Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹಾಸನಾಂಬೆ ಪವಾಡ: ಜೋರು ಮಳೆಯಲ್ಲೂ ನಂದಿ ಹೋಗದೆ ಉರಿದ ಕರ್ಪೂರ!
ಹಾಸನಾಂಬೆಯ ದೇವಿಯ ಪವಾಡಗಳ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಈ ದೇವಾಲಯದ ಪವಾಡದ ಕಾರಣದಿಂದಾಗಿ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬಂದು ದೇವಿಯ ದರ್ಶನ ಪಡೆದು ಹೋಗುತ್ತಿದ್ದಾರೆ. ವರ್ಷಕ್ಕೊಮ್ಮೆ ಮಾತ್ರ ಈ ದೇವಾಲಯ ಬಾಗಿಲು ತೆಗೆಯಲಾಗುವುದು.
ಹಾಸನಾಂಬೆ ದೇಗುಲದ ಪ್ರಮುಖ ವಿಶೇಷವೆಂದರೆ ಈ ದೇವಾಲಯಬನ್ನು ವರ್ಷಕ್ಕೊಮ್ಮೆ ಮಾತ್ರ ತೆರೆದು ಪೂಜೆಯನ್ನು ಸಲ್ಲಿಸಲಾಗುವುದು. ಈ ವರ್ಷ ನವೆಂಬರ್ 3ಕ್ಕೆ ದೇವಾಲಯದ ಬಾಗಿಲು ತೆರೆಯಲಾಗಿದೆ. ಬಲಿಪಾಡ್ಯಮಿ ದಿನದಂದು ಮುಚ್ಚಲಾಗುವುದು. ಅಲ್ಲಿಯವರೆಗೆ ಪ್ರತಿನಿತ್ಯ ಸಾವಿರಾರು ಭಕ್ತರು ಪ್ರತಿನಿತ್ಯ ಇಲ್ಲಿಗೆ ಬಂದು ದೇವಿಯ ದರ್ಶನ ಪಡೆದು ಹೋಗುತ್ತಾರೆ.

ಹಾಸನಾಂಬೆಯ ಪವಾಡ
ಹಾಸನಾಂಬೆಯ ಪವಾಡದವೆಂದರೆ ಈ ದೇವಾಲಯದಲ್ಲಿ ಬಾಗಿಲು ಮುಚ್ಚುವ ಮುನ್ನ ತುಪ್ಪದ ದೀಪ ಹಚ್ಚಿ, ಹೂಗಳು ಹಾಗೂ ನೈವೇದ್ಯ ಅರ್ಪಿಸಿ ಬಾಗಿಲು ಹಾಕಲಾಗುವುದು, ನಂತರ ಆ ಬಾಗಿಲು ಮುಂದಿನ ವರ್ಷವಷ್ಟೇ ತೆರೆಯಲಾಗುವುದು. ಬಾಗಿಲು ತೆಗೆಯುವಾಗ ವರ್ಷದ ಹಿಂದೆ ಹಚ್ಚಿಟ್ಟ ದೀಪ ಉರಿಯುತ್ತಿರುತ್ತದೆ, ಹೂಗಳು ಬಾಡಿರುವುದಿಲ್ಲ, ನೈವೇದ್ಯ ಹಾಳಾಗಿರುವುದಿಲ್ಲ, ಈ ಪವಾಡದ ಕಾರಣಕ್ಕೆ ಹಾಸನಾಂಬೆಯ ದರ್ಶನಕ್ಕೆ ಗಣ್ಯ ವ್ಯಕ್ತಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಬಂದು ದೇವಿಯ ಆಶೀರ್ವಾದ ಪಡೆಯುತ್ತಾರೆ. ಇಲ್ಲಿಯ ಜಾತ್ರೆಯ ಸಮಯದಲ್ಲಿ ಇಲ್ಲಿ ಬಂದಾಗ ಸಾವಿರಾರು ಭಕ್ತರಿಂದಾಗಿ ಈ ದೇವಾಲಯದ ಎತ್ತ ನೋಡಿದರೂ ಜನ ಸಾಗರವೇ ಕಾಣುವುದು.
