Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಬುದ್ಧ ಪೂರ್ಣಿಮೆಯಂದೇ ಚಂದ್ರಗ್ರಹಣ: ಈ ದಿನ ಹೀಗೆ ಮಾಡಿದರೆ ಪುಣ್ಯಫಲ ದೊರೆಯುವುದು
ವರ್ಷದ ಎರಡನೇ ಗ್ರಹಣ, ಮೊದಲ ಚಂದ್ರಗ್ರಹಣ ಮೇ 5ರಂದು ಸಂಭವಿಸಲಿದೆ. ಏಪ್ರಿಲ್ 20ಕ್ಕೆ ಸೂರ್ಯಗ್ರಹಣ ಸಂಭವಿಸಿದ 15 ದಿನದಲ್ಲಿ ವೈಶಾಖ ಮಾಸದ ಶುಕ್ಲಪಕ್ಷದ ಪೂರ್ಣಿಮೆಯೆಂದು ಚಂದ್ರಗ್ರಹಣ ಸಂಭವಿಸಲಿದೆ. ಈ ಚಂದ್ರಗ್ರಹಣ ಬುದ್ಧ ಪೂರ್ಣಿಮೆ ದಿನವೇ ಸಂಭವಿಸಲಿರುವುದು ಕಾಕತಾಳೀಯವೇ ಸರಿ. ಹಿಂದೂ ಧರ್ಮದಲ್ಲಿ ಬುದ್ಧ ಪೂರ್ಣಿಮೆಯನ್ನು ತುಂಬಾ ವಿಶೇಷವಾದ ದಿನವೆಂದು ಪರಿಗಣಿಸಲಾಗಿದೆ.
ಮನುಕುಲಕ್ಕೆ ಉಪಯುಕ್ತವಾಗುವ ಅನೇಕ ಸಿದ್ಧಾಂತಗಳನ್ನು ನೀಡಿರುವ ಮಹಾನ್ ಗೌತಮ ಬುದ್ಧ. ಗೌತಮ ಬುದ್ಧ ವೈಶಾಖ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯೆಂದು ಜನಿಸಿದರು. ಹಿಂದೂ ನಂಬಿಕೆಗಳ ಪ್ರಕಾರ ವಿಷ್ಣುವಿನ ದಶ ಅವತಾರಗಳನ್ನು ಬುದ್ಧನ ಅವತಾರ ಕೂಡ ಒಂದು ಎಂದು ಹೇಳಲಾಗುವುದು.

ಬುದ್ಧನ ತತ್ವಗಳು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ.ಇದನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ನಡೆದರೆ ಬದುಕು ತುಂಬಾನೇ ಸುಂದರವಾಗುವುದು. ಇದೀಗ ಎರಡು ಮಹತ್ವದ ಘಟನೆಗಳು ಒಂದೇ ದಿನ ಸಂಭವಿಸಿರುವುದರಿಂದ ಮೇ 5 ತುಂಬಾನೇ ವಿಶೇಷವಾಗಿದೆ. ಈ ದಿನ ಮಾಡುವ ದಾನ ಧರ್ಮಗಳಿಂದ ವಿಶೇಷ ಫಲ ಪಡೆಯುವಿರಿ.
ಈ ದಿನ ಪುಣ್ಯ ಸ್ನಾನ ಹಾಗೂ ದಾನದ ಮಹತ್ವ
ನೀವು ಈ ದಿನ ಪುಣ್ಯ ನದಿಯಲ್ಲಿ ಸ್ನಾನ ಮಾಡಿ ಬಡವರಿಗೆ ದಾನ ಮಾಡುವುದರಿಂದ ಬುದ್ಧ ಆದರ್ಶ ಪಾಲಿಸಿದಂತಾಗುವುದು ಅಲ್ಲದೆ ಚಂದ್ರಗ್ರಹಣದಂದು ದಾನ ಮಾಡಿದ ಶುಭ ಫಲವನ್ನು ಪಡೆಯುತ್ತೀರಿ. ಈ ದಿನ ದಾನಗಳನ್ನು ಮಾಡುವುದರಿಂದ ನಿಮ್ಮ ಕಷ್ಟಗಳು ದೂರಾಗುವುದು ಎಂಬ ನಂಬಿಕೆ ಇದೆ.
