಾಶಿ
ನೀವು ಕೆಲಸದ ಕಾರಣಕ್ಕೆ ಮನೆಯಿಂದ ದೂರವಿದ್ದರೆ ಇಂದು ಮನೆಯ ನೆನಪು ತುಂಬಾ ಕಾಡುವುದರಿಂದ ಭಾವನಾತ್ಮಕವಾಗಿ ಸ್ವಲ್ಪ ದುರ್ಬಲರಾಗುವಿರಿ. ಹಣದ ವಿಷಯದಲ್ಲಿ ನೋಡುವುದಾದರೆ ಈ ದಿನವು ಮಿಶ್ರಫಲ. ಈ ದಿನ ಪ್ರಮುಖ ವ್ಯಕ್ತಿಯಿಂದ ಮಾರ್ಗದರ್ಶನ ದೊರೆಯಲಿದೆ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಸಂಜೆ 4:50 ರಿಂದ ರಾತ್ರಿ 9:05 ರವರೆಗೆ
ಕುಂಭ ರಾಶಿ
ಸ್ಟಾಕ್ ಮಾರುಕಟ್ಟೆಯಲ್ಲಿ ಕೆಲಸ ಮಾಡುವವರು ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನಷ್ಟ ಉಂಟಾಗಬಹುದು. ಸಂಗಾತಿಯ ಕೋಪವು ಇಂದು ಮನೆಯ ಶಾಂತಿಗೆ ಭಂಗ ತರಬಹುದು, ಅಂತಹ ಪರಿಸ್ಥಿತಿಯಲ್ಲಿ, ನೀವು ತುಂಬಾ ಸಮತೋಲಿತವಾಗಿ ವರ್ತಿಸುವಂತೆ ಸಲಹೆ ನೀಡಲಾಗಿದೆ. ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ
ಮೀನ ರಾಶಿ
ಈ ದಿನ ತಂದೆಯ ಕಡೆಯಿಂದ ಲಾಭವಾಗಲಿದೆ. ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ. ಇಂದು ನೀವು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡರೆ, ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದ ವ್ಯವಹಾರ ಮಾಡಲು ಈ ದಿನ ಸೂಕ್ತವಾಗಿದೆ. ಪ್ರೇಮಿಗಳಿಗೆ ಈ ದಿನ ತುಂಬಾ ವಿಶೇಷವಾಗಿರುತ್ತದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಸಮಯ: ಬೆಳಿಗ್ಗೆ 6 ರಿಂದ 10:10 ರವರೆಗೆ



Click it and Unblock the Notifications
