Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಕ್ಷಯ ತೃತೀಯಯಂದು ಸಂಪತ್ತು ವೃದ್ಧಿಗೆ ಚಿನ್ನದ ಬದಲಿಗೆ ಈ ಆಹಾರ ವಸ್ತುಗಳನ್ನು ಖರೀದಿಸಬಹುದು
ಏಪ್ರಿಲ್ 22ಕ್ಕೆ ಅಕ್ಷಯ ತೃತೀಯ. ಈ ಶುಭ ದಿನಕ್ಕಾಗಿ ತುಂಬಾ ಜನ ಕಾಯುತ್ತಿರುತ್ತಾರೆ. ಏಕೆಂದರೆ ಈ ದಿನ ಶುಭ ದಿನದಂದು ಚಿನ್ನ, ಆಸ್ತಿ, ಮನೆ ಖರೀದಿಗೆ ತುಂಬಾನೇ ಶ್ರೇಷ್ಠವಾಗಿದೆ. ಈ ದಿನ ಈ ವಸ್ತುಗಳನ್ನು ಖರೀದಿಸಿದರೆ ನಮ್ಮ ಸಂಪತ್ತು ವೃದ್ಧಿಸುವುದು ಎಂಬ ನಂಬಿಕೆ.
ಅಕ್ಷಯ ಪಾತ್ರದಂತೆ ನಮ್ಮ ಸಂಪತ್ತು ವೃದ್ಧಿಸಲಿ ಎಂದು ಅಕ್ಷಯ ತೃತೀಯ ಶುಭ ದಿನದಂದು ಒಂದು ಗ್ರಾಂ ಚಿನ್ನವನ್ನು ಖರೀದಿಸೋಣ ಎಂದು ಜನರು ಯೋಚಿಸುತ್ತಾರೆ. ಆದರೆ ಈಗ ಚಿನ್ನದ ಬೆಲೆ ದುಬಾರಿಯಾಗಿರುವುದರಿಂದ ಒಂದು ಗ್ರಾಂ ಚಿನ್ನ ಖರೀದಿಸಲು ಮಧ್ಯಮವರ್ಗದವರು ಯೋಚಿಸಬೇಕಾಗಿದೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೆ ತೊಂದರೆಯಿಲ್ಲ ನೀವು ಕೆಲವೊಂದು ಆಹಾರ ವಸ್ತುಗಳನ್ನು ಖರೀದಿಸಿದರೂ ಲಕ್ಷ್ಮಿ ಕೃಪೆಗೆ ಪಾತ್ರರಾಗುವಿರಿ.

ಅಕ್ಷಯ ತೃತೀಯ ದಿನದಂದು ಧಾನ್ಯಗಳನ್ನು ಖರೀದಿಸಿ:
ಈ ದಿನ ಧಾನ್ಯಗಳನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಇದರಿಂದ ಸಂಪತ್ತು ವೃದ್ಧಿಸುವುದು, ಇದರಿಂದ ಮನೆಯ ಆರ್ಥಿಕ ಸುಧಾರಣೆಯಾಗುವುದು ಎಂಬ ನಂಬಿಕೆ ಇದೆ.
ಸೊಪ್ಪು
ಈ ದಿನ ಮನೆಗೆ ಹಸಿರು ಸೊಪ್ಪು ತರುವುದು ಶುಭ, ಹಸಿರು ಶುಭದ ಸಂಕೇತ, ಈ ದಿನ ಸೊಪ್ಪು, ಹಸಿರು ತರಕಾರಿ, ಹಸಿರು ಬಣ್ಣದ ಕಾಳುಗಳನ್ನು ತನ್ನಿ.
ಅಕ್ಕಿ, ರಾಗಿ, ನವಣೆ ಖರೀದಿಸಿ
ಅಕ್ಷಯ ತೃತೀಯದಂದು ಮನೆಯ ಅಡುಗೆ ಮನೆಯಲ್ಲಿ ಯಾವ ವಸ್ತುವಿಗೂ ಕೊರತೆ ಇಲ್ಲದಂತೆ ನೋಡಿಕೊಳ್ಳಿ. ಈ ದಿನ ಮನೆ ಅಕ್ಕಿ, ರಾಗಿ, ನವಣೆ, ಬೇಳೆ-ಕಾಳುಗಳನ್ನು ತನ್ನಿ.
ತುಪ್ಪ
ಹಿಂದೂ ನಂಬಿಕೆ ಪ್ರಕಾರ ತುಪ್ಪ ದುಷ್ಟ ಶಕ್ತಿ, ನಕಾರಾತ್ಮಕ ಶಕ್ತಿ ಹೊರಗಿಡುತ್ತದೆ ಎಂದು ನಂಬಲಾಗಿದೆ. ಈ ದಿನ ಮನೆಗೆ ತುಪ್ಪ ತನ್ನ ಅಲ್ಲದೆ ಈ ದಿನ ತುಪ್ಪದ ದೀಪ ಹಚ್ಚಿ ಶ್ರೀ ವಿಷ್ಣು ಹಾಗೂ ಲಕ್ಷ್ಮಿಯನ್ನು ಆರಾಧಿಸಿ.
ಇವುಗಳನ್ನು ದಾನ ಮಾಡಿ
ಚಂದನ
ಈ ದಿನ ಚಂದನ ಅಥವಾ ಶ್ರೀಗಂಧದ ಸುಗಂಧ ದ್ರವ್ಯವನ್ನು ದಾನ ಮಾಡಿ.
ತೆಂಗಿನಕಾಯಿ
ಈ ದಿನ ಬ್ರಾಹ್ಮಣರಿಗೆ ತೆಂಗಿನಕಾಯಿ ದಾನ ಮಾಡಿದರೆ ನಮ್ಮ ಪೂರ್ವಜರಿಗೆ ಮೋಕ್ಷ ಸಿಗುವುದು ಎಂದು ಹೇಳಲಾಗುವುದು.
ಮಜ್ಜಿಗೆ
ಅಕ್ಷಯ ತೃತೀಯದಂದು ಮಜ್ಜಿಗೆ ದಾನ ಮಾಡಿದರೆ ಲಕ್ಷ್ಮಿ ಕೃಪೆಗೆ ಪಾತ್ರರಾಗುವಿರಿ.
ವೀಳ್ಯೆದೆಲೆ ಮತ್ತು ನೀರು
ಅಕ್ಷಯ ತೃತೀಯದಂದು ವೀಳ್ಯೆದೆಲೆ ಮತ್ತು ನೀರನ್ನು ದಾನ ಮಾಡುವುದರಿಂದ ಕೂಡ ಸಂಪತ್ತು ವೃದ್ಧಿಸುವುದು.



Click it and Unblock the Notifications