ನವೆಂಬರ್ 9ರಂದು ಭಕ್ತರ ಕಣ್ಣಿಗೆ ಬಿದ್ದ ಪವಾಡ
ಹಾಸನ ಸೇರಿದಂತೆ ರಾಜ್ಯದ ಹಲವು ಕಡೆ ಅಕಾಲಿಕ ಮಳೆ ಬಂದಿತ್ತು, ಹಾಸನದಲ್ಲಿ ಜೋರಾಗಿ ಮಳೆ ಸುರಿಯುತ್ತಿತ್ತು, ಹಾಸನಾಂಬೆಯ ದೇವಾಲಯದ ಆವರಣದಲ್ಲಿ ಭಕ್ತರೊಬ್ಬರು ಹಚ್ಚಿಟ್ಟ ಕರ್ಪೂರ ಆ ಜೋರು ಮಳೆಯಲ್ಲೂ ನಂದಿ ಹೋಗದೆ ಉರಿಯುತ್ತಿತ್ತು. ಅಲ್ಲದೆ ಸಾಮಾನ್ಯವಾಗಿ ಕರ್ಪೂರ ಕೆಲವು ಸೆಕೆಂಡ್‌ಗಳಷ್ಟೇ ಉರಿಯುತ್ತದೆ, ಆದರೆ ಅಷ್ಟು ಜೋರು ಮಳೆ ಸುರಿಯುತ್ತಿತ್ತು, ಕೆಲವು ನಿಮಿಷಗಳವರೆಗೆ ಕರ್ಪೂರ ಉರಿಯುತ್ತಲೇ ಇತ್ತು. ಈ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದು ಭಕ್ತರು ದೇವಿಯ ಪವಾಡವೆಂದೇ ಹೇಳುತ್ತಿದ್ದಾರೆ.
ವೈಜ್ಞಾನಿಕ ವಿಶ್ಲೇಷಣೆ ಮಾಡುತ್ತಿದ್ದಾರೆ ಕೆಲವರು
ಈ ವೀಡಿಯೋದ ಬಗ್ಗೆ ಕೆಲವರು ವೈಜ್ಞಾನಿ ವಿಶ್ಲೇಷಣೆ ಮಾಡುತ್ತಿದ್ದಾರೆ.ಕರ್ಪೂರ ಮಳೆಯಲ್ಲಿ ಹೊತ್ತಿ ಉರಿದಿದ್ದು ದೊಡ್ಡ ಪವಾಡವೇನೂ ಇಲ್ಲ ಎಂದು ಪ್ರಯೋಗದ ಮೂಲಕ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಮ್ಮ ಧಾರ್ಮಿಕ ಭಾವನೆಗಳನ್ನು ನೋಯಿಸುವ ಪ್ರಯತ್ನ ಮಾಡಬೇಡಿ ಎಂಬುವುದು ಭಕ್ತರ ಅಭಿಪ್ರಾಯವಾಗಿದೆ.
