Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹಾವಿನಂತೆ ವಿಷಕಾರೋ ವ್ಯಕ್ತಿಗಳ ಜೊತೆ ಸ್ನೇಹ ಮಾಡಲೇಬೇಡಿ : ಚಾಣಕ್ಯ
ಆಚಾರ್ಯ ಚಾಣಕ್ಯರ ಪ್ರಕಾರ ನಮ್ಮ ಜೊತೆಗೆ ಇರುವ ಕೆಲವು ವ್ಯಕ್ತಿಗಳು ತುಂಬಾನೇ ಅಪಾಯಕಾರಿ. ಎಷ್ಟು ಅಪಾಯಕಾರಿಯಂದ್ರೆ ಹಾವು ಹಾಗೂ ಚೇಳಿಗಿಂತ ಅವರು ನಮ್ಮ ಜೊತೆಗಿದ್ದರೆ ನಮಗೆ ಆಪತ್ತು ತಪ್ಪಿದಲ್ಲ ಅಂತ ಚಾಣಕ್ಯ ಹೇಳಿದ್ದಾರೆ.
ಹೌದು, ಮನಸ್ಸಲ್ಲೇ ವಿಷಕಾರುವ ಕೆಟ್ಟ ಜನಗಳಿಂದ ನಾವು ದೂರವಿರಬೇಕು ಎಂದು ಚಾಣಕ್ಯ ಕಿವಿ ಮಾತು ಹೇಳಿದ್ದಾರೆ. ಹಾಗೂ ಅಂಥವರ ಬಳಿ ತಪ್ಪಿಯೂ ಸಹಾಯವನ್ನು ಕೇಳಲೇಬೇಡಿ.

ಹಾಗಾದ್ರೆ ನಾವು ನಮ್ಮ ಜೀವನದಲ್ಲಿ ಖುಷಿಯಿಂದ ಇರಬೇಕಾದರೆ ಎಂಥಹ ವ್ಯಕ್ತಿಗಳಿಂದ ದೂರವಿರಬೇಕು ಎಂದು ಚಾಣಕ್ಯ ಹೇಳಿದ್ದಾರೆ. ಆ ವ್ಯಕ್ತಿಗಳು ಯಾರು ಅನ್ನೋದನ್ನ ಹೇಳ್ತೀವಿ.
1. ಮಾತು ಮಾತಿಗೂ ಸಿಡುಕುವ ವ್ಯಕ್ತಿಗಳಿಂದ ದೂರವಿರಿ
ಚಾಣಕ್ಯನ ಪ್ರಕಾರ ಅತಿಯಾಗಿ ಸಿಟ್ಟು ಮಾಡಿಕೊಳ್ಳುವ ವ್ಯಕ್ತಿಗಳಿಂದ ದೂರವಿರಬೇಕು ಅಂತಾರೆ. ನಿಮಗೆಲ್ಲಾ ಗೊತ್ತಿರೋ ಹಾಗೇ ಕೋಪವೇ ಮನುಷ್ಯನ ಅತೀ ದೊಡ್ಡ ಶತ್ರು. ಅತಿಯಾಗಿ ಕೋಪ ಹೊಂದಿರುವ ವ್ಯಕ್ತಿ ಆ ಕ್ಷಣದಲ್ಲಿ ಯಾವ ಮಟ್ಟಕ್ಕಾದರೂ ಇಳಿಯುತ್ತಾನೆ. ಇದಿಷ್ಟೇ ಅಲ್ಲ, ಆತನ ಕೋಪ ಆತನ ಜೊತೆಗೆ ಇತರರಿಗೂ ಕೆಟ್ಟದ್ದನ್ನು ಮಾಡಬಹುದು. ಕೋಪ ಇದ್ದಾಗ ತಪ್ಪು ಯಾವುದು ಸರಿ ಯಾವುದು ಅನ್ನೋದನ್ನ ನಿರ್ಧಾರಿಸೋ ಪರಿಜ್ಞಾನವು ಕೂಡ ಇರೋದಿಲ್ಲ. ಇಂತಹ ವ್ಯಕ್ತಿಗಳು ಶತ್ರುಗಳಿಗಿಂತಾನೂ ಅಪಾಯಕಾರಿ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ.
