Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ದಿನನಿತ್ಯ ಚಪಾತಿಯನ್ನು ಗೋವುಗಳಿಗೆ ಅರ್ಪಿಸಿದ್ರೆ ಪಿತೃದೋಷ ಪರಿಹಾರ !
ಚಪಾತಿ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಅದ್ರಲ್ಲೂ ಇದು ಡಯೇಟ್ ಫುಡ್ ಅಲ್ವಾ? ಹೀಗಾಗಿ ಜನ ಇದನ್ನು ಬಯಸಿ ಬಯಸಿ ತಿನ್ನುತ್ತಾರೆ. ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟಕ್ಕೂ ಚಪಾತಿ ಸೇವಿಸುವವರು ಅನೇಕ ಮಂದಿಯಿದ್ದಾರೆ.
ನಿಮಗೊತ್ತಾ ಚಪಾತಿಯನ್ನು ಹೇಗಂದರೆ ಹಾಗೆ ಮಾಡೋ ಹಾಕಿಲ್ಲ. ಚಪಾತಿಯನ್ನು ತಯಾರಿಸೋದು ಕೂಡ ಒಂದು ಸೂಕ್ಷ್ಮ ವಿಚಾರ. ಅಷ್ಟಕ್ಕು ಚಪಾತಿಯ ಬಗ್ಗೆ ನಿಮಗೆ ಗೊತ್ತಿರದ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳ ಬಗ್ಗೆ ಇಂದು ತಿಳಿಕೊಳ್ಳೋಣ.

1. ಚಪಾತಿ ಮಾಡೋ ಮುಂಚೆ ಎಣಿಸಬಾರದು
ಸಾಮಾನ್ಯವಾಗಿ ನಾವು ಚಪಾತಿ ಮಾಡೋ ಮುಂಚೆ ಮನೆಯಲ್ಲಿ ಎಷ್ಟು ಜನರಿದ್ದಾರೆ ಎಂದು ಲೆಕ್ಕ ಹಾಕಿ ಆನಂತರ ಚಪಾತಿಯನ್ನು ತಯಾರಿಸುತ್ತೇವೆ. ಆದ್ರೆ ಈ ರೀತಿ ಮಾಡಬಾರದಂತೆ. ಗೋಧಿಯು ಸೂರ್ಯ ದೇವನಿಗೆ ಸಂಬಂಧಿಸಿದ್ದು, ಚಪಾತಿಯನ್ನು ಮಾಡೋ ಮುಂಚೆ ಎಣಿಸಿದರೆ ಅದು ಸೂರ್ಯ ದೇವನಿಗೆ ಅವಮಾನ ಮಾಡಿದಂತಾಗುತ್ತಂತೆ. ಇದರ ಪರಿಣಾಮ ನಮ್ಮ ಜಾತಕದಲ್ಲಿ ಸೂರ್ಯನ ಪ್ರಭಾವ ಕಡಿಮೆಯಾಗುತ್ತಂತೆ. ಇನ್ನೂ ವಾಸ್ತು ಶಾಸ್ತ್ರದ ಪ್ರಕಾರ ಚಪಾತಿ ಎಣಿಸಿ ನಂತರ ತಯಾರಿಸೋದ್ರಿಂದ ಕುಟುಂಬದಲ್ಲಿ ಸುಖ, ಸಮೃದ್ಧಿ ಕಡಿಮೆಯಾಗುತ್ತಂತೆ.
2. ಉಳಿದ ಹಿಟ್ಟಿನಿಂದ ಚಪಾತಿ ಮಾಡಿದ್ರೆ ರಾಹು ಧೋಷ ಕಾಡುತ್ತೆ
ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿಯೂ ರಾತ್ರಿ ಗೋಧಿ ಹಿಟ್ಟು ಕಲಸಿ ಫ್ರಿಡ್ಜ್‌ನಲ್ಲಿಟ್ಟು ಮಾರನೇ ದಿನ ಅದರಿಂದ ಚಪಾತಿಯನ್ನು ತಯಾರು ಮಾಡುತ್ತೇವೆ. ಇಲ್ಲದಿದ್ರೆ ಅದೇ ದಿನ ಚಪಾತಿ ಹಿಟ್ಟು ಕಲಸಿ ಚಪಾತಿ ಮಾಡಿ ಉಳಿದ ಹಿಟ್ಟನ್ನು ಮಾರನೇ ದಿನ ಬಳಸುತ್ತೇವೆ. ಹೀಗೆ ಮಾಡಲೇ ಬಾರದಂತೆ. ಹೀಗೆ ಮಾಡಿದ್ರೆ ರಾಹುವಿನ ಧೋಷ ಕಾಡುತ್ತಂತೆ.
ಹೌದು, ರಾಹು ಆ ಮನೆಯವರ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತಾನಂತೆ. ಇನ್ನೂ ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವು ಕೂಡ ಇದೆ. ಹಿಂದಿನ ದಿನ ಕಲಸಿಟ್ಟ ಗೋಧಿ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತಂತೆ.
