Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಜ್ವರ ಎಂದು ಸಿಕ್ ಲೀವ್ ಕೇಳಿದರೆ ವೈದ್ಯರ ಚೀಟಿ ತಾ ಎಂದ ಬಾಸ್: ನಾನು ಹೊರ ನಡೆದೆ ಎಂದ ಉದ್ಯೋಗಿ!
ಆ ಉದ್ಯೋಗಿ ನನಗೆ ಜ್ವರ, ಇವತ್ತು ಸಿಕ್ ಲೀವ್ ಬೇಕು ಎಂದು ಕೇಳಿದಾಗ ಆತನ ಬಾಸ್ ನಿನಗೆ ಸಿಕ್ ಲೀವ್ ಬೇಕೆಂದರೆ ವೈದ್ಯರ ಚೀಟಿ ತೋರಿಸಬೇಕು ಎಂದು ಕೇಳುತ್ತಾರೆ, ಇಲ್ಲಾ ಸಾಮಾನ್ಯ ಜ್ವರವೆಂದರೆ ಕೆಲಸ ಮಾಡಿ ಎಂದು ಹೇಳುತ್ತಾರೆ. ಆ ಉದ್ಯೋಗಿ ತಕ್ಷಣವೇ ನಾನು ಕೆಲಸ ಬಿಡುತ್ತಿದ್ದೇನೆ ಎಂದು ಹೇಳುವ ಮೂಲಕ ಬಾಸ್‌ಗೆ, ಆತನ ಕಂಪನಿಗೆ ಗುಡ್‌ಬೈ ಹೇಳಿರುವ ವಾಟ್ಸಾಪ್ ಚಾಟ್ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ಈ ವರ್ಷದ ಶಾರ್ಟ್ ರೆಸಿಗ್ನೇಷನ್ ಇದೇ ನೋಡಿ
ಉದ್ಯೋಗಿ ಹಾಗೂ ಬಾಸ್ ನಡುವೆ ನಡೆದ ಸಂಭಾಷಣೆ ಈ ರೀತಿ ಇದೆ
ಹಾಯ್....(ಅವರ ಹೆಸರು), ರಜೆ ಕೇಳುವುದಕ್ಕೆ ನನಗೆ ಇಷ್ಟವಿಲ್ಲ, ಆದರೆ ಇಡೀ ರಾತ್ರಿ ಚಳಿ-ಜ್ವರವಿತ್ತು, ನನ್ನ ದೇಹದ ಪ್ರತಿಯೊಂದು ಭಾಗವು ನೋಯುತ್ತಿದೆ, ಈ ದಿನ ಕೆಲಸ ಮಾಡಲು ಸಾಧ್ಯವಾಗಲ್ಲ
ಬಾಸ್: ಈ ರೀತಿ ಎಕ್ಸ್‌ಕ್ಯೂಸ್ ರಜೆಗೆ ಡಾಕ್ಟರ್ ಬರೆದುಕೊಟ್ಟ ಚೀಟಿ ನೀಡಿ
ಉದ್ಯೋಗಿ: ಈ 3 ವರ್ಷದಲ್ಲಿ ನಾನು ಡಾಕ್ಟರ್ ಬಳಿ ಹೋಗಿಲ್ಲ, ಚಿಕ್ಕ ಜ್ವರಕ್ಕೆ ಡಾಕ್ಟರ್ ಬಳಿ ಹೋಗಲು ನನ್ನ ಹತ್ರ ಹಣವಿಲ್ಲ, (ನಂತರ ಅವರು ಹಿಂದಿನ ದಿನ ಕಂಪನಿಗೆ ಗಳಿಸಿಕೊಟ್ಟ ಲಾಭದ ಬಗ್ಗೆ ಹೇಳುತ್ತಾರೆ ನಂತರ) ನಾನು ಡಾಕ್ಟರ್‌ನ ಭೇಟಿಯಾದ ಚಾರ್ಜ್ ಕಂಪನಿ ಕೊಡುತ್ತದೆಯೇ? ಎಂದು ಕೇಳುತ್ತಾರೆ.
ಬಾಸ್: ಇಲ್ಲ, ಆದರೆ ನೀವು ಡಾಕ್ಟರ್ ಚೀಟಿ ನೀಡದೆ ಕೇಳಿದ ರಜೆ ಕೊಡಲು ಸಾಧ್ಯವಿಲ್ಲ, ಸಾಮಾನ್ಯ ಜ್ವರವಾದರೆ ಬಂದು ಕೆಲಸ ಮಾಡಬಹುದು ಸರಿ ಅಲ್ವಾ? ನೀವು ಹೇಗೆ ಕೆಲಸ ಮಾಡುತ್ತೀರೋ ಹಾಗೆ ನೀವು ಮನೆಗೆ ಹಣ ತೆಗೆದುಕೊಂಡು ಹೋಗಲು ಸಾಧ್ಯವಾಗುವುದು.
ಉದ್ಯೋಗಿ: ಒಕೆ ಬಡ್, ಬ್ರೇಕ್ ರೂಮ್‌ನಲ್ಲಿ ಕುಳಿತು ದಿನವಿಡೀ ಫೋನ್‌ನಲ್ಲಿ ಆಡುತ್ತಾ ಫನ್ ಮಾಡು, ಐ ಆಮ್ ಔಟ್...ಎಂದು ಉತ್ತರಿಸುತ್ತಾರೆ.
ಈ ಚಾಟ್ ಇದೀಗ ವೈರಲ್ ಆಗುತ್ತಿದೆ. ಈ ಉದ್ಯೋಗಿ ಅನುಭವಿಸಿದಂತೆ ಹಿಂಸೆ ಸಾಕಷ್ಟು ಉದ್ಯೋಗಿಗಳು ಅನುಭವಿಸುತ್ತಾರೆ. ತಮ್ಮ ಬಾಸ್ ಅಥವಾ ಮ್ಯಾನೇಜರ್ ನಮ್ಮ ಕಷ್ಟಗಳನ್ನು ಕಿವಿಗೆ ಹಾಕಿಕೊಳ್ಳಲು ಸಿದ್ಧವಿರಲ್ಲ, ಅಂಥವರಿಗೆ ಇಂಥ ಉತ್ತರ ನೀಡಬೇಕೆಂದು ನೆಟ್ಟಿಗರು ಆ ಉದ್ಯೋಗಿ ಮಾಡಿದ ಕೆಲಸಕ್ಕೆ ಭೇಷ್ ಎನ್ನುತ್ತಿದ್ದಾರೆ.
ಯಾವಾಗ ಬಾಸ್ ಉದ್ಯೋಗಿಗಳ ಕಷ್ಟವನ್ನು ಅರ್ಥಮಾಡಿಕೊಳ್ಳುತ್ತಾನೋ ಉದ್ಯೋಗಿಗಳು ತಮ್ಮ ಶಕ್ತಿ ಮೀರಿ ಆ ಕಂಪನಿಗೆ ತಮ್ಮ ಕೊಡುಗೆ ನೀಡುತ್ತಾರೆ. ನೀವು ರೆಸಿಗ್ನೇಷನ್ ನೋಡಿ ನಿಮಗೇನಿಸಿತು ಕಮೆಂಟ್ ಮಾಡಿ.



Click it and Unblock the Notifications