2. ದುರಾಸೆ ಉಳ್ಳವರು, ಕುತಂತ್ರಿಗಳಿಂದ ದೂರವಿರಿ
ಆಚಾರ್ಯ ಚಾಣಕ್ಯರ ಪ್ರಕಾರ ದುರಾಸೆ ಹಾಗೂ ಹೊಟ್ಟೆ ಕಿಚ್ಚು ಹೊಂದಿರುವ ವ್ಯಕ್ತಿಗಳಿಂದ ದೂರವಿರಬೇಕೆಂದು ಚಾಣಕ್ಯ ಹೇಳಿದ್ದಾರೆ. ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ನೀವು ಇವರ ಸಹಾಯ ಪಡೆಯಲೇಬೇಡಿ. ಯಾಕಂದ್ರೆ ಇಂಥಹ ವ್ಯಕ್ತಿಗಳಿಗೆ ನಿಮಗೆ ಸಹಾಯ ಮಾಡುವ ಉದ್ದೇಶವಂತೂ ಖಂಡಿತ ಇರೋದಿಲ್ಲ. ಸಹಾಯ ಮಾಡಿದರೂ ನಿಮ್ಮ ಜೀವನ ಹಾಳಾಗಲಿ ಎಂದು ಮನಸ್ಸಲ್ಲೇ ಅಂದುಕೊಳ್ಳುತ್ತಾರೆ. ಹಾಗೂ ಅವರು ಎಂದಿಗೂ ನಿಮ್ಮ ಅಭಿವೃದ್ಧಿ ಹಾಗೂ ಯಶಸ್ಸನ್ನು ಬಯಸೋದೇ ಇಲ್ಲ. ಹಾಗೆಯೇ ಹೊಟ್ಟೆ ಕಿಚ್ಚು ಇರುವವರಿಗೆ ಸರಿ ಯಾವುದು? ತಪ್ಪು ಯಾವುದು? ಅನ್ನೋದನ್ನ ನಿರ್ಧರಿಸೋದಕ್ಕೂ ಸಾಧ್ಯವಾಗೋದಿಲ್ಲ. ಹೀಗಿರುವಾಗ ಇಂಥವರ ಸಂಘ ಬೇಡ ಎಂದು ಚಾಣಕ್ಯ ಹೇಳಿದ್ದಾರೆ.
3. ಸ್ವಾರ್ಥಿಗಳ ಸಂಘ ಬೇಡವೇ ಬೇಡ
ಆಚಾರ್ಯ ಚಾಣಕ್ಯರ ಪ್ರಕಾರ ನಾವು ಸ್ವಾರ್ಥಿಗಳ ಸಂಘ ಮಾಡಲೇಬಾರದು. ಯಾಕಂದ್ರೆ ಇಂಥಹ ವ್ಯಕ್ತಿಗಳಿಂದ ನಿಮಗೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಇವರು ನಿಮ್ಮನ್ನು ಯಾವ ಸಮಯದಲ್ಲಾದರೂ ಸಂಕಷ್ಟಕ್ಕೆ ತಳ್ಳಿ ಬಿಡಬಹುದು. ಚಾಣಕ್ಯನ ಪ್ರಕಾರ ನಮ್ಮ ಶತ್ರುಗಳು ನಮ್ಮ ಮುಂದಿನಿಂದ ದಾಳಿ ನಡೆಸುತ್ತಾರೆ. ಆದ್ರೆ ಸ್ವಾರ್ಥಿಗಳು ಹಾಗಲ್ಲ ನಿಮ್ಮ ಜೊತೆಗೆ ಇದ್ದು, ನಿಮ್ಮ ಬಗ್ಗೆ ತಿಳಿದುಕೊಂಡು, ನಿಮ್ಮ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿತ್ವ ಹೊಂದಿರುತ್ತಾರೆ. ಇಂಥಹ ವ್ಯಕ್ತಿಗಳನ್ನು ನಂಬೋದಕ್ಕೆ ಹೋಗಲೇಬೇಡಿ. ಸ್ವಾರ್ಥಿಗಳ ತಮಗೆ ಯಾವ ರೀತಿ ನಿಮ್ಮಿಂದ ಉಪಯೋಗ ಆಗುತ್ತೆ ಅನ್ನೋದನ್ನ ಯೋಚಿಸುತ್ತಾರೆಯೇ ಹೊರತು ಬೇರ್ಯಾವುದರ ಬಗ್ಗೆ ಅವರು ಯೋಚನೆ ಮಾಡೋದಿಲ್ಲ. ಹಾಗಾಗಿ ಇಂತಹ ವ್ಯಕ್ತಿಗಳ ಜಾಲದಲ್ಲಿ ಸಿಲುಕೋದಕ್ಕೆ ಹೋಗಲೇಬೇಡಿ.
ಒರ್ವ ವ್ಯಕ್ತಿಗೆ ಆತನ ಜೀವನದಲ್ಲಿ ಜೊತೆಗಾರರು ಕೂಡ ತುಂಬಾನೇ ಮುಖ್ಯವಾಗುತ್ತಾರೆ. ಹೀಗಾಗಿ ಸ್ನೇಹ ಮಾಡುವಾಗ ಅಳೆದು ತೂಗಿ ಮಾಡಬೇಕು. ಆತನ ಬಳಿ ದುಡ್ಡಿಲ್ಲದಿದ್ದರೂ ಪರವಾಗಿಲ್ಲ ನಿಷ್ಕಲ್ಮಷ ಮನಸ್ಸಿರುವ ವ್ಯಕ್ತಿಯ ಸ್ನೇಹ ಮಾಡಿದರೆ ಉತ್ತಮ.



Click it and Unblock the Notifications



