Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ರಾಶಿಯವರು 2024 ರಲ್ಲಿ ಸ್ವಂತ ಮನೆ ಮಾಲೀಕರಾಗುತ್ತಾರೆ!
ಸ್ವಂತ ಮನೆಯನ್ನು ಹೊಂದಬೇಕು ಅನ್ನೋ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ ಸ್ವಂತ ಮನೆಯನ್ನು ಹೊಂದುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು. ಜೊತೆಗೆ ನಮ್ಮ ಸಮಯವೂ ಚೆನ್ನಾಗಿರಬೇಕು. ಕೆಲವೊಂದು ಸಲ ನಮ್ಮಲ್ಲಿ ದುಡ್ಡಿದ್ದರೂ ಕೂಡ ನಮ್ಮಿಂದ ಮನೆ ಕಟ್ಟೋದಕ್ಕೆ ಸಾಧ್ಯ ಆಗೋದಿಲ್ಲ.
ಇನ್ನೂ ಕೆಲವು ಸಂದರ್ಭದಲ್ಲಿ ಭೂಮಿಯ ಸಮಸ್ಯೆ ಎದುರಾಗುತ್ತೆ. ಹೀಗೆ ಒಂದಾ? ಎರಡಾ? ಮನೆ ಕಟ್ಟುವಾಗ ಒಂದಲ್ಲಾ ಒಂದು ವಿಘ್ನಗಳು ಇದ್ದೇ ಇರುತ್ತದೆ. ಈ ಎಲ್ಲಾ ಸಮಸ್ಯೆಗಳ ವಿರುದ್ಧ ಹೋರಾಡಿ 2024 ರಲ್ಲಿ ಕೆಲ ರಾಶಿಯವರು ಸ್ವಂತ ಮನೆಯನ್ನು ಹೊಂದಿತ್ತಾರಂತೆ. ಅಷ್ಟಕ್ಕು 2024 ರಲ್ಲಿ ಯಾವ ರಾಶಿಯವರು ಸ್ವಂತ ಮನೆಯನ್ನು ಹೊಂದುತ್ತಾರೆ ಅನ್ನೋದನ್ನು ತಿಳಿಯೋಣ.

ಮಕರ ರಾಶಿ
ಮಕರ ರಾಶಿಯವರು ತಮ್ಮ ಮಹತ್ವಾಕಾಂಕ್ಷೆಯ ಸ್ವಭಾವ ಮತ್ತು ಬಲವಾದ ಕೆಲಸದ ನೀತಿಗೆ ಹೆಸರುವಾಸಿಯಾಗಿದ್ದಾರೆ. ಇವರು ಯಶಸ್ಸಿನೆಡೆಗೆ ಕೆಲಸ ಮಾಡುತ್ತಾರೆ. ಮನೆಯನ್ನು ಹೊಂದುವುದು ಕೂಡ ಇವರ ಮುಖ್ಯವಾದ ಕನಸುಗಳಲ್ಲಿ ಒಂದಾಗಿರುತ್ತದೆ. ಈ ಕನಸನ್ನು ನನಸು ಮಾಡೋದಕ್ಕೆ ಇವರು ಕಷ್ಟ ಪಟ್ಟು ದುಡಿಯುತ್ತಿರುತ್ತಾರೆ.
ಇನ್ನೂ ಮನೆ ಕಟ್ಟೋದಕ್ಕೆ ಹೋಗೋದಕ್ಕೂ ಮುನ್ನ ಇವರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ. ಆ ನಂತರ ಈ ಕೆಲಸಕ್ಕೆ ಕೈ ಹಾಕುತ್ತಾರೆ. ಮಕರ ರಾಶಿಯವರು 2024 ರಲ್ಲಿ ಮನೆಯನ್ನು ಹೊಂದುವ ಸಾಧ್ಯತೆಗಳಿದೆ.
ವೃಷಭ ರಾಶಿ
ವೃಷಭ ರಾಶಿಯವರು ಆರ್ಥಿಕವಾಗಿ ಸಬಲರಾಗಿತ್ತಾರೆ. ಹಾಗೂ ಅವರಲ್ಲಿ ಒಂದು ನಾಯಕತ್ವ ಗುಣ ಕೂಡ ಇದೆ. ಇವರು ಜವಾಬ್ದಾರಿಯಿಂದ ನಡೆದುಕೊಳ್ಳುವವರಾಗಿದ್ದಾರೆ. ಮನೆಯನ್ನು ಹೊಂದುವ ಆಸೆಗಾಗಿ ಇವರು ದೀರ್ಘಾವಧಿಯಿಂದ ಕೆಲಸ ಮಾಡುತ್ತಿರುತ್ತಾರೆ. ಅದಕ್ಕಾಗಿ ಅವರು ಎಲ್ಲಾ ಸಂಪನ್ಮೂಲಗಳನ್ನು ಹೊಂದಿಸುತ್ತಾರೆ.