3. ಒಂದು ಪ್ಲೇಟ್‌ನಲ್ಲಿ ಮೂರು ಚಪಾತಿ ತಿನ್ನಬಾರದು
ಅನೇಕ ಜನ ಚಪಾತಿ ಸೇವಿಸೋವಾಗ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಗಮನಿಸೋದಿಲ್ಲ. ನಿಮಗೊತ್ತಾ ಒಂದು ಪ್ಲೇಟ್‌ನಲ್ಲಿ ಮೂರು ಚಪಾತಿಗಳನ್ನು ಹಾಕಿಕೊಂಡು ಸೇವಿಸಬಾರದಂತೆ. ಹಿಂದೂ ಧರ್ಮದ ಪ್ರಕಾರ ಒರ್ವ ವ್ಯಕ್ತಿ ಸತ್ತ 13 ನೇ ದಿನಕ್ಕೆ ಆತನಿಗೆ ಸಂತಾಪ ಸೂಚಿಸಲು ಒಂದು ಪ್ಲೇಟ್‌ನಲ್ಲಿ ಮೂರು ಚಪಾತಿಗಳನ್ನು ಹಾಕಿಡಲಾಗುತ್ತದೆ. ಇದು ಆ ವ್ಯಕ್ತಿಗೆ ಸಂತಾಪವನ್ನು ಸೂಚಿಸುವ ಸಲುವಾಗಿ ಇಡಲಾಗುತ್ತದೆ. ಹೀಗಾಗಿ ಯಾವತ್ತೂ ಕೂಡ ಮೂರು ಚಪಾತಿ, ದೋಸೆಯನ್ನು ಪ್ಲೇಟ್‌ನಲ್ಲಿ ಹಾಕಿ ಸೇವಿಸಬಾರದು. ಮೂರರ ನಂತರ ಅದಕ್ಕೊಂದು ಚಿಕ್ಕ ತುಂಡು ಚಪಾತಿಯನ್ನು ಸೇರಿಸಿ.
4. ಗೋವಿಗೆ ಚಪಾತಿ ಅರ್ಪಿಸಿದ್ರೆ ಪಿತೃದೋಷ ಪರಿಹಾರ
ಸಾಮಾನ್ಯವಾಗಿ ನಾವು ನಮಗೋಸ್ಕರ ಚಪಾತಿ ಮಾಡುತ್ತೇವೆ. ಯಾರು ಪ್ರತಿನಿತ್ಯ ಚಪಾತಿ ಮಾಡಿ ಗೋವುಗಳಿಗೆ ಅರ್ಪಿಸುತ್ತಾರೋ ಅವರ ಪಿತೃದೋಷ ಪರಿಹಾರವಾಗುತ್ತಂತೆ. ಅದೇ ರೀತಿ ಮನೆಯಲ್ಲಿ ಮಾಡಿದ ಕೊನೆಯ ಚಪಾತಿಯನ್ನು ನಾಯಿಗೆ ನೀಡಬೇಕು. ಇದರಿಂದ ಶತ್ರುಗಳ ಭಯವು ದೂರವಾಗುತ್ತೆ ಎನ್ನಲಾಗ್ತಿದೆ.
5. ಮನೆಯಲ್ಲಿ 2-4 ಚಪಾತಿ ಹೆಚ್ಚುವರಿಯಾಗಿ ಮಾಡಿ
ಭಾರತದಲ್ಲಿ "ಅತಿಥಿ ದೇವೋಭವಾ" ಎಂಬ ಪರಿಕಲ್ಪನೆ ಇದೆ. ಇಲ್ಲಿ ಅತಿಥಿಗಳನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಮನೆಗೆ ಬಂದ ಅತಿಥಿಗಳನ್ನು ಯಾವತ್ತಿಗೂ ಖಾಲಿ ಹೊಟ್ಟೆಯಲ್ಲಿ ಕಳುಹಿಸಲೇಬಾರದು. ಹೀಗಾಗಿ ಮನೆಯಲ್ಲಿ ಚಪಾತಿ ಮಾಡೋವಾಗ 2-4 ಚಪಾತಿಗಳನ್ನು ಹೆಚ್ಚುವರಿಯಾಗಿ ಮಾಡಬೇಕು. ಇದರಿಂದ ಮನೆಗೆ ಯಾರಾದರೂ ಬಂದಾಗ ಅವರಿಗೆ ಕೊಡಬಹುದು.
ಅನೇಕ ಜನರಿಗೆ ಈ ವಿಚಾರದ ಬಗ್ಗೆ ಗೊತ್ತಿರ್ಲಿಕ್ಕಿಲ್ಲ. ಹೀಗಾಗಿ ಇನ್ನು ಮುಂದೆ ಚಪಾತಿ ಮಾಡೋವಾಗ, ತಿನ್ನೋವಾಗ ಈ ವಿಚಾರದ ಬಗ್ಗೆ ಗಮನ ಹರಿಸಿ.



Click it and Unblock the Notifications

