Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಗ್ರಹಗತಿಗಳ ಸ್ಥಾನದ ಪ್ರಕಾರ ಆಗಸ್ಟ್ ತಿಂಗಳು ವೃಷಭ ರಾಶಿಯವರಿಗೆ ಹೇಗಿರಲಿದೆ?
ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ವೃಷಭ ರಾಶಿಯವರ ಆಗಸ್ಟ್ ತಿಂಗಳ ಭವಿಷ್ಯವನ್ನು ನೀಡಲಾಗಿದ್ದು ಆಗಸ್ಟ್ ತಿಂಗಳು ವೃಷಭ ರಾಶಿಯವರಿಗೆ ಹೇಗೆ ಇರಲಿದೆ ಎಂದು ನೋಡೋಣ ಬನ್ನಿ:
ವೃಷಭರಾಶಿಯವರಿಗೆ ಈ ತಿಂಗಳು ಸಾಧಾರಣವಾಗಿರಲಿದೆ.ಗುರು, ರಾಹು ಹನ್ನೆರಡನೇ ಮನೆಯಲ್ಲಿ , ಶನಿ 9ನೇ ಮನೆಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿ, 6ನೇ ಮನೆಯಲ್ಲಿ ಕೇತು ಇದೆ.

ಈ ಗ್ರಹಗಳ ಸ್ಥಾನದಿಂದಾಗಿ ವೃತ್ತಿ ಜೀವನದಲ್ಲಿ ಬದಲಾವಣೆಯನ್ನು ಕಾಣಬಹುದು. ನಿಮ್ಮ ವೃತ್ತಿ ಬೆಳವಣಿಗೆಯಲ್ಲಿ ನೀವು ಕೆಲವು ಅಡೆತಡೆಗಳನ್ನು ಎದುರಿಸಬಹುದು. ಅದೇ ಸಮಯದಲ್ಲಿ, ಈ ಗ್ರಹಗಳ ಪ್ರತಿಕೂಲ ಪರಿಣಾಮಗಳಿಂದ ನೀವು ಹಣವನ್ನು ಗಳಿಸುವಲ್ಲಿ ಕೂಡ ತೊಂದರೆಗಳನ್ನು ಎದುರಿಸಬಹುದು. ವೃಷಭ ರಾಶಿಯವರಿಗೆ ಶನಿಯು ತುಂಬಾ ಲಾಭದಾಯಕ ಗ್ರಹವಾಗಿದೆ, ಇದು ನಿಮ್ಮ ಮೇಲೆ ಅನುಕೂಲಕರ ಪ್ರಭಾವ ಬೀರುತ್ತಿದೆ
ಹನ್ನೆರಡನೇ ಮನೆಯಲ್ಲಿ ಗುರು, ರಾಹು ಇದ್ದು ಈ ಅವಧಿ ಆರ್ಥಿಕವಾಗಿ ನಿಮಗೆ ಅಷ್ಟೊಂದು ಅನುಕೂಲಕರವಲ್ಲ. ಹನ್ನೆರಡನೇ ಮನೆಯಲ್ಲಿ ರಾಹು ಮತ್ತು ಗುರುಗಳ ಉಪಸ್ಥಿತಿಯಿಂದಾಗಿ, ನೀವು ಈ ತಿಂಗಳು ನಿದ್ರೆಯಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಶುಕ್ರ ಹಿಮ್ಮುಖ ಸ್ಥಿತಿಯಲ್ಲಿದ್ದು ಈ ಅವಧಿಯಲ್ಲು ಸಂಬಂಧದಲ್ಲಿ ಕೆಲ ಸಮಸ್ಯೆಗಳಿರಬಹುದು. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಕೂಡ ಗಮನಹರಿಸಬೇಕು.
