Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇಷ ರಾಶಿಯಲ್ಲಿ ಬುಧ-ರಾಹು ಸಂಚಾರ : 5 ರಾಶಿಗಳಿಗೆ ಶುಭ ಫಲ
ಬುಧನು ಮೇಷ ರಾಶಿಗೆ ಮಾರ್ಚ್ 31 ರಂದು ಮಧ್ಯಾಹ್ನ 2.44 ಕ್ಕೆ ಪ್ರವೇಶಿಸುತ್ತಾನೆ. ಇದಕ್ಕೂ ಮುನ್ನ ಬುಧನು ಮೀನರಾಶಿಯಲ್ಲಿ ಉದಯಿಸುತ್ತಾನೆ. ಇದಾದ ಬಳಿಕ ಸೂರ್ಯ ಕೂಡ ಏಪ್ರಿಲ್ 14 ರಂದು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಬುಧನೊಂದಿಗೆ ಸೇರಿ ಬುಧಾದಿತ್ಯ ಯೋಗವನ್ನು ರೂಪಿಸುತ್ತಾನೆ.
ಬುಧಾದಿತ್ಯ ಯೋಗದ ಪ್ರಭಾವದಿಂದ ಅನೇಕ ರಾಶಿಗಳಿಗೆ ಶುಭ ಫಲವನ್ನು ನೀಡಲಿದ್ದಾನೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಉದ್ಯೋಗಸ್ಥರಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತವೆ.

ಬುಧನು ಮೇಷ ರಾಶಿಯನ್ನು ಪ್ರವೇಶಿಸಿದಾಗ ಮತ್ತು ರಾಹುವಿನ ಜೊತೆ ಸೇರಿದಾಗ ಯಾವೆಲ್ಲಾ ರಾಶಿ ಚಕ್ರಗಳಿಗೆ ಶುಭ ಫಲವಿದೆ ಅನ್ನೋದ್ರ ಬಗ್ಗೆ ತಿಳಿದುಕೊಳ್ಳೋಣ.
ಮಿಥುನ ರಾಶಿ
ಬುಧ ನಿಮ್ಮ ರಾಶಿಚಕ್ರದ 11 ನೇ ಮನೆಗೆ ಪ್ರವೇಶ ಪಡೆಯುತ್ತಿದ್ದಾನೆ. ಇದರಿಂದಾಗಿ ಮಿಥುನ ರಾಶಿಯವರಿಗೆ ಆರ್ಥಿಕ ಲಾಭಗಳಾಗಲಿದೆ. ನೀವು ಮೊದಲಿಗಿಂತ ಹೆಚ್ಚು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ ಮತ್ತು ನೀವು ಹಣವನ್ನು ಗಳಿಸಲು ಶುಭ ಅವಕಾಶಗಳನ್ನು ಪಡೆಯುತ್ತೀರಿ. ನಿಮ್ಮ ಕೆಲವು ಹಳೆಯ ಆಸೆಗಳು ಈಡೇರುತ್ತವೆ ಮತ್ತು ಈ ಸಮಯದಲ್ಲಿ ನೀವು ಭೂಮಿ ಆಸ್ತಿಯನ್ನು ಸಹ ಖರೀದಿಸಬಹುದು. ಹಾಗೂ ಹಿರಿಯರು ಹಾಗೂ ಒಡ ಹುಟ್ಟಿದವರ ಜೊತೆಗೆ ನಿಮ್ಮ ಭಾಂದವ್ಯ ಉತ್ತಮವಾಗಿರಲಿದೆ. ಉನ್ನತ ಶಿಕ್ಷಣವನ್ನು ಮುಂದುವರಿಸಲು ಉತ್ತಮ ಸಮಯವಾಗಿದೆ. ಪರಿಹಾರವಾಗಿ, ಬುಧವಾರದಂದು ಪಚ್ಚೆ ಹೊಂದಿರುವ ಚಿನ್ನದ ಉಂಗುರವನ್ನು ಧರಿಸಿ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯಲ್ಲಿ ಸಾಗುವ ಸಮಯದಲ್ಲಿ ಬುಧ 10 ನೇ ಮನೆಗೆ ಪ್ರವೇಶಿಸಲಿದ್ದಾನೆ. ಕರ್ಕಾಟಕ ರಾಶಿಯವರಿಗೆ ವೃತ್ತಿ ಜೀವನದ ವಿಷಯದಲ್ಲಿ ಎಲ್ಲವೂ ಒಳ್ಳೆಯದಾಗಲಿದೆ. ಈ ವೇಳೆ ನಿಮಗೆ ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಅಥವಾ ನೀವು ನಿಮ್ಮ ಸ್ವಂತ ವ್ಯವಹಾರವನ್ನು ಸಂಬಂಧಿಕರೊಂದಿಗೆ ಪ್ರಾರಂಭಿಸುವ ಸಾಧ್ಯತೆಗಳಿದೆ. ದೊಡ್ಡ ಕಂಪನಿ ಅಥವಾ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಈ ಸಮಯವು ತುಂಬಾನೇ ಉತ್ತಮ. ಇನ್ನೂ ನಿಮ್ಮ ಕೌಟುಂಬಿಕ ಜೀವನವೂ ಸಂತೋಷದಿಂದ ಕೂಡಿರುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಬುಧನು ನಿಮ್ಮ ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಈ ಮನೆ ಅದೃಷ್ಟ ಮತ್ತು ದೂರದ ಪ್ರಯಾಣವನ್ನು ಪ್ರತಿನಿಧಿಸುತ್ತದೆ. ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು ಭವಿಷ್ಯಕ್ಕಾಗಿ ಹಣವನ್ನು ಕೂಡಿ ಹಾಕಲು ಸಾಧ್ಯವಾಗುತ್ತದೆ. ನೀವು ಅಂದುಕೊಂಡಿದ್ದೆಲ್ಲಾ ಈಡೇರುತ್ತವೆ. ಇನ್ನೂ ಧಾರ್ಮಿಕ ಚಟುವಟಿಕೆಗಳ ಕಡೆಗೆ ನಿಮ್ಮ ಒಲವು ಹೆಚ್ಚಾಗುತ್ತದೆ. ತತ್ವಜ್ಞಾನಿಗಳು, ಬರಹಗಾರರು, ಸಲಹೆಗಾರರು ಅಥವಾ ಶಿಕ್ಷಕರು ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಅವಕಾಶಗಳನ್ನು ಹೊಂದಿರುತ್ತಾರೆ. ವಿದ್ಯಾರ್ಥಿಗಳಿಗೆ ಮುಂದೆ ಸಾಗಲು ಅವಕಾಶಗಳಿದೆ. ನೀವು ನಿಮ್ಮ ತಂದೆ ಮತ್ತು ಗುರುಗಳ ಸಂಪೂರ್ಣ ಮಾರ್ಗದರ್ಶನವನ್ನು ಪಡೆಯುತ್ತೀರಿ. ಇದರಿಂದ ನಿಮಗೆ ಒಳ್ಳೆಯದಾಗುತ್ತದೆ. ಕಿರಿಯ ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗುತ್ತದೆ. ಮತ್ತು ಪ್ರತಿಯೊಂದು ವಿಷಯದಲ್ಲೂ ನೀವು ಅವರ ಬೆಂಬಲವನ್ನು ಪಡೆಯುತ್ತೀರಿ.
ಧನು ರಾಶಿ
ಬುಧ ಸಂಕ್ರಮಣದ ಸಮಯದಲ್ಲಿ ಧನು ರಾಶಿ ಐದನೇ ಮನೆಗೆ ಪ್ರವೇಶಿಸುತ್ತಾನೆ. ಈ ಸಮಯವು ವಿದ್ಯಾರ್ಥಿಗಳಿಗೆ ಅದ್ಭುತವಾಗಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅತ್ಯುತ್ತಮ ಅವಕಾಶಗಳನ್ನು ನೀವು ಪಡೆಯುವ ಸಾಧ್ಯತೆಯಿದೆ. ಇನ್ನೂ ಅಧ್ಯಾಯ ಮುಗಿಸಿ ಕೆಲಸ ಹುಡುಕುತ್ತಿರುವವರಿಗೆ ಉತ್ತಮ ಉದ್ಯೋಗವಕಾಶಗಳು ಲಭ್ಯವಾಗಲಿದೆ. ವಯಕ್ತಿಕ ವಿಚಾರದಲ್ಲಿ ಶಾಂತಿ ಕಂಡುಕೊಳ್ಳುತ್ತೀರಿ. ಸಂಗಾತಿಯೊಂದಿಗೆ ಸಂಬಂಧ ಬಲವಾಗುತ್ತದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಹಾಗೂ ಮದುವೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳ ಬಯಸುವವರಿಗೆ ಇದು ಉತ್ತಮ ಕಾಲ. ಪಾಲುಗಾರಿಕೆಯಲ್ಲಿ ವ್ಯವಹಾರ ಆರಂಭಿಸಲು ಶುಭ ಕಾಲ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ಬುಧ ಸಂಕ್ರಮಣ ನಿಮ್ಮ ಜಾತಕದ ಮೂರನೇ ಮನೆಯಲ್ಲಿ ಗೋಚರವಾಗಲಿದೆ. ನೀವು ಕಡಿಮೆ ದೂರದ ಪ್ರಯಾಣವನ್ನು ಯೋಜಿಸಬಹುದು ಅದು ನಿಮಗೆ ಪ್ರಯೋಜನಕಾರಿಯಾಗಿದೆ. ಮತ್ತು ನೀವು ಅಂದುಕೊಂಡ ಉದ್ದೇಶವು ಈಡೇರುತ್ತದೆ. ಇನ್ನೂ ಮಾಧ್ಯಮ ಉದ್ಯಮದಲ್ಲಿ ಕೆಲಸ ಮಾಡುವವರಿಗೆ ಈ ಸಮಯವು ಹೊಸ ಅವಕಾಶಗಳನ್ನು ಒದಗಿಸುತ್ತದೆ.



Click it and Unblock the Notifications