ಎಲ್ಲಾ ಇದ್ದರೂ ಕೂಡ ಇಷ್ಟು ದಿನ ಕೆಲವೊಂದು ಸಮಸ್ಯೆಗಳ ಕಾರಣದಿಂದ ನಿಮಗೆ ಮನೆ ಕಟ್ಟೋದಕ್ಕೆ ಸಾಧ್ಯ ಆಗದೇ ಇರಬಹುದು. ಮನೆ ಕಟ್ಟಬೇಕು ಅನ್ನೋ ಸಂದರ್ಭದಲ್ಲಿ ಏನಾದರೂ ಸಮಸ್ಯೆ ಬಂದು ಅದು ಅರ್ಥಕ್ಕೆ ನಿಂತು ಹೋಗಿರಬಹುದು. ಅದರ ಅರ್ಥ ನಿಮಗೆ ಮನೆ ಕಟ್ಟುವ ಯೋಗ ಇನ್ನೂ ಕೂಡಿ ಬಂದಿಲ್ಲ ಎಂದು. 2024 ರಲ್ಲಿ ನೀವು ಖಂಡಿತ ನಿಮ್ಮ ಕನಸಿನ ಮನೆಯನ್ನು ಕಟ್ಟುತ್ತೀರಿ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಮನೆ ಕಟ್ಟಬೇಕು ಎನ್ನುವ ಆಸೆ ಬಹಳ ವರ್ಷಗಳಿಂದ ಇದೆ. ಹೀಗಾಗಿ ಕೆಲ ವರ್ಷಗಳ ಹಿಂದೆ ಕನಸಿನ ಮನೆ ನಿರ್ಮಾಣಕ್ಕೆ ಇಳಿದಿದ್ದರೂ ಕೂಡ ಮನೆ ಪೂರ್ತಿ ಆಗಿಲ್ಲ. ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇದೆ. ಇವರು ತಮ್ಮ ಪ್ರೀತಿಪಾತ್ರರಿಗೆ ಪೋಷಣೆ ಮತ್ತು ಸುರಕ್ಷಿತೆಗೆ ಮೊದಲ ಆಧ್ಯತೆಯನ್ನು ನೀಡುತ್ತಾರೆ.
ಹೀಗಾಗಿ ತಾನು ಹಾಗೂ ತನ್ನವರಿಗಾಗಿ ಗೂಡು ಕಟ್ಟಬೇಕು ಅನ್ನೋ ಆಸೆ ಪೂರ್ತಿ ಆಗಿಲ್ಲ ಅನ್ನೋ ಕೊರಗು ಇವರನ್ನು ಕಾಡುತ್ತಿದೆ. ಇನ್ನೇನು ನಿಮ್ಮ ಕಷ್ಟದ ದಿನಗಳೆಲ್ಲಾ ಕಳೆದು ಒಳ್ಳೆಯ ದಿನ ಬರಲಿದೆ. ಮನೆ ಕಟ್ಟಲು ನಿಮಗಿದ್ದ ಅಡ್ಡಿ-ಆತಂಕಗಳೆಲ್ಲಾ ನಿವಾರಣೆ ಆಗಿ 2024 ರಲ್ಲಿ ನಿಮ್ಮದೇ ಆದ ಸ್ವಂತ ಮನೆಯನ್ನು ಹೊಂದುತ್ತೀರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ತಮ್ಮ ಗುರಿಗಳತ್ತ ಹೆಚ್ಚು ಕೆಲಸ ಮಾಡುತ್ತಾರೆ. ಹಣಕಾಸಿನ ವಿಚಾರದ ಬಗ್ಗೆ ಹೆಚ್ಚಿನ ಕಾಳಜಿ ಮಾಡುವ ಇವರು ಭವಿಷ್ಯದ ದೃಷ್ಟಿಯಿಂದ ಹಣವನ್ನು ಕೂಡಿಡುತ್ತಾರೆ. ಹಾಗೂ ಆ ದುಡ್ಡಿನಿಂದ ಸ್ವಂತ ಮನೆಯನ್ನು ಮಾಡುವ ಬಯಕೆಯನ್ನು ಇವರು ಹೊಂದಿರುತ್ತಾರೆ. ತಮ್ಮ ಕ್ರಮಬದ್ಧ ವಿಧಾನ ಮತ್ತು ವಿಶ್ಲೇಷಣಾತ್ಮಕ ಮನಸ್ಥಿತಿಯೊಂದಿಗೆ ಕನ್ಯಾ ರಾಶಿಯವರು