Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ದಿನವಿಡಿ ಒಂದೇ ಕಾಲಿನಲ್ಲಿ ನಿಂತು ದೋಸೆ ಮಾಡುವ ಯುವತಿ..! ಆಕೆ ಕಥೆ ನೀವು ಓದಿ.!
ಜೀವನ ಅನ್ನೋದು ಎಲ್ಲರಿಗೂ ಸುಖದ ಸುಪ್ಪತ್ತಿಗೆ ಆಗಿರುವುದಿಲ್ಲ ಹಲವರು ಒಂದು ಹೊತ್ತಿನ ಊಟಕ್ಕೂ ಹೋರಾಟದ ಬದುಕು ನಡೆಸಬೇಕಿದೆ. ಅತ್ಯಂತ ಕಷ್ಟದ ದಿನಗಳು, ಕೂಲಿ, ದಿನವೆಲ್ಲಾ ದುಡಿದ ಬಳಿಕ ಒಂದೊತ್ತಿನ ಊಟ ಮಾಡವವರು ಸಹ ನಮ್ಮ ನಡುವೆ ಇದ್ದಾರೆ.
ಇವರಷ್ಟೇ ಅಲ್ಲ ಊಟವನ್ನೇ ಮಾಡದೆ ದಿನ ದೂಡುವ ಮಂದಿಯನ್ನು ಸಹ ನಾವು ನೋಡಬಹುದು. ಆದ್ರೆ ಇಲ್ಲೊಬ್ಬಾಕೆಯ ಕಥೆ ಈಗ ಇಂಟರ್‌ನೆಟ್‌ನಲ್ಲಿ ಭಾರಿ ಪ್ರಶಂಸೆ ಹಾಗೂ ಭಾರಿ ಮೆಚ್ಚುಗೆ ಗಳಿಸಿದೆ. ಆಕೆಗೆ ಒಂದು ಕಾಲಿಲ್ಲದಿದ್ದರೂ ದಿನವೆಲ್ಲಾ ನಿಂತುಕೊಂಡೆ ದುಡಿಯುವ ಆಕೆಯ ಆತ್ಮಸ್ಥೈರ್ಯಕ್ಕೆ ಜನ ಫಿದಾ ಆಗಿದ್ದಾರೆ. ಆಕೆಯನ್ನು ಕಂಡು ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಸಹ ಫ್ಯಾನ್ ಆಗಿದ್ದಾರೆ.

ಜೀವನದಲ್ಲಿ ಏನಾದರು ಸಾಧಿಸಬೇಕು ಎಂಬ ಛಲ ಒಂದಿದ್ದರೆ ಎಂತಹ ಕಠಿಣ ಸವಾಲುಗಳನ್ನು ಬೇಕಾಧರು ಎದುರಿಸಬಹುದು ಎಂಬುದಕ್ಕೆ ಆಕೆ ಸಾಕ್ಷಿಯಾಗಿದ್ದಾಳೆ. ವೀಣಾ ಅಂಬರೀಶ್ ಎಂಬ 17 ವರ್ಷದ ಈ ಯುವತಿ ಸಾವಿರಾರು ಮಂದಿಗೆ ಈಗ ಸ್ಪೂರ್ತಿಯ ಚಿಲುಮೆ ಆಗಿದ್ದಾಳೆ.
ಮನಸ್ಸು ಇದ್ದರೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಆಕೆ ಮತ್ತೆ ಮತ್ತೆ ನಿರೂಪಿಸಿದ್ದಾಳೆ. ಭರತನಾಟ್ಯ ಕಲಾವಿದೆಯಾದ ವೀಣಾ ತನ್ನ 17 ನೇ ವಯಸ್ಸಿನಲ್ಲಿ ಬಸ್ ಅಪಘಾತವೊಂದರಲ್ಲಿ ಬಲಗಾಲನ್ನು ಕಳೆದುಕೊಳ್ಳುತ್ತಾಳೆ. ಆದರೆ ಛಲ ಬಿಡದ ಆಕೆ ಬದುಕಬೇಕೆಂಬ ಹಠ ಆಕೆಗೆ ಕರಿ ದೋಸಾ ಎಂಬ ಪುಟ್ಟ ಅಂಗಡಿ ತೆರೆಯಲು ಸ್ಪೂರ್ತಿಯಾಗುತ್ತದೆ.
