Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಹೀಗೆ ಮಾಡಿದ್ರೆ ಸಂಬಂಧಗಳು ಮುರಿದು ಬೀಳಲ್ಲ ಅಂತಾರೆ ಚಾಣಕ್ಯ
ಒಬ್ಬ ವ್ಯಕ್ತಿಗೆ ಜೀವನದಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಅದು ಕುಂಟುಂಬದಲ್ಲಾಗಿರಬಹುದು, ವ್ಯಾಪಾರ, ಸ್ನೇಹ ಸಂಬಂಧವೇ ಆಗಿರಬಹುದು. ಯಾರು ಎಲ್ಲರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುತ್ತಾನೋ ಆತ ಖಂಡಿತ ಬೇಗನೇ ಎಲ್ಲಾ ಸಮಸ್ಯೆಗಳಿಂದ ಹೊರ ಬರುತ್ತಾನೆ. ಇಂತಹ ಸಂಬಂಧಗಳೇ ಕಷ್ಟ ಕಾಲದಲ್ಲಿ ನಮ್ಮ ಸಹಾಯ ಬರುತ್ತೆ ಅಂತಾರೆ ಚಾಣಕ್ಯ
ಚಾಣಕ್ಯ ತಮ್ಮ ನೀತಿಯಲ್ಲಿ ಸಂಬಂಧವನ್ನು ಗಟ್ಟಿಯಾಗಿ ಉಳಿಸಿಕೊಂಡು ಹೋಗುವುದು ಎಷ್ಟು ಮುಖ್ಯ ಅನ್ನೋದ್ರ ಬಗ್ಗೆ ವಿವರಣೆ ನೀಡಿದ್ದಾರೆ. ಚಾಣಕ್ಯನ ಪ್ರಕಾರ ಸಂಬಂಧಗಳನ್ನು ಉಳಿಸಿಕೊಳ್ಳಬೇಕಾದರೆ ಕೆಲವೊಂದು ವಿಚಾರಗಳನ್ನು ನಾವು ನೆನಪಿನಲ್ಲಿಡಬೇಕಾಗುತ್ತದೆ. ಹಾಗಾದ್ರೆ ಸಂಬಂಧವನ್ನು ಉಳಿಸುವಂತಹ ಆ ವಿಚಾರಗಳು ಯಾವುದ ಅನ್ನೋದನ್ನ ನೋಡೋಣ.

ಪ್ರೀತಿ ಹಾಗೂ ನಂಬಿಕೆ
ನಮ್ಮ ಜೀವನದಲ್ಲಿ ಬರೋ ಪ್ರತಿಯೊಬ್ಬ ವ್ಯಕ್ತಿಯನ್ನು ನಮ್ಮಿಂದ ಖುಷಿಯಾಗಿ ಇಡೋದಕ್ಕೆ ಸಾಧ್ಯವಿಲ್ಲ. ಯಾವ ವ್ಯಕ್ತಿ ಮೋಸ ಮಾಡುತ್ತಾ ಸುಳ್ಳಿನಲ್ಲೇ ಮನೆ ಕಟ್ಟುತ್ತಾನೋ ಅಂತಹ ವ್ಯಕ್ತಿ ಸಂಬಂಧಗಳನ್ನು ಉಳಿಸಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ. ಯಾರು ಪ್ರೀತಿ ಹಾಗೂ ನಂಬಿಕೆಯ ಗೋಪುರ ಕಟ್ಟುತ್ತಾರೋ ಅಂತಹ ವ್ಯಕ್ತಿಗಳು ಮಾತ್ರ ಕೊನೆವರೆಗೂ ಸಂಬಂದವನ್ನು ಉಳಿಸಲು ಸಾಧ್ಯ ಎನ್ನುತ್ತಾರೆ ಚಾಣಕ್ಯ.
