Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಕ್ಷಯ ತೃತೀಯ 2023: ಈ ದಿನ ಈ ಕುಬೇರ ಮಂತ್ರ ಪಠಿಸಿ ಸಮೃದ್ಧಿ ಹೆಚ್ಚುತ್ತೆ
ಹಿಂದೂಗಳಿಗೆ ಅಕ್ಷಯ ತೃತೀಯ ದಿನವೆಂದರೆ ಅತ್ಯಂತ ಮಂಗಳಕರವಾದ ದಿನ. ಯಾವುದೇ ಶುಭ ಸಮಾರಂಭಕ್ಕೆ ಅಥವಾ ಹೂಡಿಕೆಗೆ ಈ ದಿನ ತುಂಬಾನೇ ಪ್ರಾಶಸ್ತ್ಯ ಎಂದು ಹೇಳಲಾಗುವುದು.ಅಕ್ಷಯ ತೃತೀಯ ನಾವು ಏನಾದರೂ ಹೂಡಿಕೆ ಮಾಡಿದರೆ ನಮ್ಮ ಸಂಪತ್ತು ವೃದ್ಧಿಸುವುದು ಎಂಬ ನಂಬಿಕೆಯಿದೆ.
ಈ ಕಾರಣಕ್ಕೆ ಅಕ್ಷಯ ತೃತೀಯ ಶುಭ ಮುಹೂರ್ತದ ಸಮಯವನ್ನು ಕಾಯುತ್ತಿರುತ್ತೇವೆ. 2023ರಲ್ಲಿ ಅಕ್ಷಯ ತೃತೀಯವನ್ನು ಏಪ್ರಿಲ್ 22ರಂದು ಆಚರಿಸಲಾಗುವುದು. ಅಕ್ಷಯ ತೃತೀಯ ಪೂಜಾ ಮುಹೂರ್ತ ಯಾವಾಗ? ಅಕ್ಷಯ ತೃತೀಯ ಪೂಜಾ ವಿಧಿಗಳೇನು ಎಂದು ನೋಡೋಣ ಬನ್ನಿ:

ಅಕ್ಷಯ ತೃತೀಯ ಈ ಕಾರ್ಯಗಳಿಗೆ ತುಂಬಾನೇ ಶುಭ ನೋಡಿ
* ದಾನ-ಧರ್ಮ ಮಾಡಲು
* ಬಡವರಿಗೆ ಸಹಾಯ ಮಾಡಲು
* ಯಜ್ಞ-ಪೂಜೆಯನ್ನು ಮಾಡಲು
* ಚಿನ್ನ ಖರೀದಿಗೆ
* ಹೊಸ ಆಸ್ತಿ ಖರೀದಿಗೆ
* ಮನೆ ಖರೀದಿಗೆ
* ಗಾಡಿ ಖರೀದಿಗೆ
* ಹೂಡಿಕೆ ಮಾಡಲು
ಈ ದಿನ ನಾವು ಮಾಡುವ ಒಳ್ಳೆಯ ಕಾರ್ಯದ ಫಲ ಹೆಚ್ಚಾಗುವುದು ಎಂಬ ನಂಬಿಕೆಯಿದೆ.
ಅಕ್ಷಯ ತೃತೀಯಾ ಯಾವಾಗ ಆಚರಿಸಲಾಗುವುದು?
ಅಕ್ಷಯ ತೃತೀಯವನ್ನು ಅಕ್ಷಯ ತೃತೀಯ ತಿಥಿಯಂದು ಪುನರ್ವಸು ಕಾಲದಲ್ಲಿ ಆಚರಿಸಲಾಗುವುದು. ಒಂದು ವೇಳೆ ಅಕ್ಷಯ ತೃತೀಯ ತಿಥಿ ಸೋಮವಾರ ಅಥವಾ ಬುಧವಾರ ರೋಹಿಣಿ ನಕ್ಷತ್ರದಲ್ಲಿ ಬಂದರೆ ತುಂಬಾನೇ ಶುಭ ಎಂದು ಪರಿಗಣಿಸಲಾಗುವುದು.
