Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ರಾಮಮಂದಿರಕ್ಕೆ 13 ಕೆಜಿ ಬೆಳ್ಳಿಯ ಬಿಲ್ಲು-ಬಾಣ ಉಡುಗೊರೆ
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡು ತಿಂಗಳುಗಳ ಕಳೆದಿವೆ. ನಿತ್ಯವೂ ಲಲಕ್ಷ ಲಕ್ಷ ಮಂದಿ ಭಕ್ತರು ರಾಮ ದರ್ಶನಕ್ಕೆ ಆಗಮಿಸುತ್ತಾರೆ. ದೇಶ, ವಿದೇಶದಿಂದಲೂ ಅಯೋಧ್ಯೆಗೆ ರಾನ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಅಯೋಧ್ಯೆ ಈಗ ಪವಿತ್ರಾ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ.
ಬಹುತೇಕ ಸೆಲೆಬ್ರಿಟಿಗಳಿಂದ ಹಿಡಿದು ಉದ್ಯಮಿಗಳು, ಖ್ಯಾತನಾಮರು ರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಆಗಮಿಸುತ್ತಾರೆ. ಈ ನಡುವೆ ರಾಮಮಂದಿರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಅಯೋಧ್ಯೆ ಈಗ ರಾಮ ಭಕ್ತರ ಬೀಡಾಗಿದೆ.

ಇದೆಲ್ಲದರ ನಡುವೆ ಅಯೋಧ್ಯೆ ರಾಮನಿಗೆ ಭಕ್ತರು ಉಡುಗೊರೆಗಳು, ಕಾಣಿಕೆ ರೂಪದಲ್ಲಿ ದೇಣಿಗೆ ನೀಡುವುದು ನಡೆಯುತ್ತಲೇ ಇದೆ. ಈಗ ರಾಮನ ಸನ್ನಿಧಾನಕ್ಕೆ ಬೆಳ್ಳಿಯಿಂದ ಮಾಡಿರುವ ಬಿಲ್ಲು-ಬಾಣವನ್ನು ಭಕ್ತರೊಬ್ಬರು ದೇಣಿಗೆಯಾಗಿ ನೀಡಿ ಸುದ್ದಿಯಾಗಿದ್ದಾರೆ.
ಆಂಧ್ರಪ್ರದೇಶದ ಭಕ್ತರೊಬ್ಬರು ರಾಮಲಾಲ್ಲಾ ಮೂರ್ತಿಯ ನೋಡಲು ಆಗಮಿಸಿದ್ದರು. ಜೊತೆಗೆ ಅವರು ಬೆಳ್ಳಿ ಬಿಲ್ಲು ಮತ್ತು ಬಾಣವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಿಲ್ಲು ಮತ್ತು ಬಾಣವನ್ನು 13 ಕೆಜಿ ಬೆಳ್ಳಿಯಿಂದ ರಚಿಸಲಾಗಿತ್ತು. ಹಾಗೂ ಅದರ ಮೇಲೆ ವಿಶೇಷ ಕೆತ್ತನೆಗಳ ಮೂಲಕ ಅದನ್ನು ಸುಂದರಗೊಳಿಸಲಾಗಿತ್ತು.
ಈ ಬಿಲ್ಲು ಮತ್ತು ಬಾಣವು ಆಂಧ್ರ ಪ್ರದೇಶದಿಂದ ಅಯೋಧ್ಯೆಗೆ ಬರುವ ಮುನ್ನ ತಮಿಳುನಾಡಿನಲ್ಲಿ ಇದಕ್ಕೆ ವಿಶೇಷ ಪೂಜೆ ನೆರವೇರಿಸಲಾಗಿದೆ. ಕಂಚಿಯ ಕಾಮಕೋಟಿ ಮಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಸ್ವಾಮಿಗಳಿಗೆ ಭಕ್ತರು ಬಿಲ್ಲುಬಾಣ ಹಸ್ತಾಂತರಿಸಿದರು. ಬಳಿಕ ಅವರ ಮಾರ್ಗದರ್ಶನದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು.
ಬಿಸಿಲಿನ ತಾಪದ ನಡುವೆಯೂ ರಾಮಲಾಲನ ದರ್ಶನಕ್ಕಾಗಿ ಅಯೋಧ್ಯೆಗೆ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ಇದಲ್ಲದೆ, ಅವರು ತಮ್ಮ ದೇವತೆಯಾದ ರಾಮಲಾಲಾಗೆ ಹಲವಾರು ಅಮೂಲ್ಯ ಉಡುಗೊರೆಗಳನ್ನು ತರುತ್ತಿದ್ದಾರೆ.