ವೈಶಾಖ ಮಾಸದ ಪೂರ್ಣಿಮೆಯಂದು ಏನು ಮಾಡಬೇಕು?
* ಸೂರ್ಯೋದಕ್ಕೆ ಮುನ್ನವೇ ಎದ್ದೇಳಿ
* ಪುಣ್ಯ ನದಿಯಲ್ಲಿ ಅಥವಾ ನಿಮ್ಮ ಸ್ನಾನದ ನೀರಿಗೆ ಸ್ವಲ್ಪ ಗಂಗಾ ಜಲ ಸೇರಿಸಿ ಪುಣ್ಯ ಸ್ನಾನ ಮಾಡಿ
* ಈ ದಿನ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಆರಾಧನೆ ಮಾಡಿ.
* ಮನೆಯ ಮುಂದುಗಡೆ ಅರಿಶಿಣದಿಂದ ಸ್ವಸ್ತಿಕ ಬಿಡಿಸಿ.
* ಬೋಧಿ ವೃಕ್ಷದ ಸುತ್ತ ದೀಪ ಹಚ್ಚಿ, ಹೂಗಳನ್ನು ಅರ್ಪಿಸಿ
* ನಿರ್ಗತಿಕರಿಗೆ ಆಹಾರ, ಬಟ್ಟೆಗಳನ್ನು ದಾನ ಮಾಡಿ.
* ಮನೆಯಲ್ಲಿ ಗೂಡಿನಲ್ಲಿ ಪಕ್ಷಿಯಿದ್ದರೆ ಬಂಧ ಮುಕ್ತಗೊಳಿಸಿ
* ನಂತರ ಚಂದ್ರನಿಗೆ ಆರ್ಘ್ಯ ಅರ್ಪಿಸಿ.
ಏನು ಮಾಡಬಾರದು?
* ಈ ದಿನ ಮಾಂಸ, ಮದ್ಯ ಸೇವಿಸಬಾರದು
* ಯಾರಿಗೂ ತೊಂದರೆ ನೀಡಬೇಡಿ
* ಕೆಟ್ಟ ಪದಗಳಿಂದ ನಿಂದಿಸಬಾರದು
* ಸುಳ್ಳು ಹೇಳಬಾರದು
ಭಾರತದಲ್ಲಿ ಚಂದ್ರಗ್ರಹಣ ಗೋಚರಿಸುವುದೇ?
2023ರ ಮೊದಲ ಚಂದ್ರಗ್ರಹಣ ಬಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಭಾರತದಲ್ಲಿ ಇದರ ಸೂತಕವಿಲ್ಲ. ಆದರೆ ಈ ದಿನ ದಾನಗಳನ್ನು ಮಾಡುವುದರಿಂದ ಇದರ ಪುಣ್ಯದ ಫಲ ದೊರೆಯಲಿದೆ. ವರ್ಷದ ಮೊದಲ ಚಂದ್ರಗ್ರಹಣವು ಮೇ 5 ರಂದು ರಾತ್ರಿ 08.44 ಕ್ಕೆ ಪ್ರಾರಂಭವಾಗಲಿದ್ದು, ರಾತ್ರಿ 01.02 ಕ್ಕೆ ಕೊನೆಗೊಳ್ಳಲಿದೆ. ಈ ನೆರಳು ಚಂದ್ರಗ್ರಹಣದ ಒಟ್ಟು ಅವಧಿ 4 ಗಂಟೆ 15 ನಿಮಿಷಗಳು. ಈ ಪೆನಂಬ್ರಾಲ್ ಚಂದ್ರಗ್ರಹಣವು ಏಷ್ಯಾ, ಯುರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಆಗ್ನೇಯ ಯುರೋಪ್‌ನಲ್ಲಿ ಗೋಚರಿಸುತ್ತದೆ.



Click it and Unblock the Notifications