ವೃತ್ತಿ ಜೀವನ
ವೃತ್ತಿ ಬದುಕಿನಲ್ಲಿ ಯಶಸ್ಸು ಪಡೆಯಲು ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ, ವೃತ್ತಿ ಬದುಕಿನಲ್ಲಿ ಹಲವು ಬದಲಾವಣೆಗಳು ಕಂಡು ಬರುವುದು. ಆದರೆ ತಾಳ್ಮೆಯಿಂದ ಹಾಗೂ ಧೈರ್ಯದಿಂದ ಆ ಸವಾಲುಗಳನ್ನು ಎದುರಿಸಿ.
ಶನಿಯು ಹತ್ತನೇ ಮನೆಯಲ್ಲಿ, ಬುಧನು ಮೊದಲ ಮನೆಯಲ್ಲಿಇರುವುದರಿಂದ ಈ ಗ್ರಹಗಳ ಸ್ಥಾನದಿಂದ ವೃತ್ತಿ ಜೀವನದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುವುದು. ಗುರು ಮತ್ತು ರಾಹು ಹನ್ನೆರಡನೇ ಮನೆಯಲ್ಲಿರುವುದರಿಂದ ವ್ಯಾಪಾರಸ್ಥರಿಗೆ ಈ ತಿಂಗಳು ಸಾಮಾನ್ಯಕ್ಕಿಂತ ಹೆಚ್ಚಿನ ಲಾಭ ದೊರೆಯುವ ಸಾಧ್ಯತೆ ಇದೆ.
ಆರ್ಥಿಕ ಜೀವನ
ಹನ್ನೆರಡನೇ ಮನೆಯಲ್ಲಿ ರಾಹು ಮತ್ತು ಗುರು ಒಟ್ಟಿಗೆ ಇರುವುದರಿಂದ ಈ ಅವಧಿಯಲ್ಲಿ ಖರ್ಚು ಇರಲಿದೆ. ಶುಕ್ರ ದುರ್ಬಲ ಸ್ಥಾನದಲ್ಲಿದೆ. ಬುಧನು ಆಗಸ್ಟ್ 24ಕ್ಕೆ ಹಿಮ್ಮುಖ ಚಲನೆ ಮಾಡಿದಾಗ ಧನಹಾನಿಯಾಗುವ ಸಂಭವವಿದೆ. ವ್ಯಾಪಾರಸ್ಥರು ಈ ಅವಧಿಯಲ್ಲಿ ಬಯಸಿದ ಲಾಭ ಪಡೆಯಲು ಸ್ವಲ್ಪ ಕಷ್ಟವಾಗುವುದು.
ಆರೋಗ್ಯ
ಆರೋಗ್ಯದ ಬಗ್ಗೆ ಹೇಳುವುದಾದರೆ ಈ ತಿಂಗಳು ಮಿಶ್ರಫಲ. ದೊಡ್ಡ ಸಮಸ್ಯೆಯೇನೂ ಇರುವುದಿಲ್ಲ, ಆದರೆ ಗ್ರಹಗಳ ದೋಷದಿಂದಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ.
ಪ್ರೇಮ, ವೈವಾಹಿಕ, ಕುಟುಂಬ ಜೀವನ
ಪ್ರೇಮಿಗಳು ವಿವಾಹವಾಗಲೂ ನಿರ್ಧರಿಸಿದರೆ ಕೆಲ ಅಡೆತಡೆ ಎದುರಿಸಬಹುದು, ವೈವಾಹಿಕ ಜೀವನದಲ್ಲಿ ಹೊಂದಾಣಿಕೆಯ ಕೊರತೆ ಇರಲಿದೆ, ಕುಟುಂಬ ಜೀವನದಲ್ಲೂ ಮಾನಸಿಕ ಒತ್ತಡ ಅಧಿಕವಿರಲಿದೆ.
ಪರಿಹಾರ
* ಪ್ರತಿದಿನ ದುರ್ಗೆ ಮಂತ್ರ ಪಠಿಸಿ



Click it and Unblock the Notifications
