ಆಗಸ್ಟ್‌ ತಿಂಗಳ 12 ರಾಶಿಗಳ ಭವಿಷ್ಯ ರಾಶಿಫಲ ಹೇಗಿದೆ?

ಗ್ರಹಗತಿಗಳ ಆಧಾರದ ಮೇಲೆ ಆಗಸ್ಟ್ 2023ರ ಭವಿಷ್ಯ ನೀಡಲಾಗಿದೆ, ಈ ತಿಂಗಳು ನಿಮ್ಮ ರಾಶಿಗೆ ಹೇಗಿದೆ ಎಂದು ನೋಡೋಣ:

ಮೇಷ ರಾಶಿ
ಮೇಷ ರಾಶಿಯವರಿಗೆ ಆಗಸ್ಟ್‌ ತಿಂಗಳು ಉತ್ತಮವಾಗಿರಲಿದೆ. ಈ ತಿಂಗಳಿನಲ್ಲಿ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಹಲವು ಅವಕಾಶಗಳು ದೊರೆಯಲಿದೆ. ಸೂರ್ಯನ ಅನುಕೂಲಕರ ಸ್ಥಾನದಿಂದಾಗಿ ಈ ಸಮಯದಲ್ಲಿ ಹೆಚ್ಚು ಗಮನ ಸೆಳೆಯುತ್ತೀರಿ. ನಿಮ್ಮ ನಾಯಕತ್ವದ ಗುಣಗಳಿಂದ ಗಮನ ಸೆಳೆಯುತ್ತೀರಿ. ಆದರೆ ಈ ಅವಧಿಯಲ್ಲಿ ನಿಮ್ಮ ನಿರ್ಧಾರವನ್ನು ಬಹು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಈ ಅವಧಿಯಲ್ಲಿ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ತಾಳ್ಮೆ ತುಂಬಾನೇ ಮುಖ್ಯ.

August Month horoscope 2023

ವೃಷಭ ರಾಶಿ
ವೃತ್ತಿ ಜೀವನದಲ್ಲಿ ಸ್ಥಿರತೆ ಇರಲಿದೆ. ಮಂಗಳನ ಅನುಕೂಲಕರ ಸ್ಥಾನದಿಂದಾಗಿ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಯಾಗಿಸಲು ಪ್ರಯತ್ನಿಸುತ್ತೀರಿ. ಆರ್ಥಿಕ ಸ್ಥಿತಿಯನ್ನು ಬಲಪಡಿಸುವತ್ತ ಗಮನಹರಿಸುತ್ತೀರಿ, ಆದ್ದರಿಂದ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಆದರೆ ಖರ್ಚು ಮಿತಿಯಲ್ಲಿದ್ದರೆ ಒಳ್ಳೆಯದು. ಇನ್ನು ಹೂಡಿಕೆ ಮಾಡುವುದಾದರೆ ಜಾಗ್ರತೆವಹಿಸಿ.

ಮಿಥುನ ರಾಶಿ
ಈ ತಿಂಗಳು ನಿಮಗೆ ಮಿಶ್ರಫಲ. ಈ ತಿಂಗಳು ವೃತ್ತಿ ಬದುಕಿನ ದೃಷ್ಟಿಯಿಂದ ತುಂಬಾನೇ ಉತ್ತಮವಾಗಿದೆ. ಈ ಸಮಯದಲ್ಲಿ ನಿಮ್ಮ ಆಸೆ ನೆರವೇರಲಿದೆ. ನೀವು ನಿಮ್ಮ ಗುರಿಮುಟ್ಟಲು ಶ್ರಮಿಸಿದರೆ ಖಂಡಿತ ಫಲ ಸಿಗಲಿದೆ. ನೀವು ಕ್ರಿಯೇಟಿವ್ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಲು ಬಯಸುವುದಾದರೆ ಈ ಅವಧಿ ಅನುಕೂಲಕರವಾಗಿರಲಿದೆ. ಆದರೆ ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಸರಿದೂಗಿಸಿಕೊಂಡು ಹೋಗಲು ನೀವು ಪ್ರಯತ್ನಿಸಬೇಕು. ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮತೋಲನ ಕಾಪಾಡಲು ಪ್ರಯತ್ನಿಸಿ.