ನಂಬಿಕೆಯೆಂಬುವುದು ಆ ವ್ಯಕ್ತಿಗೆ ಬಿಟ್ಟ ವಿಷಯ
ಎಲ್ಲಾ ನಂಬಿಕೆಗಳಿಗೆ ವೈಜ್ಞಾನಿಕ ದೃಷ್ಟಿಕೋನ ನೀಡಲು ಯತ್ನಿಸುವುದು ಒಳ್ಳೆಯದಲ್ಲ. ಆ ನಂಬಿಕೆಗಳಿಂದ ಯಾರಿಗೂ ಏನೂ ತೊಂದರೆಯಾಗುತ್ತಿಲ್ಲ ಎಂದಾದರೆ ಅವರ ಧಾರ್ಮಿಕ ಭಾವನೆಗಳನ್ನು ಗೌರವಿಸಿ. ಈ ದೇವಾಲಯಲ್ಲಿ ವರ್ಷವಿಡೀ ಏಕೆ ದೀಪ ಉರಿಯುತ್ತಿದೆ ಎಂದು ವೈಜ್ಞಾನಿಕವಾಗಿ ಹೇಳಲು ಪ್ರಯತ್ನಿಸಿ ಸೋತಿದ್ದಾರೆ. ಧರ್ಮದ ಅಡಿಪಾಯ ಇರುವುದು ಬಲವಾದ ನಂಬಿಕೆ, ಆ ನಂಬಿಕೆಯನ್ನು ಅಲುಗಾಡಿಸುವ ಪ್ರಯತ್ನ ಯಾರೂ ಮಾಡಬಾರದು. ಇಂಥ ಎಷ್ಟೋ ಪವಾಡಗಳು, ಶಕ್ತಿಗಳು ಈ ಪ್ರಕೃತಿಯಲ್ಲಿದೆ.
ವರ್ಷಕ್ಕೊಮ್ಮೆ ಮಾತ್ರ ದೇವಿಯ ದರ್ಶನ ಭಾಗ್ಯ
ಈ ದೇವಾಲಯದ ಬಾಗಿಲು ತೆರೆಯುವಾಗ ತಳವಾರ ಮನೆತನದವರು ಇರಬೇಕು, ಅವರು ಪೂಜೆಯನ್ನು ಮಾಡಿ ಬಾಳೆ ಕಂದನ್ನು ಕತ್ತರಿಸಿ ನಂತರವಷ್ಟೇ ಬಾಗಿಲು ತೆರೆಯಲಾಗುವುದು. ವರ್ಷ ಪೂರ್ತಿ ಬಾಗಿಲು ಮುಚ್ಚರುವುದರಿಂದ ದೇವಿಯ ದೃಷ್ಟಿ ತುಂಬಾ ಪ್ರಖರತೆಯಿಂದ ಕೂಡಿರುತ್ತದೆ ಎಂಬ ನಂಬಿಕೆ. ದೇವಿಯ ಪ್ರಖರ ದೃಷ್ಟಿ ತಡೆಯುವ ಶಕ್ತಿ ಭಕ್ತರಿಗಿರಲ್ಲ ಹಾಗಾಗಿ ಬಾಳೆದಿಂದು ಕಡಿದು ದೃಷ್ಟಿ ತೆಗೆದು ನಂತರ ಬಾಗಿಲನ್ನು ತೆರೆಯಲಾಗುವುದು. ಹೀಗೆ ಬಾಗಿಲು ತೆರೆದಾಗ ಹಿಂದಿನ ವರ್ಷ ಹಚ್ಚಿಟ್ಟ ದೀಪ ಹಾಗೆಯೇ ಇರಲಿದೆ.
ಮೊದೆಲೆಲ್ಲಾ ಹಾಸನಾಂಬೆ ಉತ್ಸವ ಆ ಊರಿಗಷ್ಟೇ ಸೀಮಿತವಾಗಿತ್ತು,ಈಗ ಈ ದೇವಾಲಯದ ಪ್ರಸಿದ್ಧಿ ಕರ್ನಾಟಕದ ಆಚೆಗೂ ಹರಡಿದೆ, ಹಾಸನಾಂಬೆಯ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ವರ್ಷ ಸರ್ಕಾರ ಹೆಲಿ ಟೂರಿಸಂ ಕೂಡ ಪ್ರಾರಂಭಿಸಿದೆ. ನೀವು ಈ ದೇವಾಲಯ =ಕ್ಕೆ ಹೋಗಬೇಕೆಂದು ಬಯಸಿದರೆ ಬಲಿಪಾಡ್ಯಮಿಗೆ ಮುಂಚೆಯೇ ಹೋಗಿ ದರ್ಶನ ಪಡೆದು ಬನ್ನಿ.



Click it and Unblock the Notifications