ಒಂದೇ ಕಾಲು ಎಂಬ ಕೊರಗು ಇಲ್ಲದ ಆಕೆ ಅದನ್ನೆ ಸವಾಲಾಗಿ ಸ್ವೀಕರಿಸಿ 'ಕರಿ ದೋಸೆ' ಅಂಗಡಿ ಮುನ್ನಡೆಸಲು ಮುಂದಾಗುತ್ತಾಳೆ. ಎಂಬಿಎ ಪದವಿ ಪಡೆದಿದ್ದ ಆಕೆ ಅಪಘಾತದ ಬಳಿಕ ಖಿನ್ನತೆಗೆ ಒಳಗಾಗಿದ್ದಳು, ಆದ್ರೆ ಬದುಕಬೇಕು, ಏನಾದರು ಮಾಡಬೇಕು ಎಂಬ ಆಕೆಯ ಹಠ ಇಲ್ಲಿಯವರೆಗೆ ಆಕೆಯನ್ನು ಕರೆದುಕೊಂಡು ಬಂದಿದೆ.
ಅಡುಗೆ ಮಾಡುವುದರಲ್ಲಿ ಆಸಕ್ತಿ ಹೊಂದಿದ್ದ ಆಕೆ ಅದನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. 2023ರಲ್ಲಿ ಆಕೆ ಕರಿ ದೋಸೆ ಎಂಬ ಅಂಗಡಿ ತೆರೆಯುತ್ತಾಳೆ. ಬೆಳಗ್ಗೆಯಿಂಸ ನಿಂತುಕೊಂಡೆ ದೋಸೆ ಮಾಡಿಕೊಡುವ ಕಾರ್ಯವದು. ಎಷ್ಟೆ ಕಷ್ಟಗಳು ಎದುರಾದರು ನಿತ್ಯವೂ ಅಂಗಡಿ ತೆರೆದು ರುಚಿ ರುಚಿಯ ಖಾದ್ಯ ಸವಿಯಲು ಕೊಡುವುದು ಆಕೆ ಕೆಲಸವಾಗಿ ಬಿಡುತ್ತದೆ. ಈಗ ಆಕೆಗೆ ಈ ಅಂಗಡಿಯೇ ಮೂಲಾಧಾರವಾಗಿದೆ.
ಈ ಯಶಸ್ಸಿನ ಕಥೆ ಕುರಿತು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಧೃತಿಗೆಡದೆ ಗಟ್ಟಿಯಾಗಿ ನಿಲ್ಲಬೇಕು ಎಂಬ ವೀಣಾ ನಿಲುವು ನಮಗೆಲ್ಲರಿಗೂ ಸ್ಫೂರ್ತಿ ಎಂದಿದ್ದಾರೆ. ಅವರ ಈ ಪೋಸ್ಟ್ ಹಂಚಿಕೊಂಡ ಬಳಿಕ ಆಕೆಯ ಕಥೆ ಎಲ್ಲೆಡೆ ವೈರಲ್ ಆಗಿದೆ. ಜೊತೆಗೆ ಸಾವಿರಾರು ಮಂದಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈಗ ವೀಣಾ ಸಾವಿರಾರು ಮಂದಿಗೆ ರುಚಿಯ ಅಡುಗೆ ನೀಡುವ ಜೊತೆಗೆ ಸ್ಪೂರ್ತಿಯಾಗಿದ್ದಾರೆ.
ಆಕೆಯ ಯಶಸ್ಸಿನ ಕಥಗೆ ಬಳಕೆದಾರರು ಮೆಚ್ಚುಗೆಯ ಮಾತು ಆಡಿದ್ದಾರೆ. ಈ ಯುವತಿ ಸಾವಿರಾರು ನಿರುದ್ಯೋಗಿ ಯುವಕ ಯುವತಿಯರಿಗೆ ಸ್ಫೂರ್ತಿ. ಇವರಂತೆ ಎಲ್ಲರೂ ಕಷ್ಟಗಳ ಮೆಟ್ಟಿನಿಂತ ತಮ್ಮ ಜೀವನ ರೂಪಿಸಿಕೊಳ್ಳುವ ಛಲದೊಂದಿಗೆ ಬದುಕಿದರೆ ಸಾಕು ಎಂತವರ ಜೀವನವಾದರೂ ಬೆಳಕಾಗುತ್ತದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications
