Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪತ್ನಿಯ ಬಳಿ ಈ ನಾಲ್ಕು ವಿಚಾರಗಳ ಬಗ್ಗೆ ಹೇಳಲೇಬೇಡಿ ಅಂತಾರೆ ಚಾಣಕ್ಯ
ಚಾಣಕ್ಯನು ಸಾಮಾನ್ಯ ಜನರ ಜೀವನಕ್ಕೆ ಬೇಕಾಗಿರುವ ಕೆಲವೊಂದು ನೀತಿಗಳನ್ನು ರೂಪಿಸಿದ್ದಾರೆ. ಇಂದಿಗೂ ಜನ ಅದನ್ನು ಪಾಲಿಸುತ್ತಿದ್ದಾರೆ. ಚಾಣಕ್ಯ ನೀತಿಯಂತೆ ಜೀವನವನ್ನು ನಡೆಸಿದವರು ಬದುಕಿನಲ್ಲಿ ಯಶಸ್ವಿಯಾಗಿದ್ದಾರೆ.
ಸುಖ ಸಂಸಾರ ನಡೆಸೋದಕ್ಕೂ ಚಾಣಕ್ಯ ಕೆಲವೊಂದು ನೀತಿಗಳನ್ನು ರೂಪಿಸಿದ್ದಾರೆ. ಅವರ ಪ್ರಕಾರ ಗಂಡ-ಹೆಂಡತಿ ಒಬ್ಬರಿಗೊಬ್ಬರು ಪ್ರಶಂಸೆ ನೀಡಬೇಕು. ಸಮಸ್ಯೆ ಬಂದಾಗ ಅದನ್ನು ಒಟ್ಟಾಗಿ ಎದುರಿಸಬೇಕು. ಇನ್ನೂ ಕೆಲವೊಂದು ವಿಚಾರಗಳು ಗಂಡ-ಹೆಂಡತಿಯ ಮಧ್ಯೆ ಇರಬೇಕೇ ಹೊರತು ಅದನ್ನು ಬೇರೆ ಯಾರೊಂದಿಗೂ ಹಂಚಿಕೊಳ್ಳ ಬಾರದು ಅಂತ ಹೇಳಿದ್ದಾರೆ.

ಅದ್ರಲ್ಲೂ ಚಾಣಕ್ಯನ ಪ್ರಕಾರ ಕೆಲವೊಂದು ವಿಚಾರಗಳನ್ನು ಪತ್ನಿಯ ಬಳಿ ಹೇಳಲೇ ಬಾರದು. ಹಾಗಾದ್ರೆ ಪತ್ನಿಯ ಬಳಿ ಹೇಳಬಾರದಂತಹ ವಿಚಾರಗಳು ಯಾವುದು ಅನ್ನೋದನ್ನ ಹೇಳ್ತೀವಿ.
1. ಅವಮಾನ
ಮನುಷ್ಯ ಅಂದಮೇಲೆ ಆತನಿಗೆ ಅವಮಾನ, ದುಃಖ, ನೋವುಗಳಾಗೋದು ಸಹಜ. ಅದ್ರಲ್ಲೂ ಚಾಣಕ್ಯನ ಪ್ರಕಾರ ಪುರುಷರು ಮನೆ ಹೊರಗಡೆ ಹೋಗಿ ಕೆಲಸ ಮಾಡೋದ್ರಿಂದ ಕೆಲವೊಂದು ಸಾರಿ ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲಾ ವಿಚಾರವನ್ನು ನಿಮ್ಮ ಪತ್ನಿಯ ಬಳಿ ಬಂದು ಹೇಳಿಕೊಳ್ಳಬೇಡಿ. ಯಾಕಂದ್ರೆ ಕೆಲವೊಂದು ಮನೆಗಳಲ್ಲಿ ಪತ್ನಿಯು ಗಂಡಂದಿರ ನೋವುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವು ಕಡೆ ಪತಿಯೇನಾದರೂ ತನಗಾದ ಅವಮಾನವನ್ನು ಹೇಳಿಕೊಂಡರೆ ಪತ್ನಿಯು ಪದೇ ಪದೇ ಅದನ್ನೇ ಹೇಳಿ ಆತನ ಮನಸ್ಸಿಗೆ ನೋವು ಮಾಡುತ್ತಾಳೆ.