ಅಕ್ಷಯ ತೃತೀಯ ಪೂಜಾ ಮುಹೂರ್ತ: ಶನಿವಾರ ಬೆಳಗ್ಗೆ 07:51:19 ರಿಂದ 12:19:56ರವರೆಗೆ
ಒಟ್ಟು ಅವಧಿ: 4 ಗಂಟೆ 28 ನಿಮಿಷ
ಅಕ್ಷಯ ತೃತೀಯ ಪೂಜಾ ವಿಧಿಗಳೇನು?
* ಅಕ್ಷಯ ತೃತೀಯ ದಿನದಂದು ಸ್ನಾನಮಾಡಿ ಹಳದಿ ಬಟ್ಟೆಯನ್ನು ಧರಿಸಿದರೆ ತುಂಬಾ ಶುಭ ಎಂದು ಪರಿಗಣಿಸಲಾಗಿದೆ.
* ನಂತರ ಶ್ರೀ ವಿಷ್ಣು ಮೂರ್ತಿಯನ್ನು ತೊಳೆದು ಗಂಗಾಜಲದಿಂದ ಶುದ್ಧಗೊಳಿಸಿ ನಂತರ ತುಳಸಿ, ಹಳದಿ ಹೂಗಳು, ಹಳದಿ ಹಣ್ಣುಗಳನ್ನು ಅರ್ಪಿಸಿ.
* ನಂತರ ದೇವರಿಗೆ ತುಪ್ಪದ ದೀಪ ಹಚ್ಚಿ ಹಳದಿ ವಸ್ತ್ರ ಹಾಸಿ ಕೂರಿ,
* ನಂತರ ವಿಷ್ಣು ಸಹಸ್ರನಾಮ ಪಠಿಸಿ.
* ಕೊನೆಗೆ ದೇವರಿಗೆ ಆರತಿ ಎತ್ತಿ, ನೈವೇದ್ಯ ಅರ್ಪಿಸಿ.
* ಈ ದಿನ ಸಂಪೂರ್ಣವಾಗಿ ಉಪವಾಸವಿರಲು ಸಾಧ್ಯವಾಗದವರು ಹಾಲು, ಹಣ್ಣುಗಳನ್ನು ಸೇವಿಸಬಹುದು.
ಪೌರಾಣಿಕ ಮಹತ್ವ
ಮಹಾಭಾರತದಲ್ಲಿ ಯುಧಿಷ್ಠರ ಅಕ್ಷಯ ತೃತೀಯ ಮಹತ್ವದ ಬಗ್ಗೆ ತಿಳಿಯ ಬಯಸುತ್ತಾನೆ. ಆಗ ಶ್ರೀಕೃಷ್ಣನು ಅಕ್ಷಯ ತೃತೀಯ ಮಹತ್ವದ ಬಗ್ಗೆ ಹೇಳುತ್ತಾ ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಜಪ, ತಪ, ಯಜ್ಞ, ಬರೆಯುವುದು, ಪಿತೃ ತರ್ಪಣ, ದಾನ ಈ ಕಾರ್ಯಗಳನ್ನು ಮಾಡಿದರೆ ತುಂಬಾನೇ ಪ್ರಯೋಜನ ಪಡೆಯುತ್ತಾರೆ ಎಂದು ಹೇಳುತ್ತಾನೆ.
