Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಯಾವ ರಾಶಿಯವರು ಯಾವ ರೀತಿ ಪೂಜೆ ಮಾಡಿದ್ರೆ ಶಿವ ಒಲಿಯುತ್ತಾನೆ?
ಶಿವ ಶಕ್ತಿಯ ಮಹತ್ವ ಎಂತಹದ್ದು ಅನ್ನೋದು ಇಡೀ ಜಗತ್ತಿಗೆ ಗೊತ್ತಿದೆ. ಮಹಾಶಿವರಾತ್ರಿಯನ್ನು ಕೇವಲ ಶಿವನಿಗೆ ಮಾತ್ರವಲ್ಲ ಆ ದಿನವನ್ನು ಪಾರ್ವತಿಗೂ ಅರ್ಪಣೆ ಮಾಡಲಾಗುತ್ತದೆ. ಶಿವ ರಾತ್ರಿಯ ದಿನ ಶಿವ-ಶಕ್ತಿಯನ್ನು ನೆನದರೆ ನಮ್ಮ ಕಷ್ಟಗಳೆಲ್ಲಾ ಪರಿಹಾರವಾಗಿ ಇಷ್ಟಾರ್ಥಗಳೆಲ್ಲಾ ನೆರವೇರುತ್ತೆ ಅನ್ನೋ ನಂಬಿಕೆಯಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಿವನನ್ನು ಒಲಿಸಿಕೊಳ್ಳೋದಕ್ಕೆ ಒಂದೊಂದು ರಾಶಿಯವರು ಒಂದೊಂದು ವಿಧಾನವನ್ನು ಅನುಸರಿಸೋದ್ರ ಮೂಲಕ ಶಿವನನ್ನು ಒಲಿಸಿಕೊಳ್ಳಬಹುದುದಂತೆ. ಹಾಗಾದ್ರೆ ಯಾವ ರಾಶಿಯವರು ಯಾವ ರೀತಿ ಶಿವನನ್ನು ಭಕ್ತಿಯಿಂದ ಪೂಜಿಸಬೇಕು ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯ ಅಧಿಪತಿ ಮಂಗಳ. ಹೀಗಾಗಿ ಕೆಂಪು ಬಣ್ಣವನ್ನು ಮೇಷ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮೇಷ ರಾಶಿಯವರು ಮಹಾಶಿವರಾತ್ರಿಯ ದಿನದಂದು ಮಹಾದೇವನಿಗೆ ಕೆಂಪು ಚಂದನ ಮತ್ತು ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಇದಾದ ಬಳಿಕ ಓಂ ನಾಗೇಶ್ವರಾಯ ನಮಃ ಮಂತ್ರವನ್ನು 51 ಅಥವಾ 108 ಬಾರಿ ಜಪಿಸಬೇಕು.
ವೃಷಭ
ವೃಷಭ ಮಹಾದೇವನ ವಾಹನವಾಗಿದೆ. ಮತ್ತು ವೃಷಭ ರಾಶಿಯ ಅಧಿಪತಿಯನ್ನು ಶುಕ್ರ ಎಂದು ಪರಿಗಣಿಸಲಾಗುತ್ತದೆ. ಬಿಳಿ ಬಣ್ಣವನ್ನು ವೃಷಭ ರಾಶಿಯವರಿಗೆ ಮಂಗಳಕರವಾಗಿದೆ. ವೃಷಭ ರಾಶಿಯವರು ಮಹಾಶಿವರಾತ್ರಿಯಂದು ಮಹಾದೇವನನ್ನು ಪೂಜಿಸುವಾಗ ಮಲ್ಲಿಗೆ ಹೂಗಳನ್ನು ಅರ್ಪಿಸಬೇಕು. ಇದರೊಂದಿಗೆ ಶಿವನ ರುದ್ರಾಷ್ಟಕವನ್ನು ಪಠಿಸಿ.
ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ ಬುಧ. ಮಿಥುನ ರಾಶಿಯವರು ಮಹಾಶಿವರಾತ್ರಿಯ ದಿನದಂದು ಶಿವನಿಗೆ ಗೊರಟಿ ಹೂವು ಮತ್ತು ಗಾಂಜಾ ಅರ್ಪಿಸಿ. ಗೊರಟಿ ಹೂವನ್ನು ಅರ್ಪಿಸುವಾಗ ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ಜಪಿಸಿ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಅಧಿಪತಿ ಚಂದ್ರನಾಗಿದ್ದಾನೆ. ಚಂದ್ರನನ್ನು ಮಹಾದೇವನು ತನ್ನ ಕೇಶರಾಶಿಯಲ್ಲಿ ಇಟ್ಟುಕೊಂಡಿದ್ದಾನೆ. ಕರ್ಕಾಟಕ ರಾಶಿಯವರು ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಹಸುವಿನ ಹಾಲಿನ ಅಭಿಷೇಕ ಮಾಡಬೇಕು. ಮತ್ತು ರುದ್ರಷ್ಟಾಧ್ಯಾಯಿಯನ್ನು ಪಠಿಸಬೇಕು.
ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿಯವರು ಮಹಾಶಿವರಾತ್ರಿಯ ದಿನದಂದು ಮಹಾದೇವನ ಪೂಜೆಯಲ್ಲಿ ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಮತ್ತು ಶೀವನಿಗೆ ಇಷ್ಟವಾದ ಮಂತ್ರವನ್ನು ಪಠಣೆ ಮಾಡಬೇಕು.