2. ಸಂಪಾದನೆ
ಚಾಣಕ್ಯನ ಪ್ರಕಾರ ಪತಿಯಾದವನು ತನ್ನ ದುಡಿಮೆಯ ಬಗ್ಗೆ ಪತ್ನಿಯ ಬಳಿ ಹೇಳಿಕೊಳ್ಳಬಾರದು. ಹೇಳಿಕೊಂಡರೂ ಕೂಡ ಇಷ್ಟೇ ಅಂಪಾದನೆ ಇದೆ ಅಂತ ಸರಿಯಾದ ಲೆಕ್ಕ ಕೊಡಬಾರದು. ಯಾಕಂದ್ರೆ ಮುಂದೆ ಆಕೆ ನಿಮ್ಮ ಸಂಪಾದನೆಯ ಲೆಕ್ಕ ಇಟ್ಟು. ನೀವು ಅಗತ್ಯ ಕೆಲಸಕ್ಕೆ ಖರ್ಚು ಮಾಡುತ್ತಿದ್ದರೆ ಅದಕ್ಕೆ ಖರ್ಚು ಮಾಡದಂತೆ ಆಕೆ ನಿಮ್ಮ ಕೈ ಕಟ್ಟಿ ಹಾಕಬಹುದು. ನೀವು ನಿಮ್ಮವರಿಗೆ ಸಹಾಯ ಮಾಡುತ್ತಿದ್ದರೆ ಅದಕ್ಕೂ ಆಕೆ ಅಡ್ಡಗಾಲು ಹಾಕಬಹುದು. ಇದರಿಂದಾಗಿ ಮುಂದೆ ನೀವು ತೊಂದರೆ ಅನುಭವಿಸಬೇಕಾಗುತ್ತದೆ.
3. ದಾನ
ಚಾಣಕ್ಯನ ಪ್ರಕಾರ ನೀವು ಮಾಡುವ ದಾನದ ಬಗ್ಗೆ ನಿಮ್ಮ ಪತ್ನಿಯ ಬಳಿ ಹೇಳಿಕೊಳ್ಳಲೇಬಾರದು. ಯಾಕಂದ್ರೆ ನಾವು ಮಾಡುವ ದಾನ ಯಾವಾಗಲೂ ರಹಸ್ಯವಾಗಿ ಇರಬೇಕು. ನಾವು ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ತಿಳಿಯಬಾರದು. ದಾನದ ಬಗ್ಗೆ ನಾವು ಎಲ್ಲರ ಬಳಿಯೂ ಹೇಳಿಕೊಂಡು ತಿರುಗಾಡಿದರೆ ದಾನ ಅದರ ಪ್ರಾಮುಖ್ಯತೆಯನ್ನು ಕಳೆದುಕೊಂಡು ಬಿಡುತ್ತದೆ. ಅದೇ ರೀತಿ ಪತ್ನಿಯ ಬಳಿ ಕೂಡ ಈ ವಿಚಾರದ ಬಗ್ಗೆ ಮಾತನಾಡಲೇ ಬೇಡಿ. ಯಾಕಂದ್ರೆ ಆಕೆ ನೀವು ಮಾಡುವ ಪುಣ್ಯ ಕಾರ್ಯಕ್ಕೆ ಅಡ್ಡಗಾಲು ಹಾಕುವ ಸಾಧ್ಯತೆ ಇದೆ.
4. ದೌರ್ಬಲ್ಯ
ಚಾಣಕ್ಯನ ಪ್ರಕಾರ ನಿಮ್ಮ ದೌರ್ಬಲ್ಯಗಳು ಏನೇ ಇರಬಹುದು. ಆದರೆ ಅದರ ಬಗ್ಗೆ ಇತರರ ಬಳಿ ಹಂಚಿಕೊಳ್ಳಲೇ ಬಾರದು. ಅಷ್ಟೇ ಅಲ್ಲ, ನಿಮ್ಮ ಪತ್ನಿಯ ಬಳಿಯೂ ಹೇಳಿಕೊಳ್ಳಬೇಡಿ. ಯಾಕಂದ್ರೆ ಆಕೆ ನಿಮ್ಮ ದೌರ್ಬಲ್ಯವನ್ನು ಅಸ್ತ್ರವಾಗಿಸಿಕೊಂಡರೆ ಕಷ್ಟ. ನಿಮ್ಮ ದೌರ್ಬಲ್ಯದ ವಿಚಾರವನ್ನೇ ಇಟ್ಟುಕೊಂಡು ಆಕೆ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುವ ಸಾಧ್ಯತೆ ಇದೆ. ಎಲ್ಲರೂ ಈ ರೀತಿ ಮಾಡುತ್ತಾರೆ ಅಂತಲ್ಲ. ಆದರೆ ಹೆಚ್ಚಿನವರು ನಿಮ್ಮ ದೌರ್ಬಲ್ಯದ ಪ್ರಯೋಜನ ಪಡೆದುಕೊಳ್ಳುತ್ತಾರೆ. ಹೀಗಾಗಿ ಮುಂಜಾಗರೂಕತೆಯಿಂದ ಇರೋದು ನಿಮ್ಮ ಕರ್ತವ್ಯ.
ಅದೆಂತಹ ಪರಿಸ್ಥಿತಿ ಬಂದರೂ ಕೂಡ ಇಂತಹ ವಿಚಾರಗಳ ಬಗ್ಗೆ ನಿಮ್ಮ ಪತ್ನಿಯ ಬಳಿ ಹೇಳಿಕೊಳ್ಳಲೇಬೇಡಿ. ಯಾಕಂದ್ರೆ ಒಂದಲ್ಲ ಒಂದು ದಿನ ನಿಮಗೆ ಮುಳುವಾಗುವ ಸಾಧ್ಯತೆ ಇದೆ.



Click it and Unblock the Notifications