ಪೌರಾಣಿಕ ಕತೆ:
ಒಬ್ಬ ಬಡ ವ್ಯಕ್ತಿ ಇರುತ್ತಾನೆ. ಅವನಿಗೆ ದೇವರ ಮೇಲೆ ತುಂಬಾನೇ ನಂಬಿಕೆ, ಆದರೆ ತನ್ನ ಬಡದಿಂದ ಬೇಸತ್ತು ಹೋಗಿರುತ್ತಾನೆ. ಆವಾಗ ಅವನು ದೇವರೇ ಈ ಬಡತನದಿಂದ ಮುಕ್ತಿ ನೀಡು ಎಂದು ಪ್ರಾರ್ಥಿಸುತ್ತಾನೆ. ಆವಾಗ ಯಾರೋ ಒಬ್ಬರು ಆತನಿಗೆ ಅಕ್ಷಯ ತೃತೀಯ ಪೂಜೆ ಮಹತ್ವದ ಬಗ್ಗೆ ಹೇಳುತ್ತಾರೆ. ಅದರಂತೆ ಆ ಬಡವ ಬೆಳಗ್ಗೆ ಎದ್ದು ಗಂಗಾ ನದಿಯಲ್ಲಿ ಸ್ನಾನ ಮಾಡಿ ಅಕ್ಷಯ ತೃತೀಯ ಆಚರಿಸುತ್ತಾನೆ. ಇದರಿಂದಾಗಿ ಆತ ಮುಂದಿನ ಜನ್ಮದಲ್ಲಿ ಕುಶಾವತಿಯ ರಾಜನಾಗುತ್ತಾನೆ.
ಅಕ್ಷಯ ತೃತೀಯದ ಮಹತ್ವ
* ವರ್ಷದಲ್ಲಿ ತುಂಬಾ ಶುಭ ಮುಹೂರ್ತವಿರುವ ದಿನ ಇದಾಗಿದೆ.
*ಈ ದಿನ ಪುಣ್ಯ ನದಿಯಲ್ಲಿ ಸ್ನಾನ ಮಾಡುವುದರಿಮದ ಕೆಟ್ಟದ್ದು ದೂರಾಗುತ್ತದೆ.
*ಪಿತೃ ತರ್ಪಣ ಮಾಡಿ ಪಿತೃದೋದಿಂದ ಮುಕ್ತರಾಗಲು ಈ ದಿನ ಶ್ರೇಷ್ಠವಾಗಿದೆ.
* ಈ ದಿನ ಚಿನ್ನ ಖರೀದಿಗೆ ತುಂಬಾನೇ ಒಳ್ಳೆಯದು
* ತ್ರೇತಾ ಯುಗ ಈ ದಿನದಿಂದ ಪ್ರಾರಂಭವಾಯಿತು ಎನ್ನಲಾಗುವುದು
* ಬದ್ರಿನಾಥ ದೇವಾಲಯದ ಬಾಗಿಲು ಈ ದಿನ ತೆರೆಯಲಿದೆ.
* ಶ್ರೀ ವಿಷ್ಣು ಹಯಗ್ರೀವನ ಅವತಾರ ತಾಳಿದ ದಿನವಾಗಿದೆ.
ಈ ದಿನ ಈ ಕುಬೇರ ಮಂತ್ರ ಪಠಿಸಿ
ಕುಬೇರ ಮಂತ್ರ
ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಶನಧಾನ್ಯಧೀಪತಯೇ
ಧನಧಾನ್ಯಸಮೃದ್ಧಿಮ್ ಮೇದೇಹಿ ದಾಪಯ ಸ್ವಾಹಾ||
ಧನ ಪಾಪ್ತಿಗೆ ಮಂತ್ರ
ಓಂ ಶ್ರೀಮ್ ಹ್ರೀಮ್ ಕ್ಲೀಮ್ ಶ್ರೀಮ್ ಕ್ಲೀಮ್ ವಿತ್ತೇಶ್ವರಾಯ ನಮಃ
ಕುಬೇರ ಅಷ್ಟಲಕ್ಷ್ಮಿ ಮಂತ್ರ
ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ ಅಷ್ಟ-ಲಕ್ಷ್ಮಿ
ಮಾಮಾ ಗ್ರಿಹೆ ಧನಂ ಪುರಾಯ ಪುರಾಯ ನಮಃ



Click it and Unblock the Notifications