ಇಲ್ಲಿಯವರೆಗೆ, ರಾಮಲಾಲಾ ಅವರು ಚಿನ್ನದ ಬಾಣಗಳು ಮತ್ತು ಬಿಲ್ಲುಗಳು, ಕಿರೀಟಗಳು, ಚಿನ್ನ ಮತ್ತು ಬೆಳ್ಳಿಯ ಪಾದರಕ್ಷೆಗಳು, ಹಲವಾರು ಟನ್ಗಳಷ್ಟು ಭಾರವಾದ ಗಂಟೆಗಳು, ರೇಷ್ಮೆ ವಸ್ತ್ರಗಳು, ಚಂದ್ರಾರ್ಗಳು (ಚಂದ್ರನ ಆಕಾರದ ನೆಕ್ಲೇಸ್ಗಳು) ಮತ್ತು ಬೆಲೆಬಾಳುವ ಆಭರಣಗಳು ಉಡುಗೊರೆ ರೂಪದಲ್ಲಿ ರಾಮ ಲಲ್ಲಾನ ಆಸ್ಥಾನ ಸೇರಿವೆ. ಈಗಾಗಲೆ ರಾಮ ಮೂರ್ತಿಯಲ್ಲಿ ಚಿನ್ನದ ಬಿಲ್ಲು ಇದೆ. ಈಗ ಬೆಳ್ಳಿಯ ಉಡುಗೊರೆ ಸಹ ಬಂದು ಸೇರಿದೆ.
ಇದಿಷ್ಟೇ ಅಲ್ಲ ಬೆಳ್ಳಿಯ ಪಾದುಕೆಗಳು ಹಾಗೂ ಗರ್ಭಗುಡಿಯನ್ನು ಸ್ವಚ್ಛಗೊಳಿಸಲು ಬೆಳ್ಳಿಯ ಪೊರಕೆ ಸಹ ಉಡುಗೊರೆಯಾಗಿ ಅಯೋಧ್ಯೆ ರಾಮ ಮಂದಿರ ಸೇರಿದೆ. ಇದೆಲ್ಲವು ಭಕ್ತರು ರಾಮನಿಗಾಗಿ ಉಡುಗೊರೆ ರೂಪದಲ್ಲಿ ನೀಡಿದ್ದಾರೆ.
ಇದಕ್ಕೂ ಮೊದಲು ಅಲ್ಲಿನ ತರಕಾರಿ ಮಾರಾಟಗಾರರೊಬ್ಬರು ವಿಶೇಷ ರೀತಿಯ ಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದರು. ಇದು ಒಂದೇ ಗಡಿಯಾರದಲ್ಲಿ ವಿವಿಧ ದೇಶಗಳ ಸಮಯ ತೋರಿಸುವ ವಿನ್ಯಾಸ ಮಾಡಲಾಗಿತ್ತು. ಭಾರತ, ಚೀನಾ, ದುಬೈ, ಮಾಸ್ಕೋ ಮತ್ತು ಟೋಕಿಯೊದ ಸಮಯವನ್ನು ಈ ಗಡಿಯಾರ ತೋರಿಸುತ್ತದೆ.
ಅನಿಲ್ ಕುಮಾರ್ ಸಾಹು ಎಂಬಾತ ಇತ್ತೀಚೆಗೆ ಅಯೋಧ್ಯೆಯ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದ ಮೊದಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ 75 ಸೆಂ ವ್ಯಾಸದ ಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಹೇಳಿದರು.
ಇನ್ನು ರಾಮಮಂದಿರಕ್ಕೆ ಜಗತ್ತಿನ ಅತೀ ದೊಡ್ಡದಾದ ಬೀಗವನ್ನು ಸಹ ನೀಡಲಾಗಿತ್ತು. ಈ ಬೀಗವು ಬರೋಬ್ಬರಿ 400 ಕೆ.ಜಿ ತೂಕವಿತ್ತು, ಅಲಿಗಢದ ನಿವಾಸಿ ದಿವಂಗತ ಸತ್ಯ ಪ್ರಕಾಶ್ ಶರ್ಮಾ ಮತ್ತು ಅವರ ಪತ್ನಿ ರುಕ್ಮಿಣಿ ಶರ್ಮಾ ಅವರು ಎರಡು ವರ್ಷಗಳ ಹಿಂದೆಯೇ ಈ ಬೃಹತ್ ಬೀಗವನ್ನು ತಯಾರಿಸಿದ್ದರು. ಇವರು ರಾಮ ಮಂದಿರ ಉದ್ಘಾಟನೆಯ ಸಮಯದಲ್ಲಿ ಈ ಬೀಗವನ್ನು ದೇವಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು.



Click it and Unblock the Notifications