ಕನ್ಯಾರಾಶಿ
ಕನ್ಯಾ ರಾಶಿಯ ಅಧಿಪತಿ ಬುಧ ಎಂದು ಪರಿಗಣಿಸಲಾಗುತ್ತದೆ. ಕನ್ಯಾ ರಾಶಿಯವರು ಮಹಾದೇವನನ್ನು ಬಿಲ್ವಪತ್ರೆ, ಗೊರಟಿ ಹೂವು, ಮುಂತಾದ ವಸ್ತುಗಳೊಂದಿಗೆ ಪೂಜಿಸಿ. ಮತ್ತು ಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯ ಪಠಿಸಿ.
ತುಲಾ ರಾಶಿ
ಶುಕ್ರನನ್ನು ತುಲಾ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ತುಲಾ ರಾಶಿಯವರು ಮಹಾಶಿವರಾತ್ರಿಯ ದಿನ ಶಿವಾಷ್ಟಕವನ್ನು ಪಠಿಸಬೇಕು. ಇದರೊಂದಿಗೆ, ಮೊಸರು ಅಥವಾ ಸಕ್ಕರೆ ಮಿಠಾಯಿ ಹೊಂದಿರುವ ಹಾಲಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿ ಮತ್ತು ಶಿವನ ಸಹಸ್ರನಾಮವನ್ನು ಪಠಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ವೃಶ್ಚಿಕ ರಾಶಿಯವರು ಗುಲಾಬಿ ಹೂವುಗಳು ಮತ್ತು ಬಿಲ್ವಪತ್ರೆಯಿಂದ ಮಹಾದೇವನ್ನು ಪೂಜಿಸಬೇಕು. ಮತ್ತು ನಂತರ ರುದ್ರಾಷ್ಟಕ ಸ್ತುತಿಯನ್ನು ಪಠಿಸಬೇಕು. ಇದರೊಂದಿಗೆ ಓಂ ಅಂಗರೇಶ್ವರಾಯ ನಮಃ ಮಂತ್ರವನ್ನು ಜಪಿಸಿ.
ಧನು ರಾಶಿ
ಗುರುವನ್ನು ಧನು ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಗುರುವಿಗೆ ಹಳದಿ ಬಣ್ಣ ಪ್ರಿಯವಾದ ಬಣ್ಣ. ಮಹಾಶಿವರಾತ್ರಿಯ ದಿನದಂದು ಧನು ರಾಶಿಯವರು ಬೆಳಿಗ್ಗೆ ಹಳದಿ ಬಣ್ಣದ ಹೂವುಗಳಿಂದ ಶಿವನನ್ನು ಪೂಜಿಸಬೇಕು. ನಂತರ ಪಾಯಸವನ್ನು ನೈವೇದ್ಯವಾಗಿ ಅರ್ಪಣೆ ಮಾಡಬೇಕು. ಇದಾದ ಬಳಿಕ ಶ್ರೀ ಶಿವಾಷ್ಟಕವನ್ನು ಪಠಿಸಿ.
ಮಕರ ರಾಶಿ
ಶನಿಯು ಮಕರ ರಾಶಿಯ ಅಧಿಪತಿ. ಮಕರ ರಾಶಿಯವರು ಶಿವನಿಗೆ ಗೊರಟಿ ಹೂವು, ಅಷ್ಟಗಂಧ ಇತ್ಯಾದಿಗಳಿಂದ ಪೂಜಿಸಬೇಕು. ಇದರ ಜೊತೆಗೆ ಓಂ ಪಾರ್ವತಿ ನಾಥಾಯ ನಮಃ ಮಂತ್ರವನ್ನು 108 ಬಾರಿ ಜಪಿಸಿ.
ಕುಂಭ ರಾಶಿ
ಶನಿಯು ಕುಂಭ ರಾಶಿಯ ಅಧಿಪತಿ. ಈ ರಾಶಿಯವರು ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪದಿಂದ ಪ್ರತ್ಯೇಕವಾಗಿ ಶಿವನಿಗೆ ಅಭಿಷೇಕ ಮಾಡಬೇಕು. ಮತ್ತು ಓಂ ಶಿವಾಯ ನಮಃ ಮಂತ್ರವನ್ನು ಪಠಿಸಬೇಕು. ಇದರ ಜೊತೆಗೆ ಶಿವಾಷ್ಟಕವನ್ನು ಪಠಿಸಬೇಕು.
ಮೀನ ರಾಶಿ
ಮೀನ ರಾಶಿಯ ಅಧಿಪತಿ ಗುರು. ಮೀನ ರಾಶಿಯವರು ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಪಂಚಾಮೃತ, ಮೊಸರು, ಹಾಲು ಮತ್ತು ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಪೂಜೆ ಮುಗಿದ ನಂತರ ಶ್ರೀಗಂಧದ ಮಾಲೆಯೊಂದಿಗೆ ಓಂ ಭಾಮೇಶ್ವರಾಯ ನಮಃ ಮಂತ್ರವನ್ನು 108 ಬಾರಿ ಜಪಿಸಿ.



Click it and Unblock the Notifications