ಮನೆಯ ಮಾಲೀಕತ್ವವನ್ನು ಹೊಂದಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ 2024 ರಲ್ಲಿ ಇವರು ತಮ್ಮ ಸ್ವಂತ ಮನೆಯನ್ನು ಹೊಂದುವ ಆಸೆಯನ್ನು ಪೂರೈಸಿಕೊಳ್ಳುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಗುರಿಯನ್ನು ಸಾಧಿಸುವ ಅಚಲವಾದ ಮನಸ್ಥಿತಿಯನ್ನು ಹೊಂದಿದ್ದಾರೆ. ಅವರು ಸವಾಲುಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ ಮತ್ತು ತಮ್ಮ ಗುರಿಗಳನ್ನು ಸಾಧಿಸಲು ಶ್ರಮಿಸುತ್ತಾರೆ. ಕೈಯಲ್ಲಿ ದುಡ್ಡಿದ್ದರೇ ಮಾತ್ರ ಮನೆ ಕಟ್ಟೋದಕ್ಕೆ ಹೊರಡಬೇಕೆಂದೇನಿಲ್ಲ ಅನ್ನೋದನ್ನು ಸಾಧಿಸಿ ತೋರಿಸುತ್ತಾರೆ. ಸಾಲಗಳನ್ನು ಮಾಡಿಯಾದರೂ ತಮ್ಮ ಕನಸಿನ ಮನೆಯನ್ನು ಹೊಂದಬೇಕು ಅನ್ನೋ ಆಸೆ ಇವರಿಗೆ ಇರುತ್ತದೆ. ಇವರಲ್ಲಿರುವ ಉತ್ಸಾಹ ಮತ್ತು ಸಂಪನ್ಮೂಲವು 2024 ರಲ್ಲಿ ಇವರು ಸ್ವಂತ ಮನೆಯನ್ನು ಹೊಂದುವಂತೆ ಮಾಡುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರು ತಮ್ಮ ನವೀನ ಚಿಂತನೆ ಮತ್ತು ವಿಶಿಷ್ಟ ದೃಷ್ಟಿಕೋನಗಳಿಗೆ ಹೆಸರಿವಾಸಿಯಾಗಿದ್ದಾರೆ. ಈ ರಾಶಿಯವರು ಬದಲಾವಣೆಯನ್ನು ಸ್ವೀಕರಿಸುತ್ತಾರೆ ಮತ್ತು ಹೊಸ ಆಲೋಚನೆಗಳು ಮತ್ತು ಅವಕಾಶಗಳನ್ನು ಅನ್ವೇಷಿಸಲು ಸಿದ್ಧವಿರುತ್ತಾರೆ. ಮನೆ ಕಟ್ಟುವ ಆಸೆ ಇವರಲ್ಲಿ ಎಷ್ಟೋ ವರ್ಷಗಳಿಂದ ಇವರ ಮನಸ್ಸಿನಲ್ಲಿಯೇ ಉಳಿದು ಬಿಟ್ಟಿದೆ. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಸ್ವಂತ ಮನೆಯನ್ನು ಹೊಂದುವುದು ಇವರಿಂದ ಸಾಧ್ಯವಾಗಿರಲಿಲ್ಲ. ಈ ನಿಟ್ಟಿನಲ್ಲಿ ಇವರು ಕೆಲಸ ಮಾಡಿಕೊಂಡು ಬಂದಿದ್ದರು. ಆದರೆ ನೆಮ್ಮೆಲ್ಲಾ ಶ್ರಮಕ್ಕೆ 2024 ರಲ್ಲಿ ಫಲ ಸಿಗಲಿದೆ. ಹಾಗೂ ನಿಮ್ಮ ಆಸೆ ಕೈ ಗೂಡಲಿದೆ.



Click it and Unblock the Notifications

