Latest Updates
-
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು!
ಚೈತ್ರ ನವರಾತ್ರಿ: ಈ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ತಿನ್ನಬಾರದು ಏಕೆ?
ಮಾರ್ಚ್ 22ರಿಂದ ಚೈತ್ರ ನವರಾತ್ರಿ ಪ್ರಾರಂಭ. ವರ್ಷದಲ್ಲಿ ಎರಡು ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು.
ಒಂದು ಚೈತ್ರ ಮಾಸದಲ್ಲಿ ಬರುವ ಚೈತ್ರ ನವರಾತ್ರಿ ಮತ್ತೊಂದು ಶಾರದೀಯ ನವರಾತ್ರಿ. ಕರ್ನಾಟಕದಲ್ಲಿ ಶಾರದೀಯ ನವರಾತ್ರಿ ಕಳೆದು 10ನೇ ದಿನ ದಸರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುವುದು.

ನವರಾತ್ರಿ ಸಮಯದಲ್ಲಿ ಅದರದ್ದೇ ಆಚರಣೆಗಳಿವೆ, ಪೂಜಾ ವಿಧಿಗಳಿವೆ, ಆಹಾರ ಪದ್ಧತಿಗಳಿವೆ. ನವರಾತ್ರಿಯ ಸಮಯದಲ್ಲಿ ದುರ್ಗೆಯ ಒಂಭತ್ತು ಅವತಾರಗಳನ್ನು ಆಚರಿಸಲಾಗುವುದು. ಈ 9 ದಿನ ಸಾತ್ವಿಕ ಆಹಾರವನ್ನಷ್ಟೇ ಸೇವಿಸುತ್ತಾರೆ. ಕೆಲವರು 9 ದಿನ ಉಪವಾಸ ನಿಯಮ ಪಾಲಿಸುತ್ತಾರೆ. ಹಣ್ಣು-ಹಂಪಲು, ಹಾಲು ಇವುಗಳನ್ನಷ್ಟೇ ಸೇವಿಸಿ ದೇವಿಯ ಆರಾಧನೆ ಮಾಡುತ್ತಾರೆ.
ಇನ್ನು ಕೆಲವರು ಕಠಿಣ ಉಪವಾಸ ನಿಯಮ ಪಾಲಿಸದಿದ್ದರೂ ಈ ಸಮಯದಲ್ಲಿ ಅಡುಗೆಯಲ್ಲಿ ಈರುಳ್ಳಿ-ಬೆಳ್ಳುಳ್ಳಿ ಬಳಸುವುದಿಲ್ಲ. ನವರಾತ್ರಿ ಸಮಯದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಏಕೆ ಬಳಸಬಾರದು, ಅದರ ಹಿಂದಿನ ಕಾರಣವೇನು ಎಂದು ನೋಡೋಣ ಬನ್ನಿ:
ನವರಾತ್ರಿ ಸಮಯದಲ್ಲಿ ಸಾತ್ವಿಕ ಆಹಾರವನ್ನೇ ಸೇವಿಸಬೇಕು
ಈ ಸಮಯದಲ್ಲಿ ಮೊಟ್ಟೆ, ಮಾಂಸ, ಮದ್ಯ ಇವುಗಳನ್ನು ಸೇವಿಸುವುದಿಲ್ಲ. ಅಲ್ಲದೆ ಈ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಕಿರುವ ಆಹಾರಗಳನ್ನು ಕೂಡ ಸೇವಿಸುವುದಿಲ್ಲ. ಈರುಳ್ಳಿ-ಬೆಳ್ಳುಳ್ಳಿ ಸೇವಿಸಿದರೆ ಬೆಳ್ಳುಳ್ಳಿ ನಮ್ಮ ಗಮನವನ್ನು ಕಡಿಮೆ ಮಾಡದರೆ ಈರುಳ್ಳಿ ಮೈ ಉಷ್ಣತೆ ಹೆಚ್ಚಿಸುತ್ತದೆ. ಆದ್ದರಿಂದ ಈರುಳ್ಳಿ ಬೆಳ್ಳುಳ್ಳಿ ಸೇವಿಸಬಾರದು ಎಂದು ಹೇಳಲಾಗುವುದು.
ಆಯುರ್ವೇದ ಏನು ಹೇಳುತ್ತದೆ?
ಆಯುರ್ವೇದ ಪ್ರಕಾರ ಸಾತ್ವಿಕ ಆಹಾರಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಸಾತ್ವಿಕ ಆಹಾರದಲ್ಲಿ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇರುವುದಿಲ್ಲ. ಅದೇ ಸ್ವಾತಿಕ ಆಹಾರಗಳೆಂದರೆ ಹಣ್ಣುಗಳು, ತರಕಾರಿಗಳನ್ನು ತಿನ್ನುತ್ತೇವೆ. ಇದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಆಯುರ್ವೇದ ಆಹಾರವನ್ನು ಮೂರು ವಿಧಗಳಾಗಿ ವಿಂಗಡಿಸಿದೆ. 1. ಸಾತ್ವಿಕ 2. ರಾಜಸ 3. ತಾಮಸ.
ಸಾತ್ವಿಕ ಆಹಾರಗಳೆಂದರೆ ಶುದ್ಧವಾದದ್ದು, ಶಕ್ತಿ ನೀಡುವಂಥದ್ದು, ನೈಸರ್ಗಿಕವಾದದ್ದು . ಅದೇ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ರಾಜಸ ಗುಣದ ಜೊತೆಗೆ ಸೇರಿಸಿದ ಕಾರಣ ನವರಾತ್ರಿ ಸಮಯದಲ್ಲಿ ಸೇವಿಸಬಾರದು. ಈ ಆಹಾರ ಸೇವಿಸುವುದರಿಂದ ಪೂಜೆಯ ಕಡೆಗೆ ಏಕಾಗ್ರತೆ ಕಡಿಮೆಯಾಗುವುದು ಅಂದರೆ ಬೇರೆ ಕಡೆಗೆ ಆಸಕ್ತಿ ಹೆಚ್ಚಿಸುವುದು ಈ ಕಾರಣದಿಂದ ತಿನ್ನಬಾರದು ಎಂದು ಹೇಳಲಾಗುವುದು.



Click it and Unblock the Notifications