ಅಹಂಕಾರ
ಚಾಣಕ್ಯನ ಪ್ರಕಾರ ನಾನೇ ನನ್ನದೇ ಅಂತ ಮೆರೆದಾಡಿದ ವ್ಯಕ್ತಿ ಉದ್ಧಾರವಾಗೋದಕ್ಕೆ ಸಾಧ್ಯವಿಲ್ಲ. ನಮ್ಮ ಹತ್ತಿರ ಎಷ್ಟು ದುಡ್ಡಿದ್ದರೂ ಕೂಡ, ನಾವು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕೂಡ ವಿನಂಮ್ರತೆ ಅನ್ನೋದು ತುಂಬಾನೇ ಮುಖ್ಯ. ಶ್ರೀಮಂತ ಅನ್ನೋ ಅಹಂ ಬಿಟ್ಟು ಎಲ್ಲರಲ್ಲೂ ನಾವು ಒಂದಾಗಿ ಬೆರೆಯಬೇಕು. ಆಗ ನಮ್ಮ ಸಂಬಂಧಗಳು ಗಟ್ಟಿಯಾಗಿ ಇರುತ್ತದೆ.
ಘನತೆ ಕಾಪಾಡಿಕೊಳ್ಳಿ
ಚಾಣಕ್ಯನ ಪ್ರಕಾರ ಸಂಬಂಧದಲ್ಲಿ ಘನೆತೆ ಕಾಪಾಡುವುದು ತುಂಬಾನೇ ಮುಖ್ಯವಾಗುತ್ತದೆ. ನಮ್ಮ ಜೊತೆಗೆ ಇದ್ದವರಿಗೂ ನಾವು ಸಮನಾದ ಗೌರವ ಸಲ್ಲಿಸೋದು ಮುಖ್ಯವಾಗುತ್ತದೆ. ನಮ್ಮವರ ಜೊತೆಗೆ ಕೋಪ, ಜಗಳ ಮಾಡಿಕೊಂಡರೆ ಅದು ನಮ್ಮ ಘನತೆಗೆ ತಕ್ಕುದಲ್ಲ. ಹೀಗಾಗಿ ಪ್ರತಿಯೊಬ್ಬರ ಜೊತೆಯಲ್ಲೂ ಒಳ್ಳೆಯ ಸಂಬಂಧವನ್ನೇ ಕಾಪಾಡಿಕೊಳ್ಳಿ.
ಮಾನವೀಯತೆ
ಚಾಣಕ್ಯನ ಪ್ರಕಾರ ನಮ್ಮ ಮಾತು ಮೃದುವಾಗಿರಬೇಕು ಹಾಗೂ ಮಾನವೀಯತೆ ಅನ್ನೋದು ಮನಸ್ಸಿನಲ್ಲಿ ಇರಬೇಕು. ನೀವು ತೋರುವ ಮಾನವೀಯತೆ ಎಂತಹ ಕಲ್ಲು ಹೃದಯವನ್ನಾದರೂ ಕರಗಿಸುವ ಶಕ್ತಿಯನ್ನು ಹೊಂದಿದೆ. ಹೀಗಾಗಿ ನೀವು ಎಲ್ಲೇ ಹೋದರೂ, ಎಷ್ಟೇ ದೊಡ್ಡ ವ್ಯಕ್ತಿಯಾದರೂ ಮಾನವೀಯತೆ ಬಿಟ್ಟು ಕೊಡಲೇಬೇಡಿ.
ಸಂಬಂಧ ಗಾಜಿನ ಮನೆ ಇದ್ದ ಹಾಗೆ ಒಂದು ಸಾರಿ ಕಲ್ಲು ಹೊಡೆದು ಚೂರು ಚೂರಾದ ಗಾಜಿನ ಮನೆ ಮತ್ತೆ ಒಂದಾಗೋದಿಲ್ಲ. ಅದೇ ರೀತಿ ಸಂಬಂಧಗಳು. ಇಲ್ಲಿ ಒಂದು ಸಾರಿ ಮನಸ್ಥಾಪ. ಅಸಮಾಧಾನ ಬಂದ್ರೆ ಅದನ್ನು ಸರಿ ಮಾಡೋದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಸಂಬಂಧಗಳ ಬೆಲೆ ಅರಿತು ಅವುಗಳನ್ನು ಉಳಿಸಿಕೊಳ್ಳಿ.



Click it and Unblock the Notifications