ಕರ್ಕ ರಾಶಿ
ಕರ್ಕ ರಾಶಿಯವರು ವೃತ್ತಿ ಬದುಕಿನಲ್ಲಿ ಮತ್ತಷ್ಟು ಪ್ರಗತಿ ಕಾಣುವಿರಿ, ನಿಮಗೆ ಬೆಳೆಯಲು ಉತ್ತಮ ಅವಕಾಶಗಳು ಸಿಗಲಿದೆ. ಈ ಅವಧಿಯಲ್ಲಿ ನೀವು ನೀವು ಪ್ರಯತ್ನಿಸಿದರೆ ಗುರಿಮುಟ್ಟಲು ಸಾಧ್ಯವಾಗುವುದು. ನಿಮ್ಮ ಆರ್ಥಿಕ ಸ್ಥಿತಿ ತುಂಬಾನೇ ಚೆನ್ನಾಗಿರಲಿದೆ. ಆದರೆ ಅನಗ್ಯತವಾಗಿ ಹಣ ಖರ್ಚು ಮಾಡಲು ಹೋಗಬೇಡಿ. ವೈಯಕ್ತಿಕ ಬದುಕು ಕೂಡ ಚೆನ್ನಾಗಿರಲಿದೆ.

ಸಿಂಹ ರಾಶಿ
ಈ ಅವಧಿ ಸಿಂಹ ರಾಶಿಯವರಿಗೆ ಅನುಕೂಲಕರವಾಗಿರಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ, ನೀವು ನಿಮ್ಮಲ್ಲಿರುವ ಕೌಶಲ್ಯದಿಂದ ಮತ್ತಷ್ಟು ಬೆಳೆಯಲು ಸಾಧ್ಯವಾಗುವುದು. ಈ ಅವಧಿಯಲ್ಲಿ ನಿಮ್ಮಲ್ಲಿ ಸ್ವಲ್ಪ ಅಹಂ ಕೂಡ ಕಾಣಿಸಿಕೊಳ್ಳಬಹುದು, ಆದರೆ ಇತರರ ಮನಸ್ಸಿಗೆ ನೋವಾಗದಂತೆ ವರ್ತಿಸಿ. ನೀವು ನಿಮ್ಮ ಸುತ್ತಲಿರುವವರಿಗೆ ಸ್ಪೂರ್ತಿ ತುಂಬುತ್ತೀರಿ, ಒಟ್ಟಿನಲ್ಲಿ ಈ ತಿಂಗಳು ನಿಮಗೆ ಉತ್ತಮವಾಗಿದೆ.

ಕನ್ಯಾ ರಾಶಿ
ನೀವು ಈ ಅವಧಿಯಲ್ಲಿ ನಿಮ್ಮ ಆಸಕ್ತಿ ಕಡೆಗೆ, ನಿಮ್ಮ ಆಸೆಯ ಕಡೆಗೆ ಹೆಚ್ಚಿನ ಗಮನಹರಿಸುತ್ತೀರಿ. ನಿಮ್ಮ ಕುಟುಂಬದಲ್ಲಿರುವ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿ. ವೃತ್ತಿ ಬದುಕಿನ ಬಗ್ಗೆ ಹೇಳುವುದಾದರೆ ನೀವು ಪ್ರಗತಿಯನ್ನು ಕಾಣುತ್ತೀರಿ, ಈ ಅವಧಿಯಲ್ಲಿ ನಿಮ್ಮ ಸಂವಹನ ಕೌಶಲ್ಯದಿಂದ ಗುರುತಿಸಿಕೊಳ್ಳುತ್ತೀರಿ, ಇತರರ ಜೊತೆ ವ್ಯವಹರಿಸುವಾಗ ತಾಳ್ಮೆಯಿಂದ ಮಾತನಾಡಿ.

ತುಲಾ ರಾಶಿ
ಈ ಅವಧಿಯಲ್ಲಿ ವೈವಾಹಿಕ ಸಂಬಂಧವನ್ನು ಬಲಪಡಿಸುವತ್ತ ಹೆಚ್ಚಿನ ಗಮನಹರಿಸಬೇಕಾಗಿದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿರುವವರು ಉತ್ತಮ ಫಲ ಪಡೆಯಲಿದ್ದಾರೆ. ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೊಲನ ಕಾಪಾಡಿಕೊಳ್ಳಲು ಪ್ರಯತ್ನಿಸಿ. ಕುಟುಂಬದಲ್ಲಿ ಏನಾದರೂ ಸಮಸ್ಯೆ ಇದ್ದರೆ ಬುದ್ಧಿವಂತಿಕೆ ಹಾಗೂ ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ.

ವೃಶ್ಚಿಕ ರಾಶಿ
ಈ ತಿಂಗಳು ವೈಯಕ್ತಿಕ ಹಾಗೂ ವೃತ್ತಿ ಬದುಕಿನ ದೃಷ್ಟಿಯಿಂದ ಈ ತಿಂಗಳು ನಿಮಗೆ ಅದ್ಭುತವಾಗಿದೆ. ಈ ತಿಂಗಳಿನಲ್ಲಿ ನೀವು ಉತ್ತಮ ಬದಲಾವಣೆಯನ್ನು ಕಾಣುತ್ತೀರಿ. ನೀವು ಬದಲಾವಣೆಯನ್ನು ಸ್ವೀಕರಿಸಿ, ಅವಕಾಶಗಳನ್ನು ಮಿಸ್‌ ಮಾಡದಿರಿ. ನೀವು ನಿಮ್ಮ ಕೆಲಸದ ಬಗ್ಗೆ ,ನಿಮ್ಮ ಆಸೆಗಳ ಬಗ್ಗೆ ಆತ್ಮವಲೋಕನ ಮಾಡುತ್ತೀರಿ, ನೀವು ಮತ್ತಷ್ಟು ಬೆಳೆಯುವತ್ತ ಗಮನಹರಿಸುತ್ತೀರಿ. ಸಂಬಂಧದಲ್ಲಿ ಯಾವುದೇ ವಿಷಯವಿರಲಿ ಮುಕ್ತ ಸಂವಹನ ನಿಮಗೆ ಸಹಕಾರಿಯಾಗಿದೆ.

ಧನು ರಾಶಿ
ವೃತ್ತಿ ಮತ್ತು ಆರ್ಥಿಕ ಜೀವನದ ದೃಷ್ಟಿಯಿಂದ ಈ ತಿಂಗಳು ನಿಮಗೆ ಉತ್ತಮವಾಗಿದೆ. ನೀವು ನಿಮ್ಮ ಗುರಿ ಮುಟ್ಟಲು ತುಂಬಾನೇ ಶ್ರಮ ಹಾಕುತ್ತೀರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಇದು ವೃತ್ತಿ ಜೀವನದಲ್ಲಿ ಬೆಳೆಯಲು ಸಹಾಯ ಮಾಡುತ್ತದೆ.

ಮಕರ ರಾಶಿ
ಈ ತಿಂಗಳು ನಿಮ್ಮ ಧನಾತ್ಮಕವಾಗಿರಲಿದೆ. ಈ ಸಮಯದಲ್ಲಿ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುವುದು. ಈ ಸಮಯದಲ್ಲಿ ಹೊಸ ಸವಾಲುಗಳನ್ನು ಧನಾತ್ಮಕವಾಗಿ ಸ್ವಾಗತಿಸುತ್ತೀರಿ.

ಕುಂಭ ರಾಶಿ
ಈ ಸಮಯದಲ್ಲಿ ಪ್ರೀತಿಯ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು. ನೀವು ಸಂಬಂಧವನ್ನು ಬಲ ಪಡಿಸಲು ಪ್ರಯತ್ನಿಸಬೇಕು. ನೀವು ವೃತ್ತಿ ಜೀವನ ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡಲು ಪ್ರಯತ್ನಿಸಿ. ಈ ಸಮಯದಲ್ಲಿ ನೀವು ನಿಮ್ಮ ಗುರಿ ಮುಟ್ಟಲು ಹೆಚ್ಚಿನ ಪ್ರಯತ್ನ ಹಾಕುತ್ತೀರಿ. ನಿಮ್ಮ ವ್ಯಕ್ತಿತ್ವದಲ್ಲಿ ಬೆಳವಣಿಗೆ ಕಾಣುತ್ತೀರಿ.

ಮೀನ ರಾಶಿ
ಆಗಸ್ಟ್ ತಿಂಗಳು ಮೀನ ರಾಶಿಯವರಿಗೆ ಹಣಕಾಸಿನ ದೃಷ್ಟಿಯಿಂದ ಉತ್ತಮವಾಗಿದೆ. ನಿಮ್ಮ ಆದಾಯವನ್ನು ಹೆಚ್ಚಿಸಲು ಅಥವಾ ನಿಮ್ಮ ಆರ್ಥಿಕ ಬಲಪಡಿಸಲು ಪ್ರಯತ್ನಿಸಿ. ನೀವು ಈ ಸಮಯದಲ್ಲಿ ಉಳಿತಾಯ ಮಾಡಲು ಪ್ರಯತ್ನಿಸಿ. ವ್ಯಾಯಾಮ ಮತ್ತು ಆರೋಗ್ಯಕರ ಅಭ್ಯಾಸಗಳ ಮೂಲಕ ನಿಮ್ಮ ದೈಹಿಕ ಆರೋಗ್ಯವನ್ನು ನೋಡಿಕೊಳ್ಳಿ. ಹಣಕಾಸಿನ ನಿರ್ಧಾರಗಳನ್ನು ನೀವು ತುಂಬಾ ಎಚ್ಚರಿಕೆಯಿಂದ ತೆಗೆದುಕೊಳ್ಳಿ.

English summary

August Month Horoscope 2023 In Kannada

Here are August Month 12 zodiac Signs, Read on....
X
Desktop Bottom Promotion